ಆನ್ಲೈನ್ ಲೋನ್ ಅಪ್ಲಿಕೇಶನ್ ಅಂತಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟೈಪ್ ಮಾಡಿದ್ರೆ ಸಾಕು ಸಾಲ ಕೊಡಲು ಅನೇಕ ಅಪ್ಲಿಕೇಶನ್ ಗಳು ಮುಂದೆ ಬರುತ್ತವೆ. ಅಪ್ಲಿಕೇಶನ್ ಡೌನ್ಲೋಡ್ ಆಗೋ ಪ್ರಕ್ರಿಯೆ ಮುಗಿಯೋದರೊಳಗೆ ನಿಮ್ಮ ಬ್ಯಾಂಕ್ ಅಕೌಂಟ್ಗೆ ಹಣ ಬಂದು ಬಿದ್ದಿರುತ್ತದೆ. ಹೀಗೆ ಬಯಸಿದಾಕ್ಷಣ ಹಣ ಸಿಗುತ್ತೇ ಅಪ್ಲಿಕೇಶನ್ ನಲ್ಲಿ ಸಾಲ ತಗೊಂಡ್ರೆ ನಿಮ್ಮ ಮಾನ-ಮರ್ಯಾದೆ ಬೀದಿಗೆ ಬರುತ್ತದೆ. ಮೂರೇ ಕ್ಷಣದಲ್ಲಿ ಮೂರು ಕಾಸಿಗೆ ಬೆಲೆಯಿಲ್ಲದಂತೆ ನಿಮ್ಮ ಮಾನ-ಮರ್ಯಾದೆ ಆನ್ಲೈನ್ ನಲ್ಲೇ ಹರಾಜ ಆಗಿರುತ್ತೇ.

ಹೌದು, ಆನ್ಲೈನ್ನಲ್ಲಿರೋ ಕೆಲವು ನಕಲಿ ಅಪ್ಲಿಕೇಶನ್ ಗಳಲ್ಲಿ ನೀವು ಸಾಲ ತಗೊಂಡ್ರೆ, ನೀವು ಯಾರು? ನಿಮ್ಮ ಮೊಬೈಲ್ನಲ್ಲಿರುವ ನಂಬರ್ಗಳು, ನಿಮ್ಮ ಮೇಸೇಜ್ಗಳು, ಪೋಟೋಗಳು ಹೀಗೆ ಎಲ್ಲವನ್ನೂ ಈ ಅಪ್ಲಿಕೇಶನ್ ಗಳು ಕದಿಯುತ್ತವೆ. 5 ರಿಂದ 50 ಸಾವಿರದವರೆಗೆ ಮಾತ್ರ ಸಾಲ ಕೊಡೋ ಈ ಅಪ್ಲಿಕೇಶನ್ ಗಳಿಗೆ ಹೇಳಿದ ಸಮಯಕ್ಕೆ ಸಾಲ ವಾಪಸ್ ಕೊಡಬೇಕು. ತಪ್ಪಿದಲ್ಲಿ ಕರೆ ಮಾಡಿ, ಮಾಡಿ ಚಿತ್ರಹಿಂಸೆ ನೀಡ್ತಾರೆ. ಸಾಲ ವಾಪಸ್ ಮಾಡೋಕೆ ಈ ಅಪ್ಲಿಕೇಶನ್ ಗಳು ಕೇವಲ ಒಂದು ವಾರ ಮಾತ್ರ ಸಮಯ ಕೊಡ್ತಾವೆ. . ಅದನ್ನ ಮೀರಿದ್ರೆ ಆಗುವ ಕಥೆಯೇ ಬೇರೆ. ಮೊದ್ಲು ಕರೆ ಮಾಡಿ ಬಾಯಿಗೆ ಬಂದಂಗೆ ಬೈಯ್ತಾರೆ, ನಂತ್ರ ನಿಮ್ಮ ಕಾಟ್ಯಾಂಕ್ಟ್ ಲಿಸ್ಟ್ ನಲ್ಲಿರೋ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ಇಂತಹ ವ್ಯಕ್ತಿ ಸಾಲ ಪಡೆದು ಮೋಸ ಮಾಡಿದ್ದಾನೆ, ನೀವಾದರೂ ವಾಪಸ್ ಕೊಡಿಸಿ ಎಂದು ಹೇಳಿ ನಿಮ್ಮ ಮರ್ಯಾದೆ ತೆಗಿತಾರೆ. ಇಷ್ಟಕ್ಕೆ ಬಿಡದೇ ನಿಮ್ಮ ಪೋಟೋಗಳನ್ನ ಹಾಕಿ ವಂಚಕ, 420, ಚೀಟರ್, ಎಂದು ಬರೆದು, ನಿಮ್ಮ ಕಾಟ್ಯಾಂಕ್ಟ್ ಲಿಸ್ಟ್ ನಲ್ಲಿರೋ ಎಲ್ಲರ ವಾಟ್ಸಪ್, ಟೆಲಿಗ್ರಾಮ್, ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಿಗೆ ಮೆಸೇಜ್ ಕಳಿಸ್ತಾರೆ. ಹೀಗೆ ಪ್ರತಿದಿನಾ ಮಾಡ್ತಾರೆ. ಇದಕ್ಕೂ ಬಗ್ಗದಿದ್ರೆ, ನಿಮ್ಮ ಮೊಬೈಲ್ನಿಂದ ಕದ್ದಿರೋ, ನಿಮ್ಮ ಖಾಸಗಿ ಪೋಟೋಗಳನ್ನ ಮೆಸೇಜ್ಗಳನ್ನ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಿವಿ ಬ್ಯಾಕ್ಮೈಲ್ ಮಾಡ್ತಾರೆ.
ಇದನ್ನೂ ಓದಿ : ಭಾರತೀಯರ ಜೀವಿತಾವಧಿಯನ್ನೇ ಕಡಿಮೆ ಮಾಡುತ್ತಿದೆ ವಾಯುಮಾಲಿನ್ಯ..!
ಇಷ್ಟೆಲ್ಲಾ ಆದ್ ಮೇಲೆ ಈ ಫೇಕ್ ಅಪ್ಲಿಕೇಶನ್ ಗಳ ಕಿರುಕುಳ ತಾಳದೇ ನೀವು ಸಾಲ ವಾಪಸ್ ಮಾಡೋಕೆ ಮುಂದಾದ್ರೆ ಅಲ್ಲಿಯೂ ನಿಮಗೆ ಮೋಸ ಮಾಡ್ತಾರೆ. ನೀವು 3 ಸಾವಿರ ಸಾಲ ತಗೊಂಡಿದ್ರೆ ಅದಕ್ಕೆ 36 ಪರ್ಸೆಂಟ್ ಬಡ್ಡಿ ಹಾಕ್ತಾರೆ, ಅದು ವಾರಕ್ಕೆ ಮಾತ್ರ. ನಂತ್ರ ಅದಕ್ಕೆ ಜಿಎಸ್ಟಿ ಮತ್ತು ಸೇವಾಶುಲ್ಕ ಅಂತಾ ಸೇರಿಸಿ 1200 ರೂಪಾಯಿ ಕಟ್ಟಬೇಕು ಅಂತಾ ಹೇಳ್ತಾರೆ. ಅದಕ್ಕೂ ಮೊದ್ಲೇ ನೀವು 3 ಸಾವಿರ ಸಾಲ ತಗೊಂಡ್ರೆ ಎಲ್ಲಾ ಕಟ್ ಮಾಡಿ, ನಿಮ್ಮ ಕೈಗೆ 1800 ಮಾತ್ರ ಕೊಟ್ಟಿರ್ತಾರೆ. ಹೀಗಾಗಿ ನಿಮ್ಮಿಂದ 3000 ಪ್ಲಸ್ 1200 ರೂಪಾಯಿ ವಸೂಲಿ ಮಾಡ್ತಾರೆ. ನೀವೆನಾದ್ರೂ ಆನ್ಲೈನ್ ಲೋನ್ ಅಪ್ಲಿಕೇಶನ್ ನಲ್ಲಿ 3 ಸಾವಿರ ಸಾಲ ತಗೊಂಡ್ರೆ ಒಂದು ವಾರಕ್ಕೆ 4200 ಕಟ್ ಬೇಕು. ಹೀಗೆ ಈ ಅಪ್ಲಿಕೇಶನ್ ಗಳು ನಿಮಗೆ ಮೋಸ ಮಾಡ್ತಾವೆ. ಇವುಗಳ ಬಗ್ಗೆ ನೀವು ಎಲ್ಲೂ ಕಪ್ಲೇಂಟ್ ಕೊಡೋಕೆ ಸಾಧ್ಯ ಇಲ್ಲ. ಏಕೆಂದ್ರೆ ಈ ಅಪ್ಲಿಕೇಶನ್ ಗಳು ನಕಲಿ ಕಂಪನಿಗಳಾಗಿರುತ್ವೇ.. ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 300 ಕ್ಕೂ ಹೆಚ್ಚು ಆನ್ಲೈನ್ ಸಾಲ ಕೊಡುವ ನಕಲಿ ಅಪ್ಲಿಕೇಶನ್ ಗಳಿವೆ. ಜನರನ್ನ ಮೋಸ ಮಾಡಿ ಹಣ ಸುಲಿಗೆ ಮಾಡೋದ್ರ ಜತೆಗೆ ಖಾಸಗಿ ಮಾಹಿತಿಯನ್ನು ಕದ್ದು ಮೂರು ಕಾಸಿಗೆ ಮಾನ ಹರಾಜು ಹಾಕೋದೇ ಅವುಗಳ ದಂಧೆಯಾಗಿದೆ.

ಇನ್ನ ಈ ಆನ್ಲೈನ್ನಲ್ಲಿ ಸಾಲ ಕೊಡೋ ನಕಲಿ ಅಪ್ಲಿಕೇಶನ್ ಗಳಿಂದ ದೂರವಿರೋದೆ ಒಳ್ಳೆಯದು. ನಿಮಗೆ ತಕ್ಷಣ ಹಣ ಬೇಕಿಂದ್ರೆ ಆರ್ಬಿಐನಲ್ಲಿ ನೋಂದಾಯಿತವಾಗಿರುವ ಡಿಜಿಟಲ್ ಸಾಲ ನೀಡುವ ಕಂಪನಿಗಳಲ್ಲಿ ಮಾತ್ರ ಸಾಲ ಪಡಿಬೇಕು. ಆರ್ಬಿಐನಲ್ಲಿ ನೋಂದಣಿಯಾಗಿರುವ ಕಂಪನಿಗಳು ಯಾವುದೇ ಕಾರಣಕ್ಕೂ ಈ ರೀತಿಯ ಕಿರುಕುಳ ನೀಡೋಲ್ಲ, ನಿಮ್ಮ ಖಾಸಗಿ ಮಾಹಿತಿ, ಪೋಟೋ , ಹೀಗೆ ಯಾವುದನ್ನೂ ಕದಿಯೊಲ್ಲಾ. ಹೆಚ್ಚು ಬಡ್ಡಿ ಹಾಕಿದ್ರೆ ನೀವು ನೇರವಾಗಿ ಆರ್ಬಿಐಗೆ ದೂರು ಕೂಡಾ ಕೋಡಬಹುದು. ಇನ್ನು ತಕ್ಷಣವೇ ಹಣ ಬೇಕಿದೆ ಅಂತಾ ಸಿಕ್ಕ ಸಿಕ್ಕ ಅಪ್ಲಿಕೇಶನ್ ಗಳಲ್ಲಿ ಸಾಲ ತಗೊಂಡ್ರೆ ನಿಮ್ಮ ಮಾನ-ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತೇ. ಆನ್ಲೈನ್ನಲ್ಲಿ ಯಾವುದೇ ಹಣಕಾಸಿಕ ವ್ಯವಹಾರ ಮಾಡೋ ಮುನ್ನ ಸಾಕಷ್ಟು ಜಾಗೃತಿ ವಹಿಸಿ. ಸಾಧ್ಯವಾದಷ್ಟು ಆನ್ಲೈನ್ ಲೋನ್ ನಿಂದ ದೂರಾನೇ ಇರಿ.
ಇದನ್ನೂ ಓದಿ : ಶತಮಾನದ ಅಂತ್ಯಕ್ಕೆ ಹಸಿರಾಗಲಿದೆ ಥಾರ್ ಮರುಭೂಮಿ..!