ಈಗಂತೂ ಎಲ್ಲೇ ಹೋದರೂ ನಾವು ಕೃತಕ ಬುದ್ದಿಮತ್ತೆ ಅಂದರೆ Artificial intelligence Technology ಬಗ್ಗೆ ಮತ್ತು ಚಾಟ್‌ಜಿಪಿಟಿ ಟೆಕ್ನಾಲಜಿ ಬಗ್ಗೆಯೇ ಕೇಳುತ್ತಿದ್ದೇವೆ. ಈಗಾಗಲೇ ನಾವು ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಏನೆಲ್ಲಾ ಕೆಲಸಗಳನ್ನ ಕೆಲಸಗಾರರು ಇಲ್ಲದೆಯೇ ಮಾಡಿಕೊಳ್ಳಬಹುದು ಅಂತ ದಿನ ಬೆಳಗಾದರೆ ನೋಡುತ್ತಲೇ ಇದ್ದೇವೆ. ಅಲ್ಲದೆ ಚಾಟ್‌ಜಿಪಿಟಿ ಬಳಸಿಕೊಂಡು ಎಲ್ಲರೂ ಕೆಲಸಗಳನ್ನ ಸಲೀಸಾಗಿ ಮಾಡಿ ಮುಗಿಸುತ್ತಿದ್ದಾರೆ ಅನ್ನೋದನ್ನ ಸಾಮಾಜಿಕ ಮಾದ್ಯಮಗಳಲ್ಲಿ ನೋಡುತ್ತಿದ್ದೇವೆ.

ಕೃತಕ ಬುದ್ದಿಮತ್ತೆ ಅನ್ನೋದು ಒಳ್ಳೆಯದಾ ಅಥವಾ ಕೆಟ್ಟದ್ದಾ ಅನ್ನೋದರ ಬಗ್ಗೆ ಖುದ್ದು ಈ ಕೃತಕ ಬುದ್ದಿಮತ್ತೆಯ ಪಿತಾಮಹ ಜೆಫ್ರಿ ಹಿಂಟನ್ ಮಾತನಾಡಿದ್ದಾರೆ. ಕೃತಕ ಬುದ್ದಿಮತ್ತೆ ಪ್ರಪಂಚದಿಂದ ಹೊರಬರಲು ಗೂಗಲ್‌ಗೆ ರಾಜೀನಾಮೆ ನೀಡಿರುವ ಜೆಫ್ರಿ ಹಿಂಟನ್ ಕೃತಕ ಬುದ್ದಿಮತ್ತೆ ಅತ್ಯಂತ ಅಪಾಯಕಾರಿ ಎಂದು ಜನರನ್ನ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ವಿಚಿತ್ರವಾಗಿರೋ ಕಾನ್ವೊಕೇಶನ್ ಡೇ ಉಡುಗೆಯ ಇತಿಹಾಸ ಗೊತ್ತಾ..?!
ಕೆನಡಾದಲ್ಲಿ ನಡೆದ ಕೊಲಿಷನ್ ಟೆಕ್ ಸಮ್ಮೇಳನದಲ್ಲಿ ಮಾತನಾಡಿರುವ ಜೆಫ್ರಿ ಹಿಂಟನ್, ಕೃತಕ ಬುದ್ದಿಮತ್ತೆ ನಮಗಿಂತ ಚುರುಕಾಗುವ ಮೊದಲು, ಅದನ್ನ ಅಭಿವೃದ್ದಿ ಮಾಡೋರು ಅದರ ನಿಯಂತ್ರಣ ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನ ಅರ್ಥಮಾಡಿಕೊಳ್ಳಲು ಸಾಕಷ್ಟು ಕೆಲಸ ಮಾಡಲು ಪ್ರೋತ್ಸಾಹಿಸಬೇಕು ಎಂದು ನಾನು ಭಾವಿಸುತ್ತೇನೆ. ಕೃತಕ ಬುದ್ದಿಮತ್ತೆ ಅನ್ನು ಅಭಿವೃದ್ದಿಪಡಿಸಲು ಅತ್ಯಂತ ಬುದ್ದಿವಂತ ಜನರು ಪ್ರಯತ್ನಿಸುತ್ತಿದ್ದಾರೆ. ಇದು ನಾವು ಯೋಚನೆ ಮಾಡಬೇಕಾದ ನಿಜವಾದ ಅಪಾಯವಾಗಿದೆ. ಏಕೆಂದ್ರೆ ಕೃತಕ ಬುದ್ದಿಮತ್ತೆ ಇಂದಾಗುವ ಅಪಾಯಗಳನ್ನ ಹೇಗೆ ಎದುರಿಸಬೇಕು ಅನ್ನೋದನ್ನ ನಾವು ಮುಂಚಿತವಾಗಿ ಕಂಡು ಹಿಡಿಯಬೇಕಾಗಿದೆ. ಇನ್ನೊಂಡೆದೆ ಕೃತಕ ಬುದ್ದಿಮತ್ತೆ ಸಮಾಜದಲ್ಲಿ ಇನ್ನಷ್ಟು ಅಸಮಾನತೆಯನ್ನು ಹುಟ್ಟುಹಾಕುತ್ತದೆ. ಕೃತಕ ಬುದ್ದಿಮತ್ತೆ ಹೆಚ್ಚು ಬಳಸಿದಷ್ಟು ಅದರ ಲಾಭವು ಶ್ರೀಮಂತರ ಜೇಬಿಗೆ ಹೋಗುತ್ತದೆಯೇ ಹೊರತು ಕಾರ್ಮಿಕರಿಗಲ್ಲ. ಕೃತಕ ಬುದ್ದಿಮತ್ತೆಯಿಂದ ಕೆಲಸ ಮಾಡುವ ಜನರಿಗೆ ಸಂಪತ್ತು ಹೋಗುವುದಿಲ್ಲ. ಇದು ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುತ್ತದೆಯೇ ಹೊರತು ಬಡವರನ್ನ ಶ್ರೀಮಂತರನ್ನಾಗಿ ಮಾಡುವುದಿಲ್ಲ. ಇದು ಮಾನವ ಸಮಾಜಕ್ಕೆ ಕೆಟ್ಟದ್ದು ಎಂದು ಖುದ್ದು ಕೃತಕ ಬುದ್ದಿಮತ್ತೆಯ ಪಿತಾಮಹ ಜೆಫ್ರಿ ಹಿಂಟನ್ ಹೇಳಿಕೆ ನೀಡಿರೋದು ಭಾರೀ ಸುದ್ದಿಯಾಗಿದೆ.
ಇನ್ನ ಕೃತಕ ಬುದ್ದಿಮತ್ತೆಯಿಂದಾಗಿಯೇ ಜಗತ್ತಿನಲ್ಲಿ ಅನೇಕ ಜನರು ತಮ್ಮ ಉದ್ಯೋಗಗಳನ್ನ ಕಳೆದುಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಸಾಫ್ಟವೇರ್ ಟೆಕ್ನಾಲಜಿ ಮತ್ತು ಟೆಕ್ನಿಕಲ್ ಕಂಪನಿಗಳಲ್ಲಿ ಹೆಚ್ಚಿನ ಪ್ರಮಾಣದ ಕೃತಕ ಬುದ್ದಿಮತ್ತೆಯನ್ನು ಬಳಕೆ ಮಾಡೋದ್ರಿಂದ ಮುಂದಿನ 5 ವರ್ಷಗಳಲ್ಲಿ 1.40 ಕೋಟಿ ಜನರ ಅಥವಾ ಪ್ರಸ್ತುತ ಉದ್ಯೋಗದ ಶೇಕಡಾ 2ರಷ್ಟು ಜನರ ಉದ್ಯೋಗವನ್ನು ಕೃತಕ ಬುದ್ದಿಮತ್ತೆ ಕಸಿದುಕೊಳ್ಳಲಿದೆ ಎಂದು ವಲ್ಡ್ ಎಕ್ನಾಮಿಕ್ ಫೋರಮ್‌ನ ವರದಿ ಹೇಳಿದೆ.

ಜಾಗತಿಕ ಎಲ್ಲಾ ಟೆಕ್ನಿಕಲ್ ಕಂಪನಿಗಳು ವೇಗದ ಮತ್ತು ಕಡಿಮೆ ವೆಚ್ಚದಲ್ಲಿ ಕೆಲಸ ಮಾಡೋ ಕೃತಕ ಬುದ್ದಿಮತ್ತೆ ತಂತ್ರಜ್ಞಾನಗಳ ಮೊರೆ ಹೋಗಲಿದ್ದು, ಇವು ಮಾನವ ಉದ್ಯೋಗವನ್ನೇ ನಾಶ ಮಾಡುತ್ತೇ. ಇದ್ರಿಂದ 1.40 ಕೋಟಿ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಈಗಾಗಲೇ ಶಕಡಾ 34ರಷ್ಟು ಪ್ರಮಾಣದ ಕೆಲಸವನ್ನ ಆಟೋಮೇಟೆಡ್ ಮಾಡಿರೋ 800ಕ್ಕೂ ಅಧಿಕ ಜಾಗತಿಕ ಕಂಪನಿಗಳ ಸಮೀಕ್ಷೆ ಆಧಾರದ ಮೇಲೆ ಈ ವರದಿ ಬಿಡುಗಡೆ ಮಾಡಲಾಗಿದೆ. ಸಾಮಾನ್ಯ ಮಟ್ಟದ ಉದ್ಯೋಗಗಳ ಮೇಲೆ ಕೃತಕ ಬುದ್ದಿಮತ್ತೆ ಅನ್ನೋದು ದೊಡ್ಡ ಪರಿಣಾಮವನ್ನೇ ಉಂಟು ಮಾಡಲಿದೆ. ಎಲ್ಲಾ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಅನ್ನ ಬಳಸಿದ್ರೆ ಮಾಡೋದಕ್ಕೆ ಕೆಲಸವೇ ಇರೋದಿಲ್ಲಾ. ಮುಂದಿನ 20 ವರ್ಷಗಳಲ್ಲಿ ಕೇವಲ 5 ರಿಂದ 10 ಪರ್ಸೆಂಟ್ ಜನರು ಮಾತ್ರ ಕೆಲಸ ಮಾಡ್ಬೇಕಾಗುತ್ತೇ.. ಉಳಿದವರು ಉದ್ಯೋಗಗಳಿಲ್ಲದೇ ಅಲೆದಾಡಬೇಕಾಗುತ್ತೇ.