• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama General

Calcium ; ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳು

February 11, 2025
in General
Reading Time: 2 mins read
A A
0
162
VIEWS

Calcium; ಕ್ಯಾಲ್ಸಿಯಂ ಕೊರತೆ ಎನ್ನುವುದು ಇತ್ತಿಚೇಗೆ ಎಲ್ಲಾ ವಯಸ್ಸಿನವರನ್ನೂ ಕಾಡುತ್ತಿರುವ ಸಮಸ್ಯೆ. 30 ವರ್ಷ ಆದಮೇಲೆ ಸಾಮಾನ್ಯವಾಗಿ ಕ್ಯಾಲ್ಸಿಯಂ ಕೊರತೆ ಎನ್ನುವುದು ಕಾಡುತಿತ್ತು. ಆದರೆ ಇತ್ತೀಚೆಗೆ ಶಾಲಾ ಮಕ್ಕಳಲ್ಲಿ ಕೂಡ ಕ್ಯಾಲ್ಸಿಯಂ ಕೊರತೆ ಕಂಡು ಬರುತ್ತಿದೆ. ಸಾಮಾನ್ಯವಾಗಿ ಕ್ಯಾಲ್ಸಿಯಂ ವೃದ್ಧಿಸಿಕೊಳ್ಳಲು ಹಾಲು ಉತ್ತಮ ಆಹಾರ ಮೂಲ ಎಂದು ತಿಳಿದಿದ್ದೇವೆ. ಆದರೆ ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ನೀಡುವ 4 ವಿಶೇಷ ಆಹಾರಗಳ ಬಗ್ಗೆ ಈ ಲೇಖದಲ್ಲಿ ತಿಳಿಯೋಣ

ಮೂಳೆ ಸಮಸ್ಯೆ, ಹಲ್ಲಿನ ಸಮಸ್ಯೆಗಳು, ಸ್ನಾಯು ಸೆಳೆತ, ಆಯಾಸ, Pre-menstrual syndrome ಇಂಥ ಸಮಸ್ಯೆಗಳು ನಿಮಗೂ ಕಾಡುತ್ತಿದ್ದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾಗಿರಬಹುದು.

ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅತ್ಯಂತ ಅಗತ್ಯವಾಗಿ ಬೇಕಿರುವ ಒಂದು ಮಿನರಲ್. ಶೇ. 99ರಷ್ಟು ಕ್ಯಾಲ್ಸಿಯಂ ನಮ್ಮ ಮೂಳೆಗಳಲ್ಲಿ ಮತ್ತು ಹಲ್ಲುಗಳಲ್ಲಿ ಇರುತ್ತದೆ. ಇದು ಮೂಳೆ ಮತ್ತು ಹಲ್ಲಿನ ಆರೋಗ್ಯ ಕಾಪಾಡುತ್ತದೆ. ಜೊತೆಗೆ ನರವ್ಯವಸ್ಥೆಗೂ ಸಹಕಾರಿ. ಕೆಲವೊಂದು ಹಾರ್ಮೊನ್ಸ್ ಬಿಡುಗಡೆಯಾಗುವುದಕ್ಕೂ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಇರಬೇಕು. ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ ಎಷ್ಟು ಕ್ಯಾಲ್ಸಿಯಂ ಬೇಕಾಗುತ್ತದೆ ಎಂಬುದನ್ನು ನೋಡಿದರೆ ; 9 ರಿಂದ 18 ವರ್ಷ ವಯಸ್ಸಿನವರಿಗೆ – 1300 ಎಮ್.ಜಿ, 19-50 – ವಯಸ್ಸಿನವರಿಗೆ – 1000 ಎಮ್.ಜಿ 51-70 -ವಯಸ್ಸಿನ ಗಂಡಸರಿಗೆ – 1000 ಎಮ್.ಜಿ, ಅದೇ ಹೆಂಗಸರಿಗೆ – 1200 ಎಮ್.ಜಿ ಬೇಕು.

ಕ್ಯಾಲ್ಸಿಯಂ ಹೆಚ್ಚಿರುವಂತಹ ಆಹಾರ ತಿನ್ನದೇ ಇರುವುದರಿಂದ, ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಸರಿ ಇಲ್ಲದೇ ಇದ್ದಾಗ, ಹಾರ್ಮೋನಲ್ ಇಂಬ್ಯಾಲನ್ಸ್, ಸಕ್ಕರೆ ಅಂಶ ಅಧಿಕ ತಿಂದಾಗ, ಜಂಕ್ ಫುಡ್ಸ್ ಹೆಚ್ಚಿಗೆ ತಿಂದಾಗ, ವಿಟಮಿನ್ ಡಿ ಕೊರತೆ ಇದ್ದಾಗ ಕ್ಯಾಲ್ಸಿಯಂ ಕೊರತೆ ಶುರುವಾಗುತ್ತದೆ.

ಕ್ಯಾಲ್ಸಿಯಂ ಕಮ್ಮಿಯಾದರೆ ಹಾಲು ಮತ್ತೆ ಹಾಲಿನ ಪದಾರ್ಥಗಳನ್ನು ಹೆಚ್ಚಿಗೆ ತಿನ್ನಬೇಕು ಎಂಬುದನ್ನು ಕೇಳಿರುತ್ತೇವೆ. ಆದರೆ ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳಿವೆ. ಒಂದು ಲೋಟ ಹಾಲಿನಲ್ಲಿ – ಅಂದರೆ 100 ಗ್ರಾಮ್ ನಷ್ಟು ಹಾಲಿನಲ್ಲಿ 125 ಎಮ್.ಜಿ ಕ್ಯಾಲ್ಸಿಯಂ ಇರುತ್ತದೆ.

ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ ಆಹಾರ ಮೂಲಗಳು ;

ರಾಗಿ


100 ಗ್ರಾಂ ರಾಗಿಯಲ್ಲಿ 345-350 ಎಮ್.ಜಿ ಕ್ಯಾಲ್ಸಿಯಂ ಇರುತ್ತದೆ. ಅಂದರೆ ಹಾಲಿಗಿಂತಲೂ ದುಪ್ಪಟ್ಟು. ಇದು ನಮ್ಮ ಮೂಳೆ ಮತ್ತು ಹಲ್ಲಿನ ಬಲವನ್ನು ಸಹಕರಿಸುತ್ತದೆ. ಮೂಳೆಗಳಿಗೆ ಸಂಬಂಧಪಟ್ಟ ಆಸ್ಟಿಯೊಪೋರೊಸಿಸ್ಅನ್ನೂ ತಡೆಯುತ್ತದೆ. ಅಷ್ಟೇ ಅಲ್ಲ, ಇದು ಐರನ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಲ್ಲೂ ಸಮೃದ್ಧವಾಗಿರುವುದರಿಂದ ಮೆಟಾಬೋಲಿಸಂ ಉತ್ತಮಗೊಳಿಸುತ್ತದೆ. ಫೈಬರ್ ಅಧಿಕ ಇರುವುದರಿಂದ ಜೀರ್ಣಕ್ರಿಯೆಗೂ ಸಹಕಾರಿ.

Read this also : – Obesity – ಈ ರೀತಿ ಊಟ ಮಾಡುದ್ರೆ ಬೊಜ್ಜಿನ ಸಮಸ್ಯೆನೇ ಬರಲ್ಲ!

ಎಳ್ಳು


100 ಗ್ರಾಂ ಎಳ್ಳಿನಲ್ಲಿ 780-975 ಮಿಲಿಗ್ರಾಂ ಕ್ಯಾಲ್ಸಿಯಂ ಇದೆ. ಅಂದರೆ ಹಾಲಿಗಿಂತಲೂ 8 ಪಟ್ಟು ಹೆಚ್ಚು. ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಜಿಂಕ್ ಕೂಡ ಸಮೃದ್ಧವಾಗಿದೆ. ಇದು ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲೂ ಮಹಿಳೆಯರಿಗೆ ಇದು ಕ್ಯಾಲ್ಸಿಯಂನ ಅತ್ಯುತ್ತಮ ಆಹಾರ ಮೂಲವಾಗಿದೆ.

ಹುರುಳಿ


100 ಗ್ರಾಂ ಹುರುಳಿನಲ್ಲಿ ಸುಮಾರು 280-300 ಎಮ್.ಜಿ ಕ್ಯಾಲ್ಸಿಯಂ ಇರುತ್ತದೆ. ಜೊತೆಗೆ ಪ್ರೋಟೀನ್, ಐರನ್ನಿಂದಲೂ ಸಮೃದ್ಧವಾಗಿದೆ. ಬೇರೆ ಬೇಳೆಕಾಳುಗಳಿಗೆ ಹೋಲಿಸಿದರೆ, ಹುರುಳಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಹೊಂದಿದೆ. ಆರೋಗ್ಯಕರ ಮೂಳೆ ರಚನೆಗೆ ಅತ್ಯುತ್ತಮ ಆಹಾರವಾಗಿದೆ.

ನುಗ್ಗೆ ಸೊಪ್ಪು


ಇದನ್ನು ಮೊರಿಂಗಾ ಎಲೆಗಳು ಎಂದು ಕರೆಯುತ್ತಾರೆ. 100 ಗ್ರಾಂ ನುಗ್ಗೆ ಸೊಪ್ಪಿನಲ್ಲಿ ಸುಮಾರು 300-315 ಎಮ್.ಜಿ ಕ್ಯಾಲ್ಸಿಯಂ ಇರುತ್ತದೆ. ಹಾಗಾಗಿ ಇದು ಕೂಡ ನಮ್ಮ ಮೂಳೆ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ.

ಈ ಎಲ್ಲಾ ಆಹಾರಗಳು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ನೀಡುತ್ತದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ, ಕ್ಯಾಲ್ಸಿಯಂ ಕೊರತೆ ನಿವಾರಣೆಯಾಗುತ್ತದೆ.

ShareTweetSendShareShareSend

Related Posts

General

Dental Problems; ಹಲ್ಲಿನ ಸಮಸ್ಯೆಗಳಿಗೆ ಆಯುರ್ವೇದದ ಈ ಶಕ್ತಿಶಾಲಿ ಚೂರ್ಣ ರಾಮಬಾಣ!

September 20, 2025
General

Fact check – Samosa; ಸಿಗರೇಟಿನಷ್ಟೇ ಅಪಾಯಕಾರಿ ಜಿಲೇಬಿ, ಸಮೋಸ!?

July 15, 2025
General

Barley Water; ಬೇಸಿಗೆಯಲ್ಲಿ ದೇಹ ಬೇಗ Heat ಆಗ್ತಿದ್ಯಾ? ಬಾರ್ಲಿ ನೀರು ಕುಡಿರಿ!

April 8, 2025
General

Obesity – ಈ ರೀತಿ ಊಟ ಮಾಡುದ್ರೆ ಬೊಜ್ಜಿನ ಸಮಸ್ಯೆನೇ ಬರಲ್ಲ!

January 29, 2025
GSS Maadhyama

ಗುರು ರಾಯರ 353ನೇ ಆರಾಧನೆ(Raghavendra Aradhana); ರಾಯರ ಹಿಂದಿನ ಅವತಾರಗಳ ಬಗ್ಗೆ ಗೊತ್ತೆ?

August 21, 2024
General

ಒಲಿಂಪಿಕ್ಸ್‌ನಲ್ಲಿ(Olympics) ಭಾರತದ ಹೆಜ್ಜೆ ಗುರುತು; ಯಾವ ದೇಶವೂ ಮುರಿದಿಲ್ಲ ಭಾರತದ ಹಾಕಿ(Hockey) ತಂಡದ ಆ ದಾಖಲೆ!

July 25, 2024

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.