• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama General

Barley Water; ಬೇಸಿಗೆಯಲ್ಲಿ ದೇಹ ಬೇಗ Heat ಆಗ್ತಿದ್ಯಾ? ಬಾರ್ಲಿ ನೀರು ಕುಡಿರಿ!

April 8, 2025
in General
Reading Time: 2 mins read
A A
0
134
VIEWS

ಬೇಸಿಗೆ ಕಾಲದಲ್ಲಿ ನಮ್ಮ ದೇಹ ಬೇಗ ಡಿಹೈಡ್ರೇಟ್ ಆಗುವುದು, ದೇಹದಲ್ಲಿ ಶಕ್ತಿ ಕಡಿಮೆ ಆಗುವುದು, ಉಷ್ಣತೆ ಹೆಚ್ಚಾಗುವುದು ಸಾಮಾನ್ಯ. ಇದಕ್ಕೆಲ್ಲಾ ರಾಮಬಾಣ ಅಂದರೆ ಬಾರ್ಲಿ ನೀರು(Barley Water). ಬೇಸಿಗೆಯಲ್ಲಿ ಬಾರ್ಲಿ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ.

ಹೈಡ್ರೇಶನ್ ಕಾಪಾಡುತ್ತದೆ
ಬಾರ್ಲಿ ನೀರಿನಲ್ಲಿ ನೈಸರ್ಗಿಕ ಕೂಲಿಂಗ್ ಅಂಶಗಳು ಮತ್ತು ಇಲೆಕ್ಟ್ರೋಲೈಟ್ಗಳು ಇರುತ್ತವೆ, ಅಂದರೆ ಪೋಟ್ಯಾಶಿಯಮ್, ಮೆಗ್ನೇಶಿಯಮ್. ಇವು ನಮ್ಮ ದೇಹದಲ್ಲಿ ಹೈಡ್ರೇಶನ್ ಕಾಪಾಡಲು ಸಹಾಯ ಮಾಡುತ್ತವೆ.

ಇಮ್ಯೂನಿಟಿಗೆ ಒಳ್ಳೆಯದು
ಬೇಸಿಗೆಯಲ್ಲಿ ನಾವು ಬೇಗ ಆಯಾಸ ಪಡ್ತೀವಿ. ನಮ್ಮ ಶಕ್ತಿ ಬೇಗ ಕಡಿಮೆ ಆಗುತ್ತದೆ. ಬಾರ್ಲಿ ನೀರು ಕುಡಿಯುವುದರಿಂದ ನಮಗೆ ಶಕ್ತಿ ಸಿಗುತ್ತದೆ. ಹೇಗೆಂದರೆ ಬಾರ್ಲಿಯಲ್ಲಿರುವ B ವಿಟಮಿನ್ಸ್, ಐರನ್, ಮೆಗ್ನೇಶಿಯಮ್, ಮ್ಯಾಂಗನೀಸ್ ಇವುಗಳು ಶಕ್ತಿ ಉತ್ಪತ್ತಿಗೆ ಸಹಾಯ ಮಾಡುತ್ತವೆ.

ಕೊಲೆಸ್ಟ್ರಾಲ್ ನಿಯಂತ್ರಣ
ಬಾರ್ಲಿಯ ಮತ್ತೊಂದು ಪ್ರಮುಖ ಲಾಭವೇನೆಂದರೆ, ವೈದ್ಯಕೀಯ ಅಧ್ಯಯನಗಳೂ ಇದನ್ನು ತೋರಿಸಿವೆ. ಬಾರ್ಲಿಯಲ್ಲಿ ಇರುವ ಬೀಟಾ ಗ್ಲುಕನ್ (Beta-Glucan) ಎಂಬ ನೀರಿನಲ್ಲಿ ಕರಗುವ ಫೈಬರ್, ನಮ್ಮ ದೇಹದಲ್ಲಿ LDL (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯವನ್ನು ರಕ್ಷಿಸಲು ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸಲು ಬಾರ್ಲಿ ನೀರು ಸಹಕಾರಿಯಾಗಿದೆ.

ಡಯಾಬಿಟಿಸ್ ನಿಯಂತ್ರಣ
ಬಾರ್ಲಿಯಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಇದು ನಮ್ಮ ದೇಹ ಸಕ್ಕರೆ ಅಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಟೈಪ್ 2 ಡಯಾಬಿಟಿಸ್ ಇರುವವರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಬಾರ್ಲಿ ಅಕ್ಕಿ ಸೇವಿಸಿದ ನಂತರ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿರುವುದು ಕಂಡು ಬಂದಿದೆ.

ಮೂತ್ರಪಿಂಡದ ಸೋಂಕು ನಿವಾರಣೆ
ಆಯುರ್ವೇದದ ಪ್ರಕಾರ, ಬಾರ್ಲಿ (ಯವ) ಒಂದು ಆಲ್ಕಲೈನ್ ಆಹಾರವಾಗಿದೆ. ಇದನ್ನು ಸುಶೃತ ಸಂಹಿತೆಯಲ್ಲೂ ಉಲ್ಲೇಖಿಸಲಾಗಿದೆ. ಬಾರ್ಲಿ ದೇಹದ pH ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದರಿಂದ ಹೊಟ್ಟೆ ಆಸಿಡ್ ಕೂಡ ತಟಸ್ಥವಾಗಿರುವಂತೆ ಮಾಡಿ, ಅಸಿಡ್ ರಿಫ್ಲಕ್ಸ್ ಆಗದಂತೆ ನೋಡಿಕೊಳ್ಳುತ್ತದೆ. ಬಾರ್ಲಿ ಬಳಸಿಕೊಂಡು ಆಯುರ್ವೇದದಲ್ಲಿ ತಯಾರಿಸುವ “ಯವಕ್ಷಾರ” ಎಂಬ ಔಷಧಿಯನ್ನು ಮೂತ್ರನಾಳದ ಸೋಂಕಿಗೆ ಉಪಯೋಗಿಸುತ್ತಾರೆ.

Read this also : Turmeric; ಅರಿಶಿನದಲ್ಲಿದೆ ಅನೇಕ‌ ಆರೋಗ್ಯ! ಆದ್ರೆ ಸರಿಯಾಗಿ ಬಳಸದಿದ್ರೆ No use!

ಜೀರ್ಣಕ್ರಿಯೆ
ಬಾರ್ಲಿ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಉತ್ತಮ ಗಟ್ ಬ್ಯಾಕ್ಟೀರಿಯಾಗಳನ್ನು ಉತ್ತೇಜಿಸುತ್ತದೆ. ಇದರ ಹೆಚ್ಚಿನ ಫೈಬರ್ಗಳು ತೂಕ ಇಳಿಸುವಿಕೆಗೂ ಸಹಾಯ ಮಾಡುತ್ತದೆ.

    ಬಾರ್ಲಿ ನೀರು ಮಾಡುವ ವಿಧಾನ (ಒಂದು ಲೋಟ)

    • ಬಾರ್ಲಿಯನ್ನು ಚೆನ್ನಾಗಿ ತೊಳೆಯಿರಿ
    • 4-5 ಗಂಟೆ ನೆನೆಸಿಡಿ
    • ನೆನೆಸಿದ ಬಾರ್ಲಿಯನ್ನು 2 ಲೋಟ ನೀರಿನಲ್ಲಿ 15-20 ನಿಮಿಷ ಬೇಯಿಸಿ
    • ಬೆಂದ ನಂತರ ಶೋಧಿಸಿ, ಬಾರ್ಲಿ ನೀರನ್ನು ಕುಡಿಯಿರಿ
    • ಬೇಕೆಂದರೆ ರುಚಿಗೆ ನಿಂಬೆ ರಸ ಮತ್ತು ಉಪ್ಪು ಸೇರಿಸಬಹುದು
    • ಬೇಯಿಸಿದ ಬಾರ್ಲಿ ಅನ್ನಕ್ಕೆ ಸಾರು ಅಥವಾ ಮೊಸರು ಕಲಿಸಿ ತಿನ್ನಬಹುದು

    ಬಾರ್ಲಿ ನೀರನ್ನು ಯಾವ ಸಮಯದಲ್ಲಿ ಕುಡಿಯಬೇಕು?
    ಬಾರ್ಲಿ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ, ಏಕೆಂದರೆ ಇದು ದೇಹದ ಡಿಟಾಕ್ಸ್ ಕಾರ್ಯವನ್ನು ಉತ್ತಮಗೊಳಿಸುತ್ತದೆ. ಮಧ್ಯಾಹ್ನದಲ್ಲಿ ಕುಡಿಯುವುದರಿಂದ ದೇಹದ ಹೈಡ್ರೇಶನ್ ಉತ್ತಮವಾಗಿರುತ್ತದೆ. ಊಟಕ್ಕೆ ಮುಂಚೆ ಕುಡಿಯುವುದರಿಂದ ತೂಕ ಇಳಿಸುವಿಕೆಗೆ ಸಹಾಯವಾಗುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ವೃದ್ಧಿಸುವುದರಿಂದ ರಾತ್ರಿ ಸಮಯದಲ್ಲಿ ಕುಡಿಯುವುದನ್ನು ತಪ್ಪಿಸುವುದು ಉತ್ತಮ. ಜೊತೆಗೆ ಗ್ಲ್ಯೂಟನ್ ಅಲರ್ಜಿ ಇದ್ದವರೂ ಬಾರ್ಲಿ ನೀರನ್ನು ಕುಡಿಯಬೇಡಿ.

    ShareTweetSendShareShareSend

    Related Posts

    General

    Dental Problems; ಹಲ್ಲಿನ ಸಮಸ್ಯೆಗಳಿಗೆ ಆಯುರ್ವೇದದ ಈ ಶಕ್ತಿಶಾಲಿ ಚೂರ್ಣ ರಾಮಬಾಣ!

    September 20, 2025
    General

    Fact check – Samosa; ಸಿಗರೇಟಿನಷ್ಟೇ ಅಪಾಯಕಾರಿ ಜಿಲೇಬಿ, ಸಮೋಸ!?

    July 15, 2025
    General

    Calcium ; ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳು

    February 11, 2025
    General

    Obesity – ಈ ರೀತಿ ಊಟ ಮಾಡುದ್ರೆ ಬೊಜ್ಜಿನ ಸಮಸ್ಯೆನೇ ಬರಲ್ಲ!

    January 29, 2025
    GSS Maadhyama

    ಗುರು ರಾಯರ 353ನೇ ಆರಾಧನೆ(Raghavendra Aradhana); ರಾಯರ ಹಿಂದಿನ ಅವತಾರಗಳ ಬಗ್ಗೆ ಗೊತ್ತೆ?

    August 21, 2024
    General

    ಒಲಿಂಪಿಕ್ಸ್‌ನಲ್ಲಿ(Olympics) ಭಾರತದ ಹೆಜ್ಜೆ ಗುರುತು; ಯಾವ ದೇಶವೂ ಮುರಿದಿಲ್ಲ ಭಾರತದ ಹಾಕಿ(Hockey) ತಂಡದ ಆ ದಾಖಲೆ!

    July 25, 2024

    Follow Us

    Recent News

    ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

    December 13, 2025

    Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

    November 22, 2025

    Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

    November 4, 2025

    Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

    October 23, 2025
    GSS Media

    GSS Media was formed in 2021 and has four major ventures, of which GSS Maadhyama has over 177K + subscribers on YouTube.

    Follow Us

    Browse by Category

    • Awareness
    • General
    • GSS Maadhyama
    • Health and Wellness
    • Indian News
    • Karnataka News
    • News
    • Real Estate
    • Vastu and Astrology
    • World News

    Recent News

    ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

    December 13, 2025

    Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

    November 22, 2025
    • About
    • Advertise
    • Privacy & Policy
    • Terms and Conditions
    • Contact

    © 2026 GSS Media and Advertising Private Limited - Powered By Rydrex.

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • Home
    • News
      • Indian News
      • World News
    • GSS Maadhyama
      • General
      • Health and Wellness
      • Real Estate
      • Vastu and Astrology
    • About
    • Advertise
    • Contact

    © 2026 GSS Media and Advertising Private Limited - Powered By Rydrex.