Chocolate; “ಚಾಕಲೇಟ್” ಮಕ್ಕಳಿಂದ ಹಿಡಿದು ದೊಡ್ಡೋರೂ ಇಷ್ಟ ಪಡುವ ತಿಂಡಿ. ಆದರೆ ಚಾಕಲೇಟ್ ತಿಂದರೆ ಆರೋಗ್ಯ ಹಾಳಾಗುತ್ತೆ ಎನ್ನುವ ಭಯವೂ ಇದೆ. ಆದರೆ ಈ ಲೇಖನದಲ್ಲಿ ಹೇಳಹೊರಟಿರುವ ಚಾಕಲೇಟ್ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅದರ ಬಗ್ಗೆ ತಿಳಿಯಲು ಸ್ಕ್ರೋಲ್ ಡೌನ್ ಮಾಡಿ ಸಂಪೂರ್ಣ ಲೇಖನ ಓದಿ.
ಆರೋಗ್ಯ ಹಾಳು ಮಾಡುವ ಚಾಕಲೇಟ್ ಒಂದು ಕಡೆ ಇದ್ದರೆ, ಬೇಕಾದಷ್ಟು ಆರೋಗ್ಯ ನೀಡುವ ಚಾಕಲೇಟ್ ಇನ್ನೊಂದೆಡೆ, ಅದೇ ಡಾರ್ಕ್ ಚಾಕಲೇಟ್.
ಡಾರ್ಕ್ ಚಾಕಲೇಟ್ ಎಂದರೆ ಅಧಿಕ ಪ್ರಮಾಣದ ಕೋಕೋ ಬೀನ್ಸ್ (Cocoa beans), ಕೋಕೋ ಬಟರ್ (Cocoa butter) ಸೇರಿಸಿ, ಕಡಿಮೆ ಪ್ರಮಾಣದ ಸಕ್ಕರೆ ಬಳಸಿ ತಯಾರಿಸಲಾಗುವ ಚಾಕಲೇಟ್. ಸಾಮಾನ್ಯ ಚಾಕಲೇಟ್ಗಳಿಗಿಂತ ಇದು ವಿಭಿನ್ನ. ಸಾಮಾನ್ಯ ಚಾಕಲೇಟ್ನಲ್ಲಿ ಹೆಚ್ಚು ಪ್ರಮಾಣದ ಸಕ್ಕರೆ ಹಾಗೂ ಹಾಲಿನ ಉತ್ಪನ್ನಗಳನ್ನು (Milk solids) ಸೇರಿಸಲಾಗುತ್ತದೆ. ಆದರೆ ಡಾರ್ಕ್ ಚಾಕಲೇಟ್ನಲ್ಲಿ ಮುಖ್ಯವಾಗಿ ಕೋಕೋ ಬೀನ್ಸ್ ಹೆಚ್ಚಿರುತ್ತದೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದಲೂ ಡಾರ್ಕ್ ಚಾಕಲೇಟ್ ಹೆಚ್ಚು ಉತ್ತಮವಾಗಿದೆ.

ಚಾಕಲೇಟ್ ತಯಾರಿಕೆಗೆ ಉಪಯೋಗಿಸುವ ಕೋಕೋ ಬೀನ್ಸ ಗಳು ನೈಸರ್ಗಿಕವಾಗಿರುವುದರಿಂದ ಇದರಲ್ಲಿ ನೈಸರ್ಗಿಕ ಆಂಟಿಆಕ್ಸಿಡೆಂಟ್ (Antioxidants) ಅಂಶಗಳು ಉತ್ತಮ ಪ್ರಮಾಣದಲ್ಲಿರುತ್ತವೆ. ಜೊತೆಗೆ ಮಿನರಲ್ಸ್ (Minerals) ಮತ್ತು ಫೈಬರ್ (Fiber) ಸಹ ಇದೆ. ಸಾಮಾನ್ಯ ಚಾಕಲೇಟ್ಗಳಲ್ಲಿ ಈ ಪೋಷಕ ಅಂಶಗಳು ಕಡಿಮೆಯಿರುತ್ತವೆ.
ಡಾರ್ಕ್ ಚಾಕಲೇಟ್ನಲ್ಲಿ ಕ್ಯಾಲೊರೀಸ್, ಕಾರ್ಬೊಹೈಡ್ರೇಟ್ಸ್, ಐರನ್, ಮ್ಯಾಗ್ನೀಶಿಯಂ, ಪೊಟ್ಯಾಸಿಯಂ, ಸತು (Zinc), ಕಾಪರ್, ಮ್ಯಾಂಗನೀಸ್ ಇರುತ್ತವೆ. ಡಾರ್ಕ್ ಚಾಕಲೇಟ್ನಲ್ಲಿರುವ ಪ್ರಮುಖ ಆಂಟಿಆಕ್ಸಿಡೆಂಟ್‌ಗಳೆಂದರೆ ಪಾಲಿಫೀನಾಲ್ಸ್ (Polyphenols) ಮತ್ತು ಫ್ಲೇವನಾಯ್ಡ್ಸ್ (Flavonoids). ಈ ಎಲ್ಲಾ ಅಂಶಗಳು ದೇಹದಲ್ಲಿ ಶಕ್ತಿ ಉತ್ಪಾದನೆ, ಜೀರ್ಣಕ್ರಿಯೆ, ಸ್ನಾಯು ವೃದ್ಧಿ, ಹಿಮೋಗ್ಲೋಬಿನ್ ಉತ್ಪತ್ತಿ, ನರವ್ಯವಸ್ಥೆಯ ಸಮತೋಲನ ಮತ್ತು ಎಲುಬುಗಳ ಆರೋಗ್ಯಕ್ಕಾಗಿ ಅತೀ ಮುಖ್ಯ.
ಡಾರ್ಕ್ ಚಾಕಲೆಟ್‌ನ ಆರೋಗ್ಯ ಪ್ರಯೋಜನಗಳು:
ಡಾರ್ಕ್ ಚಾಕಲೇಟ್ ಸೇವನೆಯಿಂದ ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್ ಗಳು ಬಿಡುಗಡೆಯಾಗುತ್ತದೆ. ಎಂಡಾರ್ಫಿನ್ (Endorphin), ಸೆರೋಟೋನಿನ್ (Serotonin), ಡೊಪಮಿನ್ (Dopamine) ಎಂಬ ಹ್ಯಾಪಿ ಹಾರ್ಮೋನ್ಸ್ ಬಿಡುಗಡೆಯಾಗುತ್ತವೆ. ಇದರಿಂದ ಒತ್ತಡ ಕಮ್ಮಿಯಾಗುತ್ತದೆ.

ಡಾರ್ಕ್ ಚಾಕಲೇಟ್ ನಲ್ಲಿರುವ ಫ್ಲೇವನಾಯ್ಡ್ಸ್‌ಗಳು ನಮ್ಮ ನರಮಂಡಲ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ. ನೆನಪಿನ ಶಕ್ತಿಗೆ, ಮೆದುಳಿನ ಶಕ್ತಿಗೆ ಇದು ಸಹಕಾರಿಯಾಗುತ್ತದೆ.
ಡಾರ್ಕ್ ಚಾಕಲೇಟ್ ಮಧುಮೇಹ ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಒಂದು ಅಧ್ಯಯನದಲ್ಲಿ ಟೈಪ್ 2 ಡಯಾಬಿಟಿಸ್ ಇರುವ 60 ಮಂದಿಯ ಮೇಲೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 32 ಜನಕ್ಕೆ 8 ವಾರಗಳ ಕಾಲ ಪ್ರತಿನಿತ್ಯ 25 ಗ್ರಾಂ ಡಾರ್ಕ್ ಚಾಕಲೇಟ್ ತಿನ್ನಲು ಮತ್ತು ಉಳಿದ 28 ಜನರಿಗೆ ಮಾಮೂಲಿ ಚಾಕಲೇಟ್ ತಿನ್ನಲು ಹೇಳಲಾಗಿತ್ತು. ಸ್ವಲ್ಪ ದಿನಗಳ ನಂತರ ಡಾರ್ಕ್ ಚಾಕಲೇಟ್ ತಿಂದವರಲ್ಲಿ ಒಳ್ಳೆ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ, ಫಾಸ್ಟಿಂಗ್ ಬ್ಲಡ್ ಶುಗರ್ ಮತ್ತು ಬ್ಯಾಡ್ ಕೊಲೆಸ್ಟ್ರಾಲ್ ಕಮ್ಮಿಯಾಗಿರುವುದು ಫಲಿತಾಂಶದಲ್ಲಿ ಕಂಡುಬಂದಿತ್ತು.

ಡಾರ್ಕ್ ಚಾಕಲೇಟ್ಗಳಲ್ಲಿ ಕ್ಯಾಲೊರೀ ಪ್ರಮಾಣ ಕಡಿಮೆ ಇರುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಇದರಲ್ಲಿರುವ ಫ್ಲೇವನಾಯ್ಡ್ಸ್‌ಗಳು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಸಂಚಾರವೂ ಸುಧಾರಣೆಯಾಗುತ್ತದೆ. ಜೊತೆಗೆ ಥಿಯೋಬ್ರೊಮಿನ್ (Theobromine) ಅಂಶವು ಸಹ ಒಳ್ಳೆ ಕೊಲೆಸ್ಟ್ರಾಲ್ ಮಟ್ಟಕ್ಕೆ ಸಹಾಯ ಮಾಡುತ್ತದೆ
Read this also : Acidity; ಅಸಿಡಿಟಿಯಿಂದ ಎದೆಯುರಿ!? ಈ 4 ಮನೆಮದ್ದುಗಳನ್ನು ಟ್ರೈ ಮಾಡಿ!
ಬೆಸ್ಟ್ ಡಾರ್ಕ್ ಚಾಕಲೇಟ್ ಹೇಗೆ ಗುರುತಿಸುವುದು?
- ಕನಿಷ್ಠ 70% ಅಥವಾ ಹೆಚ್ಚಿನ ಪ್ರಮಾಣದ ಕೋಕೋ ಹೊಂದಿರುವ ಡಾರ್ಕ್ ಚಾಕಲೇಟ್ ಆಯ್ಕೆ ಮಾಡಿ.
- ರಿಫೈನ್ಡ್ ಶುಗರ್ ತಪ್ಪಿಸಿ. ಬೆಲ್ಲ, ಕೊಕೋನಟ್ ಶುಗರ್, ಮೇಪಲ್ ಸಿರಪ್ ಬಳಸಿ ತಯಾರಿಸಿದ ನೈಸರ್ಗಿಕ ಡಾರ್ಕ್ ಚಾಕಲೇಟ್ಗಳನ್ನು ಆಯ್ಕೆ ಮಾಡಿ
ಯಾವುದೇ ಚಾಕಲೇಟ್ ಇದ್ದರೂ ಇತಿಮಿತಿಯಲ್ಲಿ ತಿನ್ನುವುದು ಉತ್ತಮ.
Disclaimer: Always consult a doctor before changing your diet, exercise or treatment. This is for educational purpose not diagnosis or treatment.










