• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
in GSS Maadhyama, Health and Wellness
Reading Time: 3 mins read
A A
0
145
VIEWS

ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸುವುದು ಸಹಜ. ಇಂಥ ಸಮಯದಲ್ಲಿ ಬಾಯಿಗೆ ರುಚಿ ಸಿಕ್ಕರೆ ಸಾಕು ಅಂತಾ ಎಣ್ಣೆಯಲ್ಲಿ ಕರಿದ ಪದಾರ್ಥ, ಬೇಕರಿ ತಿನಿಸುಗಳನ್ನು ಸಾಕಷ್ಟು ಜನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಆರೋಗ್ಯ ಹಾಳಾಗುತ್ತದೆ. ಹೀಗಾಗಿ ಸ್ನ್ಯಾಕ್ಸ್ ವಿಷಯ ಬಂದಾಗಲೂ ಆರೋಗ್ಯಭರಿತ ಸ್ನ್ಯಾಕ್ಸ್ ಆಯ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮಖಾನ(Makhana) ಸ್ನ್ಯಾಕ್ಸ್ ಇನ್ನೂ ಒಳ್ಳೆಯದು.

ಮಖಾನಾವನ್ನು ತಾವರೆ ಬೀಜಗಳು ಅಥವಾ ಫಾಕ್ಸ್ ನಟ್ (Fox Nuts) ಎಂದು ಕರೆಯುತ್ತಾರೆ. ಮಖಾನಾದಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಹಲವಾರು ಖನಿಜಗಳಿವೆ. ಅದರಲ್ಲಿರುವ ನೈಸರ್ಗಿಕ ಆ್ಯಂಟಿಆಕ್ಸಿಡೆಂಟ್ಗಳು ದೇಹವನ್ನು ರೋಗಗಳಿಂದ ಕಾಪಾಡುತ್ತವೆ.

ಮಖಾನದ ಆರೋಗ್ಯ ಪ್ರಯೋಜನಗಳು;

ಮಧುಮೇಹಿಗಳಿಗೆ ಒಳ್ಳೆಯದು


ಮಖಾನಾದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ. ಅಂದರೆ, ಇದು ರಕ್ತದಲ್ಲಿ ಸಕ್ಕರೆಯ ಏರಿಳಿತವನ್ನು ನಿಯಂತ್ರಿಸುತ್ತದೆ. ಮಖಾನಾ ಸೇವನೆಯಿಂದ ಶುಗರ್ ಲೆವೆಲ್ ಸ್ಥಿರವಾಗುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ


ಮಖಾನಾದಲ್ಲಿ ಫೈಬರ್ ಅಧಿಕವಾಗಿದೆ. ಇದು ನಮ್ಮ ಜೀರ್ಣಾಂಗವನ್ನು ಉತ್ತೇಜಿಸಿ, ಮಲಬದ್ಧತೆ ನಿವಾರಣೆ ಮಾಡುತ್ತದೆ.

Also read – Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

ಹೃದಯದ ಆರೋಗ್ಯಕ್ಕೆ ಒಳ್ಳೆಯದು


ಇದರಲ್ಲಿರುವ ಫೈಟೊನ್ಯೂಟ್ರಿಯೆಂಟ್ಸ್, ಆಲ್ಕಲಾಯ್ಡ್ಸ್ ಮತ್ತು ಗ್ಯಾಲಿಕ್ ಆಸಿಡ್ ಹೃದಯವನ್ನು ಬಲಪಡಿಸುತ್ತವೆ. ಮೆಗ್ನೀಸಿಯಮ್ ರಕ್ತ ಸಂಚಲನ ಸುಧಾರಿಸಿ, ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ.

ಒತ್ತಡ ಮತ್ತು ಖಿನ್ನತೆ ನಿವಾರಣೆ


ಮಖಾನಾದಲ್ಲಿರುವ ಥಯಾಮಿನ್ (Vitamin B1) ನರಮಂಡಲದ ಕಾರ್ಯವನ್ನು ಸುಧಾರಿಸುತ್ತದೆ. ಇದು ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಮುಕ್ತಿ ನೀಡುತ್ತದೆ.

ರಕ್ತಹೀನತೆ ಮತ್ತು ಮೂಳೆಗಳಿಗೆ ಪ್ರಯೋಜನ


ಮಖಾನಾದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಮ್ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತವೆ. ಇದರಲ್ಲಿರುವ ಐರನ್ (ಕಬ್ಬಿಣಾಂಶ) ರಕ್ತಹೀನತೆಯನ್ನು ತಡೆಯುತ್ತದೆ.

ತೂಕ ಕಡಿಮೆ ಮಾಡಲು ಸಹಾಯಕ


ಮಖಾನಾದಲ್ಲಿ ಕ್ಯಾಲೊರಿ ಕಡಿಮೆ, ಆದರೆ ಫೈಬರ್ ಮತ್ತು ಪ್ರೋಟೀನ್ ಹೆಚ್ಚು. ಹೀಗಾಗಿ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಹಸಿವು ನಿಯಂತ್ರಣದಲ್ಲಿರುತ್ತದೆ. ತೂಕ ಇಳಿಸಲು ಬಯಸುವವರಿಗೆ ಇದು ಸಹಕಾರಿ

ಮೂತ್ರಪಿಂಡ ಮತ್ತು ದೇಹ ಶುದ್ಧೀಕರಣ


ಮಖಾನಾದಲ್ಲಿ ಆಂಟಿ ಇನ್ಫ್ಲಮೇಟರಿ ಮತ್ತು ಆಂಟಿ ಆಕ್ಸಿಡೆಂಟ್ಗಳಿವೆ. ಇವು ಮೂತ್ರಪಿಂಡಗಳನ್ನು ರಕ್ಷಿಸುತ್ತವೆ, ದೇಹದ ಟಾಕ್ಸಿನ್ಗಳನ್ನು ಹೊರಹಾಕುತ್ತವೆ. ಇದು ನೈಸರ್ಗಿಕ “Detox” ಆಗಿ ಕೆಲಸ ಮಾಡುತ್ತದೆ.

ತ್ವಚೆ ಮತ್ತು ಕಾಂತಿ ಹೆಚ್ಚಿಸುತ್ತದೆ


ಮಖಾನಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಮೊಡವೆಗಳು, ಸುಕ್ಕುಗಳನ್ನು ತಡೆಯುತ್ತವೆ. ಮುಖದ ಕಾಂತಿ ಮತ್ತು ಚರ್ಮದ ತಾಜಾತನ ಹೆಚ್ಚಿಸುತ್ತದೆ.

ಮಖಾನ ಸ್ನ್ಯಾಕ್ ಹೇಗೆ ತಯಾರಿಸುವುದು?


ಕಡಾಯಿಗೆ 1–2 ಚಮಚ ತುಪ್ಪ ಹಾಕಿ ಬಿಸಿಮಾಡಿ. ಅದಕ್ಕೆ ಮಖಾನಾವನ್ನು ಹಾಕಿ 5–10 ನಿಮಿಷ ಹುರಿಯಿರಿ. ಅದು ಗರಿಗರಿಯಾಗುತ್ತಿದ್ದಂತೆ ಸ್ವಲ್ಪ ಉಪ್ಪು, ಮೆಣಸಿನ ಪುಡಿ ಅಥವಾ ಚಾಟ್ ಮಸಾಲಾ ಸೇರಿಸಿ. ತಣ್ಣಗಾದ ಮೇಲೆ ಬಾಟಲಿಯಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡಿದರೆ – crispy, tasty, healthy snack ಸಿದ್ಧವಾಗುತ್ತದೆ.

ಮಿತವಾದ ಸೇವನೆ ಮುಖ್ಯ!
ಮಖಾನಾ ಸ್ನ್ಯಾಕ್ ತಿನ್ನುವಾಗ 2–3 ಹಿಡಿ (ಸುಮಾರು 30 ಗ್ರಾಂ) ಸೇವನೆ ಸಾಕು. ಹೆಚ್ಚಾಗಿ ತಿಂದರೆ ಜೀರ್ಣಕ್ರಿಯೆ ನಿಧಾನವಾಗಬಹುದು.

Tags: Healthhealthy foodhealthy snacks
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025
Health and Wellness

Congenital Heart Disease- ರಾಜ್ಯದಲ್ಲಿ 40 ಸಾವಿರ ಮಕ್ಕಳಿಗೆ ಹೃದಯ ಸಮಸ್ಯೆ! ಪೋಷಕರೇ ನಿರ್ಲಕ್ಷಿಸಬೇಡಿ – ಏನಿದು ಶಾಕಿಂಗ್ ವರದಿ?

September 29, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.