ಚೇಸ್ ಮಾಸ್ಟರ್, ಬೆಂಗಳೂರಿನ ದತ್ತು ಪುತ್ರ, ಕ್ರಿಕೆಟ್ ಲೋಕದ ದಿಗ್ಗಜರಲ್ಲಿ ಒಬ್ಬರಾದ ಕಿಂಗ್ ಕೊಹ್ಲಿಯ(Virat Kohli) ಎನರ್ಜಿ ನೋಡಿದರೆ ಎಂಥವರಿಗೂ ಶಾಕ್ ಆಗುತ್ತೆ. 36 ವರ್ಷದ ವಿರಾಟ್ ಕೊಹ್ಲಿ ಫಿಲ್ಡಿಂಗ್ ನಲ್ಲಿದ್ರೆ ಬೇರೆನೇ ಇಂಪ್ಯಾಕ್ಟ್ ಮಾಡ್ತಾರೆ. ಬ್ಯಾಟ್ ಹಿಡಿದು ವಿಕೇಟ್ ಮಧ್ಯ ಓಡುವ ಅವರ ವೇಗ ನೋಡಿ ಫ್ಯಾನ್ಸ್ ಅಚ್ಚರಿ ಪಡ್ತಾರೆ. ಅಷ್ಟೇ ಅಲ್ಲ ಎದುರಾಳಿ ತಂಡದ ಸದಸ್ಯರೂ ಫಿದಾ ಆಗ್ತಾರೆ. ಇಷ್ಟಕ್ಕೆಲ್ಲಾ ಕಾರಣ ಅವರ ಆರೋಗ್ಯಕರ ಜೀವನಶೈಲಿ. ಅದರಲ್ಲೂ ಅವರ ಆಹಾರ ಪದ್ಧತಿ.

ವಿರಾಟ್ ಕೊಹ್ಲಿ ಅವರು ಸಂದರ್ಶನಗಳಲ್ಲಿ ತಮ್ಮ ಆಹಾರ ಶೈಲಿ ಕುರಿತು ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಕೊಹ್ಲಿ ಕೂಡ ಜಂಕ್ ಫುಡ್ ತಿನ್ನುವುದರಿಂದ ಹೊರತಾಗಿರಲಿಲ್ಲ. ಆದರೆ ಒಮ್ಮೆ ಕನ್ನಡಿಯ ಮುಂದೆ ನಿಂತು ತಮ್ಮನ್ನು ತಾವು ನೋಡಿಕೊಂಡಾಗ ಅವರಿಗೆ ಅನಿಸಿದ್ದು “ಒಬ್ಬ ಕ್ರೀಡಾಪಟುವಾಗಿ ನಾನು ಹೀಗಿದ್ದರೆ ಸರಿ ಹೋಗಲ್ಲ, ಆಹಾರದ ಪದ್ಧತಿ, ಜೀವನಶೈಲಿ ಬದಲಿಸಿಕೊಳ್ಳಬೇಕು” ಎಂದು. ಅಂದಿನಿಂದ ಅವರು ಆರೋಗ್ಯಕರ ಆಹಾರ, ವ್ಯಾಯಾಮ, ಹೀಗೆ ಕ್ರೀಡೆಗಾಗಿ ತಮ್ಮ ಜೀವನಶೈಲಿಯನ್ನೇ ಬದಲಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರು ಡೀಪ್ ಫ್ರೈಡ್ ಆಹಾರವನ್ನು ತಿನ್ನುವುದು ತೀರಾ ಕಡಿಮೆ. ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ, ಅವರ ಆಹಾರವು 90% ಸ್ಟೀಮ್ ಅಥವಾ ಬೇಯಿಸಿದ್ದಾಗಿರುತ್ತದೆ ಎಂದು. ಅವರು ಸ್ಟೀಮ್ ಪದ್ಧತಿಯಲ್ಲಿ ಮಾಡಿದ ಆಹಾರ ಸೇವಿಸುವುದು ಯಾಕೆ? ಆ ಪದ್ಧತಿ ಯಾಕಷ್ಟು ವಿಶೇಷ? ಮುಂದೆ ನೋಡೊಣ.

ಸ್ಟೀಮ್ ಪದ್ಧತಿಯಲ್ಲಿ ಮಾಡಿದ ಆಹಾರದಲ್ಲಿ ಪೋಷಕಾಂಶಗಳು ಹಾಗೆಯೇ ಉಳಿಯುತ್ತದೆ. ಅದೇ ಫ್ರೈಡ್ ಪದ್ಧತಿಯಲ್ಲಿ ಕೆಲವೊಮ್ಮೆ ಅಗತ್ಯ ಪೋಷಕಾಂಶಗಳು ಹಾಳಾಗುತ್ತದೆ. ಉದಾಹರಣೆಗೆ ವಿಟಮಿನ್ ಸಿ. ವಿಟಮಿನ್ ಸಿ ಎಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತದ್ದು, ನಾವು ತಿನ್ನುವ ಆಹಾರದಲ್ಲಿ ಇಂಥಹ ಅಂಶವೇ ಇಲ್ಲವೆಂದರೇ ಏನು ಪ್ರಯೋಜನ?
ಸ್ಟೀಮ್ ಪದ್ಧತಿಯು ಕೊಲೆಸ್ಟ್ರಾಲ್ ನಿಂದ ಮುಕ್ತವಾಗಿರುತ್ತದೆ. ಇದರಲ್ಲಿ ಎಣ್ಣೆ ಬಳಕೆ ತುಂಬಾ ಕಡಿಮೆ. ಹೀಗಾಗಿ ಕ್ಯಾಲೋರಿಯೂ ಕಮ್ಮಿ ಇರುತ್ತದೆ.

ಸ್ಟೀಮ್ ಪದ್ಧತಿಯಲ್ಲಿ ತಯಾರಿಸಿದ ಆಹಾರ ಮೃದುವಾಗಿರುವುದರಿಂದ ಬೇಗ ಜೀರ್ಣ ಆಗುತ್ತೆ. ಕ್ರೀಡಾಪಟುಗಳಿಗೆ ಹೆಚ್ಚು ಪ್ರೋಟಿನ್ ಸೇವನೆ ಅಗತ್ಯ. ಹೀಗಾಗಿ ಅವರು ಹೆಚ್ಚು ತಿನ್ನಬೇಕು. ಜೀರ್ಣಕ್ರಿಯೆ ವ್ಯವಸ್ಥೆ ಚೆನ್ನಾಗಿದ್ದಷ್ಟೂ ಆರೋಗ್ಯ. ಆಯುರ್ವೇದ ಪ್ರಕಾರ, ಸ್ಟೀಮ್ ಆಹಾರ ಪದ್ಧತಿ “ಸಾತ್ವಿಕ” ಎಂದು ಪರಿಗಣಿಸಲಾಗಿದೆ.
Read this also : Weight loss; ನಿಮ್ಮ ಇಷ್ಟದ ಕೇಕ್, ಚಿಪ್ಸ್ ತಿಂದೇ ದೇಹದ ತೂಕ ಇಳಿಸಬಹುದು!
ಒಂದು medical trialನಲ್ಲಿ type 2 diabetes ಇರುವ ರೋಗಿಗಳಿಗೆ ಒಂದೇ ಆಹಾರವನ್ನ ಎರಡು ಬಾರಿ ಕೊಡುತ್ತಾರೆ. ಒಮ್ಮೆ ಹೆಚ್ಚು ತಾಪಮಾನದಲ್ಲಿ ತಯಾರಿಸಿದ್ದು, ಮತ್ತೊಮ್ಮೆ ಸ್ಟೀಮ್ ಪದ್ಧತಿಯಲ್ಲಿ ತಯಾರಿಸಿ ನೀಡಿರುತ್ತಾರೆ. ಫಲಿತಾಂಶದಲ್ಲಿ ಹೆಚ್ಚು ತಾಪಮಾಮದಲ್ಲಿ ತಯಾರಿಸಿದ ಆಹಾರ ತಿಂದಾಗ ರಕ್ತನಾಳದ ಕಾರ್ಯದಲ್ಲಿ ಕುಂಠಿತವಾಗಿದ್ದು ಕಂಡು ಬಂದಿದೆ. ಆದ್ದರಿಂದ ಸ್ಟೀಮ್ ಪದ್ಧತಿ ಆರೋಗ್ಯ ಎಂದು ತಿಳಿಯಬಹುದು.
ಹೀಗಾಗಿ ಕೇವಲ ಫೀಲ್ಡ್ನಲ್ಲಿ ವಿರಾಟ್ ಕೊಹ್ಲಿ ಅವರನ್ನ ಫಾಲೋ ಮಾಡಬೇಡಿ. ಅವರ ಜೀವನದಿಂದ ಇಂಥ ಒಳ್ಳೆ ವಿಚಾರಗಳನ್ನೂ ಅಳವಡಿಸಿಕೊಳ್ಳಿ.










