• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Turmeric; ಅರಿಶಿನದಲ್ಲಿದೆ ಅನೇಕ‌ ಆರೋಗ್ಯ! ಆದ್ರೆ ಸರಿಯಾಗಿ ಬಳಸದಿದ್ರೆ No use!

April 1, 2025
in GSS Maadhyama, Health and Wellness
Reading Time: 2 mins read
A A
0
130
VIEWS

ಅರಿಶಿನ (Turmeric) ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಶತಮಾನಗಳಿಂದ ಬಳಸಲಾಗುತ್ತಿದೆ. ಇದನ್ನು ಅಡುಗೆ (cooking), ಸೌಂದರ್ಯವರ್ಧಕ (cosmetics) ಮತ್ತು ಆಯುರ್ವೇದ (Ayurveda) ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಅರಿಶಿನವು ಕೇವಲ ಒಂದು ಮಸಾಲ ಪದಾರ್ಥ ಮಾತ್ರವಲ್ಲದೆ, ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ. ಆದರೆ ಅದನ್ನು  ಸರಿಯಾಗಿ ಬಳಸಿದಾಗ ಮಾತ್ರ ಅದರ ಲಾಭ ಪಡೆಯಬಹುದು. ಅರಿಶಿನವನ್ನು ಸರಿಯಾಗಿ ಹೇಗೆ ಸೇವನೆ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಅರಿಶಿನದಲ್ಲಿ curcumin ಎಂಬ ಆಕ್ಟೀವ್ ಕಂಪೌಂಡ್ ಇದೆ. ಇದರಿಂದಲೇ ಅರಿಶಿನ ಹಳದಿ ಬಣ್ಣದಿಂದ (yellow color) ಕೂಡಿದೆ. ಇದು ಅರಿಶಿನಕ್ಕೆ ಬಣ್ಣ ಕೊಡುವುದು ಮಾತ್ರವಲ್ಲದೇ ಇದರಲ್ಲಿ ಆಂಟಿ-ಆಕ್ಸಿಡೆಂಟ್ (antioxidant), ಆಂಟಿ-ಇನ್ಫ್ಲಮೇಟರಿ (anti-inflammatory) ಮತ್ತು ಕ್ಯಾನ್ಸರ್ ಪ್ರತಿಕೂಲ (anti-cancer) ಗುಣಗಳಿವೆ. ಅರಿಶಿನವು ದೇಹಕ್ಕೆ ಆರೋಗ್ಯ ರಕ್ಷಕದಂತೆ ಕೆಲಸ ಮಾಡುತ್ತದೆ. ಇದು ಸಂಧಿವಾತ ನಿವಾರಣೆಗೆ, ಇನ್ಫ್ಲಮೇಶನ್ ನಿಯಂತ್ರಣ ಮತ್ತು ಲಿವರ್, ಮೆದುಳು, ಹೃದಯ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಜೊತೆಗೆ, ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದನ್ನೂ ಮಾಡುತ್ತೆ. ಆದರೆ, ಇದನ್ನು ಸರಿಯಾಗಿ ಬಳಕೆ ಮಾಡದಿದ್ದರೆ, ಅದರ ಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ.

ಹಾಗಾದರೆ ಅರಿಶಿನವನ್ನು ಹೇಗೆ ಬಳಸುವುದು?

Curcumin ಅಂಶವು fat-soluble. ಅಂದರೆ ಇದು ನೀರಿಗಿಂತ ಕೊಬ್ಬಿನಲ್ಲಿ (fat) ಸುಲಭವಾಗಿ ಕರಗುತ್ತದೆ. ಹೀಗಾಗಿಯೇ ಅರಿಶಿನವನ್ನು ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ಅಷ್ಟಾಗಿ ಪ್ರಯೋಜನ ಸಿಗುವುದಿಲ್ಲ.

1. ಒಗ್ಗರಣೆಯಲ್ಲಿ

ಅಡುಗೆಯಲ್ಲಿ ಅರಿಶಿನವನ್ನು ಪುಡಿ ರೂಪದಲ್ಲಿ ಅಥವಾ ಹಸಿ ಅರಿಶಿನವನ್ನು ತುರಿದ ರೂಪದಲ್ಲಿ ಬಳಸಲಾಗುತ್ತದೆ. ಅಡುಗೆ ಮಾಡುವಾಗ ಉದಾಹರಣೆಗೆ ಪಲ್ಯ ಮಾಡುವಾಗ ಮೊದಲು ಒಗ್ಗರಣೆ ಕೊಟ್ಟು, ಬೇರೆ ಎಲ್ಲಾ ಮಸಾಲೆಗಳನ್ನು ಹಾಕಿ ಮುಖ್ಯವಾದ ತರಕಾರಿ ಹಾಕುವ 10 ಸೆಕೆಂಡುಗಳ ಮುಂಚೆ ಅರಿಶಿನ ಹಾಕಿ. ಇದರಿಂದ ಅರಿಶಿನದಲ್ಲಿರುವ curcumin ಎಣ್ಣೆಯಲ್ಲಿ ಸರಿಯಾಗಿ ಕರಗುತ್ತೆ. ನಂತರ ತರಕಾರಿ ಹಾಕಿ ಪಲ್ಯ ಸಿದ್ಧಪಡಿಸಿ. ಹೀಗೆ ಮಾಡಿದಾಗ ಅರಿಶಿನದಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಕೆಲವರು ತರಕಾರಿ ಹಾಕಿದ ನಂತರ ಅರಿಶಿನ ಹಾಕುತ್ತಾರೆ, ಇದರಿಂದ ಬಣ್ಣ ಸಿಗಬಹುದೇ ಹೊರತು ಆರೋಗ್ಯದ ಲಾಭ ಹೆಚ್ಚಿಗೆ ಸಿಗುವುದಿಲ್ಲ.

Read this also : Premature Aging; ನಿಮ್ಮ ಚರ್ಮ ಬೇಗ ಸುಕ್ಕುಗಟ್ಟುತ್ತಿದ್ಯಾ? ತಪ್ಪಿಸಲು ಇವುಗಳನ್ನ ತಿನ್ನಿ!

2.  ಅರಿಶಿನದ ಹಾಲು

ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ curcumin ಲಾಭ ಪಡೆಯಬಹುದು. ಏಕೆಂದರೆ ಹಾಲು ಪ್ರಾಕೃತಿಕವಾಗಿ ಕೊಬ್ಬನ್ನು  ಹೊಂದಿದೆ. ಕೊಬ್ಬಿನಲ್ಲಿ curcumin ಅಂಶ ಸರಿಯಾಗಿ‌ ಹೀರಿಕೊಳ್ಳುತ್ತದೆ. ಒಂದು ವೇಳೆ ಅರಿಶಿನದ ನೀರನ್ನು ಕುಡಿಯುವ ಅಭ್ಯಾಸವಿದ್ದರೆ, ಅದನ್ನು ತಯಾರಿಸುವಾಗ ಒಂದು ಹನಿಯಷ್ಟು ಎಣ್ಣೆ (Edible oil) ಹಾಕಿ ಕುಡಿದರೆ ಪ್ರಯೋಜನ.

3. ಕರಿ ಮೆಣಸಿನ ಮ್ಯಾಜಿಕ್

ಅರಿಶಿನದಲ್ಲಿರುವ curcuminನ ಹೆಚ್ಚು ಪ್ರಯೋಜನ ಪಡೆಯಲು ಅದರೊಂದಿಗೆ ಕರಿಮೆಣಸಿನ ಪುಡಿಯನ್ನು ಬಳಸಬೇಕು. ಮೆಣಸಿನಲ್ಲಿ Piperine ಎಂಬ ಆಲ್ಕಲಾಯ್ಡ್ (alkaloid) ಅಂಶವಿದೆ. ಇದು curcumin ಹೀರಿಕೊಳ್ಳುವಿಕೆಯನ್ನು 2000% ವರೆಗೆ ಹೆಚ್ಚಿಸುತ್ತದೆ. ಆದ್ದರಿಂದ ನೀವು ಅರಿಶಿನವನ್ನು ಬಳಸಿದಾಗ ಅದರ ಜೊತೆಗೆ ಒಂದು ಚಿಟಿಕೆ ಕಾಳು ಮೆಣಸು ಪುಡಿ ಸೇರಿಸಿ. ಸಾಮಾನ್ಯವಾಗಿ ಒಗ್ಗರಣೆ ಕೊಡುವಾಗ ಅಗತ್ಯವಿಲ್ಲ. ಏಕೆಂದರೆ ಒಗ್ಗರಣೆಗೆ ಎಣ್ಣೆ ಉಪಯೋಗಿಸಲಾಗಿರುತ್ತದೆ. ಹಾಲಿನೊಂದಿಗೆ ಅರಿಶಿನ‌ ಬೆರೆಸಿ ಕುಡಿಯುವಾಗ ಮೆಣಸಿನ‌ ಪುಡಿ ಬಳಸಬಹುದು.

4. ಅರಿಶಿನದ ಉಪ್ಪಿನಕಾಯಿ

ಈಗ ಹೇಗಿದ್ದರೂ ಬೇಸಿಗೆ ಕಾಲ. ಈ ಸಮಯ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಕೆಗೆ ಹೇಳಿಮಾಡಿಸಿದೆ. ನೀವೂ ಉಪ್ಪಿನಕಾಯಿ ತಯಾರಿಸುವ ಯೋಚನೆಯಲ್ಲಿದ್ದರೆ ಅರಿಶಿನದ ಉಪ್ಪಿನಕಾಯಿ ತಯಾರಿಸಿ ನೋಡಿ! ಹಸಿ ಅರಿಶಿನವು ನೋಡಲು ಶುಂಠಿ ರೀತಿಯೇ ಇರುತ್ತದೆ,‌ ಅದನ್ನು ಸಣ್ಣದಾಗಿ ಕತ್ತರಿಸಿ ಉಪ್ಪಿನಕಾಯಿ ಹಾಕಿದರೆ ರುಚಿಯೂ ಹೌದು, ಅರಿಶಿನದ ಲಾಭವೂ ಸಿಗುವುದು.

Tags: turmericturmeric benefits
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.