ಈ ಡಿಜಿಟಲ್ ದುನಿಯಾದಲ್ಲಿ ಯೂಟ್ಯೂಬ್ ಬಳಸದೇ ಇರೋರು ಸಿಗೋದಿಲ್ಲಾ. ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರೋ ಯೂಟ್ಯೂಬ್ ಅನ್ನು ನಾವು ಪ್ರತಿದಿನ ಬಳಸ್ತಾನೇ ಇರ್ತಿವಿ. ಯಾವುದೇ ವಿಡಿಯೋ ನೋಡಬೇಕಾದ್ರು ನಾವು ಯೂಟ್ಯೂಬ್ ಅನ್ನೇ ಬಳಸ್ತಿವಿ. ಸಾಕಷ್ಟು ಜನ ಯೂಟ್ಯೂಬ್ನಲ್ಲಿ ವಿಡಿಯೋ ನೋಡ್ತಾರೆ. ಆದ್ರೆ ಯೂಟ್ಯೂಬ್ ಬಗ್ಗೆ ತಿಳ್ಕೊಂಡಿರೋಲ್ಲಾ. ನೀವು ಪ್ರತಿದಿನ ಬಳಸುವ ಯೂಟ್ಯೂಬ್ನ ಕೆಲ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಯೂಟ್ಯೂಬ್ ಅನ್ನು ಚಾಡ್ ಹರ್ಲಿ, ಸ್ಟೀವ್ ಚೆನ್ ಮತ್ತು ಜಾವೇದ್ ಕರೀಮ್ ಎನ್ನುವ ಪೇಪಾಲ್ ಕಂಪನಿಯ ಮೂವರು ಮಾಜಿ ಉದ್ಯೋಗಿಗಳು ಫೆಬ್ರವರಿ 14, 2005ರಂದು ಶುರು ಮಾಡಿದ್ರು. ಶುರು ಮಾಡಿದ ಕೆಲವೇ ವರ್ಷಗಳಲ್ಲಿ ಭಾರೀ ಪ್ರಸಿದ್ದಿ ಪಡೆದ ಯೂಟ್ಯೂಬ್ ಅನ್ನು ಗೂಗಲ್ ಸಂಸ್ಥೆ 1.65 ಮಿಲಿಯನ್ ಯುಎಸ್ ಡಾಲರ್ ನೀಡಿ ಖರೀದಿ ಮಾಡ್ತು. ಆರಂಭದಲ್ಲಿ ಗೂಗಲ್ ಇಷ್ಟು ದೊಡ್ಡ ಮೊತ್ತ ನೀಡಿ ಖರೀದಿ ಮಾಡಿದ್ದು, ವೆಸ್ಟ್ ಅಂತಾನೆ ಎಲ್ರೂ ಅನ್ಕೊಂಡಿದ್ರು. ಆದ್ರೆ ಖರೀದಿ ಮಾಡಿದ ಕೆಲವೇ ವರ್ಷಗಳಲ್ಲಿ ಗೂಗಲ್, ಖರೀದಿಸಿದ ನಾಲ್ಕು ಪಟ್ಟು ಲಾಭ ಮಾಡ್ತು.
ಇದನ್ನೂ ಓದಿ : ಎಚ್ಚರ…!! ಮರ್ಯಾದೆಗೆ ಕುತ್ತು ತರುತ್ತೇ ಆನ್ಲೈನ್ ಅಪ್ಲಿಕೇಶನ್ ಲೋನ್..!
ಸದ್ಯ ಯೂಟ್ಯೂಬ್ 100 ದೇಶಗಳಲ್ಲಿ 80 ವಿವಿಧ ಭಾಷೆಗಳಲ್ಲಿ ಲಭ್ಯವಿದೆ. ಯೂಟ್ಯೂಬ್ ಜೊತೆಗೆ ಯೂಟ್ಯೂಬ್ ಗೋ, ಯೂಟ್ಯೂಬ್ ಕಿಡ್, ಯೂಟ್ಯೂಬ್ ಮ್ಯೂಜಿಕ್, ಯೂಟ್ಯೂಬ್ ಒರಿಜಿನಲ್, ಯೂಟ್ಯೂಬ್ ಪ್ರಿಮೀಯಂ, ಯೂಟ್ಯೂಬ್ ಸ್ಟೂಡಿಯೋ, ಯೂಟ್ಯೂಬ್ ಟಿವಿಗಳು ಉಚಿತವಾಗಿ ಲಭ್ಯವಿವೆ.
ಇನ್ನು ಯೂಟ್ಯೂಬ್ನಲ್ಲಿ ಒಂದು ನಿಮಿಷಕ್ಕೆ 500 ಗಂಟೆಗಳಿಗೆ ಆಗೋವಷ್ಟು ಕಂಟೆಂಟ್ ಅಪ್ಲೋಡ್ ಆಗ್ತಾ ಇದೆ. ಅಂದ್ರೆ ಒಂದು ಗಂಟೆಗೆ ಯೂಟ್ಯೂಬ್ನಲ್ಲಿ 3000 ಗಂಟೆಗಳಿಗಾಗುವಷ್ಟು ಕಂಟೆಂಟ್ ಅಪ್ಲೋಡ್ ಆಗ್ತಾ ಇದೆ. ಯೂಟ್ಯೂಬ್ನಲ್ಲಿ ಪ್ರತಿದಿನ ವಿಡಿಯೋಗಳು 1 ಬಿಲಿಯನ್ ಗಂಟೆಗಳಷ್ಟು ವೀಕ್ಷಣೆ ಆಗ್ತಾ ಇವೆ. ಇನ್ನೊಂದೆಡೆ 2 ಬಿಲಿಯನ್ ಹೊಸ ವೀಕ್ಷಕರು ಲಾಗ್-ಇನ್ ಆಗ್ತಾ ಇದ್ದಾರೆ. ಅಂದ್ರೆ ಪ್ರಪಂಚದ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಪ್ರತಿ ತಿಂಗಳು ಯೂಟ್ಯೂಬ್ ಅನ್ನು ಪ್ರವೇಶಿಸುತ್ತಾ ಇದ್ದಾರೆ. ಅಚ್ಚರಿ ಎಂದರೆ ಯೂಟ್ಯೂಬ್ನಲ್ಲಿ ಅನ್ನು ಶೇ.70ರಷ್ಟು ಜನ್ರು ಮೊಬೈಲ್ನಲ್ಲೇ ನೋಡ್ತಾ ಇದಾರೆ. ಅದರಲ್ಲೂ 18-34 ವಯಸ್ಸಿನವರು ಹೆಚ್ಚಾಗಿ ಯೂಟ್ಯೂಬ್ ಬಳಸ್ತಾ ಇದಾರೆ. ಜಾಗತಿಕವಾಗಿ ಪುರಷರಿಗಿಂತ ಮಹಿಳೆಯರೇ ಅತಿಹೆಚ್ಚು ಯೂಟ್ಯೂಬ್ ಬಳಸ್ತಾ ಇದ್ದಾರೆ.

ಯೂಟ್ಯೂಬ್ನಲ್ಲಿ ಅಪ್ಲೋಡ್ ಆದ ಮೊದಲ ವೀಡಿಯೋ ಅಂದ್ರೆ “ಮಿ ಅಟ್ ದಿ ಝೂ. ಇದನ್ನ ಸಂಸ್ಥಾಪಕ ಜಾವೇದ್ ಕರೀಮ್ ಏಪ್ರಿಲ್ 23, 2005 ರಂದು ಅಪ್ಲೋಡ್ ಮಾಡಿದ. ಯೂಟ್ಯೂಬ್ನಲ್ಲಿ ಅಪ್ಲೋಡ್ ಆದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಅಂದ್ರೆ BTS “ಡೈನಮೈಟ್” ಇದು, ಅಪ್ಲೋಡ್ ಆದ 24 ಗಂಟೆಗಳಲ್ಲಿ 101.1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತು. ಭಾರತದಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರೋ ಯೂಟ್ಯೂಬ್ ಚಾನಲ್ ಅಂದ್ರೆ ಟಿ-ಸಿರೀಸ್. ಈ ಚಾನಲ್ 246 ಮಿಲಿಯನ್ ಚಂದಾದಾರರನ್ನು ಹೊಂದಿದೆ.
ಇದನ್ನೂ ಓದಿ : ಲಿಪ್ಸ್ಟಿಕ್ ನ ಕರಾಳ ಸತ್ಯಗಳು..!
ಇನ್ನು ಜಗತ್ತಿನಲ್ಲಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯೂಟ್ಯೂಬ್ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಫೇಸ್ಬುಕ್ ಇದೆ. ಆದ್ರೆ ಜಗತ್ತಿನಲ್ಲೇ ಅತಿಹೆಚ್ಚು ಯೂಟ್ಯೂಬ್ ಬಳಸೋ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ರೆ, ಅಮೇರಿಕಾ 2ನೇ ಸ್ಥಾನದಲ್ಲಿದೆ. ಅಚ್ಚರಿ ಅಂದ್ರೆ ಶೇ.96.6ರಷ್ಟು ಯೂಟ್ಯೂಬ್ ಚಾನಲ್ಗಳು 10,000 ಕ್ಕಿಂತ ಕಡಿಮೆ ಚಂದಾದಾರನ್ನು ಹೊಂದಿವೆ. ಯೂಟ್ಯೂಬ್ನಲ್ಲಿ 1000 ವೀಕ್ಷಣೆ ಪಡೆಯುವ ವಿಡಿಯೋಗಳಿಗೆ 3 to 5 ಡಾಲರ್ ನೀಡಲಾಗುತ್ತಿದೆ. ಭಾರತದಲ್ಲಿ ಶೇ.67ರಷ್ಟು ಯೂಟ್ಯೂಬ್ ಚಾನಲ್ಗಳು ಪ್ರತಿ ತಿಂಗಳು 16000ಕ್ಕಿಂತ ಕಡಿಮೆ ಆದಾಯವನ್ನು ಗಳಿಸುತ್ತಿವೆ. ಇನ್ನು ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ವಿಡಿಯೋ ಯಾವ್ದು ಅಂದ್ರೆ, ಪೊಗರು ಚಿತ್ರದ ಕರಾಬು ಹಾಡು. ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನೀಡಿರುವ ಈ ಹಾಡು 308 ಮಿಲಿಯನ್ ವೀಕ್ಷಣೆ ಪಡಿಯೋ ಮೂಲಕ ಮೊದಲ ಸ್ಥಾನದಲ್ಲಿದೆ.