Fact check – “ಸಮೋಸಾ, ಜಿಲೇಬಿ ಮೇಲೆ ವಾರ್ನಿಂಗ್ ಲೇಬಲ್” ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸುದ್ಧಿಯೊಂದು ಹಲವಾರು ಪತ್ರಿಕೆಗಳು ಹಾಗೂ ಮಾಧ್ಯಮಗಳು ಬಿತ್ತರಿಸಿದ್ದವು. ಕೆಲವರು ಸುದ್ಧಿ ನೋಡಿ ಇದು ಒಳ್ಳೆಯ ವಿಚಾರವೆಂದರೆ, ಇನ್ನ ಕೆಲವರು ಕೇವಲ ಜಿಲೇಬಿ, ಸಮೋಸಾದಂತ ಭಾರತೀಯ ತಿನಿಸುಗಳಿಗೆ ಮಾತ್ರ ಯಾಕೆ? ಪಿಜ್ಜಾ, ಬರ್ಗರ್ ನಂತ ಆಹಾರಗಳ ಮೇಲೆ ಇಂಥ ವಾರ್ನಿಂಗ್ ಯಾಕೆ ಇಲ್ಲ ಅಂದುಕೊಂಡರು. ಆದರೆ ಇಂಥದೊಂದು ಸುದ್ಧಿಯ ನೈಜ ಮೂಲ ಹುಡುಕಲು ಜನರು ಗಮನ ಕೊಡಲಿಲ್ಲ.
ಈ ಸುದ್ಧಿ ವೇಗವಾಗಿ ಹರಡಲು ಶುರುವಾದ ಬೆನ್ನೆಲ್ಲೇ ಇದೀಗ ಈ ಬಗ್ಗೆ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ. ಸಮೋಸಾ, ಜಿಲೇಬಿಗಳ ಮೇಲೆ ಯಾವುದೇ ವಾರ್ನಿಂಗ್ ಲೇಬಲ್ ವಿಧಿಸಿಲ್ಲ ಎಂದು ತಿಳಿಸಿದೆ.

ಮಂಗಳವಾರ ಆರೋಗ್ಯ ಸಚಿವಾಲಯದಿಂದ ನೀಡಲಾದ ಅಧಿಕೃತ ಹೇಳಿಕೆಯಲ್ಲಿ, ಸಮೋಸಾ, ಜಿಲೇಬಿ – ಹೀಗಿ ಪ್ರಸಿದ್ಧ ಭಾರತೀಯ ತಿಂಡಿಗಳ ಮೇಲೆ ವಾರ್ನಿಂಗ್ ಲೇಬಲ್ ಹಾಕುವಂತೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ತಿಳಿಸಲಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಆಧಾರ ರಹಿತ ಎಂದು ಸಚಿವಾಲಯ ತಿಳಿಸಿದೆ.
ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (PIB) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಆಹಾರ ಉತ್ಪನ್ನಗಳ ಮೇಲೆ ವಾರ್ನಿಂಗ್ ಲೇಬಲ್ ಹಾಕುವಂತೆ ಯಾವುದೇ ವಿಧಿಯನ್ನೂ ಸಚಿವಾಲಯ ಜಾರಿಗೆ ತಂದಿಲ್ಲ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ.
ಆರೋಗ್ಯ ಇಲಾಖೆಯು ಎಣ್ಣೆ ಮತ್ತು ಸಕ್ಕರೆ ತಿನಿಸುಗಳನ್ನು ಸೇವಿಸುವಾಗ ಆರೋಗ್ಯದ ವಿಚಾರ ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂಬ ಸಲಹೆ ನೀಡಿದೆ. ಆದರೆ ಈ ಸಲಹೆಯು ಆರೋಗ್ಯಕರ ಆಯ್ಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಉದ್ಯೋಗ ಸ್ಥಳಗಳಲ್ಲಿ ಜಾರಿಗೆ ತರಲಾಗಿದ್ದು, ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಕಡೆಗೆ ಮುಂದಾಗಬೇಕೆಂಬ ಉದ್ದೇಶ ಹೊಂದಿದೆ ಹೊರತು ಭಾರತದ ಶ್ರೀಮಂತ ಆಹಾರ ಸಂಸ್ಕೃತಿಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಪಿಐಬಿ (PIB) ತಿಳಿಸಿದೆ.
Read this also – Weight loss; ನಿಮ್ಮ ಇಷ್ಟದ ಕೇಕ್, ಚಿಪ್ಸ್ ತಿಂದೇ ದೇಹದ ತೂಕ ಇಳಿಸಬಹುದು!










