ನಾವು ತಿನ್ನುವ ಆಹಾರಕ್ಕೂ ನಮ್ಮ ಮನಸ್ಥಿತಿಗೂ ಸಂಪರ್ಕವಿದೆ. ಹೇಗೆ ಎಂದರೇ, ನಮ್ಮ ಮೆದುಳು ಮತ್ತು ಜೀರ್ಣಕ್ರೀಯೆಗೂ ಸಂಪರ್ಕವಿದೆ, ಇದನ್ನೇ Gut-Brain Connection ಅಂತಾ ಕರೆಯುತ್ತಾರೆ. ಕರುಳು ಮತ್ತು ಮೆದುಳು ವೇಗಸ್ ನರ ಮತ್ತು ರಾಸಾಯನಿಕ ಸಂದೇಶವಾಹಕಗಳ (Neurotransmitters) ಮೂಲಕ ಸಂಪರ್ಕ ಹೊಂದಿವೆ. ಹೀಗಾಗಿ ಸರಿಯಾದ ಆಹಾರ ಸೇವನೆಯಿಂದ ಶರೀರಕ್ಕೆ ಶಕ್ತಿ ಸಿಗುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
Stress; ಒತ್ತಡದ ನಿಯಂತ್ರಣಕ್ಕೆ ಸಹಾಯ ಮಾಡುವ ಆಹಾರಗಳು;
ದಪ್ಪ ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿಯಲ್ಲಿರುವ Capsaicin ಎಂಬ ಅಂಶ Endorphins (Feel-good Hormones) ಉತ್ಪಾದನೆಗೆ ಕಾರಣವಾಗುತ್ತದೆ. ಇವು ನಮ್ಮ ಮನಸ್ಸಿಗೆ ಸಂತೋಷದ ಭಾವನೆ ನೀಡುತ್ತವೆ.
ಅವಕಾಡೊ

ಅವಕಾಡೊ ಸೇವನೆ ಕೂಡ ಒತ್ತಡ, ಆತಂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅವಕಾಡೊದಲ್ಲಿ ಒಮೆಗಾ-3 ಕೊಬ್ಬಿನಾಮ್ಲಳಿರುತ್ತವೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ, ಈ ಆರೋಗ್ಯಕರ ಆಮ್ಲಗಳು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿವೆ.
ಬಾಳೆಹಣ್ಣು

ಬಾಳೆಹಣ್ಣಿನಲ್ಲಿರುವ ವಿಟಮಿನ್ ಮತ್ತು ಫೋಲೆಟ್ ಅಂಶಗಳು ಸೆರೊಟೊನಿನ್ (Serotonin) ಎಂಬ Happy Hormone ಉತ್ಪಾದನೆಗೆ ಸಹಾಯ ಮಾಡುತ್ತವೆ. ಒತ್ತಡ ಅಥವಾ ಆತಂಕ ಇರುವವರು ಬಾಳೆಹಣ್ಣನ್ನು ಸೇವಿಸಿದರೆ ಉತ್ತಮ ಪರಿಣಾಮ ಸಿಗುತ್ತದೆ.
ಡ್ರೈ ಫ್ರೂಟ್ಸ್

ಡ್ರೈ ಫ್ರೂಟ್ಸ್ ಕೂಡ ಒತ್ತಡ ನಿಯಂತ್ರಿಸಲು ಸಹಾಯ ಮಾಡುತ್ತವೆ. ಬಾದಾಮಿ, ಪಿಸ್ತಾ ಮತ್ತು ವಾಲ್ನಟ್ಗಳಲ್ಲಿ ಆಂಟಿಆಕ್ಸಿಡೆಂಟ್ ವಿಟಮಿನ್ ಇ ಮತ್ತು ಜಿಂಕ್ (Zinc) ಅಧಿಕವಾಗಿರುತ್ತವೆ. ಇದರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ, ದೇಹ ಆರೋಗ್ಯವಾಗಿರುತ್ತದೆ, ಆಗ ಮನಸ್ಸು ಒತ್ತಡವನ್ನು ವೇಗವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.
ಸಾಂಬಾರ ಪದಾರ್ಥಗಳು

ಸಾಂಬಾರ ಪದಾರ್ಥಗಳು ಕೂಡ ಒತ್ತಡ ನಿಯಂತ್ರಣಕ್ಕೆ ಸಹಕಾರಿಯಾಗಿವೆ. ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಸಾಂಬಾರ ಪದಾರ್ಥಗಳ ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ. ಅವುಗಳು ಇರೋದು ರುಚಿಗಷ್ಟೇ ಅಂತಾ ಸುಮಾರು ಜನ ತಿಳಿದಿದ್ದಾರೆ. ಆದರೆ ಅದರಿಂದ ಒತ್ತಡ ನಿವಾಸಿಕೊಳ್ಳಬಹುದು ಅಂತಾ ತಿಳಿದಿಲ್ಲ. ಅರಿಶಿಣ, ಮೆಣಸುಗಳಂತಹ ಮಸಾಲ ಪದಾರ್ಥಗಳು ನಮ್ಮ ಒತ್ತಡ ಕಡಿಮೆ ಮಾಡುತ್ತವೆ. ಅರಿಶಿನದಲ್ಲಿರುವ Curcumin ಅಂಶ ಮೆದುಳಿನ Serotonin ಮಟ್ಟವನ್ನು ಹೆಚ್ಚಿಸುತ್ತದೆ. ಮೆಣಸು ಇದರ ಗ್ರಹಿಸುವ ಶಕ್ತಿಯನ್ನು (Absorption) ಹೆಚ್ಚಿಸುತ್ತದೆ.
Read this also – Nutritious food; ರೋಗಗಳು ಬರಬಾರದು ಅಂದ್ರೆ ನಿಮ್ಮ ಆಹಾರ ಕ್ರಮ ಹೀಗಿರಲಿ…
ಹಸಿರು ಸೊಪ್ಪುಗಳು

ಪಾಲಕ್ ನಂತಹ ಹಸಿರು ಸೊಪ್ಪುಗಳಲ್ಲಿ ಕಬ್ಬಿಣಾಂಶ ಮತ್ತು ಫೋಲೆಟ್ ಹೆಚ್ಚು ಇರುತ್ತದೆ. ಇವು ದೇಹದಲ್ಲಿ ಆರೋಗ್ಯಕರ ರಕ್ತ ಹೊಂದಲು ಸಹಾಯ ಮಾಡುತ್ತವೆ. ದೇಹದಲ್ಲಿ ಆರೋಗ್ಯಕರ ರಕ್ತವಿದ್ದಾಗ ದೇಹದ ಬೇರೆ ಬೇರೆ ಅಂಗಗಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗಿ, ಆಮ್ಲಜನಕದ ಶಕ್ತಿಹೆಚ್ಚುತ್ತದೆ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಹಸಿರು ಸೊಪ್ಪುಗಳು, ತರಕಾರಿಗಳು ಶರೀರಕ್ಕೆ ಚೈತನ್ಯವನ್ನು ಒದಗಿಸುತ್ತವೆ.
ಮಶ್ರೂಮ್

ಮಶ್ರೂಮ್ ನಲ್ಲಿ ವಿಟಮಿನ್ ಡಿ ಅಧಿಕವಾಗಿರುತ್ತದೆ. ಇದು Happy Hormone Serotonin ಮಟ್ಟವನ್ನು ಹೆಚ್ಚಿಸಿ ಮನಸ್ಸಿಗೆ ಪಾಸಿಟಿವ್ ಚಿಂತನೆ ತರಿಸುತ್ತದೆ.
ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್ನಲ್ಲಿರುವ Flavonoids ಮತ್ತು Antioxidants ಮೆದುಳಿನ Cortisol ಹಾರ್ಮೋನ್ (stress hormone) ಮಟ್ಟವನ್ನು ಕಡಿಮೆ ಮಾಡುತ್ತವೆ. ಸಾಮಾನ್ಯ ಚಾಕಲೇಟ್ಗಿಂತ 70% Cocoa ಒಳಗೊಂಡಿರುವ ಡಾರ್ಕ್ ಚಾಕಲೇಟ್ ಸೇವನೆ ಒತ್ತಡ ನಿಯಂತ್ರಣಕ್ಕೆ ಹೆಚ್ಚು ಸಹಕಾರಿಯಾಗಿದೆ.
ನೀವೂ ಒತ್ತಡದ ಸಮಸ್ಯೆಯಲ್ಲಿದ್ದರೆ ಇಂಥಹ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಇದರ ಜೊತೆಗೆ ಆರೋಗ್ಯ ಹಾಳು ಮಾಡುವ ಕುರುಕಲು ತಿಂಡಿ, ಎಣ್ಣೆ ಪದಾರ್ಥ ಸೇವನೆ ಕಮ್ಮಿ ಮಾಡುವುದರಿಂದ, ಯೋಗ, ವ್ಯಾಯಮ, ಪ್ರಾಣಾಯಾಮ, ಒಳ್ಳೆ ನಿದ್ದೆಯ ಅಭ್ಯಸ ಮಾಡಿಕೊಳ್ಳುವುದರಿಂದ ಕೂಡ ಒತ್ತಡ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.










