ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇರೋ ವಾಯುಮಾಲಿನ್ಯ ಭಾರತೀಯರ ಜೀವಿತಾವಧಿಯನ್ನೇ ಕಡಿಮೆ ಮಾಡ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನ ಅಧ್ಯಯನವೊಂದು ತಿಳಿಸಿದೆ. ವಾಯುಮಾಲಿನ್ಯನಿಂದ ಉಂಟಾಗೋ ಸಣ್ಣ ಕಣಗಳು ಭಾರತೀಯರ ಸರಾಸರಿ ಆಯುಷ್ಯವನ್ನು 5.3 ವರ್ಷಗಳಷ್ಟು ಕಡಿಮೆಯಾಗಿಸೋ ಸಾಧ್ಯತೆ ಇದೆ ಎಂದು ಸಂಶೋಧನೆಯೊಂದು ಅಂದಾಜಿಸಿದೆ. ಅಂದ್ರೆ 70 ವರ್ಷ ಬದುಕೋ ಸಾಮರ್ಥ್ಯವುಳ್ಳ ಭಾರತೀಯನೊಬ್ಬ, ವಾಯುಮಾಲಿನ್ಯದ ಕಾರಣದಿಂದ 65 ವರ್ಷಕ್ಕೇ ಮರಣ ಹೊಂದಬಹುದು.
ಇನ್ನ ನಮ್ಮ ರಾಜಧಾನಿ ದಿಲ್ಲಿ ಕುರಿತು ಇರುವ ಮಾಹಿತಿ ನಮ್ಮೆಲ್ಲರನ್ನ ಬೆಚ್ಚಿಬೀಳಿಸುವಂತಿದೆ. ಜಗತ್ತಿನ ಅತ್ಯಂತ ಮಾಲಿನ್ಯ ನಗರ ಎಂಬ ಕುಖ್ಯಾತಿಗೆ ಒಳಗಾಗುತ್ತಿರೋ ದಿಲ್ಲಿಯಲ್ಲಿ ಜನರ ಸರಾಸರಿ ಆಯಸ್ಸು 11.9 ವರ್ಷಗಳಷ್ಟು ಕಡಿಮೆಯಾಗುತ್ತೇ ಎಂದು ಅಮೇರಿಕಾದ ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಸಂಸ್ಥೆ ಬಿಡುಗಡೆ ಮಾಡಿರೋ Air Quality Life Index Report ತಿಳಿಸಿದೆ. ನಮ್ಮ ದೇಶದ National Environmental Air Quality Standard ಆಧಾರದಲ್ಲಿ ವಿಶ್ಲೇಷಣೆ ಮಾಡಿದ್ರೆ, ಭಾರತೀಯರ ಸರಾಸರಿ ಆಯಸ್ಸು 1.8 ವರ್ಷ ಮತ್ತು ದಿಲ್ಲಿ ನಿವಾಸಿಗಳ ಸರಾಸರಿ ಆಯಸ್ಸು 8.5 ವರ್ಷಗಳವರೆಗೆ ಕುಸಿಯುತ್ತೇ ಎಂದು ಈ ವರದಿ ಹೇಳಿದೆ.

World Health Organization ಪ್ರಕಾರ, ಜಗತ್ತಿನ ಅತ್ಯಂತ ಮಾಲಿನ್ಯ ದೇಶಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಬಳಿಕ ಭಾರತವಿದೆ. ಭಾರತದ ಬಹುತೇಕ ನಗರಗಳಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. Air Quality Life Index Report ಪ್ರಕಾರ, ವಾಯುಮಾಲಿನ್ಯದಿಂದಾಗಿ, ಹರಿಯಾಣದ ಗುರುಗ್ರಾಮನಲ್ಲಿ 11.2 ವರ್ಷ ಫರೀದಾಬಾದ್‌ನಲ್ಲಿ 10.8 ವರ್ಷ, ಉತ್ತರ ಪ್ರದೇಶದ ಜೌನ್‌ಪುರದಲ್ಲಿ 10.1 ವರ್ಷ, ಕಾನ್ಪುರ ಮತ್ತು ಲಖನೌದಲ್ಲಿ 9.7 ವರ್ಷ, ಬಿಹಾರದ ಮುಜಫ್ಫರಪುರದಲ್ಲಿ 9.2 ವರ್ಷ, ಪ್ರಯಾಗ್‌ರಾಜ್‌ನಲ್ಲಿ 8.8 ಹಾಗೂ ಪಟ್ನಾದಲ್ಲಿ 8.7 ವರ್ಷದಷ್ಟು ಜನರ ಸರಾಸರಿ ಆಯಷ್ಯ ಕಡಿಮೆ ಮಾಡುತ್ತೇ ಎಂದು ಹೇಳಲಾಗಿದೆ.
ಭಾರತದ ಸುಮಾರು 140 ಕೋಟಿ ಜನಸಂಖ್ಯೆಯು ವಾಸಿಸೋ ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ಪರ್ಟಿಕ್ಯುಲೇಟ್ ಮಾಲಿನ್ಯ ಮಟ್ಟವು ಡಬ್ಲ್ಯೂಎಚ್‌ಒ ಮಾನದಂಡವನ್ನು ಮೀರುತ್ತೇ. ಅದೇ ರೀತಿ ಶೇಕಡಾ 67.4ರಷ್ಟು ಜನತೆ ವಾಸಿಸೋ ಪ್ರದೇಶಗಳು ಭಾರತದ್ದೇ ಆದ National Air Quality Standards ಗಳನ್ನು ಕೂಡ ಮೀರುತ್ತವೆ ಎಂದು ಈ ವರದಿ ಎಚ್ಚರಿಕೆ ನೀಡಿದೆ. ಇನ್ನ ಭಾರತೀಯರ ಆರೋಗ್ಯಕ್ಕೆ ದೂಳಿನ ಕಣಗಳು ಭಾರಿ ದೊಡ್ಡ ಅಪಾಯ ಉಂಟು ಮಾಡ್ತಿವೆ ಅಂತಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಹೃದಯಸಂಬಂಧಿ ಕಾಯಿಲೆಗಳು ಭಾರತೀಯರ ಸರಾಸರಿ ಆಯಸ್ಸನ್ನ ಸುಮಾರು 4.5 ವರ್ಷಗಳಷ್ಟು ಕಡಿಮೆ ಮಾಡಿದ್ರೆ, ಮಕ್ಕಳ ಹಾಗೂ ತಾಯಂದಿರ ಅಪೌಷ್ಟಿಕತೆಯು ಕೂಡಾ ಭಾರತೀಯರ 1.8 ವರ್ಷಗಳಷ್ಟು ಆಯಸ್ಸನ್ನು ಕುಗ್ಗುವಂತೆ ಮಾಡಿದೆ.

ದಕ್ಷಿಣ ಏಷ್ಯಾದಲ್ಲಿ 2013- 2021ರ ನಡುವೆ ವಾಯುಮಾಲಿನ್ಯ ಶೇ.9.7ರಷ್ಟು ಹೆಚ್ಚಾಗಿದೆ. ಅದೇ ರೀತಿ ಭಾರತದಲ್ಲಿ ಶೇ.9.5 ಏರಿಕೆಯಾಗಿದ್ದರೆ, ಪಾಕಿಸ್ತಾನದಲ್ಲಿ ಶೇ.8.8 ಮತ್ತು ಬಾಂಗ್ಲಾದೇಶದಲ್ಲಿ ಶೇ.12.4 \ ಹೆಚ್ಚಳ ಕಂಡಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳ ಪೈಕಿ ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರ ಪರಿಣಾಮ ಭಾರತೀಯರ ಜೀವಿತಾವಧಿಯ ಮೇಲಾಗುತ್ತಿದೆ. ನಾವೇ ಸೃಷ್ಟಿ ಮಾಡೋ ವಾಯುಮಾಲಿನ್ಯ , ನಮ್ಮ ಆಯುಷ್ಯವನ್ನೇ ಕಡಿಮೆ ಮಾಡ್ತಿರೋದು ನಿಜಕ್ಕೂ ದುರಂತವೇ ಸರಿ. ಕಾಡುಗಳ ನಾಶ, ಅತಿಯಾದ ನಗರೀಕರಣ ಮತ್ತು ಕೈಗಾರಿಕರಣದಿಂದಾಗಿಯೇ ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ನಮ್ಮ ಆಸೆಗಳು ಹೆಚ್ಚಾದಂತೆ ಮಾಲಿನ್ಯವೂ ಹೆಚ್ಚುತ್ತಿದೆ. ಹೀಗಾಗಿ ನಮ್ಮ ಆಸೆಗಳಿಗೆ ಕಡಿವಾಣ ಹಾಕಿ, ಪರಿಸರವನ್ನ ಉಳಿಸುವ ಜೊತೆಗೆ ಬೆಳೆಸುವತ್ತ ನಾವೆಲ್ಲರೂ ಹೆಚ್ಚಿನ ಗಮನ ನೀಡಬೇಕಿದೆ. ಸುಂದರ ಪರಿಸರವನ್ನ ಬೆಳೆಸಿ, ವಾಯುಮಾಲಿನ್ಯವನ್ನ ಕಡಿಮೆ ಮಾಡಿ, ಹೆಚ್ಚಿನ ಆಯುಸ್ಸವನ್ನ ಹೊಂದುವುದು ಒಳ್ಳೆಯದು.