• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Sleep Deprivation; ಸರಿಯಾಗಿ ನಿದ್ರೆ ಮಾಡದಿರುವುದರಿಂದ ಮೆದುಳಿಗೆ ತೊಂದರೆ? ವೈದ್ಯಲೋಕದ ಎಚ್ಚರಿಕೆ!

October 29, 2024
in GSS Maadhyama, Health and Wellness
Reading Time: 1 min read
A A
0
144
VIEWS

ಮನಷ್ಯನ ಪ್ರಮುಖ ಚಟುವಟಿಕೆಗಳಲ್ಲಿ ನಿದ್ರೆ ಕೂಡ ಒಂದು. ದೇಹವು ಸರಿಯಾಗಿ ಕೆಲಸ ಮಾಡಬೇಕು ಎಂದರೇ ಒಳ್ಳೆಯ ನಿದ್ರೆ ಅತ್ಯಗತ್ಯ. ಲೈಫ್‌ಸ್ಟೈಲ್ ಡಿಸಿಸ್‌ಗೆ ನಿದ್ದೆ ಅನ್ನೋ ಅಂಶ ಕೂಡ ಕಾರಣವಾಗುತ್ತೆ. ನಾವು ಸರಿಯಾಗಿ ನಿದ್ರೆ ಮಾಡಲಿಲ್ಲ ಅಂದ್ರೆ, ನಮ್ಮ ವಯಸ್ಸಿಗೆ ಸೂಕ್ತವಾದಷ್ಟು ಸಮಯ ನಿದ್ರೆ ಮಾಡಲಿಲ್ಲ ಅಂದ್ರೆ ಆರೋಗ್ಯದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಶುರುವಾಗುತ್ತವೆ. ನಮ್ಮ ಕಳಪೆ ನಿದ್ರೆಯ ಅಭ್ಯಾಸವು(Sleep Deprivation) ತಕ್ಷಣಕ್ಕೆ ಏನೂ ಸಮಸ್ಯೆ ಉಂಟುಮಾಡ್ತಿಲ್ಲ ಅಂತಾ ಸುಮ್ಮನಿದ್ರೆ ಈ ಅಭ್ಯಾಸವು ಮುಂದಿನ 10 ವರ್ಷಗಳ ನಂತರವೂ ಸಮಸ್ಯೆ ತಂದೊಡ್ಡಬಹುದು.

ವೈದ್ಯಲೋಕದ ಹೊಸ ಅಧ್ಯಯನವೊಂದರ ಪ್ರಕಾರ ಮಧ್ಯವಯಸ್ಸಿನಲ್ಲಿ ನಾವು ಸರಿಯಾದ ನಿದ್ರೆಯ ಮಾದರಿಯನ್ನು ಹೊಂದಿಲ್ಲದಿದ್ರೆ ಮುಂದಿನ ಕೆಲ ವರ್ಷಗಳಲ್ಲಿ ಅದು ನಮ್ಮ ಮೆದುಳಿನ ವೇಗ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ವೈದ್ಯಕೀಯ ಜರ್ನಲ್ ನ್ಯೂರಾಲಜಿಯಲ್ಲಿ ಈ ಕುರಿತಾದ ಅಧ್ಯಯನ ಪ್ರಕಟವಾಗಿದೆ.

ಈ ಅಧ್ಯಯನವು 40 ವರ್ಷ ವಯಸ್ಸಿನ 589 ಜನರನ್ನು ಒಳಗೊಂಡು ನಡೆದಿದೆ. ಅಧ್ಯಯನದ ಆರಂಭದಲ್ಲಿ ಈ ಜನರು, ಕಡಿಮೆ ನಿದ್ರೆಯ ಅವಧಿ, ಕೆಟ್ಟ ನಿದ್ರೆಯ ಮಾದರಿ, ನಿದ್ರಿಸಲು ತೊಂದರೆ, ಮುಂಜಾನೆ ಬೇಗ ಎಚ್ಚರಗೊಳ್ಳುವುದು ಮತ್ತು ಹಗಲಿನಲ್ಲಿ ನಿದ್ರೆ ಮಾಡುವುದು – ಈ ಕುರಿತಾದ ಪ್ರಶ್ನಾವಳಿಗಳಲ್ಲಿ ಭಾಗವಹಿಸಿದರು. ಐದು ವರ್ಷಗಳ ನಂತರ ಪುನಃ ಅದೇ ಸಮೀಕ್ಷೆಯನ್ನು ಪೂರ್ಣಗೊಳಿಸಿದರು.

ಅಧ್ಯಯನದಲ್ಲಿ ಭಾಗಿಯಾದವರನ್ನು ಅವರ ನಿದ್ರೆಯ ಅಭ್ಯಾಸದ ಆಧಾರದ ಮೇಲೆ 3 ಗುಂಪುಗಳಾಗಿ ಮಾಡಲಾಗಿತ್ತು. ನಿದ್ರೆ ಮಾಡಲು ಸಮಸ್ಯೆ ಇಲ್ಲದವರು, ಸ್ವಲ್ಪ ಸಮಸ್ಯೆ ಇರುವವರು ಮತ್ತು ನಿದ್ರೆಗೆ ಜಾರಲು ಹೆಚ್ಚಿನ ಸಮಸ್ಯೆ ಹೊಂದಿರುವವರು. ಹೀಗೆ 3 ಗುಂಪುಗಳಾಗಿ ಮಾಡಲಾಗಿತ್ತು. ಅಧ್ಯಯನದ 15 ವರ್ಷಗಳ ಬಳಿಕ ಭಾಗವಹಿಸಿದ್ದವರ ಮೆದುಳಿನ ಸ್ಕ್ಯಾನ್ ಮಾಡಲಾಗಿದೆ. ಅದರಲ್ಲಿ, ತಮ್ಮ 40ರ ವಯಸ್ಸಿನಲ್ಲಿ ನಿದ್ರಿಸಲು ಹೆಣಗಾಡುತ್ತಿರುವವರು ತಮ್ಮ 50ರ ವಯಸ್ಸಿನ ಅಂತ್ಯದ ವೇಳೆಗೆ ತಮ್ಮ ಮೆದುಳು ವೇಗ ವಯಸ್ಸಾಗಿರುವ ಲಕ್ಷಣಗಳನ್ನು ಹೊಂದಿರುವುದು ತಿಳಿದುಬಂದಿದೆ.

ನಿದ್ರೆ ಮಾಡಲು ಸಮಸ್ಯೆ ಇಲ್ಲದವರಿಗೆ ಹೋಲಿಕೆ ಮಾಡಿದ್ರೆ ಸ್ವಲ್ಪ ಸಮಸ್ಯೆ ಇರುವವರ ಮೆದುಳು 1.6 ವರ್ಷದಷ್ಟು ಹೆಚ್ಚು ವಯಸ್ಸಾಗಿರುವುದು ಮತ್ತು ನಿದ್ರೆಗೆ ಜಾರಲು ಹೆಚ್ಚಿನ ಸಮಸ್ಯೆ ಹೊಂದಿರುವವರ ಗುಂಪಿನ ಸರಾಸರಿ ಮೆದುಳಿನ ವಯಸ್ಸು 2.6 ವರ್ಷದಷ್ಟು ಹೆಚ್ಚು ವಯಸ್ಸಾಗಿರುವುದು ಪತ್ತೆಯಾಗಿದೆ.

ಮೆದುಳು ವೇಗವಾಗಿ ಕ್ಷೀಣಿಸುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹದು. ನೆನಪಿನ ಶಕ್ತಿ ಕುಂದುವುದು, ಬುದ್ಧಿಮಾಂದ್ಯತೆಯ ಅಪಾಯಕ್ಕೆ ಸಿಲುಕುವಂತಹ ಸಮಸ್ಯೆಗಳು ಎದುರಾಗಬಹದು. ಮೆದುಳು ಕ್ಷೀಣಿಸುವುದಕ್ಕೆ ನಿದ್ರೆಯ ಅಭ್ಯಾಸವೇ ಸಂಪೂರ್ಣ ಕಾರಣ ಎಂದು ಈ ಅಧ್ಯಯನದ ವರದಿ ಸಾಬೀತುಪಡಿಸಿಲ್ಲವಾದ್ದರೂ ಈ ಅಧ್ಯಯನವು ನಿದ್ರಾಹೀನತೆ ಮತ್ತು ಮೆದುಳಿನ ಆರೋಗ್ಯದ ಕ್ಷೀಣತೆಯ ನಡುವಿನ ಸಂಬಂಧವನ್ನು ಒತ್ತಿ ಹೇಳುತ್ತದೆ.

ಗುಣಮಟ್ಟದ ನಿದ್ರೆಯ ಕೊರತೆಯು ಆರೋಗ್ಯ ಜೀವನಕ್ಕೆ ಹಲವಾರು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಏಕಾಗ್ರತೆಯ ತೊಂದರೆ, ಆಯಾಸ, ಜೀವಕೋಶಗಳ ಬೆಳವಣಿಗೆ ಸರಿಯಾಗಿ ಆಗದಿರುವುದು, ಒತ್ತಡ, ಸರಿಯಾದ ಹಸಿವು ಇಲ್ಲದಿರುವುದು, ಹಾರ್ಮೋನಲ್ ಇಂಬ್ಯಾಲೆನ್ಸ್ಗಳಂತಹ ಸಮಸ್ಯೆಗಳು ಕಾಡುತ್ತವೆ. ನಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯ ನಿದ್ರೆ ಅತ್ಯಾವಶ್ಯಕ.

ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡಿದರೆ ಒಳ್ಳೆಯದು?

ಶಿಶುಗಳು (4 ತಿಂಗಳಿಂದ 12 ತಿಂಗಳವರೆಗೆ) –  12 ರಿಂದ 16 ಗಂಟೆಗಳ ಕಾಲ

1 ರಿಂದ 2 ವರ್ಷ ವಯಸ್ಸಿನ ಮಕ್ಕಳು – 11 ರಿಂದ 14 ಗಂಟೆಗಳ ಕಾಲ

3 ರಿಂದ 5 ವರ್ಷ ವಯಸ್ಸಿನ ಮಕ್ಕಳು – 10 ರಿಂದ 13 ಗಂಟೆಗಳ ಕಾಲ

6 ರಿಂದ 12 ವರ್ಷ ವಯಸ್ಸಿನ ಮಕ್ಕಳು  – 9 ರಿಂದ 12 ಗಂಟೆಗಳ ಕಾಲ

13 ರಿಂದ 18 ವರ್ಷದವರು – 8 ರಿಂದ 10 ಗಂಟೆಗಳ ಕಾಲ

ವಯಸ್ಕರು – 7-8 ಗಂಟೆಗಳ ಕಾಲ ನಿದ್ರೆ ಮಾಡಿದರೆ ಒಳ್ಳೆಯದು.

For more articles visit GSS Media

Tags: Brain AgingHealthSleep Deprivation
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.