ಹಲ್ಲುಗಳು ನಮ್ಮ ನೈಸರ್ಗಿಕ ಗ್ರೈಂಡರ್ಸ್, ಅವು ನಾವು ಸೇವಿಸುವ ಆಹಾರವನ್ನು ಅಗೆಯುತ್ತವೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯ ಮೊದಲ ಹಂತ. ಜೀರ್ಣಕ್ರಿಯೆಯಲ್ಲಿ ಹಲ್ಲುಗಳ ಕೆಲಸ ತುಂಬಾ ಮುಖ್ಯ. ಆದರೆ ಹಲ್ಲುಗಳ ಆರೈಕೆ ಮಾಡದಿದ್ದರೆ, ಆಹಾರದ ಕಣಗಳು ಹಲ್ಲಿನ ಮಧ್ಯೆ ಸಿಲುಕುತ್ತವೆ ಮತ್ತು ಹಲ್ಲು ಹುಳುಕಾಗುತ್ತವೆ. ಪ್ಲೇಕ್ (Dental Plaque) ರಚನೆಯಾಗಿ ಸಮಸ್ಯೆ ಶುರುವಾಗುತ್ತದೆ(Dental Problems) ಇಂಥ ಸಮಸ್ಯೆಗೆ ಆಯುರ್ವೇದದಲ್ಲಿ ಶಕ್ತಿಯುತವಾದ ಒಂದು ಫಾರ್ಮುಲಾ ಇದೆ, ಅದುವೇ ತ್ರಿಫಲ ಚೂರ್ಣ.

ತ್ರಿಫಲ ಎಂದರೆ ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿ – ಈ ಮೂರು ಶಕ್ತಿಶಾಲಿ ಹರ್ಬ್ ಗಳ ಮಿಶ್ರಣ. ಇದರಲ್ಲಿ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್, ಅಸ್ಟ್ರಿಜೆಂಟ್ (Astringent) ಮತ್ತು ಆಂಟಿ ಬ್ಯಾಕ್ಟೀರಿಯಲ್ (Antibacterial) ಗುಣಗಳಿವೆ. ಇವು ಬಾಯಿಯ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ. ಅದು ಹೇಗೆ ಎಂಬುದನ್ನು ಒಂದೊಂದೇ ನೋಡೋಣ.
1. ಹಲ್ಲಿನ ಪ್ಲೇಕ್ (Dental Plaque)

ಹಲ್ಲಿನ ಮೇಲೆ ಹಳದಿ ಮತ್ತು ಸ್ಟಿಕಿ ಪದರ ಕಂಡುಬಂದರೆ ಅದನ್ನು ಪ್ಲೇಕ್ ಎನ್ನುತ್ತಾರೆ. ಹೆಚ್ಚು ಸಕ್ಕರೆ ತಿನ್ನುವುದರಿಂದ ಇದು ಸಂಭವಿಸುತ್ತದೆ. ಇದು ಬಾಯಿಯ ಸ್ವಚ್ಛತೆಯನ್ನೇ ಹಾಳು ಮಾಡಿಬಿಡುತ್ತದೆ. ತ್ರಿಫಲ ಚೂರ್ಣದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಪ್ಲೇಕ್ ರಚನೆ ಮಾಡುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತವೆ.
2. ವಸಡಿನ ಸಮಸ್ಯೆ (Gum Problems)

ಹಲ್ಲಿನ ಮೇಲೆ ಪ್ಲೇಕ್ ನಿರ್ಮಾಣವಾದರೆ, ಅದು ವಸಡಿಗೂ ಕಾಟ ಕೊಡುತ್ತದೆ. ಇದರಿಂದ ವಸಡು ಊದಿಕೊಳ್ಳುವುದು, ಕೆಂಪಾಗುವುದು ಮತ್ತು ಬ್ರಷ್ ಮಾಡಿದಾಗ ರಕ್ತ ಬರುವುದನ್ನು ಕಾಣಬಹುದು. ತ್ರಿಫಲ ಚೂರ್ಣದಲ್ಲಿರುವ ಆಂಟಿ-ಇನ್ಫ್ಲಮೇಟರಿ (Anti-inflammatory) ಗುಣಗಳು ವಸಡಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಇದು ವಸಡನ್ನು ಸುಧಾರಿಸಲು ಮತ್ತು ಅದರ ಟಿಷ್ಯೂಗಳನ್ನು ಹಾನಿಗೊಳಿಸುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ತಡೆಯಲು ಸಹಾಯ ಮಾಡುತ್ತದೆ.
3. ದುರ್ವಾಸನೆ (Bad Breath)
ಬಾಯಿಯಿಂದ ದುರ್ವಾಸನೆ ಬರುವುದು ಕೂಡ ಗಂಭೀರ ಸಮಸ್ಯೆ. ಕೆಲವರು ಬ್ರಷ್ ಮಾಡಿದರೂ ಬಾಯಿಯ ದುರ್ವಾಸನೆ ಸಮಸ್ಯೆ ಅನುಭವಿಸುತ್ತಾರೆ. ಇದು ಕೆಲವೊಮ್ಮೆ ಹಲ್ಲು, ವಸಡು ಅಥವಾ ನಾಲಿಗೆಯಲ್ಲಿನ ಪ್ಲೇಕ್ ನಿಂದ ಆಗುತ್ತದೆ. ತ್ರಿಫಲ ಚೂರ್ಣದಲ್ಲಿರುವ ಆಂಟಿ-ಮೈಕ್ರೋಬಿಯಲ್ (Antimicrobial) ಗುಣಗಳು ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.
Read this also : Dark Lips; ಕಪ್ಪು ತುಟಿಗಳಿಗೆ ಮನೆಯಲ್ಲೇ ತಯಾರಿಸಿ ಮದ್ದು!
4. ಬಾಯಿ ಹುಣ್ಣು (Mouth Ulcers)

ಬಾಯಿ ಹುಣ್ಣು, ಬಾಯಿಯಲ್ಲಿ ಕೆಂಪು ಅಥವಾ ಬಿಳಿ ಗಾಯದಂತೆ ಆಗುವುದು ಸಾಮಾನ್ಯ ಸಮಸ್ಯೆ. ತ್ರಿಫಲ ಚೂರ್ಣದಲ್ಲಿರುವ ಆಂಟಿ-ಇನ್ಫ್ಲಮೇಟರಿ, ಆಂಟಿ-ಮೈಕ್ರೋಬಿಯಲ್ ಗುಣಗಳು ಬಾಯಿ ಹುಣ್ಣು ಬೇಗ ಗುಣವಾಗುವಂತೆ ಮಾಡುತ್ತವೆ.
ಹೇಗೆ ಬಳಸಬೇಕು?
ಎರಡು ಲೋಟ ನೀರಿಗೆ 1 ಚಮಚ ತ್ರಿಫಲ ಚೂರ್ಣ ಹಾಕಿ, 5-10 ನಿಮಿಷ ಕುದಿಸಿ. ತಣ್ಣಗಾದ ನಂತರ ಆ ನೀರಿನಿಂದ ಬಯಿ ಮುಕ್ಕಳಿಸಿ. ಇದು ಬಾಯಿಯ ಮತ್ತು ಹಲ್ಲಿನ ಸಾಮಾನ್ಯ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಜಿಎಸ್ ಎಸ್ ಮಾಧ್ಯಮದ ಈ ವಿಡಿಯೋದಲ್ಲಿ ವೀಕ್ಷಿಸಿ; ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಜಿಎಸ್ಎಸ್ ಮಾಧ್ಯಮದ ಈ ವಿಡಿಯೋದಲ್ಲಿ ವೀಕ್ಷಿಸಿ;











