• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

ಮಕ್ಕಳ ಮೆದುಳಿನ ಸಾಮರ್ಥ್ಯವನ್ನ ವೃದ್ದಿಸುತ್ತೇ  ಓದಿನ ಹವ್ಯಾಸ..!

November 28, 2023
in GSS Maadhyama, General
Reading Time: 2 mins read
A A
0
hobby of reading
142
VIEWS

ಈಗಿನ ಮಕ್ಕಳು ಸಾಮಾನ್ಯವಾಗಿ ಮೊಬೈಲ್ ಗೇಮ್ಸ್, ಟಿವಿ ಲೋಕದಲ್ಲೇ ಮುಳುಗಿ ಹೋಗ್ತಿದ್ದಾರೆ.  ಮೊಬೈಲ್ನೊಂದಿಗೆ ಆಟ, ಮೊಬೈಲ್ನೊಂದಿಗೆ ಊಟ, ಮೊಬೈಲ್ನೊಂದಿಗೆ ಫ್ರೆಂಡ್ಶಿಪ್ ಮಾಡಿಕೊಂಡಿರೋ ಮಕ್ಕಳಿಗೆ ವಾಸ್ತಕ ಜಗತ್ತಿನ ಪರಿಜ್ಞಾನವೇ ಇಲ್ಲದಂತಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣವೆಂದ್ರೆ ಮಕ್ಕಳಲ್ಲಿ ಕುಸಿಯುತ್ತಿರೋ ಓದಿನ ಹವ್ಯಾಸ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಓದಿನ ಹವ್ಯಾಸ ತೀವ್ರವಾಗಿ ಕುಸಿದಿದೆ.  ಹೀಗಾಗಿಯೇ ಮಕ್ಕಳು ಅನೇಕ ರೀತಿಯ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. 

ಅಟ್ಲಂಟಾದ ಬ್ರೈನ್ ಕನೆಕ್ಟಿವಿಟಿ ನಿಯತಕಾಲಿಕದಲ್ಲಿ ಈ ಕುರಿತು ಗಮನ ಸೆಳೆಯುವ ಸಂಶೋಧನೆ ವರದಿಯೊಂದು ಪ್ರಕಟವಾಗಿದೆ.  ಅದರ ಪ್ರಕಾರ ಓದು ಮಕ್ಕಳ ವಿಷನ್, ಕಲ್ಪನಾ ಶಕ್ತಿ ಮತ್ತು ಭಾಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತೇ. ಇದಕ್ಕಾಗಿ ಸುಪ್ರಸಿದ್ಧ ಲೇಖಕರ ಪುಸ್ತಕಗಳನ್ನೇ ಓದಬೇಕೆಂದಿಲ್ಲ. ಲೈಬ್ರೆರಿಯಲ್ಲಿ ಸಿಗೋ  ಮಕ್ಕಳ ಪುಸ್ತಕ, ಕಾಮಿಕ್ಸ್ ಕೂಡ ಸಾಕು ಎನ್ನುತ್ತಾರೆ ಮನೋವೈದ್ಯ  ಡಾ. ಜಾರ್ಜ್ ಬೆಮ್ಸ್.   ಓದು ಮೆದುಳಿನ ನರವ್ಯೂಹವನ್ನ ಪುನರ್ ರಚಿಸುತ್ತೇ. ಹೀಗಾಗಿ ಮಕ್ಕಳ ಓದು ಅವರ ಮೆದುಳಿನ ಸಾಮರ್ಥ್ಯದಲ್ಲಿ ನಿರ್ಣಾಯಕವಾಗಿರುತ್ತದೆ  ಅಂತಾ ಮನೋವೈದ್ಯ  ಡಾ. ಜಾರ್ಜ್ ಬೆಮ್ಸ್ ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ : ವಿಚಿತ್ರವಾಗಿರೋ ಕಾನ್ವೊಕೇಶನ್ ಡೇ ಉಡುಗೆಯ ಇತಿಹಾಸ ಗೊತ್ತಾ..?!

ಇನ್ನ ಮಕ್ಕಳಲ್ಲಿ ಓದಿನ ಹವ್ಯಾಸವನ್ನ ಹೇಗೆ ಬೆಳೆಸಬೇಕು ಅನ್ನೋ ಪ್ರಶ್ನೆ ಏಳುವುದು ಸಹಜ. ಮಕ್ಕಳು ರಾತ್ರಿ ನಿದ್ದೆ ಮಾಡೋ ಸಮಯದಲ್ಲಿ ಅಜ್ಜ-ಅಜ್ಜಿ ಅಥವಾ ತಂದೆ-ತಾಯಿ ಹೇಳೋ ಕಥೆಯನ್ನ ಕೇಳುತ್ತಾ ಹಾಗೆಯೇ ನಿದ್ರೆ ಮಾಡುವ ಪ್ರಸಂಗ ಎಲ್ಲರ ಬದುಕಿನಲ್ಲೂ ನಡೆದಿರುತ್ತೇ. ಇದರಷ್ಟು ಮಕ್ಕಳನ್ನ ಓದಿಗೆ ಉತ್ತೇಜಿಸಲು ಉತ್ತಮ ಉಪಾಯ ಮತ್ತೊಂದಿಲ್ಲ. ಮಕ್ಕಳು ಕಥೆಯನ್ನ ಇಷ್ಟ ಪಡುವುದಷ್ಟೇ ಅಲ್ಲ, ಅವರ ನಿದ್ರೆಗೂ ಇದು ಸಹಾಯ ಮಾಡುತ್ತೆ. ಜೊತೆಗೆ ಪಾಲಕರು ಮತ್ತು ಮಕ್ಕಳ ನಡುವಿನ ಉತ್ತಮ ಬಾಂಧವ್ಯಕ್ಕೆ ಇದು ಮುನ್ನುಡಿ ಬರೆಯುತ್ತೆ. ಅದಕ್ಕಾಗಿ ಮನೆಯಲ್ಲೂ ಒಂದು ಚಿಕ್ಕ ಲೈಬ್ರೆರಿ ಮಾಡಿಕೊಂಡು, ದಿನ ರಾತ್ರಿ ಒಂದೊಂದು ಪುಸ್ತಕದಲ್ಲಿರೋ ಕಥೆಯನ್ನ ಹೇಳುತ್ತಾ ಹೋಗಬೇಕು. ಆಗ ಮಗು ಬೆಳೆಯುತ್ತಿದ್ದಂತೆ ಪುಸ್ತಕದ ಬಗ್ಗೆ ಮೊದಲು ಕುತೂಹಲ, ಬಳಿಕ ಪ್ರೀತಿ ಹುಟ್ಟಲು ಆರಂಭವಾಗುತ್ತೆ. ಪುಸ್ತಕಗಳ ಮೇಲಿನ ಪ್ರೀತಿ ನಿಧಾನವಾಗಿ ಮಕ್ಕಳಲ್ಲಿ ಓದಿನ ಹವ್ಯಾಸವನ್ನ ಹೆಚ್ಚಿಸುತ್ತೇ..

ಇನ್ನ ಈಗಂತೂ ಬಣ್ಣ ಬಣ್ಣಗಳ ಮಕ್ಕಳ ಪುಸ್ತಕ, ನವಿರಾಗಿ ನಿರೂಪಿಸಿದ ಕಥೆ, ಅದಕ್ಕೆ ತಕ್ಕ ಚಿತ್ರಗಳು ಸೇರಿರುವ ಕಾಮಿಕ್ಸ್ ಸೇರಿದಂತೆ ಹಲವು ಮಕ್ಕಳ ಪುಸ್ತಕಗಳು ಸಿಗುತ್ತವೆ. ಇನ್ನ ತೀರಾ ಚಿಕ್ಕ ಮಕ್ಕಳಿಗಾದರೆ ಬಣ್ಣದ ಲೋಕವನ್ನೇ ತೆರೆದಿಡುವ ಅವರ ಆಶಯಕ್ಕೆ ತಕ್ಕುದಾದ ಪುಸ್ತಕಗಳು ಸಿಗುತ್ತವೆ. ಅನೇಕ ಪುಸ್ತಕಗಳು ವಾಟರ್ಪ್ರೂಫ್ ಆಗಿದ್ದು, ಸ್ನಾನದ ಕೋಣೆಯಲ್ಲಿಯೂ  ಓದಬಹುದಾಗಿದೆ.  ನಾಲ್ಕು ವರ್ಷದಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಈ ಪುಸ್ತಕಗಳ ಮೂಲಕ ಓದಿನ ಹವ್ಯಾಸ ಬೆಳೆಸುವುದು ಸುಲಭ. ಇಲ್ಲಿ ಯಾವ ಕಥೆ ಎನ್ನುವುದು ಮುಖ್ಯವಾಗುವುದಿಲ್ಲ. ಭಾರತದ ಮಟ್ಟಿಗೆ ಅತ್ಯದ್ಭುತ ಚಿತ್ರ ಮತ್ತು ನಿರೂಪಣೆಯಿರುವ ಪುರಾಣ ಕಥೆಗಳು, ಇಲ್ಲವೇ ಸಮಕಾಲೀನ ಕಥೆಗಳನ್ನ ಮಕ್ಕಳಿಗೆ ನೀಡಬಹುದು. ಮಕ್ಕಳಿಗೆ ಓದಿನ ಇಷ್ಟವನ್ನು ಹೆಚ್ಚಿಸುವ ಯಾವುದೇ ಪುಸ್ತಕವನ್ನು ನೀಡಿ, ಆ ಮೂಲಕ ಅವರಲ್ಲಿ ಹವ್ಯಾಸ ಬೆಳೆಸಬೇಕು ಎನ್ನುತ್ತಾರೆ ಶಿಕ್ಷಣ ತಜ್ಞರು. ಹೀಗೆ ಒಮ್ಮೆ ಓದು ಆರಂಭವಾದರೆ ಆಮೇಲೆ ಅದು ಹವ್ಯಾಸವಾಗಿ ಮಾರ್ಪಡುತ್ತದೆ. ಸಾಧ್ಯವಾದರೆ ಮಕ್ಕಳನ್ನು ಪುಸ್ತಕ ಮಳಿಗೆಗೆ ಕರೆದುಕೊಂಡು ಹೋಗಿ. ಅಲ್ಲಿ ಅವರಿಗೆ ಯಾವ ಪುಸ್ತಕ ಇಷ್ಟವಾಗುತ್ತೆ ಅಂತಾ ತಿಳಿದುಕೊಂಡು ಅದನ್ನೇ ಗಿಫ್ಟ್ ಆಗಿ ಕೊಡಿ. ಸಾಮಾನ್ಯವಾಗಿ ಮಕ್ಕಳಿಗೆ ಉಡುಗೊರೆ ಮೇಲೆ ತುಂಬಾ ಪ್ರೀತಿ ಇರುತ್ತೇ. ಹೀಗಾಗಿ ಅವರು ಅದನ್ನು ಇಷ್ಟಪಟ್ಟು ಓದಲು ಆರಂಭಿಸುತ್ತಾರೆ. ಓದಿನಿಂದ ಜ್ಞಾನದ ಜೊತೆಗೆ  ಮೆದುಳು ಚುರುಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ : ನಿದ್ರೆಯನ್ನ ನಿರ್ಲಕ್ಷ್ಯ ಮಾಡಿದ್ರೆ ಕಾದಿದೆ ಅಪಾಯ..!

“ಪುಸ್ತಕಗಳಿಲ್ಲದ ಮನೆಯು ಆತ್ಮವಿಲ್ಲದ ದೇಹದಂತೆ” ಎಂಬ ಪ್ರಸಿದ್ಧ ಮಾತು ಪುಸ್ತಕಗಳ ಮಹತ್ವ ಮತ್ತು ಪುಸ್ತಕ ಓದುವಿಕೆಯ ಮಹತ್ವವನ್ನ ಸಾರುತ್ತೇ. ಇನ್ನ ಖ್ಯಾತ  ಲೇಖಕ  ಸೋಮರ್ಸೆಟ್ ಮೌಘಮ್ ಹೇಳೋ ಹಾಗೇ “ಓದುವ ಅಭ್ಯಾಸವನ್ನ ಇಟ್ಟುಕೊಳ್ಳೋದು ಅಂದ್ರೆ,  ಜೀವನದ ಬಹುತೇಕ ಎಲ್ಲಾ ದುಃಖಗಳಿಂದ ನಿಮಗಾಗಿ ನೀವೇ ಆಶ್ರಯವನ್ನ ನಿರ್ಮಿಸಿಕೊಳ್ಳೋದು ಅಂತಾ ಅರ್ಥ”.  ಒಟ್ಟಾರೆಯಾಗಿ  ಓದಿನ ಹವ್ಯಾಸ ಕುಸಿಯುತ್ತಿರೋದ್ರಿಂದಲೇ ನಮ್ಮ ಸಮಾಜದೊಳಗಿನ ಸೂಕ್ಷ್ಮತೆಯೂ ನಾಶವಾಗುತ್ತಿದೆ. ಮನುಷ್ಯ ಮನುಷ್ಯನನ್ನ ಅರ್ಥ ಮಾಡಿಕೊಳ್ಳೋಕೆ ಅಥವಾ ನಮ್ಮನ್ನ ನಾವು ಹೆಚ್ಚು ಅರ್ಥ ಮಾಡಿಕೊಳ್ಳೊಕೆ ಓದಿ ಹೆಚ್ಚು ಉಪಯುಕ್ತ. ಹೀಗಾಗಿ ನಾವು ಓದೋಣ, ನಮ್ಮ ಮಕ್ಕಳಲ್ಲಿಯೂ ಓದಿನ ಹವ್ಯಾಸವನ್ನ ಬೆಳೆಸೋಣ

ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.