• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama General

ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಯಾಕೆ ಹೆಚ್ಚುತ್ತಿವೆ..? ಮನೋವೈದ್ಯರು ಹೇಳೋದೇನು..?

December 15, 2023
in General
Reading Time: 2 mins read
A A
0
suicide
113
VIEWS

ಆತ್ಮಹತ್ಯೆಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಎಲ್ಲ ಸಮಾಜಗಳಲ್ಲೂ ಹೆಚ್ಚುತ್ತಿವೆ. ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಈ ಕುರಿತು ಅನೇಕ ಸಂಶೋಧನೆಗಳು ಕೂಡಾ ನಡೆಯುತ್ತಿವೆ. ಇಡೀ ಒಂದು ಸಮಾಜವೇ ಹೆಚ್ಚು ಗಂಭೀರವಾಗಿ ಚಿಂತನೆ ಮಾಡಬೇಕಾದ ಸಂಗತಿಯಿದು ಎಂದು ಅನೇಕ ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಇನ್ನು World Health Organization ಪ್ರಕಾರ, 2022ರಲ್ಲಿ ಜಗತ್ತಿನಲ್ಲಿ 7 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದರ 20 ಪಟ್ಟು ಜನರು ಅಂದರೆ ಒಂದು ಕೋಟಿಗೂ ಅಧಿಕ ಜನರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.  ಇನ್ನು 2022ರಲ್ಲಿ ಭಾರತದಲ್ಲಿ 1.64 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗಿದ್ದರೆ, ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.  ಆಘಾತಕಾರಿ ಸಂಗತಿ ಎಂದರೆ, ಆತ್ಮಹತ್ಯೆ ಬಲಿಯಾದವರಲ್ಲಿ ಶೇಕಡಾ 77ರಷ್ಟು ಜನರು ಮಧ್ಯಮ ಮತ್ತು ಕೆಳಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಕೋವಿಡ್ ನಂತರ ಆತ್ಮಹತ್ಯೆ ಮಾಡಿಕೊಂಡವರಲ್ಲಿ ದಿನಗೂಲಿ ನೌಕರರ ಪ್ರಮಾಣವೇ ಶೇಕಡಾ 25.6ರಷ್ಟಿದೆ.  ಅಂದರೆ ಭಾರತದಲ್ಲಿ ಆತ್ಮಹತ್ಯೆಗೆ ಬಲಿಯಾಗುತ್ತಿರೋರಲ್ಲಿ ದಿನಗೂಲಿ ನೌಕರರೇ ಹೆಚ್ಚು. 

ಇದನ್ನೂ ಓದಿ : ನಿದ್ರೆಯನ್ನ ನಿರ್ಲಕ್ಷ್ಯ ಮಾಡಿದ್ರೆ ಕಾದಿದೆ ಅಪಾಯ..!

ಭಾರತದಲ್ಲಿ ಶ್ರೀಮಂತ ರಾಜ್ಯಗಳೆಂದೇ ಗುರುತಿಸಲ್ಪಡುವ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲೇ ಅತಿಹೆಚ್ಚು ಜನರು ಆತ್ಮಹತ್ಯೆ  ಶರಣಾಗಿದ್ರೆ, ನಮ್ಮ ಕರ್ನಾಟಕ 5ನೇ ಸ್ಥಾನದಲ್ಲಿದೆ.  ಭಾರತದಲ್ಲಿ ಇಂದು ಪ್ರತಿ 1 ಲಕ್ಷ ಜನರಲ್ಲಿ 12 ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.  ಆತ್ಮಹತ್ಯೆಗೆ ಶರಣಾದವರಲ್ಲಿ ಪುರುಷರ ಪ್ರಮಾಣ ಶೇಕಡಾ 72.6 ಇದ್ದರೆ ಮಹಿಳೆಯರ ಪ್ರಮಾಣ ಶೇಕಡಾ 27.4ರಷ್ಟಿದೆ.  ಅಂದರೆ ಭಾರತದಲ್ಲಿ ಪುರುಷರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮನೋವೈದ್ಯರ ಪ್ರಕಾರ, ಭಾರತದಲ್ಲಾಗುತ್ತಿರುವ ಆತ್ಮಹತ್ಯೆಗಳಿಗೆ  ಮೂರು  ಪ್ರಮುಖ ಕಾರಣಗಳೆಂದರೆ, ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ಅನಾರೋಗ್ಯ  ಎನ್ನಲಾಗಿದೆ. ಕೌಟುಂಬಿಕ ಸಮಸ್ಯೆಯ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಜಾಸ್ತಿ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗಿವೆ. 18ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಆತ್ಮಹತ್ಯೆಯ ಪ್ರಕರಣಗಳಲ್ಲಿ ಬಾಲಕರ ಪ್ರಮಾಣ ಶೇಕಡಾ 47ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇಕಡಾ 53ರಷ್ಟಿದೆ.  ಅಂದರೆ 18 ವರ್ಷದೊಳಗಿನ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.  ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ, ಬೆಂಗಳೂರು, ಮಂಗಳೂರು, ಮೈಸೂರು ಜಿಲ್ಲೆಗಳಲ್ಲೇ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೇ ಅನ್ನೋ ಆಘಾತಕಾರಿ ಅಂಶವೊಂದು ಬಹಿರಂಗವಾಗಿದೆ.   

ಇದನ್ನೂ ಓದಿ : ರಸ್ತೆ ಅಪಘಾತಗಳ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ..!

ಒಟ್ಟಾರೆಯಾಗಿ ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿಯಾಗಿದ್ದು, ಜನರು ತಮ್ಮ ಮಾನಸಿಕ ಆರೋಗ್ಯದ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ, ಮಾನಸಿಕ ಹೊರೆ ಬೀಳದಂತೆ ಎಚ್ಚರ ವಹಿಸಬೇಕಿದೆ. ಸಮಸ್ಯೆ ಏನೇ ಇದ್ದರು, ಆತ್ಮಹತ್ಯೆಗೆ ಶರಣಾಗುವುದು ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ಆತ್ಮಹತ್ಯೆಯಂತ ಕೆಟ್ಟ ಯೋಚನೆಗಳಿಂದ ದೂರವಿದ್ದು, ಬದುಕಿನಲ್ಲಿ ಎದುರಾಗೋ ಕಷ್ಟಗಳೊಂದಿಗೆ ಹೋರಾಟ ನಡೆಸೋದು ಉತ್ತಮ ಅಲ್ವಾ..?

ShareTweetSendShareShareSend

Related Posts

General

Dental Problems; ಹಲ್ಲಿನ ಸಮಸ್ಯೆಗಳಿಗೆ ಆಯುರ್ವೇದದ ಈ ಶಕ್ತಿಶಾಲಿ ಚೂರ್ಣ ರಾಮಬಾಣ!

September 20, 2025
General

Fact check – Samosa; ಸಿಗರೇಟಿನಷ್ಟೇ ಅಪಾಯಕಾರಿ ಜಿಲೇಬಿ, ಸಮೋಸ!?

July 15, 2025
General

Barley Water; ಬೇಸಿಗೆಯಲ್ಲಿ ದೇಹ ಬೇಗ Heat ಆಗ್ತಿದ್ಯಾ? ಬಾರ್ಲಿ ನೀರು ಕುಡಿರಿ!

April 8, 2025
General

Calcium ; ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳು

February 11, 2025
General

Obesity – ಈ ರೀತಿ ಊಟ ಮಾಡುದ್ರೆ ಬೊಜ್ಜಿನ ಸಮಸ್ಯೆನೇ ಬರಲ್ಲ!

January 29, 2025
GSS Maadhyama

ಗುರು ರಾಯರ 353ನೇ ಆರಾಧನೆ(Raghavendra Aradhana); ರಾಯರ ಹಿಂದಿನ ಅವತಾರಗಳ ಬಗ್ಗೆ ಗೊತ್ತೆ?

August 21, 2024

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.