• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

ರಸ್ತೆ ಅಪಘಾತಗಳ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ..!

December 12, 2023
in GSS Maadhyama, General
Reading Time: 1 min read
A A
0
Road-Accident
115
VIEWS

 ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಪ್ರತಿ ವರ್ಷ ಜಾಸ್ತಿ ಆಗ್ತಾನೇ ಇದೆ. ಅಚ್ಚರಿ ಅಂದ್ರೆ ವಿಶ್ವದ ಬೇರೆಲ್ಲಾ ದೇಶಗಳಿಗೆ ಹೋಲಿಸಿದ್ರೆ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳು ಕಡಿಮೆ ಇದ್ದರೂ, ರಸ್ತೆ ಅಪಘಾತಗಳಲ್ಲಿ ಸಾಯೋರ ಸಂಖ್ಯೆ ಮಾತ್ರ ನಮ್ಮಲ್ಲೇ ಹೆಚ್ಚಿದೆ. ವಿಶ್ವದಲ್ಲೇ ಅತಿಹೆಚ್ಚು ರಸ್ತೆ ಅಪಘಾತಗಳು ಅಮೆರಿಕದಲ್ಲಾಗುತ್ವೇ, ಆದ್ರೆ ರಸ್ತೆ ಅಪಘಾತಗಳಲ್ಲಿ ಹೆಚ್ಚು ಜನರು ಸಾಯೋದು ಮಾತ್ರ ಭಾರತದಲ್ಲಿ. Union Ministry of Road Transport and Highways ಈಚೆಗೆ ಬಿಡುಗಡೆ ಮಾಡಿರೋ ‘ಭಾರತದಲ್ಲಿ ರಸ್ತೆ ಅಪಘಾತಗಳ ವರದಿಯಲ್ಲಿ “ಅಪಘಾತ ತಡೆ ಕ್ರಮಗಳ ಹೊರತಾಗಿಯೂ ರಸ್ತೆ ಅಪಘಾತಗಳ ಸಂಖ್ಯೆ ಭಾರತದಲ್ಲಿ ಏರಿಕೆಯಾಗಿದೆ” ಎಂದು ಹೇಳಿದೆ.

 ಈ ವರದಿಯ ಪ್ರಕಾರ, 2020ರಲ್ಲಿ ದೇಶದಾದ್ಯಂತ ಒಟ್ಟು 3.66 ಲಕ್ಷ ರಸ್ತೆ ಅಪಘಾತಗಳಾಗಿದ್ರೆ, 2021ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆ 4.32 ಲಕ್ಷಕ್ಕೆ ಏರಿಕೆಯಾಗಿದೆ. ಅಂದ್ರೆ ಒಂದು ವರ್ಷದ ಅವಧಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಶೇಕಡಾ 12ರಷ್ಟು ಜಾಸ್ತಿಯಾಗಿದೆ. ಇನ್ನು ಕಾರುಗಳಲ್ಲಿ ಏರ್ಬ್ಯಾಗ್ ಕಡ್ಡಾಯ, ಸೀಟ್ಬೆಲ್ಟ್ ಧರಿಸುವುದು ಕಡ್ಡಾಯ, ದ್ವಿಚಕ್ರ ವಾಹನ ಸವಾರರೂ ಹೆಲ್ಮೆಟ್ ಧರಿಸುವುದು  ಕಡ್ಡಾಯ, ವೇಗ ನಿಯಂತ್ರಕಗಳು ಹೀಗೆ ಅನೇಕ ಕ್ರಮಗಳನ್ನು ಕೈಗೊಂಡಿದ್ರು ರಸ್ತೆ ಅಪಘಾತಗಳಲ್ಲಿ ಆಗೋ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

ಇದನ್ನೂ ಓದಿ : ಭಾರತೀಯರ ಜೀವಿತಾವಧಿಯನ್ನೇ ಕಡಿಮೆ ಮಾಡುತ್ತಿದೆ ವಾಯುಮಾಲಿನ್ಯ..!

 ತಜ್ಷರು ಹೇಳೋ ಪ್ರಕಾರ, ನಮ್ಮ ದೇಶದ ಜನರ ಚಾಲನಾ ಸ್ವರೂಪ ಅಂದ್ರೆ ಡ್ರೈವಿಂಗ್‌ ಶೈಲಿ ಮತ್ತು ಹವ್ಯಾಸದಲ್ಲಿ ಬದಲಾವಣೆ ಆಗದೇ ಇರೋದೆ ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಏರಿಕೆಯಾಗೋಕೆ ಮುಖ್ಯ ಕಾರಣವಾಗಿದೆ. ಇನ್ನು ನಮ್ಮ ದೇಶದಲ್ಲಿ ಶೇಕಡಾ 77ರಷ್ಟು ರಸ್ತೆ ಅಪಘಾತಗಳು ಅತಿಯಾದ ವೇಗದಿಂದಾಗಿಯೇ ಸಂಭವಿಸಿವೆ. ಜೊತೆಗೆ ಲೇನ್ ಶಿಸ್ತು ಇಲ್ದೆ ಇರೋ ಡ್ರೈವಿಂಗ್ನಿಂದ, ಸಿಗ್ನಲ್ ಜಂಪ್, ಮೊಬೈಲ್ ಬಳಕೆಯಂತಹ ಡ್ರೈವಿಂಗ್‌ ನಿಯಮಗಳನ್ನ ಉಲ್ಲಂಘನೆ ಮಾಡೋದು ಕೂಡಾ ಹೆಚ್ಚು ರಸ್ತೆ ಅಪಘಾತಗಳಿಗೆ ಕಾರಣವಾಗಿವೆ ಎಂಬುದನ್ನ ವರದಿಯಲ್ಲಿ ವಿವರಿಸಲಾಗಿದೆ. 

 ಅಚ್ಚರಿ ಅಂದ್ರೆ, ಸತತ 21 ವರ್ಷಗಳಿಂದ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳಿಂದಾಗುವ ಮರಣ ಪ್ರಮಾಣ ಸತತವಾಗಿ ಜಾಸ್ತಿ ಆಕ್ತಿದೆ.  ಪ್ರತಿ 100 ರಸ್ತೆ ಅಪಘಾತಗಳಲ್ಲಿ 37ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.  ಇನ್ನ 2020ರಲ್ಲಿ 91,239 ಜನರು ಅತಿವೇಗದ ಚಾಲನೆಯ ಕಾರಣಕ್ಕೆ ನಡೆದ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ರೆ, 2021ರಲ್ಲಿ ಇದೇ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ 1.07 ಲಕ್ಷಕ್ಕೆ ಜಾಸ್ತಿಯಾಗಿದೆ. ಇನ್ನು ಮದ್ಯಪಾನ ಮತ್ತು ಡ್ರಗ್ಸ್ ಸೇವಿಸಿ ವಾಹನ ಚಾಲನೆ ಮಾಡಿದ ಕಾರಣಕ್ಕೆ ನಡೆದ ರಸ್ತೆ ಅಪಘಾತಗಳಲ್ಲಿ 2021ರಲ್ಲಿ 3,314 ಮಂದಿ ಪ್ರಾಣ ಕಳೆದುಕೊಂಡಿದ್ರೆ,  ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿ ಅಥವಾ ಲೇನ್ ಶಿಸ್ತು ಉಲ್ಲಂಘನೆ ಮಾಡಿದ್ರಿಂದ ನಡೆದಿರೋ  ರಸ್ತೆ ಅಪಘಾತಗಳಲ್ಲಿ 8,122 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಂಶ ವರದಿಯಲ್ಲಿ ಬಹಿರಂಗವಾಗಿದೆ.  

ಅಚ್ಚರಿ ಅಂದ್ರೆ  ದಿಢೀರನೆ ಎದುರಾಗೋ ರಸ್ತೆ ತಿರುವುಗಳು ರಸ್ತೆ ಅಪಘಾತಗಳಿಗೆ  ಮುಖ್ಯ ಕಾರಣ ಎಂಬ ಸಾಮಾನ್ಯ ನಂಬಿಕೆ ನಮ್ಮಲ್ಲಿದೆ. ಆದ್ರೆ ನೇರವಾಗಿರೋ ರಸ್ತೆಯಲ್ಲೇ ಶೇಕಡಾ 65ರಷ್ಟು ರಸ್ತೆ ಅಪಘಾತಗಳು ನಡೆದಿರೋದು ವರದಿಯಲ್ಲಿರುವ ಅಂಕಿ-ಅಂಶಗಳಿಂದ ದೃಡಪಟ್ಟಿದೆ. ರಸ್ತೆ ತಿರುವಿನಲ್ಲಿ ಚಾಲಕರು ವಾಹನಗಳ ವೇಗವನ್ನು ಕಡಿಮೆ ಮಾಡಿ, ಜಾಗೃತೆಯಿಂದವಾಹನ ಚಾಲನೆ ಮಾಡ್ತಾರೆ. ಆದ್ರೆ ನೇರ ರಸ್ತೆಗಳಲ್ಲಿ ಯಾವ ಅಡ್ಡಿಯೂ ಇರೋದಿಲ್ಲಾ ಅಂತಾ ಭಾವಿಸಿ, ವೇಗವಾಗಿ ಚಾಲನೆ ಮಾಡ್ತಾರೆ. ಹೀಗಾಗಿ ನೇರ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಮೊಬೈಲ್‌ ಬಳಕೆಯಿಂದ ಮೆದುಳಿಗೆ ಹಾನಿ..! ಸಂಶೋಧನಾ ವರದಿ ಬಿಚ್ಚಿಟ್ಟ ಆಘಾತಕಾರಿ ಸತ್ಯ..!

ಇನ್ನು  ರಸ್ತೆ ಅಪಘಾತಗಳನ್ನ ತಡಿಯೋಕೆ ಗುಣಮಟ್ಟದ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಅತಿಯಾದ ವೇಗಕ್ಕೆ ಕಡಿವಾಣ ಹಾಕಲು ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಿ, ದಂಡ ಹಾಕೋ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಡ್ಡಾದಿಡ್ಡಿ ಚಾಲನೆ ಮಾಡೋದನ್ನ  ಗುರುತಿಸಿ ದಂಡ ಹಾಕೋ ವ್ಯವಸ್ಥೆ ಕೂಡಾ ಜಾರಿಗೆ ತರಲಾಗಿದೆ. ಇಂತಹ ಕ್ರಮಗಳ ಹೊರತಾಗಿಯೂ ರಸ್ತೆ ಅಪಘಾತಗಳು  ಏರಿಕೆಯಾಗುತ್ತಿರೋದು ಮಾತ್ರ ದುರದೃಷ್ಟಕರ. ಅದಕ್ಕಿರುವ ಒಂದೇ ಪರಿಹಾರವೆಂದರೆ, ಸಂಚಾರ ನಿಯಮಗಳು ಪಾಲನೆಯ ಜೊತೆಗೆ ಚಾಲನೆಯ ಸ್ವರೂಪ ಮತ್ತು ಮನಸ್ಥಿತಿಯೂ ಕೂಡಾ ಬದಲಾಗಬೇಕಿದೆ. ವೇಗಕ್ಕೆ ಮೀತಿ ಹಾಕಿ, ನಮ್ಮ ಪ್ರಾಣವನ್ನು ಕಾಪಾಡಿಕೊಳ್ಳೋದು ಮುಖ್ಯ ಅಲ್ವಾ..?

ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.