Weight loss; ತೂಕ ಇಳಿಸಲು “cravings” (ತೀವ್ರವಾಗಿ ತಿನ್ನುವ ಆಸೆ) ಸಂಪೂರ್ಣವಾಗಿ ನಿಯಂತ್ರಣ ಮಾಡುವ ಅವಶ್ಯಕತೆ ಇಲ್ಲ ಅಂದರೆ ನಂಬೋದಕ್ಕೆ ಆಗುತ್ತಾ? ಇತ್ತೀಚೆಗೆ University of Illinois Urbana-Champaign ವತಿಯಿಂದ ನಡೆಸಲಾದ 24 ತಿಂಗಳ ಅಧ್ಯಯನದ ವರದಿಯೂ ಹೌದು ಎನ್ನುತ್ತಿದೆ. ‘Inclusion strategy’ಅಂದರೆ ನಾವಿಷ್ಟಪಟ್ಟ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸದೆ, ಸಣ್ಣ ಪ್ರಮಾಣದಲ್ಲಿ ನಿಯಮಿತವಾಗಿ ತಿಂದು ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು ಎಂದು ಈ ಅಧ್ಯಯನ ಹೇಳುತ್ತಿದೆ.
ಅಧಿಕ ತೂಕ ಇರುವ ವ್ಯಕ್ತಿಗಳನ್ನೊಳಗೊಂಡ ಈ ಅಧ್ಯಯನದಲ್ಲಿ, ಭಾಗವಹಿಸಿದವರಿಗೆ ತಾವು ಬಯಸುವ ತಿಂಡಿಗಳನ್ನು (ಹೆಚ್ಚಾಗಿ ಸಿಹಿ ಅಥವಾ ಖಾರ – chips ರೀತಿ ಸ್ನ್ಯಾಕ್) ಸಣ್ಣ ಪ್ರಮಾಣದಲ್ಲಿ, ನಿರ್ದಿಷ್ಟ “Meal Plan” (ಆಹಾರ ಯೋಜನೆ) ಜೊತೆಗೆ ತಿನ್ನಲು ಹೇಳಲಾಯಿತು.
ಅಧ್ಯಯನದಲ್ಲಿ ಭಾಗವಹಿಸಿದ್ದವರು ಮೊದಲ ವರ್ಷದ ಕೊನೆಯಲ್ಲಿ, ಸರಾಸರಿ 7.9% ತೂಕ ಇಳಿಕೆ ಸಾಧಿಸಿದ್ದರು. ಎರಡನೇ ವರ್ಷದಲ್ಲಿ ಅವರು 6.7% ತೂಕ ಇಳಿಕೆಯನ್ನು ಕಂಡಿದ್ದರು. ಇದು ಹೆಚ್ಚು ಪ್ರೇರಣೆಯ ವಿಷಯವಾಗಿತ್ತು.
ಇದು ಹೇಗೆ ಕಾರ್ಯನಿರ್ವಹಿಸಿತು?
ಮೊದಲ ವರ್ಷ ತೀವ್ರ ಆಸೆ ಉಂಟುಮಾಡುವ ಆಹಾರಗಳನ್ನು ಸಣ್ಣ ಪ್ರಮಾಣದಲ್ಲಿ ನಿಯೋಜಿತವಾಗಿ ತಿನ್ನುವುದು, ಇದರಿಂದ ತೂಕ ಇಳಿಕೆಗೆ ಸಹಾಯವಾಯಿತು. ಎರಡನೇ ವರ್ಷವೂ ಇದೇ ಮುಂದುವರೆಸಲಾಯಿತು ಹೀಗಾಗಿ ಮತ್ತೊಮ್ಮೆ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಸಹಾಯವಾಯಿತು. “Restriction” (ನಿರ್ಬಂಧ) ಇಲ್ಲದಿರುವದರಿಂದ ಭಾಗವಹಿಸಿದವರಿಗೆ ಗಿಲ್ಟ್ ಆಗಲಿಲ್ಲ. ಇದರಿಂದ ಅವರು Diet plan ನಿಂದ ಹೊರಬರಲೇ ಇಲ್ಲ.

Inclusion Strategy vs Restriction Diet
Restriction diet ಅಂದರೆ ಪಾರಂಪರಿಕ ಡೈಟ್ – ಇದರಲ್ಲಿ sweets, snacks, fried items ಎಲ್ಲವನ್ನೂ ತಿರಸ್ಕರಿಸಬೇಕು. ಆದರೆ ಈ ಅಧ್ಯಯನ, ಆ ಹಳೆಯ ತತ್ವಕ್ಕಿಂತಲೂ “Inclusion strategy” ಉತ್ತಮ ಎನ್ನುತ್ತಿದೆ. ಹೇಗೆಂದರೆ ಈ ತಿಂಡಿಗಳನ್ನು guilt ಇಲ್ಲದೆ ಸಣ್ಣ ಪ್ರಮಾಣದಲ್ಲಿ ತಿನ್ನೋದ್ರಿಂದ ಯಾಕಪ್ಪಾ ಇಂಥ ಡಯೇಟ್ ಮಾಡ್ತಿದೀನಿ ಅನ್ನೋ ಭಾವನೆ ಕೂಡ ಬರೋದಿಲ್ಲ.
Read this also : Obesity – ಈ ರೀತಿ ಊಟ ಮಾಡುದ್ರೆ ಬೊಜ್ಜಿನ ಸಮಸ್ಯೆನೇ ಬರಲ್ಲ!

ಆದರೆ ಈ ಯೋಜನೆ ಬ್ಯಾಲೆನ್ಸ್ ಆಗಿರಬೇಕು. ಉದಾಹರಣೆಗೆ, balanced lunch ಜೊತೆಗೆ ಕೇಕ್ ತಿನ್ನೋದ್ರಿಂದ ಮನಸ್ಸು ತೃಪ್ತಿಯಾಗುತ್ತದೆ – ಆದರೆ ಅದೇ ಕೇಕ್ ರಾತ್ರಿ 11 ಗಂಟೆಗೆ ತಿಂದ್ರೆ ಅದು ಬೇರೆ ಪರಿಣಾಮ ಬೀರುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಏಕೆ ಇದು ಮುಖ್ಯವಾಗಿದೆ?
ತೂಕ ಇಳಿಸೋದು ಒಂದು ಪ್ರಕ್ರಿಯೆ, ಆದರೆ ಆ ತೂಕವನ್ನು ಕಾಪಾಡಿಕೊಳ್ಳೋದು ಇನ್ನಷ್ಟು ಕಠಿಣ. ತುಂಬಾ ಜನ ಮೊದಲ ವರ್ಷದೊಳಗೇ ಮತ್ತೆ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಈ ಅಧ್ಯಯನ ತೋರಿಸುವುದೇನೆಂದರೆ cravingsಅನ್ನು ನಿಖರವಾಗಿ ಟಾರ್ಗೆಟ್ ಮಾಡಿದ್ರೆ ಮತ್ತು guilt ಇಲ್ಲದಂತೆ ಅದನ್ನು ಅಳವಡಿಸಿಕೊಂಡರೆ ದೀರ್ಘಕಾಲದ ಆರೋಗ್ಯ ಸಾಧ್ಯ.
ತೂಕ ಇಳಿಸೋದು ಅಂದ್ರೆ ನಿಮ್ಮ ಪ್ರಿಯವಾದ ತಿಂಡಿಗಳನ್ನು ಸಂಪೂರ್ಣವಾಗಿ ಬಿಡಬೇಕು ಅಂತೇನಿಲ್ಲ. ಬದಲಿಗೆ, ಅವುಗಳನ್ನು ಜಾಣ್ಮೆಯಿಂದ ಅಳವಡಿಸಿಕೊಂಡು ಒಂದು structured ರೂಪದಲ್ಲಿ ತಿನ್ನಬಹುದು.










