ಕೆಲವರಿಗೆ ಹೇಗಪ್ಪ ದೇಹದ ತೂಕ ಇಳಿಸೋದು ಅನ್ನೋ ಚಿಂತೆಯಾದರೆ ಇನ್ನ ಕೆಲವರು ತೂಕ ಹೆಚ್ಚಿಸಿಕೊಳ್ಳಲು(Weight gain) ಪರದಾಡುತ್ತಾರೆ. ಹೆಚ್ಚಾಗಿ ತಿಂದರೂ ತೂಕ ಮಾತ್ರ ಏರಿಕೆಯಾಗೋದಿಲ್ಲ. ಬೇಕರಿ ಪದಾರ್ಥ ತಿಂದರೆ ತೂಕ ಹೆಚ್ಚುತ್ತೆ, ಕುರುಕಲು ತಿಂಡಿ ತಿಂದರೆ ತೂಕ ಹೆಚ್ಚಾಗುತ್ತೆ ಅಂತಾ ಅವುಗಳನ್ನ ಹೆಚ್ಚಾಗಿ ತಿನ್ನುತ್ತಾರೆ. ಆದರೆ ಇದರಿಂದ ತೂಕ ಹೆಚ್ಚಾಗದೇ ಅನಾರೋಗ್ಯ ಶುರುವಾಗುತ್ತದೆ. ಆರೋಗ್ಯವೂ ಹಾಳಾಗದೇ ತೂಕ ಹೆಚ್ಚು ಮಾಡಿಕೊಳ್ಳಬೇಕು ಎಂದರೇ ಏನು ಮಾಡಬೇಕು? ಈ ಬರಹದಲ್ಲಿ ತಿಳಿಯೋಣ

“ಆರೋಗ್ಯಕರ ತೂಕ” ಎಂದರೇನು ಅಂತಾ ಸರಳವಾಗಿ ಹೇಳುವುದಾದರೆ, ನಮ್ಮ ಎತ್ತರ ಹಾಗೂ ವಯಸ್ಸಿನ ಆಧಾರದ ಮೇಲೆ ತೂಕ ನಿರ್ಧಾರವಾಗುತ್ತದೆ. ಮಕ್ಕಳಲ್ಲಿ ಎತ್ತರ ವೃದ್ಧಿಯಾಗುತ್ತಿರುವ ಕಾರಣ ತೂಕ ಸಹ ಪ್ರಾಕೃತಿಕವಾಗಿ ಹೆಚ್ಚಾಗುತ್ತದೆ. ಆದರೆ ಎತ್ತರ ಬೆಳೆಯುವುದು ನಿಂತ ನಂತರ, ತೂಕವು “ Ideal range”ನಲ್ಲಿ ಇರಬೇಕು. ಈ ವಿಚಾರದಲ್ಲಿ ಕ್ಯಾಲೋರಿಸ್ (Calories) ಮುಖ್ಯಪಾತ್ರ ವಹಿಸುತ್ತದೆ.
ಕ್ಯಾಲೋರಿಸ್ (Calories) ಅಂದರೆ ಏನು?
ಕ್ಯಾಲೋರಿ ಎಂದರೆ ಆಹಾರದಿಂದ ಸಿಗುವ ಶಕ್ತಿಯ ಪ್ರಮಾಣ. ನಾವು ದಿನವಿಡೀ ಯಾವುದೇ ಕೆಲಸ ಮಾಡಿದರೂ ನಮ್ಮ ದೇಹದಿಂದ ಕ್ಯಾಲೋರಿಸ್ ಗಳು ಬರ್ನ್ ಆಗುತ್ತವೆ. ನಾವು ಯೋಚಿಸುವಾಗಲೂ, ನಿದ್ದೆ ಮಾಡುವಾಗಲೂ ಈ ಕ್ಯಾಲೋರಿಸ್ ಬರ್ನ್ ಆಗುತ್ತವೆ. ನಾವು ಬರ್ನ್ ಮಾಡೋದಕ್ಕಿಂತ ಹೆಚ್ಚು ಕ್ಯಾಲೋರಿ ಸೇವಿಸಿದಾಗ ಅದು ಫ್ಯಾಟಾಗಿ ದೇಹದ ತೂಕ ಹೆಚ್ಚಾಗುತ್ತದೆ. ಹೀಗಾಗಿ ತೂಕ ಹೆಚ್ಚಿಸಬೇಕಾದವರು ದೇಹದ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಸ್ ಸೇವಿಸಬೇಕಾಗುತ್ತದೆ.
ಜಾಸ್ತಿ ತಿಂದರೂ ತೂಕ ಹೆಚ್ಚಾಗಲ್ಲ ಅನ್ನೋದು ಕೆಲವರ ದೂರಾಗಿದೆ. ಇದಕ್ಕೆ ಮುಖ್ಯವಾದ ಕಾರಣ ಏನೆಂದರೆ ಸರಿಯಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುತ್ತಿಲ್ಲ ಎನ್ನುವುದು.
ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವುದು ಹೇಗೆ?
ಮೂರು ರೀತಿಯ ಆಹಾರವನ್ನು ನಿತ್ಯ ತಿನ್ನುವುದರಿಂದ ಆರೋಗ್ಯಕರವಾಗಿ ದೇಹದ ತೂಕ ಹೆಚ್ಚು ಮಾಡಿಕೊಳ್ಳಬಹುದು.

ಇವು ನಮ್ಮ ಕ್ಯಾಲೋರಿಸ್ ನ ಮೂಲ. ತೂಕ ಹೆಚ್ಚಿಸಲು ಇವು ಅತೀ ಮುಖ್ಯ. ಅನ್ನ, ರಾಗಿ, ಆಲೂಗೆಡ್ಡೆ, ಬಾಳೆಹಣ್ಣು, ಮಾವಿನಹಣ್ಣು, ಗೆಣಸು, ಸಪೋಟಾ – ಇವುಗಳನ್ನು ತಿನ್ನುವುದರಿಂದ ಕ್ಯಾಲೋರಿಸ್ ಸೇವನೆ ಹೆಚ್ಚಾಗಿ ದೇಹದ ತೂಕವೂ ಹೆಚ್ಚುತ್ತದೆ.

ಕೆಲವರು ತೂಕ ಹೆಚ್ಚಿಸಲು ಹೆಚ್ಚು ಕಾರ್ಬೋಹೈಡ್ರೇಟ್ಸ್ ಸೇವಿಸುತ್ತಾರೆ, ಆದರೆ ಪ್ರೋಟೀನ್ನ ಕಡೆಗಣಿಸುತ್ತಾರೆ. ಇದು ತಪ್ಪು. ಯಾಕೆಂದರೆ ಪ್ರೋಟಿನ್ ಇಲ್ಲದೆ ಸ್ನಾಯಗಳ ಆರೋಗ್ಯ (Muscle mass) ಬೆಳೆಯುವುದಿಲ್ಲ. ಕೇವಲ ಕಾರ್ಬೋಹೈಡ್ರೇಟ್ ತಿಂದರೇ ದಪ್ಪ ಕಾಣಿಸಬಹುದು, ಆದರೆ ಫಿಟ್ ಆಗಿ ಕಾಣಿಸಲ್ಲ. ದಪ್ಪ ಆದರೂ ಚೆನ್ನಾಗಿ ಕಾಣಿಸಬೇಕೆಂದರೆ ಪ್ರೋಟಿನ್ ತಿನ್ನಬೇಕು. ಹಾಲು, ಮೊಸರು, ಪನ್ನೀರ್, ಕಡಲೆಕಾಳು, ಮೊಳಕೆಕಾಳುಗಳು, ಚನ್ನಾ, ರಾಜ್ಮಾ, ಮಾಂಸಾಹಾರಿಗಳಾದರೆ ಮೊಟ್ಟೆ, ಮೀನು, ಕೋಳಿ – ಇವುಗಳನ್ನು ಸೇವಿಸಬೇಕು.
Read this also – Weight loss; ನಿಮ್ಮ ಇಷ್ಟದ ಕೇಕ್, ಚಿಪ್ಸ್ ತಿಂದೇ ದೇಹದ ತೂಕ ಇಳಿಸಬಹುದು!
3. ಆರೋಗ್ಯಕರ ಕೊಬ್ಬು (Healthy fats )

ಇವುಗಳನ್ನು “Calorie-dense foods” ಎಂದು ಕರೆಯಲಾಗುತ್ತದೆ. ಅಂದರೆ ಕಡಿಮೆ ಪ್ರಮಾಣದಲ್ಲಿ ಹೆಚ್ಚು ಕ್ಯಾಲೋರಿಸ್ ಕೊಡಬಲ್ಲ ಆಹಾರಗಳು. ದೇಸಿ ತುಪ್ಪ, ಬಾದಾಮಿ, ಗೋಡಂಬಿ, ಫ್ಲ್ಯಾಕ್ಸ್ ಸೀಡ್ಸ್, ಸನ್ ಫ್ಲವರ್ ಬೀಜ, ಎಳ್ಳು, ಪೀನಟ್ ಬಟ್ಟರ್ – ಇವುಗಳನ್ನು ಸ್ನ್ಯಾಕ್ ರೀತಿ ತಿನ್ನುವುದರಿಂದ ತೂಕ ಹೊಂದಲು ಸಹಾಯವಾಗುತ್ತದೆ.
ತೂಕ ಹೆಚ್ಚು ಮಾಡುವ ಮಿಲ್ಕ್ ಶೇಕ್ ಮಾಡುವುದು ಹೇಗೆ?
Banana Almond Milkshake
1 ಬಾಳೆಹಣ್ಣು, 1 ಲೋಟ ಹಾಲು, 5 ನೆನೆಸಿದ ಬಾದಾಮಿ, 1 ಟೀ ಸ್ಪೂನ್ ಜೇನುತುಪ್ಪ, ಸ್ವಲ್ಪ ಏಲಕ್ಕಿ – ಇವುಗಳನ್ನು ಗ್ರೈಂಡ್ ಮಾಡಿ ಕುಡಿಯುವುದು
Date & Walnut Milkshake
5–6 ನೆನೆಸಿದ ಖರ್ಜೂರ, 5 ವಾಲ್ನಟ್ಸ್, 1 ಲೋಟ ಹಾಲು, 1 ಟೀ ಸ್ಪೂನ್ ಜೇನುತುಪ್ಪ – ಮಿಶ್ರಣ ಮಾಡಿ ಗ್ರೈಂಡ್ ಮಾಡಿ ಕುಡಿಯುವುದು.
ದಿನದಲ್ಲಿ 3 ಮುಖ್ಯ ಊಟ + 2 Snacks ತಪ್ಪದೆ ತೆಗೆದುಕೊಳ್ಳಬೇಕು. ಊಟ ತ್ಯಜಿಸಿದರೆ ತೂಕ ಹೆಚ್ಚಿಸಿಕೊಳ್ಳುವುದು ಕಷ್ಟವಾಗುತ್ತದೆ.
ಇದರ ಜೊತೆಗೆ ವ್ಯಾಯಾಮ, ಸರಿಯಾದ ನಿದ್ರೆ, ಒತ್ತಡ ನಿಯಂತ್ರಣ ಕೂಡ ಮುಖ್ಯವಾಗುತ್ತದೆ.










