ಜಗತ್ತಿನ ಎಲ್ಲಾ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಅಂದ್ರೆ ಮಾಸ್ಟರ್ ಡಿಗ್ರಿ ಮೂಗಿಸಿದಾಗ ಕಾನ್ವೊಕೇಶನ್ ಡೇ ನಡೆಯುತ್ತೇ. ಆಗ ಎಲ್ರೂ ಉದ್ದನೇಯ ಕಪ್ಪು ಗೌನ್, ಮೇಲೊಂದು ವಿಚಿತ್ರ ಏನಿಸೋ ಟೋಪಿ, ಕೈಯಲ್ಲೊಂದು ಸರ್ಟಿಫಿಕೇಟ್ ಹಿಡಿದುಕೊಂಡು ಪೋಟೋ ತೆಗೆಸಿಕೊಳೋದು ಸಾಮಾನ್ಯ. ಆದ್ರೆ ಯಾವಾಗ್ಲಾದ್ರೂ ನಾವು ಕಾನ್ವೊಕೇಶನ್ ಡೇ ನಲ್ಲಿ ಈ ಉದ್ದನೆಯ ಕಪ್ಪು ಗೌನ್ ಅನ್ನೇ ಯಾಕೆ ಧರಿಸ್ತೇವೆ..? ಅದರ ಅರ್ಥವೇನು..? ಅದನ್ನೇ ಯಾಕೆ ಧರಿಸ್ಬೇಕು..? ಅದರ ಹಿನ್ನಲೆ ಏನು..? ಎನ್ನೋದರ ಬಗ್ಗೆ ಯಾವತ್ತಾದ್ರೂ ಯೋಚನೆ ಮಾಡಿದ್ಧೇವಾ..? ಇಲ್ಲಾ ಅಲ್ವಾ..? ನಾವು ಇವತ್ತು ಕಾನ್ವೊಕೇಶನ್ ಡೇ ದಿನದಂದು ಧರಿಸೋ ಡ್ರೆಸ್ ಹಾಗೇ ಅದರ ಇತಿಹಾಸವನ್ನೋಮ್ಮೆ ನೋಡಿಕೊಂಡು ಬರೋಣ.
ಈ ಕಾನ್ವೊಕೇಶನ್ ಡ್ರೆಸ್ ಅನ್ನೋದು ಹುಟ್ಟಿಕೊಂಡಿದ್ದೇ 12ನೇ ಶತಮಾನದಲ್ಲಿ ಯೂರೋಪಿನಲ್ಲಿದ್ದ ದೇಶಗಳ ವಿಶ್ವವಿದ್ಯಾಲಯಗಳಲ್ಲಿ. ಅದಕ್ಕೂ ಮೊದ್ಲೂ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಯೂರೋಪಿಯನ್ ಸಮಾಜದಲ್ಲಿದ್ದ ಸಾಮಾನ್ಯವಾದ ಬಟ್ಟೆಯನ್ನೇ ಧರಿಸುತ್ತಿದ್ರು. ಇಟಲಿ ಮತ್ತು ಫ್ರಾನ್ಸ್ನಲ್ಲಿ 11ನೇ ಶತಮಾನದ ಕೊನೆಯಲ್ಲಿ ಮತ್ತು 12ನೇ ಶತಮಾನದ ಆರಂಭದಲ್ಲಿ ಅನೇಕ ದೇಶಗಳ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಯಿತ್ತು. ಈ ಮಧ್ಯೆ ಆಕ್ಸ್ಫರ್ಡ್ ದೇಶಗಳ ವಿಶ್ವವಿದ್ಯಾಲಯ 1115 ರಲ್ಲಿ ಕೇಂಬ್ರಿಡ್ಜ್ ವಿವಿಯನ್ನ 1209 ಸ್ಥಾಪನೆ ಮಾಡಲಾಯ್ತು. ಈ ಎರಡು ದೇಶಗಳ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಶೈಕ್ಷಣಿಕ ಉಡುಗೆಗಳ ಸಂಪ್ರದಾಯವನ್ನ ಸ್ಥಾಪಿಸಿದವು. ಹೀಗಾಗಿ ಶಾಲಾ ಮತ್ತು ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಇರೋ ಯೂನಿಫಾರ್ಮ್ ಸಿಸ್ಟಮ್ ಇಡೀ ಜಗತ್ತಿಗೆ ಪರಿಚಯಿಸಿದ್ದೇ ಈ ಎರಡೂ ವಿಶ್ವವಿದ್ಯಾಲಯಗಳು. ಇದಾದನಂತರ ಬ್ರಿಟಿಷ್ ಸಾಮ್ರಾಜ್ಯದ ಪ್ರಭಾವವು ಈ ಯೂನಿಫಾರ್ಮ್ ಸಂಪ್ರದಾಯವನ್ನ ಪ್ರಪಂಚದ ಅನೇಕ ಭಾಗಗಳಿಗೆ ಹರಡುವಂತೆ ಮಾಡ್ತು.

ಇನ್ನ ವಿಶ್ವವಿದ್ಯಾಲಯಗಳಲ್ಲಿ ಕಾನ್ವೊಕೇಶನ್ ಡ್ರೆಸ್ ಹುಟ್ಟಿಕೊಂಡಿದ್ದು ಯುರೋಪಿಯನ್ ಸಮಾಜದಲ್ಲಿದ್ದ ವರ್ಗ ವ್ಯವಸ್ಥೆಯ ಪ್ರಭಾವದಿಂದ. ಹೇಗಂದ್ರೆ ಅಂದಿನ ಯೂರೋಪಿಯನ್ ಸಮಾಜದಲ್ಲಿ ಪೋಪ್ ಅಥವಾ ಪಾದ್ರಿಗಳಿಗೆ ಹೆಚ್ಚಿನ ಗೌರವಯುತ ಸ್ಥಾನಮಾನವಿತ್ತು. ಅವರೆಲ್ಲಾ ಉನ್ನತ ವರ್ಗದಲ್ಲಿದ್ರು. ಹೀಗಾಗಿ ಅವರೆಲ್ಲಾ ಚಳಿಗೆ ಸೂಕ್ತವಾಗುವ ಮತ್ತು ಹೆಚ್ಚು ಆಡಂಬರ ಏನಿಸೋ ಗೌನ್ ತರಹದ ಬಟ್ಟೆಗಳನ್ನೇ ಅವರೆಲ್ಲಾ ಧರಿಸುತ್ತಿದ್ರು. ಈ ಮಧ್ಯೆ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿ ಉನ್ನತ ಶಿಕ್ಷಣ ಪಡೆದವ್ರಿಗೂ ಯೂರೋಪಿಯನ್ ಸಮಾಜದಲ್ಲಿ ಹೆಚ್ಚಿನ ಗೌರವ ನೀಡೋ ಸಂಪ್ರದಾಯ ಶುರುವಾಯ್ತು. ಆಗ ವಿಶ್ವವಿದ್ಯಾಯಗಳಲ್ಲಿಯೂ ಕೂಡಾ ಪೋಪ್ ಅಥವಾ ಪಾದ್ರಿಗಳು ಧರಿಸುವ ರೀತಿಯಲ್ಲಿಯೇ ಉಡುಗೆ ಧರಿಸೋ ಸಂಪ್ರದಾಯ ಆರಂಭವಾಯ್ತು. ಏಕೆಂದ್ರೆ ಅವರನ್ನೂ ಕೂಡಾ ಉನ್ನತ ವರ್ಗದಲ್ಲಿ ಗುರುತಿಸಲು ಈ ತರಹದ ಉಡುಗೆ ಹುಟ್ಟಿಕೊಳ್ತು. ಹೀಗಾಗಿಯೇ ಕಾನ್ವೊಕೇಶನ್ ಡ್ರೆಸ್ ಮತ್ತು ಚರ್ಚಗಳಲ್ಲಿ ಪಾದ್ರಿಗಳು ಧರಿಸುವ ಡ್ರೆಸ್ ನಡುವೆ ಹೋಲಿಕೆಯನ್ನ ನಾವು ಕಾಣಬಹುದು.
ಇದನ್ನೂ ಓದಿ : ಭಾರತೀಯರನ್ನು ಕಾಡುತ್ತಿದೆ ಖಿನ್ನತೆ..!
ಇನ್ನ “ಮಾಸ್ಟರ್” ಎಂಬ ಪದವು 13ನೇ ಶತಮಾನದಲ್ಲಿ ಯೂರೋಪಿಯನ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂತು. ಅದರ ಪರಿಣಾಮ “ಮಾಸ್ಟರ್” ಎಂಬ ಪದವಿ ಪಡೆದ್ರೆ ಉನ್ನತ ಸ್ಥಾನದಲ್ಲಿ ಗುರಿಸೋ ಪದ್ದತಿ ಬೆಳೆಯಿತು. ಹೀಗಾಗಿ “ಮಾಸ್ಟರ್” ಡಿಗ್ರಿ ಮುಗಿಸಿದ ತಕ್ಷಣ ಈ ರೀತಿಯ ಗೌನ್ ಮತ್ತು ಟೋಪಿ ಧರಿಸುವ ಸಂಪ್ರದಾಯ ಎಲ್ಲೆಡೆ ಆರಂಭವಾಯ್ತು. ಬ್ರಿಟಿಷರು ಭಾರತಕ್ಕೆ ಬಂದ ನಂತ್ರ ಈ ಸಂಪ್ರದಾಯ ಭಾರತದಲ್ಲೂ ಆರಂಭವಾಗಿ ಇಂದಿನವರೆಗೂ ಹಾಗೇ ಮುಂದುವರೆದುಕೊಂಡು ಬಂದಿದೆ. ಆದ್ರೆ ಇದರ ಹಿನ್ನಲೆ ಬಗ್ಗೆ ಮಾತ್ರ ಯೋಚನೆ ಮಾಡದೇ ಇರೋದು ನಿಜಕ್ಕೂ ದುರಂತವೇ ಸರಿ.

ಈ ಮಧ್ಯೆ ಇದರ ಹಿನ್ನಲೆ ಅರಿತಿರೋ ಭಾರತದ ಕೆಲವೇ ಕೆಲ ವಿಶ್ವವಿದ್ಯಾಲಯಗಳು ಕಾನ್ವೊಕೇಶನ್ ಡೇ ದಿನದಂದು ಗೌನ್ ಮತ್ತು ಟೋಪಿ ಧರಿಸೋ ಸಂಪ್ರದಾಯವನ್ನ ಕೈಬಿಟ್ಟು ಭಾರತೀಯ ಉಡುಗೆಗಳನ್ನೇ ಬಳಸುತ್ತಿವೆ. ಭಾರತದ ವಾಯುಗುಣಕ್ಕೆ ತಕ್ಕಂತೆ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಕಾನ್ವೊಕೇಶನ್ ಡೇ ದಿನದಂದು ಬಟ್ಟೆ ಧರಿಸುವ ಹೊಸ ಸಂಪ್ರದಾಯವೂ ಕೆಲವು ಕಡೆ ಕಂಡು ಬರುತ್ತಿದೆ. ಯಾರೋ ಯಾವುದೋ ಉದ್ದೇಶಕ್ಕಾಗಿ ಮಾಡಿದ ಪದ್ದತಿಗಳನ್ನ ಯಾವುದೇ ಪ್ರಶ್ನೆ ಮಾಡದೇ ಪಾಲಿಸುವುದಕ್ಕಿಂತ ಅವುಗಳ ಹಿನ್ನಲೆ ಮತ್ತು ಇತಿಹಾಸವನ್ನ ಅರಿತುಕೊಳ್ಳುವುದು ಮುಖ್ಯ. ಭಾರತೀಯ ಸಂಪ್ರದಾಯದಲ್ಲಿ ಕಾನ್ವೊಕೇಶನ್ ಡ್ರೆಸ್‌ಗೆ ಯಾವುದೇ ಅರ್ಥವಿಲ್ಲ. ಸಾಂಸ್ಕೃತಿಕವಾಗಿ ನಾವು ಇಂದಿಗೂ ಬ್ರಿಟಿಷರ ಪ್ರಭಾವದಲ್ಲಿದ್ದೇವೆ ಎಂಬುದರ ಸೂಚಕವಾಗಿ ಕಾನ್ವೊಕೇಶನ್ ಡ್ರೆಸ್ ಇಂದಿಗೂ ನಮ್ಮ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅದನ್ನ ಕಾಣುತ್ತಿದ್ದೇವೆ.