ಲಿಪ್ಸ್ಟಿಕ್ ಯಾವ ಮಹಿಳೆ ಬಳಸೋದಿಲ್ಲಾ ಹೇಳಿ. ಇತ್ತೀಚಿನ ದಿನಗಳಲ್ಲಂತೂ ಲಿಪ್ಸ್ಟಿಕ್ ಅನ್ನೋದು ಮಹಿಳೆಯರ ಮೆಚ್ಚಿನ ಸೌಂದರ್ಯವರ್ಧಕ ಉತ್ಪನ್ನವಾಗಿದೆ. ಆದ್ರೆ ಈ ಲಿಪ್ಸ್ಟಿಕ್ ಅನ್ನೋ ಸೌಂದರ್ಯವರ್ಧಕಕ್ಕೆ ಸಾವಿರಾರೂ ವರ್ಷಗಳ ಇತಿಹಾಸ ಇದೆ. ಲಿಪ್ಸ್ಟಿಕ್ ಅನ್ನು 5000 ವರ್ಷಗಳ ಹಿಂದೆ ಮೊಸಪೊಟೋಮಿಯಾ ನಾಗರಿಕತೆಯಲ್ಲಿ ಬಳಸಲಾಗ್ತಿತ್ತು. ಅದೇ ರೀತಿ ಪುರಾತನ ಗ್ರೀಕ್ ನಲ್ಲೂ ಲಿಪ್ಸ್ಟಿಕ್ ಬಳಸಲಾಗ್ತಿತ್ತು ಅನ್ನೋದಕ್ಕೆ ಅನೇಕ ಪುರಾವೆಗಳು ಸಿಕ್ಕಿವೆ.

ಪ್ರಾಚೀನ ಗ್ರೀಕ್ನಲ್ಲಿ ಲಿಪ್ಸ್ಟಿಕ್ ಅನ್ನ ಕುರಿಗಳ ಬೆವರು, ಮೊಸಳೆಯ ಮಾಂಸದಂತ ವಿಚಿತ್ರ ಪದಾರ್ಥಗಳನ್ನ ಬಳಸಿ ಮಾಡಲಾಗ್ತಿತ್ತು. ಅದೇ ರೀತಿ ಪ್ರಾಚೀನ ಈಜಿಪ್ಟ್ನಲ್ಲಿ ಕೆಲ ಕೀಟಗಳನ್ನು ಕುಟ್ಟಿ ಅದನ್ನು ಲಿಪ್ಸ್ಟಿಕ್ ಆಗಿ ಬಳಸುತ್ತಿದ್ರು. ಇನ್ನೊಂದೆಡೆ ರೋಮನ್ ಸಾಮ್ರಾಜ್ಯದಲ್ಲಿ ಲಿಪ್ಸ್ಟಿಕ್ ಅನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಬಳಸುತ್ತಿದ್ರು. ಆಗ ಲಿಂಗಕ್ಕಿಂತ ಹೆಚ್ಚಾಗಿ ಸಾಮಾಜಿಕ ವರ್ಗವನ್ನು ನಿರ್ಧರಿಸಲು ಲಿಪ್ಸ್ಟಿಕ್ ಅನ್ನ ಬಳಸಲಾಗುತ್ತಿತ್ತು. ಇನ್ನ ಪ್ರಾಚೀನ ಕಾಲದಲ್ಲಿ ನೈಸರ್ಗಿಕವಾಗಿ ಸಿಗೋ ವಸ್ತುಗಳನ್ನೇ ಬಳಸಿಕೊಂಡು ಲಿಪ್ಸ್ಟಿಕ್ ತಯಾರಿಸುತಿದ್ರು. ಹೀಗಾಗಿ ಆಗಿನ ಕಾಲದ ಲಿಪ್ಸ್ಟಿಕ್ ಗಳಿಂದ ಯಾವುದೇ ಆರೋಗ್ಯ ಸಮಸ್ಯೆ ಬರ್ತಾ ಇರ್ಲಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಲಿಪ್ಸ್ಟಿಕ್ ತಯಾರಿಕೆ ಅನ್ನೋದು ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಹೀಗಾಗಿ ಜಗತ್ತಿನ ಅನೇಕ ಕಂಪನಿಗಳು ಲಾಭಗಳಿಸೋ ಉದ್ದೇಶದಿಂದ ರಾಸಾಯನಿಕಗಳನ್ನು ಬಳಸಿ ಲಿಪ್ಸ್ಟಿಕ್ ಮಾಡುತ್ತಿರೋದ್ರಿಂದ, ಅದು ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬಿರ್ತಿದೆ.
ಇದನ್ನೂ ಓದಿ : ಪುರುಷರಲ್ಲಿ ಕುಗ್ಗುತ್ತಿದೆ ಸಂತಾನೋತ್ಪತ್ತಿ ಶಕ್ತಿ ; ಏನಿದಕ್ಕೆ ಕಾರಣ..!
ಪ್ರತಿ ಮಹಿಳೆಯ ತುಟಿಗಳಿಗೆ ಲಿಪ್ಸ್ಟಿಕ್ ಸೇರಿಸಿದಾಗ ಆಕರ್ಷಕವಾಗಿ ಕಾಣುತ್ತಾಳೆ, ಲಿಪ್ಸ್ಟಿಕ್ ಗಳು ಅವಳ ವ್ಯಕ್ತಿತ್ವಕ್ಕೆ ಗ್ಲಾಮರ್ ಸ್ಪರ್ಶವನ್ನ ನೀಡುತ್ತವೆಯಾದರೂ, ಅವುಗಳಿಂದ ಸಾಕಷ್ಟು ಅಡ್ಡಪರಿಣಾಮಗಳಿವೆ. ನಾವು ಪ್ರತಿದಿನ ಬಳಕೆ ಮಾಡೋ ಲಿಪ್ಸ್ಟಿಕ್ ನಲ್ಲಿರೋ ಥಾಲೇಟ್ಸ್ ಎಂಬ ರಾಸಾಯನಿಕ ಮಾನವನ ನರ ವ್ಯವಸ್ಥೆಯನ್ನು ಹಾಳು ಮಾಡೋದರ ಜೊತೆಗೆ ಸಂತಾನೋತ್ಪತ್ತಿ ಸಮಸ್ಯೆಗೂ ಕಾರಣವಾಗುತ್ತೇ. ಅದೇ ರೀತಿ ಲಿಪ್ಸ್ಟಿಕ್ ನಲ್ಲಿ ಇರೋ ಮ್ಯಾಂಗನೀಸ್, ಕ್ಯಾಡ್ಮಿಯಂ, ಕ್ರೋಮಿಯಂ ಮತ್ತು ಅಲ್ಯೂಮಿನಿಯಂ ನಮ್ಮ ದೇಹದಲ್ಲಿ ಸಂಗ್ರಹವಾದಾಗ ವಿಷತ್ವ ಉಂಟಾತ್ತೇ. ಇದ್ರಿಂದ ನಿಧಾನವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಲಿಪ್ಸ್ಟಿಕ್ ಗಳಲ್ಲಿ ಬಳಸೋ ಸಂರಕ್ಷಕಗಳು ಚರ್ಮದ ಸಮಸ್ಯೆಗಳು, ಉಬ್ಬಸ, ಕೆಮ್ಮು, ಕಣ್ಣಿನ ಸಮಸ್ಯೆಗಳು ಉಂಟು ಮಾಡೋದರ ಜೊತೆಗೆ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಎಲ್ಲಾ ಲಿಪ್ಸ್ಟಿಕ್ ಗಳು ಪೆಟ್ರೋಕೆಮಿಕಲ್ಸ್ ಗಳನ್ನ ಒಳಗೊಂಡಿರುತ್ವೇ. ಪೆಟ್ರೋಕೆಮಿಕಲ್ಸ್ ಅನ್ನೋದು ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲದ ಉಪ ಉತ್ಪನ್ನ ಆಗಿರೋದ್ರಿಂದ ಇದು ನಮ್ಮ ದೇಹವನ್ನ ಸೇರೋದ್ರಿಂದ ನಮ್ಮ ನರ ವ್ಯವಸ್ಥೆ ಹಾನಿಗೊಳಗಾಗುತ್ತೇ.. ಅದೇ ರೀತಿ ಹೆಚ್ಚಿನ ಲಿಪ್ಸ್ಟಿಕ್ ಗಳಲ್ಲಿ ಸಾಮಾನ್ಯ ಬಳಸೋ ರಾಸಾಯನಿಕ ಅಂದ್ರೆ ಲೆಡ್. ಇದು ಹಾರ್ಮೋನುಗಳಲ್ಲಿ ಅಸಮತೋಲನ ಉಂಟು ಮಾಡಿ, ಮಿದುಳಿನ ಹಾನಿ ಮಾಡುತ್ತೇ. ಲಿಪ್ಸ್ಟಿಕ್ ನಲ್ಲಿರುವ ಭಾರವಾದ ಲೋಹಗಳು ಅಂದ್ರೆ ಮ್ಯಾಂಗನೀಸ್, ಕ್ಯಾಡ್ಮಿಯಮ್, ಕ್ರೋಮಿಯಂ, ಸಿಸ್, ಅಲ್ಯೂಮಿನಿಯಂ ಲೋಹಗಳು, ಮೂತ್ರಪಿಂಡ ವೈಫಲ್ಯಗೆ ಕಾರಣವಾಗುತ್ತದೆ.

ಮುಖ್ಯವಾಗಿ ಗರ್ಭಿಣಿ ಮಹಿಳೆಯರು ರಾಸಾಯನಿಕ ಇರೋ ಲಿಪ್ಸ್ಟಿಕ್ ಗಳನ್ನ ಬಳಕೆ ಮಾಡದೇ ಇರೋದು ಒಳ್ಳೆಯದು. ಯಾಕೆಂದ್ರೆ ಲಿಪ್ಸ್ಟಿಕ್ ಳಲ್ಲಿರೋ ಅನೇಕ ರಾಸಾಯನಿಕಗಳು ಗರ್ಭದಲ್ಲಿರೋ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರೋ ಸಾಧ್ಯತೆ ಹೆಚ್ಚಿರುತ್ತೇ. ಮಗುವಿನ ಮೆದುಳು ಮತ್ತು ನರ ವ್ಯವಸ್ಥೆಯ ಬೆಳವಣಿಗೆಯ ಮೇಲೆ ಈ ಲಿಪ್ಸ್ಟಿಕ್ ನಲ್ಲಿರೋ ರಾಸಾಯನಿಕಗಳು ಪರಿಣಾಮ ಉಂಟು ಮಾಡುತ್ವೇ. ಹೀಗಾಗಿ ಗರ್ಭಿಣಿ ಮಹಿಳೆಯರು ರಾಸಾಯನಿಕ ಇರೋ ಲಿಪ್ಸ್ಟಿಕ್ ಗಳಿಂದ ದೂರವಿರೋದೆ ಒಳ್ಳೆದು.
ರಾಸಾಯನಿಕ ಇರೋ ಲಿಪ್ಸ್ಟಿಕ್ ಬಳಕೆ ಮಾಡೋದು ಅತ್ಯಂತ ಅಪಾಯಕಾರಿಯಾಗಿದೆ. ಆದ್ರೆ ಜಗತ್ತಿನ ದೊಡ್ಡದೊಡ್ಡ ಕಂಪನಿಗಳು ರಾಸಾಯನಿಕ ಬಳಸಿಕೊಂಡು ಲಿಪ್ಸ್ಟಿಕ್ ಮಾಡೋದ್ರಿಂದ ಅವುಗಳಿಂದ ದೂರವಿರೋದು ಬೆಸ್ಟ್. ಅದೇ ರೀತಿ ಮಾರುಕಟ್ಟೆಯಲ್ಲಿ ಸಿಗೋ ಕಡಿಮೆ ಬೆಲೆಯ ಲಿಪ್ಸ್ಟಿಕ್ ಗಳು ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಲಿಪ್ಸ್ಟಿಕ್, ರಾಸಾಯನಿಕ ಇಲ್ಲದ ಲಿಪ್ಸ್ಟಿಕ್, ಸಾವಯವ ಲಿಪ್ಸ್ಟಿಕ್ ಬಂದಿವೆ. ಅವುಗಳನ್ನ ಬಳಸೋದು ಉತ್ತಮ.
ಇದನ್ನೂ ಓದಿ : ವಿಚಿತ್ರವಾಗಿರೋ ಕಾನ್ವೊಕೇಶನ್ ಡೇ ಉಡುಗೆಯ ಇತಿಹಾಸ ಗೊತ್ತಾ..?!










