• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama General

ಮಲ್ಟಿವಿಟಮಿನ್ ಮಾತ್ರೆಗಳ ಕರಾಳ ಸತ್ಯ..!

December 27, 2023
in General
Reading Time: 2 mins read
A A
0
vitamin
135
VIEWS

ಇತ್ತೀಚಿನ ದಿನಗಳಲ್ಲಿ ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳೋರ ಸಂಖ್ಯೆ ಹೆಚ್ಚುತ್ತಲೇ ಇದೆ.  ಮಲ್ಟಿವಿಟಮಿನ್ ಮಾತ್ರೆಗಳು ತಗೋದ್ರಿಂದ ಆರೋಗ್ಯಯುತವಾಗಿ ಇರ್ಬೋದು ಅನ್ನೋದು ಅನೇಕರ ಲೆಕ್ಕಾಚಾರ.  ಯಾವುದೇ ವೈದ್ಯರ ಸಲಹೆಯಿಲ್ಲದೇ ಮಲ್ಟಿವಿಟಮಿನ್ ಮಾತ್ರೆಗಳನ್ನು ಸೇವಿಸೋರ ಸಂಖ್ಯೆಯೂ ಕಡಿಮೆ ಏನಿಲ್ಲ.  ವಿಟಮಿನ್ D, ವಿಟಮಿನ್ C, ವಿಟಮಿನ್ A, ವಿಟಮಿನ್ E ಹೀಗೆ ಎಲ್ಲ  ನ್ಯೂನತೆಗೂ ಒಂದೊಂದು ವಿಟಮಿನ್  ಮಾತ್ರೆ ಇದೆ.  ಈಗಂತೂ ಅಮೇಜಾನ್, ಪ್ಲಿಪ್ಕಾರ್ಟ್ನಂತ ಎಲ್ಲ ಆನ್ಲೈನ್ ವೆಬ್ಸೈಟ್ಗಳಲ್ಲಿ, ಮೆಡಿಕಲ್ ಶಾಪ್ಗಳಲ್ಲಿ, ಸಣ್ಣಪುಟ್ಟ ಕಿರಾಣಿ ಅಂಗಡಿಗಳಲ್ಲೂ ಈ ಮಲ್ಟಿವಿಟಮಿನ್  ಮಾತ್ರೆಗಳು ಸಿಗುತ್ವೇ. 

ಸದ್ಯ ಭಾರತದಲ್ಲಿ ಅನೇಕ ಕಂಪನಿಗಳು ಈ ಮಲ್ಟಿವಿಟಮಿನ್ ಮಾತ್ರೆಗಳನ್ನ ಮಾರಾಟ ಮಾಡ್ತಾ ಇವೆ. ಒದೊಂದು ಕಂಪನಿ ಒಂದೊಂದು ಭರವಸೆ ನೀಡೋ ಮೂಲಕ ಜನರನ್ನ ವಂಚಿಸ್ತಾ ಇದಾವೆ. ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಳೋದ್ರಿಂದ ದಪ್ಪ ಆಗ್ತಿರಿ, ಮಾಂಸಗಳಿವೆ ಶಕ್ತಿ ಬರುತ್ತೇ, ಸುಸ್ತು ಕಡಿಮೆಯಾಗುತ್ತೇ, ಕೂದಲು ಉದುರೋದಿಲ್ಲಾ, ಚರ್ಮಕಾಂತಿಯುತವಾಗುತ್ತೇ, ಬಿಳಿ ಕೂದಲು ಬೆಳೆಯೋದಿಲ್ಲಾ, ಗರ್ಭಿಣಿಯರಿಗೆ ಒಳ್ಳೆದು, ಮಂಡಿನೋವಿಗೆ ಒಳ್ಳೆದು, ಬೆನ್ನುನೋವಿಗೂ ಒಳ್ಳೆದು ಹೀಗೆ ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡ್ರೆ ಯಾವುದೇ ನ್ಯೂನತೆ ಇಲ್ದೆ ಆರೋಗ್ಯಕರವಾಗಿ ಇರ್ಬೋದು ಅಂತಾ ಪ್ರಚಾರ ಮಾಡಲಾಗ್ತಿದೆ. ಹಾಗಾದ್ರೆ ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡ್ರೆ ಯಾವುದೇ ನ್ಯೂನತೆ ಬರೋದಿಲ್ಲಾ, ಇದು ನಿಜಕ್ಕೂ ನಮ್ಮ ದೇಹಕ್ಕೆ ಒಳ್ಳೆಯದಾ..? ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡು ಆರೋಗ್ಯಕರವಾಗಿ ಬದುಕ್ಬೋದಾ..? ಕೋವಿಡ್ ನಂತ್ರ ಈ ಮಲ್ಟಿವಿಟಮಿನ್ ಮಾತ್ರೆಗಳ ಮಾರಾಟ ತೀವ್ರವಾಗಿ ಹೆಚ್ಚಾಗ್ತಾ ಇರೋದ್ಯಾಕೆ..? ಇದೆಲ್ಲದಕ್ಕೂ ಇಲ್ಲಿದೆ ಉತ್ತರ.

ಇದನ್ನೂ ಓದಿ : ಮಕ್ಕಳ ಮೆದುಳಿನ ಸಾಮರ್ಥ್ಯವನ್ನ ವೃದ್ದಿಸುತ್ತೇ ಓದಿನ ಹವ್ಯಾಸ..!

ಉದಾರೀಕರಣದಿಂದಾಗಿ  ಜಾಗತಿಕ ಮುಕ್ತ ವ್ಯಾಪಾರ ಅವಕಾಶ ಸಿಕ್ಕಿದ್ರಿಂದ ಆರೋಗ್ಯದ ಹೆಸರಿನಲ್ಲಿ  ಮಲ್ಟಿವಿಟಮಿನ್ ಮಾತ್ರೆಗಳ ವ್ಯಾಪಾರ  ದೊಡ್ಡದಾಗಿ ಬೆಳೆದಿದೆ.  ಮಲ್ಟಿವಿಟಮಿನ್ ಔಷಧಿ ಹಾಗೂ ಟಾನಿಕ್ಗಳು ನಮ್ಮ ದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗ್ತಾ ಇವೆ.  ಬಡೌದಾದ Low Cost Standard Therapeutics Study ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಪ್ರಮುಖ 25 ಮಲ್ಟಿವಿಟಮಿನ್ ಮಾತ್ರೆಗಳು ನಿಷ್ಪ್ರಯೋಜಕವಾಗಿವೆ. ಈ ಮಾತ್ರೆಗಳನ್ನು ಸೇವಿಸೋದ್ರಿಂದ ಯಾವುದೇ ಪರಿಣಾಮ ಉಂಟಾಗೋದಿಲ್ಲಾ ಎನ್ನಲಾಗಿದೆ. ಹೀಗಾಗಿಯೇ ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ, ಎನ್ಜೈಮ್ ಮಿಶ್ರಿತ ಮಲ್ಟಿವಿಟಮಿನ್ ಔಷಧಿಗಳು ಮತ್ತು ಆರೋಗ್ಯವರ್ಧಕ ಔಷಧಿಗಳು ಅಂದ್ರೆ Health enhancing medicines ಮೇಲೆ ನಿರ್ಬಂಧ ಹೇರಲಾಗಿದೆ. ಇನ್ನೊಂದೆಡೆ  ಬ್ರಿಟನ್ನಲ್ಲಿ ಮಲ್ಟಿವಿಟಮಿನ್ ಟಾನಿಕ್ಗಳನ್ನ ಔಷಧಿ ಎಂದು ಪರಿಗಣಿಸುವುದೇ ಇಲ್ಲ.  ವಿಶ್ವ ಆರೋಗ್ಯ ಸಂಸ್ಥೆನ ತಜ್ಞರ ಪ್ರಕಾರ, ವಿವಿಧ ಮಿಶ್ರಣಗಳನ್ನು ಒಳಗೊಂಡ  ಔಷಧಿಗಳನ್ನ ಅನಗತ್ಯ ಔಷಧ ಪಟ್ಟಿಯಲ್ಲಿ ಸೇರಿಸಲಾಗಿದೆ.  ಆದ್ರೆ ಭಾರತದಲ್ಲಿ ಬಹಳಷ್ಟು ಮಲ್ಟಿವಿಟಮಿನ್ ಟಾನಿಕ್ಗಳನ್ನ ಜಾಹೀರಾತಿನ ಮೂಲಕವೇ ಮಾರಲಾಗ್ತಿದೆ. ಇದಕ್ಕಾಗಿ ಸೆಲೆಬ್ರಿಟಿಗಳು, ವೈದ್ಯರನ್ನ ಬಳಸಿಕೊಳ್ಳಲಾಗ್ತಿದೆ. Journal of Post Graduate Medicine ನಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ಪ್ರಕಾರ,  ವೈದ್ಯರು ಬರೆದುಕೊಡುವ ಶೇಕಡಾ 80ರಷ್ಟು ಪ್ರಿಸ್ಕ್ರಿಪ್ಷನ್ಗಳು ಅನಗತ್ಯ  ವಿಟಮಿನ್ಗಳು ಮತ್ತು ಟಾನಿಕ್ಗಳಿಂದ ಕೂಡಿರುತ್ತವೆ ಎನ್ನಲಾಗಿದೆ. 

ಈಚೆಗೆ ಭಾರತದಲ್ಲಿ ಅನಾಬೋಲಿಕ್ ಸ್ಟೀರಾಯ್ಡ್ಗಳು ಎಂಬ ಅಪಾಯಕಾರಿ ಔಷಧಿಯನ್ನ ಹಸಿವು ಹೆಚ್ಚಿಸುವ ಸಲುವಾಗಿ ಮಾರಲಾಗ್ತಿದೆ. ಚಿಕ್ಕ-ದೊಡ್ಡ ನಗರಗಳಲ್ಲಿ ಇದಕ್ಕೆ ಒಳ್ಳೆಯ ಬೇಡಿಕೆ ಇದೆ.  ಇದು o.t.c.  ಅಂದ್ರೆ Over the count drug ರೂಪದಲ್ಲಿ ಭಾರತದಲ್ಲಿ ಬಿಸಿ ದೋಸೆಯಂತೆ ಖರ್ಚಾಗುತ್ತಿದೆ. ನಿಜಾಂಶವೆಂದರೆ, ಈ ಔಷಧಿ  ಎಲುಬುಗಳನ್ನ ವೃದ್ಧಿಸುವ ತುದಿಗಳನ್ನ ಕಾಯಂ ಆಗಿ ನಿಲ್ಲಿಸಿ ಮಕ್ಕಳ ಬೆಳವಣಿಗೆಯನ್ನು ತಡೆಯಬಹುದು.  ಇದರಿಂದ ಹೆಣ್ಣು ಮಕ್ಕಳಲ್ಲಿ ಗಡಸು ಧ್ವನಿ, ಮುಖದಲ್ಲಿ ಅನಗತ್ಯ ಕೂದಲು ಬೆಳೆಯುವಂತಹ ಪುರುಷರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಗಂಡು ಮಕ್ಕಳಲ್ಲಿ ಹೆಣ್ಣು ಮಕ್ಕಳಂತೆ ಸ್ತನಗಳ ಬೆಳವಣಿಗೆ ಆಗಬಹುದು. ಇನ್ನು ಭಾರತದಲ್ಲಿ ಅನಗತ್ಯ ಮಲ್ಟಿವಿಟಮಿನ್ ಟಾನಿಕ್ಗಳ ಮಾರುಕಟ್ಟೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಯನ್ನೂ ಮೀರಿದೆ. ಟಾನಿಕ್ಗಳ ಹೆಸರಿನಲ್ಲಿ ಪರಿಣಾಮಕಾರಿ ಅಲ್ಲದ ಔಷಧಿ- ಮಿಶ್ರಣಗಳ ಮಾರಾಟವೇ ಈ ಕಂಪೆನಿಗಳಿಗೆ, ಒಟ್ಟು ವಾರ್ಷಿಕ ಆದಾಯದಲ್ಲಿ ಶೇಕಡಾ  60ಕ್ಕೂ ಹೆಚ್ಚು ಹಣವನ್ನು ತಂದುಕೊಡುತ್ತಿದೆ.  ಇಂಥ ಮಲ್ಟಿವಿಟಮಿನ್ ಟಾನಿಕ್ಗಳ ವಹಿವಾಟಿನಲ್ಲಿ ಸಣ್ಣ ಕಂಪೆನಿಯಿಂದ ಹಿಡಿದು ದೊಡ್ಡ ಕಂಪೆನಿಗಳೂ ತೊಡಗಿಸಿಕೊಂಡಿವೆ. ಆದರೆ ಭಾರತದಲ್ಲಿ ಮಾರಾಟವಾಗುವ ಮಲ್ಟಿವಿಟಮಿನ್ ಟಾನಿಕ್ಗಳು ಯಾವುದೇ ಮಾನದಂಡಕ್ಕೆ ಒಳಪಟ್ಟಿಲ್ಲ.  ಭಾರತದ National Drug List ಒಟ್ಟು 354 ಔಷಧಿಗಳಿವೆ.   ಈ ಔಷಧಿಗಳು ಆರೋಗ್ಯ ಸಂಬಂಧಿತ ಅಗತ್ಯತೆಗಳು  ಪೂರೈಸಲು ಸಾಕು. ಒಂದು ವೇಳೆ ನಾವು ಮೊದಲ ಆದ್ಯತೆಯಲ್ಲಿರೋ 300 ಔಷಧ ಪಟ್ಟಿ ಮೇಲೆ ಕಣ್ಣಾಡಿಸಿದರೆ ಇದರಲ್ಲಿ ಕೇವಲ 115 ಬ್ರಾಂಡ್ಗಳು, ಅಂದರೆ ಶೇಕಡಾ 38ರಷ್ಟು ಮಾತ್ರ ಅವಶ್ಯಕ ಅಂದ್ರೆ ಅಗತ್ಯ ಔಷಧಗಳಾಗಿದ್ದು, ಉಳಿದ ಶೇಕಡಾ 62ರಷ್ಟು ಅನಗತ್ಯ ಔಷಧಗಳಾಗಿವೆ. ವಿಪರ್ಯಾಸವೆಂದರೆ ಭಾರತದಲ್ಲಿ 20,000ಕ್ಕೂ ಹೆಚ್ಚು ಔಷಧಿ ಪ್ರಿಸ್ಕ್ರಿಪ್ಷನ್ ಬರೆದುಕೊಡಲಾಗ್ತಿದೆ.  ಇವುಗಳಲ್ಲಿ ಶೇಕಡಾ 90ರಷ್ಟು ಪ್ರಿಸ್ಕ್ರಿಪ್ಷನ್ಗಳು ಅನಗತ್ಯ ಔಷಧ ಪಟ್ಟಿನಲ್ಲಿವೆ.  ಹೀಗೆ ಔಷಧಿ ಕಂಪೆನಿಗಳು  ವೈದ್ಯರ  ಮೇಲೆ ಪ್ರಭಾವ ಬೀರಿ ತಮ್ಮ ಅನಗತ್ಯ ಔಷಧಗಳನ್ನು ಮಾರಾಟ ಮಾಡೋ ಮೂಲಕ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಯನ್ನ ಗಳಿಸುತ್ತಿವೆ. ಅಧ್ಯಯನವೊಂದರ  ಪ್ರಕಾರ, ದೇಶದ 50 ಅಗ್ರ ಔಷಧಿ ಕಂಪೆನಿಗಳು ಪ್ರತಿ ವರ್ಷ 5,340 ಕೋಟಿ ರೂಪಾಯಿಯನ್ನ ಖರ್ಚು ಮಾಡಿ 28 ಸಾವಿರ ಕೋಟಿ ರೂಪಾಯಿಯಷ್ಟು ವ್ಯಾಪಾರ  ನಡೆಸ್ತಿವೆ. 

Medical journal of M.I.M.S Indiaದ  ಜುಲೈ 2010ರ ಸಂಪಾದಕೀಯದಲ್ಲಿ, THE DRUGS AND COSMETICS ACTನ ಸೆಕ್ಷನ್ 5ರಲ್ಲಿ ವಿಟಮಿನ್ ಔಷಧಗಳಿಗೆ ನೀಡಿರುವ ಮಾನದಂಡದ ಪಟ್ಟಿಯನ್ನ ವಿವರಿಸಲಾಗಿದೆ. ಇದರ ಪ್ರಕಾರ, ವಿಟಮಿನ್ ಔಷಧಿಗಳನ್ನ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತೇ. ಉದಾಹರಣೆಗೆ  ವಿಟಮಿನ್  ಎ ಅನ್ನು ಹೆಚ್ಚಾಗಿ ಉಪಯೋಗಿಸಿದರೆ ಲಿವರ್‌ಗೆ ಹಾನಿ ಆಗಬಹುದು, ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ವಿಕೃತಿ ಉಂಟಾಗಬಹುದು. ಹಾಗೇ ವಿಟಮಿನ್  ಬಿ 3 ಅನ್ನು ಜಾಸ್ತಿ ಸೇವಿಸುವುದರಿಂದ ರಕ್ತದಲ್ಲಿ ಯೂರಿಕ್ ಆ್ಯಸಿಡ್ನ ಪ್ರಮಾಣ ಹೆಚ್ಚಾಗಿ, ಸಂಧಿವಾತಕ್ಕೆ ತಿರುಗಬಹುದು. ವಿಟಮಿನ್ ಅನ್ನು ಅನಗತ್ಯವಾಗಿ ತೆಗೆದುಕೊಂಡರೆ ಹೃದಯಕ್ಕೆ ಅಪಾಯವಾಗುವ ಸಾಧ್ಯತೆ ಶೇಕಡಾ 20ರಷ್ಟಿರುತ್ತದೆ. ಮಲ್ಟಿವಿಟಮಿನ್ಗಳನ್ನ ಹೆಚ್ಚು ಸೇವಿಸುವ ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ನ ಸಾಧ್ಯತೆ ಹೆಚ್ಚಾಗಬಹುದು ಎನ್ನಲಾಗಿದೆ. 

ಇದನ್ನೂ ಓದಿ : ವಿಚಿತ್ರವಾಗಿರೋ ಕಾನ್ವೊಕೇಶನ್ ಡೇ ಉಡುಗೆಯ ಇತಿಹಾಸ ಗೊತ್ತಾ..?!

ಒಟ್ಟಾರೆಯಾಗಿ ಆರೋಗ್ಯದ ಹೆಸರಿನಲ್ಲಿ ಮಲ್ಟಿವಿಟಮಿನ್ಗಳ ಮಾರಾಟ ಮಾಡಿ, ಹಣ ಗಳಿಸೋ ವ್ಯವಸ್ಥಿತ ದಂಧೆಯೊಂದು ನಡೆಯುತ್ತಿದೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೇ, ಯಾವುದೇ ವೈದ್ಯರ  ಸೂಚನೆ ಇಲ್ದೆ   ಮಲ್ಟಿವಿಟಮಿನ್ಗಳ ಮಾತ್ರೆಗಳನ್ನ ತೆಗೆದುಕೊಳ್ಳಬಾರ್ದು. ಕೆಲವು ಸಲ ವೈದ್ಯರು ಹೇಳಿದ್ರು, ಮತ್ತೊರ್ವ ವೈದ್ಯರ ಬಳಿ ಮತ್ತೊಮ್ಮೆ ಅಭಿಪ್ರಾಯ ತೆಗೆದುಕೊಳ್ಳೋದು ಉತ್ತಮ. ಇನ್ಮೇಲಿಂದಾ  ಮಲ್ಟಿವಿಟಮಿನ್‌  ಮಾತ್ರೆಗಳನ್ನ ತೆಗೆದುಕೊಳ್ಳೋಕು  ಮುಂಚೆ ಸಾಕಷ್ಟು ಮುಂಜಾಗ್ರತೆ ವಹಿಸ್ತಿರಾ ಅಲ್ವಾ..?

ShareTweetSendShareShareSend

Related Posts

General

Dental Problems; ಹಲ್ಲಿನ ಸಮಸ್ಯೆಗಳಿಗೆ ಆಯುರ್ವೇದದ ಈ ಶಕ್ತಿಶಾಲಿ ಚೂರ್ಣ ರಾಮಬಾಣ!

September 20, 2025
General

Fact check – Samosa; ಸಿಗರೇಟಿನಷ್ಟೇ ಅಪಾಯಕಾರಿ ಜಿಲೇಬಿ, ಸಮೋಸ!?

July 15, 2025
General

Barley Water; ಬೇಸಿಗೆಯಲ್ಲಿ ದೇಹ ಬೇಗ Heat ಆಗ್ತಿದ್ಯಾ? ಬಾರ್ಲಿ ನೀರು ಕುಡಿರಿ!

April 8, 2025
General

Calcium ; ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳು

February 11, 2025
General

Obesity – ಈ ರೀತಿ ಊಟ ಮಾಡುದ್ರೆ ಬೊಜ್ಜಿನ ಸಮಸ್ಯೆನೇ ಬರಲ್ಲ!

January 29, 2025
GSS Maadhyama

ಗುರು ರಾಯರ 353ನೇ ಆರಾಧನೆ(Raghavendra Aradhana); ರಾಯರ ಹಿಂದಿನ ಅವತಾರಗಳ ಬಗ್ಗೆ ಗೊತ್ತೆ?

August 21, 2024

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.