ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದು, ಆ ಮಕ್ಕಳಿಗೆ ಕೆಮ್ಮು(Cough) ಬಂದರೆ ನೀವೇ ಹೋಗಿ ಔಷಧಿ ತಂದು ನೀಡ್ತೀರಾ!? ಅಥವಾ ಮನೆಯಲ್ಲೇ ಇರೋ ಹಳೆಯ ಔಷಧಿಯನ್ನೇ ಕುಡಿಸ್ತೀರಾ!? ಹಾಗಾದ್ರೆ ಈ ಸುದ್ದಿಯನ್ನು ನಿರ್ಲಕ್ಷ್ಯ ಮಾಡದೇ ನೋಡಿ.
ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಸುಮಾರು ಮಕ್ಕಳು ಸಾವನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಿಂದಲೂ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಮಾರ್ಗಸೂಚಿಯಲ್ಲಿ ಏನಿದೆ..!?
• 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ ನೀಡಬಾರದು.
• 2 – 5 ವರ್ಷ ವಯಸ್ಸಿನ ಮಕ್ಕಳಿಗೆ ತಜ್ಞ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿ ನೀಡಬೇಕು.
• 5 ವರ್ಷದ ಮೇಲಿನ ಮಕ್ಕಳಿಗೂ ವೈದ್ಯರ ಸಲಹೆ ಮೇರೆಗೆ ಮಾತ್ರವೇ ಸಿರಪ್ ಬಳಸಬೇಕು.
• ಕಡಿಮೆ ಅವಧಿಗೆ ಎಷ್ಟು ಬೇಕೋ ಅಷ್ಟೇ ಡೋಸ್ ಬಳಸಬೇಕು.

• ಬಹು ಔಷಧಿಗಳ ಸಂಯೋಜನೆ ಹೊಂದಿರುವ ಸಿರಪ್ ಬಳಸಬಾರದು.
• ವೈದ್ಯರ ಸೂಚನೆಯ ಚೀಟಿ( Prescription) ಇಲ್ಲದೆ ಕೆಮ್ಮಿನ ಸಿರಪ್ ಖರೀದಿಸಬಾರದು.
• ಈ ಹಿಂದೆ ಬಳಸಿ ಉಳಿದ ಔಷಧಗಳನ್ನು ನೀಡಬಾರದು.
• ಖರೀದಿಗೂ ಮುನ್ನ ಔಷಧಿಯ ಅವಧಿ ಮುಗಿಯುವ ದಿನಾಂಕ ಮತ್ತು ಲೇಬಲ್ ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
• ಮಕ್ಕಳಲ್ಲಿ ಕೆಮ್ಮು ಉಲ್ಬಣಗೊಂಡರೆ, ನಿದ್ರಾಹೀನತೆ, ವಾಂತಿ ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ತಜ್ಞ ವೈದ್ಯರಿಗೆ ತೋರಿಸಬೇಕು.
Read this also – Congenital Heart Disease- ರಾಜ್ಯದಲ್ಲಿ 40 ಸಾವಿರ ಮಕ್ಕಳಿಗೆ ಹೃದಯ ಸಮಸ್ಯೆ! ಪೋಷಕರೇ ನಿರ್ಲಕ್ಷಿಸಬೇಡಿ – ಏನಿದು ಶಾಕಿಂಗ್ ವರದಿ?
ಮನೆಯಲ್ಲಿ ಕೇರ್ ಹೇಗೆ?

ಮನೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನೇ ನೀಡಬೇಕು. ಸಾಕಷ್ಟು ದ್ರವ ಪದಾರ್ಥಗಳನ್ನು ನೀಡುವುದು ಉತ್ತಮ. ಚೆನ್ನಾಗಿ ನಿದ್ರೆ ಮಾಡಿಸಿ, ಹೆಚ್ಚು ವಿಶ್ರಾಂತಿ ನೀಡುವುದು ಉತ್ತಮ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.










