ಆರೋಗ್ಯ ಜೀವನ ಅಂದ್ರೆ ಕೇವಲ ದೈಹಿಕವಾಗಿ ಆರೋಗ್ಯವಾಗಿರೋದಲ್ಲ, ಮಾನಸಿಕವಾಗಿಯೂ ಆರೋಗ್ಯವಾಗಿರಬೇಕು. ಆದ್ರೆ ದೇಹದಲ್ಲಿ ವಿಟಮಿನ ಬಿ12 ಕೊರತೆಯಿಂದ ಕೆಲ ಮಾನಸಿಕ ರೋಗಗಳನ್ನು ಅನುಭವಿಸಬೇಕಾಗುತ್ತದೆ. ವಿಟಮಿನ್ ಬಿ12 (Vitamin B12) ಅನ್ನು ಕೋಬಾಲಾಮಿನ್ ಎಂದೂ ಕರೆಯುತ್ತಾರೆ. ಇದು ಕೆಂಪು ರಕ್ತ ಕಣಗಳ ರಚನೆ, ನರಗಳ ಕಾರ್ಯ ಮತ್ತು ಡಿಎನ್‌ಎ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ನಮ್ಮ ಮೆದುಳಿನ ರಾಸಾಯನಿಕಗಳನ್ನು ಉತ್ಪಾದಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ, ಆ ಮೂಲಕ ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ. ಮೆಂಟಲ್ ಹೆಲ್ತ್ ಗೆ ವಿಟಮಿನ್ ಬಿ12 ಅತ್ಯಾವಶ್ಯಕ.

ವಿಟಮಿನ್ ಬಿ12 ನಮ್ಮ ನರವ್ಯವಸ್ಥೆಗಳಲ್ಲಿ ಸಂದೇಶವನ್ನು ರವಾನಿಸುವ ರಾಸಾಯನಿಕ ನ್ಯೂರೋಟ್ರಾನ್ಸ್ಮಿಟರ್‌ಗಳ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಮೆದುಳು ಮತ್ತು ನರ್ವಸ್ ಸಿಸ್ಟಮ್‌ನ ಕನೆಕ್ಷನ್‌ಗೆ ಸಹಕಾರಿ. ಒಂದು ವೇಳೆ ವಿಟಮಿನ್ ಬಿ12 ಕೊರತೆಯಿದ್ರೆ ದೇಹದಲ್ಲಿ ಈ ಕೆಲಸ ಸರಿಯಾಗಿ ನಡೆಯದೇ ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
Read this also : Vitamin D; ದೇಹದಲ್ಲಿ ವಿಟಮಿನ್ ಡಿ ಕಮ್ಮಿಯಾದ್ರೆ ಏನಾಗುತ್ತೆ?
ವಿಟಮಿನ್ ಬಿ12 ಕೊರತೆಯಿಂದ ಕಾಡುವ ಮಾನಸಿಕ ಸಮಸ್ಯೆಗಳು
ಡಿಪ್ರೆಶನ್
ವಿಟಮಿನ್ ಬಿ12 ಕೊರತೆಯಿಂದ ಡಿಪ್ರೆಶನ್ ಕಾಡುವ ಸಾಧ್ಯತೆ ಇರುತ್ತದೆ. ವಿಟಮಿನ್ ಬಿ12 ಸೆರಟೋನಿನ್ ಅನ್ನೊ ನ್ಯೂರೋಟ್ರಾನ್ಸ್ಮಿಟರ್‌ಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸೆರಟೋನಿನ್ ಹತಾಶೆಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಬಿ12 ಕೊರತೆ ಹೊಂದಿದ ವ್ಯಕ್ತಿಗಳು ಕಡಿಮೆ ಸೆರಟೋನಿನ್ ಮಟ್ಟವನ್ನ ಹೊಂದಿರುತ್ತಾರೆ. ಇದ್ರಿಂದ ಕೋಪ ಮತ್ತು ಇರಿಟೇಶನ್ ಆಗೋವಂತ ಫೀಲಿಂಗ್ ಅನುಭವಿಸುತ್ತಾರೆ. ಉದ್ವೇಗ, ಒತ್ತಡದಂತಹ ಭಾವನೆಯೂ ಕಾಡುತ್ತದೆ. ಕೆಲವೊಮ್ಮೆ ಗೊಂದಲವಾಗೋದು, ಇದ್ದಕ್ಕಿದ್ದಂತೆ ದಿಗ್ಬ್ರಮೆಯಾಗೋದೂ ಆಗುತ್ತೆ.
ನೆನಪಿನ ಶಕ್ತಿ ಮೇಲೆ ಪರಿಣಾಮ
ವಿಟಮಿನ್ ಬಿ12 ಕೊರತೆಯಿಂದ ನೆನಪಿನ ಶಕ್ತಿಯ ಸಾಮಾರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಯಾವಾಗ ಮಾನಸಿಕವಾಗಿ ಆರೋಗ್ಯ ಸಮಸ್ಯೆಗಳು ಎದುರಿಸಬೇಕಾಗುತ್ತೋ ಆಗ ಮೆಂಟಲ್ ಶಾರ್ಪ್ನೆಸ್ ಅನ್ನೋದು ಕಮ್ಮಿಯಾಗುತ್ತಾ ಹೋಗುತ್ತೆ. ಮಕ್ಕಳಲ್ಲಿ ಈ ವಿಟಮಿನ್ ಕೊರತೆಯಿದ್ರೆ ಅವರ ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ ಬೀರಬಹುದು. ಮೂಡ್ ಸ್ವಿಂಗ್ಸ್ ಗೂ ವಿಟಮಿನ್ ಬಿ12 ಕೊರತೆ ಕಾರಣವಾಗುತ್ತೆ.
ಸ್ನಾಯುಗಳಲ್ಲಿ ಸೆಳೆತ
ವಿಟಮಿನ್ ಬಿ12 ಕೇವಲ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೇ ಒಟ್ಟಾರೆ ದೈಹಿಕ ಆರೋಗ್ಯಕ್ಕೂ ಅತ್ಯಗತ್ಯ. ಏಕೆಂದರೆ ಇದು ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಹೃದಯ ಸಂಬಂಧಿ ಅಪಾಯವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ವಿಟಮಿನ್ ಬಿ12 ಕೊರತೆಯಿದ್ರೆ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ದೇಹದ ಎನರ್ಜಿ ಉತ್ಪಾದನೆಗೂ ವಿಟಮಿನ್ ಬಿ12 ಬೇಕಿರೋದ್ರಿಂದ ಇದರ ಕೊರತೆಯು ಆಯಾಸ ಉಂಟು ಮಾಡುತ್ತದೆ. ವಿಟಮಿನ್ ಬಿ12 ಕೊರತೆಯು ನರಗಳ ಮೇಲೆ ಪರಿಣಾಮ ಬೀರೋದ್ರಿಂದ ಕಾಲಿನಲ್ಲಿ ಝಮ್ಮೆನಿಸುವಂತ ಅಥವಾ ಕಾಲುಗಳು ಮರಗಟ್ಟುವಂತೆ ಫೀಲ್ ಆಗುತ್ತದೆ. ಸ್ನಾಯುಗಳಲ್ಲಿ ಸೆಳೆತ ಕೂಡ ಆಗುತ್ತದೆ. ಈ ವಿಟಮಿನ್ ಕೊರತೆಯು ಜೀರ್ಣಾಂಗ ವ್ಯವಸ್ಥೆ ಮೇಲೂ ಎಫೆಕ್ಟ್ ಮಾಡುತ್ತದೆ.

ವಿಟಮಿನ್ ಬಿ12 ಅಧಿಕವಾಗಿರುವ ಆಹಾರ ಪದಾರ್ಥಗಳು

ವಯಸ್ಸು, ಲಿಂಗ ಮತ್ತು ಆರೋಗ್ಯಕ್ಕೆ ಅನುಗುಣವಾಗಿ ವಿಟಮಿನ್ ಬಿ12 ದೇಹಕ್ಕೆ ಬೇಕು. ವಯಸ್ಕರಿಗೆ ಪ್ರತಿದಿನ ಸಾಮಾನ್ಯವಾಗಿ 2.5 ಮೈಕ್ರೋ ಗ್ರಾಂನಷ್ಟು ವಿಟಮಿನ್ ಬಿ12 ಬೇಕು. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸ್ವಲ್ಪ ಹೆಚ್ಚು ಬೇಕಾಗುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗಿರುತ್ತದೆ. ಅಗತ್ಯತೆಗಿಂತಲೂ ಕಡಿಮೆ ಇದ್ರೂ ಹಲವು ಸಮಸ್ಯೆಗಳು ಕಾಡಿದ್ರೆ, ಅಗತ್ಯತೆಗಿಂತ ಹೆಚ್ಚಿದ್ದರೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ.
ವಿಟಮಿನ್ ಬಿ12 ಹೆಚ್ಚಾಗಿ ನಾನ್‌ವೆಜಿಟೇರಿನ್ ಪದಾರ್ಥಗಳಲ್ಲಿ ಸಿಗುತ್ತದೆ. ಕುರಿ, ಕೋಳಿ ಮಾಂಸದಲ್ಲಿ ಈ ವಿಟಮಿನ್ ಸಮೃದ್ಧವಾಗಿರುತ್ತದೆ. ಸೀ ಫುಡ್‌ನಲ್ಲಿಯೂ ವಿಟಮಿನ್ ಬಿ12 ಸಿಗುತ್ತದೆ. ಅದ್ರಲ್ಲೂ ಸಾಲ್ಮನ್ ಮೀನು ತಿನ್ನುವುದರಿಂದ ವಿಟಮಿನ್ ಬಿ12 ಪಡೆಯಬಹುದು. ಮೊಟ್ಟೆಯ ಹಳದಿ ಭಾಗ ಸೇವನೆಯಿಂದಲೂ ವಿಟಮಿನ್ ಬಿ12 ಸಿಗುತ್ತದೆ. ವೆಜಿಟೇರಿಯನ್ ಪ್ರಾಕ್ಟೀಸ್‌ಗೆ ಬರೋದಾದ್ರೆ ಹಾಲು, ಪನೀರ್, ಚೀಸ್, ಮೊಸರಿನಂತಹ ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಬಿ12 ಇರುತ್ತದೆ. ಇದರ ಜೊತೆಗೆ ಬದಾಮಿ ಹಾಲು, ಸೋಯಾ ಹಾಲು, ಓಟ್ ಹಾಲಿನಲ್ಲಿಯೂ ವಿಟಮಿನ್ ಬಿ12 ಇರುತ್ತದೆ.










