• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama Health and Wellness

ಚಳಿಗಾಲದ ಆರೋಗ್ಯ(illness) ಸಮಸ್ಯೆಗೆ ಪರಿಹಾರ- ವಿಟಮಿನ್ ಗಳು(Vitamins); ಪಡೆಯೋದು ಹೇಗೆ?

December 9, 2024
in Health and Wellness
Reading Time: 2 mins read
A A
0
203
VIEWS

ಚಳಿಗಾಲದಲ್ಲಿ ಅನಾರೋಗ್ಯ(illness) ಅನ್ನೋದು ಸಾಮಾನ್ಯ. ಜ್ವರ, ಶೀತ, ನೆಗಡಿ, ಗಂಟಲು ನೋವು ಸೇರಿದಂತೆ ಹಲವು ಆರೋಗ್ಯದ ಸಮಸ್ಯೆಗಳು ಈ ಋತುವಿನಲ್ಲಿ ಕಾಡುತ್ತವೆ. ಚರ್ಮ ಒರಟಾಗುವಂತಹದ್ದು ಕೂಡ ಇದೇ ಸಮಯದಲ್ಲಿ. ಇದಕ್ಕೆ ಮುಖ್ಯ ಕಾರಣ, ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗುವ ಸಾಧ್ಯತೆಯಿರುವುದು. ಹೀಗಾಗಿ ಚಳಿಗಾಲದ ಆರೋಗ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇರುವ ಉತ್ತಮ ಮಾರ್ಗ ಎಂದರೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದನ್ನ ವೃದ್ಧಿಸಿಕೊಳ್ಳಬೇಕೆಂದರೆ ವಿಟಮಿನ್ ಸಿ (Vitamins) ಕಡೆ ಹೆಚ್ಚು ಗಮನ ನೀಡಬೇಕು. ಅದರಲ್ಲೂ ಈ ವರ್ಷ ಹೆಚ್ಚು ಚಳಿ ಇರುವುದರಿಂದ ಆರೋಗ್ಯದ ಕಾಳಜಿ ಮಾಡಲೇಬೇಕು.

ಚಳಿಗಾಲದಲ್ಲಿ ವಿಟಮಿನ್ ಸಿ(Vitamins C) ಮಹತ್ವ


ವಿಟಮಿನ್ ಸಿ ಒಂದು ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಸಿ ಬಿಳಿ ರಕ್ತಕಣಗಳ ಉತ್ಪತ್ತಿಯನ್ನು ಪ್ರೋತ್ಸಾಹಿಸುತ್ತದೆ, ಇದು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಚರ್ಮ ಒಣಗುವುದು, ಒರಟಾಗುವುದು ಸಾಮಾನ್ಯ. ಚರ್ಮದ ಪ್ರೋಟಿನ್ ಎಂದು ಕರೆಯಲ್ಪಡುವ ಕೊಲಾಜಿನ್ ಉತ್ಪತ್ತಿಗೆ ವಿಟಮಿನ್ ಸಿ ಸಹಾಯ ಮಾಡುತ್ತದೆ, ಇದು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಹೀಗಾಗಿ ಚಳಿಗಾಲದಲ್ಲಿ ವಿಟಮಿನ್ ಸಿಗೆ ಪ್ರಾಮುಖ್ಯತೆ ನೀಡಿದರೆ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು ಹಾಗೂ ದೇಹವನ್ನು ಬಲಪಡಿಸಬಹುದು.

ವಿಟಮಿನ್ ಸಿ ಸಮೃದ್ಧ ಆಹಾರಗಳು
ವಿಟಮಿನ್ ಸಿ ಎಂಬುದ ನಮ್ಮ ದೇಹದಲ್ಲಿ ಸ್ವಯಂಚಾಲಿತವಾಗಿ ಉತ್ಪತ್ತಿಯಾಗುವುದಿಲ್ಲ. ಹಾಗಾಗಿ ಅದನ್ನು ಆಹಾರ ಅಥವಾ ಸಪ್ಲಿಮೆಂಟ್ ಮೂಲಕ ಪಡೆಯಬೇಕು. ಚಳಿಗಾಲದಲ್ಲಿ ಪ್ರತಿದಿನವೂ ವಿಟಮಿನ್ ಸಿ ಸಮೃದ್ಧ ಆಹಾರಗಳನ್ನು ಸೇವಿಸುವುದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಿತ್ತಳೆ – ಸಾಮಾನ್ಯವಾಗಿ 100 ಗ್ರಾಂ ಕಿತ್ತಳೆ 50-60 ಮಿಲಿ ಗ್ರಾಂ ವಿಟಮಿನ್ ಸಿಯನ್ನು ಹೊಂದಿರುತ್ತದೆೆ. ಇದು ಕೊಲಾಜಿನ್ ಉತ್ಪತ್ತಿಯನ್ನು ಸುಧಾರಿಸುತ್ತದೆ

ಬ್ರೊಕೊಲಿ – ಬ್ರೊಕೋಲಿ ವಿಟಮಿನ್ ಸಿ ನ ಅತ್ಯುತ್ತಮ ಮೂಲವಾಗಿದೆ. ಸಾಮಾನ್ಯವಾಗಿ 100 ಗ್ರಾಂ ಬ್ರೊಕೋಲಿಯು ಸುಮಾರು 89 ಮಿಲಿ ಗ್ರಾಂ ವಿಟಮಿನ್ ಸಿಯನ್ನು ಹೊಂದಿರುತ್ತದೆ. ಜೊತೆಗೆ ಶಕ್ತಿಶಾಲಿ ಫೈಬರ್, ಪ್ರೋಟೀನ್, ಪೊಟ್ಯಾಸಿಯಮ್ ಹಾಗೂ ಇತರ ಪ್ರಮುಖ ಪೋಷಕಾಂಶಗಳನ್ನೂ ಒಳಗೊಂಡಿದೆ.

ಸ್ಟ್ರಾಬೆರಿ – ಒಂದು ಕಪ್ ಸ್ಟ್ರಾಬೆರಿಯಲ್ಲಿ 90 ಎಮ್‌ಜಿ ವಿಟಮಿನ್ ಸಿ ಇರುತ್ತದೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಟೊಮ್ಯಾಟೊ – ಒಂದು ಮಧ್ಯಮ ಗಾತ್ರದ ಟೊಮೆಟೊ 28% ವಿಟಮಿನ್ ಸಿ ಪೂರೈಸುತ್ತದೆ. ಇದು ಪೊಟ್ಯಾಸಿಯಮ್ ಮತ್ತು ಇನ್ನಿತರ ಪೋಷಕಾಂಶಗಳನ್ನು ನೀಡುತ್ತದೆ.

ಕಿವಿ – ಸುಮಾರು 100 ಗ್ರಾಂ ಕಿವಿ ಹಣ್ಣಿನಲ್ಲಿ ಸಾಮಾನ್ಯವಾಗಿ 90-100 ಮಿ.ಗ್ರಾಂ ವಿಟಮಿನ್ ಸಿಯನ್ನು ಹೊಂದಿರುತ್ತದೆ. ಇದು ದೇಹದ ಆರೋಗ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಪರಂಗಿ – 1 ಕಪ್ ಪರಂಗಿ ಹಣ್ಣಿನಲ್ಲಿ (ಸುಮಾರು 145 ಗ್ರಾಂ) 85-90ಎಮ್‌ಜಿ ವಿಟಮಿನ್ ಸಿ ಇರುತ್ತದೆ, ಇದು ಹಲವು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ದಪ್ಪ ಮೆಣಸು – ಮಧ್ಯಮ ಗಾತ್ರದ ದಪ್ಪ ಮೆಣಸು 150-155 ಎಮ್‌ಜಿ ವಿಟಮಿನ್ ಸಿ ಪೂರೈಸುತ್ತದೆ. ಇದು ಕೊಲೆಸ್ಟರಾಲ್ ಕಡಿಮೆ ಮಾಡಲು ಮತ್ತು ರಕ್ತದ ಸಂಚಾರ ಸುಧಾರಿಸಲು ಸಹಾಯ ಮಾಡುತ್ತದೆ. ಕ್ಯಾಪ್ಸಿಕಂನಲ್ಲಿ ಹೆಚ್ಚಿನ ಆಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಆರೋಗ್ಯಕರ ಚರ್ಮಕ್ಕೆ ಸಹಾಕಾರಿ.

ಅನಾನಸ್ – ಒಂದು ಕಪ್ ಅನಾನಸ್ನಲ್ಲಿ(ಸುಮಾರು 150 ಗ್ರಾಂ) 75-80 ಎಮ್‌ಜಿ ವಿಟಮಿನ್ ಸಿ ಇರುತ್ತದೆ, ಇದು ದೇಹವನ್ನು ಉರಿಯೂತದಿಂದ ರಕ್ಷಿಸುತ್ತದೆ. ಚಳಿಗಾಲದಲ್ಲಿ ಈ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಮತ್ತು ಸಾಮಾನ್ಯ ಆರೋಗ್ಯವನ್ನು ಉತ್ತಮಗೊಳಿಸಬಹುದು.

ಚಳಿಗಾಲದಲ್ಲಿ ಅಗತ್ಯವಾಗಿ ಬೇಕಿರುವ ಮತ್ತೊಂದು ಪೋಷಕಾಂಶವೆಂದರೆ ವಿಟಮಿನ್ ಎ(Vitamins A). ಇದು ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ವಿಟಮಿನ್ ಎ ಕೂಡ ಬಿಳಿ ರಕ್ತಕಣಗಳ ಕಾರ್ಯವನ್ನು ಸುಧಾರಿಸುತ್ತದೆ. ಇದು ದೇಹವನ್ನು ಶೀತ ಮತ್ತು ಇತರ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ. ವಿಟಮಿನ್ ಎ ಶರೀರದಲ್ಲಿ ಕೊಲಾಜಿನ್ ಉತ್ಪತ್ತಿಯನ್ನು ಪ್ರೋತ್ಸಾಹಿಸುತ್ತದೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಳಜಿ ಮಾಡುತ್ತದೆ. ಕ್ಯಾರೆಟ್, ಸೌತೆಕಾಯಿ, ಗೆಣಸು, ಮೊಟ್ಟೆ, ಮೀನು – ಇವುಗಳು ವಿಟಮಿನ್ ಎ ಒದಗಿಸುವ ಆಹಾರಗಳಾಗಿವೆ.

ಈ ಆಹಾರಗಳನ್ನು ಪ್ರತಿದಿನವೂ ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಬಲಪಡಿಸಬಹುದು. ಇದರಿಂದ ಚಳಿಗಾಲದಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

Read this also : Vitamin D; ದೇಹದಲ್ಲಿ ವಿಟಮಿನ್ ಡಿ ಕಮ್ಮಿಯಾದ್ರೆ ಏನಾಗುತ್ತೆ?

ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.