ದೀರ್ಘಾಯುಷ್ಯರಾಗಿ ಬಾಳೋದು ಯಾರಿಗೆ ತಾನೆ ಬೇಡ ಹೇಳಿ. ಹೆಚ್ಚು ವರ್ಷಗಳ ಕಾಲ ಆರೋಗ್ಯಯುತವಾಗಿ ಬಾಳಬೇಕು ಅನ್ನೋದು ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರ ಕನಸಾಗಿರುತ್ತೇ. ಆದ್ರೆ ಅದಕ್ಕಾಗಿ ಏನು ಮಾಡ್ಬೇಕು ಅನ್ನೋದೆ ಎಷ್ಟೋ ಜನರಿಗೆ ಗೊತ್ತಿಲ್ಲ. ಇದೀಗ ಅಮೆರಿಕದ ವಿಜ್ಞಾನಿಗಳು ದೀರ್ಘಾಯುಷ್ಯದ ಗುಟ್ಟೇನು ಅನ್ನೋದನ್ನ ಪತ್ತೆ ಮಾಡಿದ್ದಾರೆ.

ಅಮೆರಿಕದ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ದೀರ್ಘಾಯುಷ್ಯರಾಗಿ ಬಾಳೋದು ಅಂಥಾ ಕಷ್ಟ ಏನಲ್ಲ. ತುಂಬಾ ಸಿಂಪಲ್. ಹೌದು, ದಿನಕ್ಕೆ ಕನಿಷ್ಠ 160 ಗ್ರಾಮ್ ಆಗುವಷ್ಟು ಹಣ್ಣುಗಳು, 240 ಗ್ರಾಂ ಆಗುಷ್ಟು ತರಕಾರಿಗಳನ್ನು ವಾರಕ್ಕೆ ಕನಿಷ್ಟ ಐದು ದಿನ ತಿಂದ್ರೆ ಸಾಕು ದೀರ್ಘಾಯುಷ್ಯರಾಗಿ ಬಾಳಬೋದು. ಇದು ಬುರುಡೆ ವಿಜ್ಞಾನ ಅಲ್ಲ. ಇದು ಅಮೆರಿಕ ವಿಜ್ಞಾನಿಗಳು ನಿರಂತರ ಸಂಶೋಧನೆಯ ಮೇಲೆ ಕಂಡು ಹಿಡಿದ ಸತ್ಯ. ಜಗತ್ತಿನಾದ್ಯಂತ 20 ಲಕ್ಷ ಜನರ ಮೇಲೆ ಸಂಶೋಧನೆ ನಡೆಸಿದ ಬಳಿಕ ಈ ನಿರ್ಣಯಕ್ಕೆ ಬರಲಾಗಿದೆ. ಅಮೆರಿಕದ ವಿಜ್ಞಾನಿಗಳ ಸಂಶೋಧನೆಯಲ್ಲಿ ಇನ್ನೂ ಒಂದು ಸತ್ಯ ಹೊರಬಿದ್ದಿದೆ. ಅದೆನಪ್ಪಾ ಅಂದ್ರೆ, ಹಣ್ಣು ಮತ್ತು ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಿಂದರೆ, ಹೃದ್ರೋಗ, ಕ್ಯಾನ್ಸರ್ ಹೀಗೆ ಅನೇಕ ಮಾರಕ ರೋಗಗಳಿಂದಲೂ ನೀವು ದೂರ ಇರಬಹುದಂತೆ. ಆಲೂಗಡ್ಡೆ, ಕಾನ್ಫ್ಲೋರ್ ಹೀಗೆ ಪಿಷ್ಟ ಅಧಿಕ ಇರುವ ತರಕಾರಿಗಳನ್ನು ತಿನ್ನಬಾರದು. ನಮ್ಮ ದೈನಂದಿನ ಆಹಾರದಲ್ಲಿ ಹಣ್ಣುಗಳು – ತರಕಾರಿಗಳು ಜಾಸ್ತಿ ಇದ್ದರೆ, ಬೊಜ್ಜು ಮತ್ತು ಸಕ್ಕರೆ ಪ್ರಮಾಣ ಕೂಡಾ ಕಡಿಮೆ ಆಗುತ್ತದೆಯಂತೆ. ಇದ್ರಿಂದ ದೀರ್ಘಾಯುಷ್ಯರಾಗಿ ಬಾಳಬೋದು ಅಂತಾ ಬ್ರಿಟನಿನ ನ್ಯಾಷನಲ್ ಹೆಲ್ತ್ ಸರ್ವಿಸಸ್ ವರದಿ ಹೇಳಿದೆ.
ಇದನ್ನೂ ಓದಿ : ರಸ್ತೆ ಅಪಘಾತಗಳ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ..!
ಬ್ರಿಟನಿನ ನ್ಯಾಷನಲ್ ಹೆಲ್ತ್ ಸರ್ವಿಸಸ್ ವರದಿ ಪ್ರಕಾರ, ಸರಿಯಾದ ಪ್ರಮಾಣದಲ್ಲಿ ಹಣ್ಣುಗಳು – ತರಕಾರಿಗಳನ್ನು ತಿನ್ನುವವರು ಕೇವಲ ಹತ್ತರಲ್ಲಿ ಒಬ್ಬರು ಮಾತ್ರವಂತೆ. ನಮ್ಮ ದೈನಂದಿನ ಆಹಾರದಲ್ಲಿ ಅಷ್ಟೊಂದು ಏರಿಳಿತಗಳಿವೆ. ಕಾಯಿಲೆಗಳಿಂದ ದೂರ ಇರಬೇಕು ಹಾಗೂ ದೀರ್ಘಾಯುಷ್ಯರಾಗಿ ಬಾಳ ಬೇಕೆಂದರೆ ಊಟದ ತಟ್ಟೆಯಲ್ಲಿ ಹಣ್ಣು-ತರಕಾರಿಗಳು ಭರಪೂರ ಇರಬೇಕು. ಆಹಾರದಲ್ಲಿ ಪಾಲಕ್ , ಪುಂಡಿಪಲ್ಯ ಹೀಗೆ ಸೊಪ್ಪುಗಳೂ ಇರಬೇಕು. ಹಸಿರು ತರ್ಕಾರಿ ಹೆಚ್ಚಿಗೆ ತಿನ್ನಬೇಕು. ಹಣ್ಣುಗಳ ಪೈಕಿ ಕಿತ್ತಳೆ, ಮೋಸಂಬಿ ಹಣ್ಣುಗಳನ್ನ ಹೆಚ್ಚಿಗೆ ತಿನ್ನಿಬೇಕು. ಅದರಲ್ಲಿ ವಿಟಮಿನ್ ಸಿ ಇರುತ್ತೇ. ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವುದನ್ನ ಕಡಿಮೆ ಮಾಡಿ. ಹಾಗೆ ತಿಂದರೆ, ದೇಹಕ್ಕೆ ಹಣ್ಣಿನ ರಸದ ಜೊತೆ ಫೈಬರ್ ಕೂಡಾ ಸಿಗುತ್ತೇ. ಹಣ್ಣಿನ ರಸ ಎಷ್ಟು ಮುಖ್ಯವೋ ದೇಹಕ್ಕೆ ಫೈಬರ್ ಕೂಡಾ ಅಷ್ಟೇ ಮುಖ್ಯ ಎನ್ನುತ್ತದೆ ಸಂಶೋಧನೆ.

ಇನ್ನ ಉತ್ತಮ ಆಹಾರದ ಜೊತೆಗೆ ನಿಯಮಿತ ವ್ಯಾಯಾಮ ಮಾಡ್ಬೇಕು. ವೇಗದ ಓಟದಂತಹ ತೀವ್ರವಾದ ವ್ಯಾಯಾಮ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ವಾಕಿಂಗ್ ಮಾಡೋದು ದೀರ್ಘಾಯುಷ್ಯಕ್ಕೆ ಒಳ್ಳೆಯದು. Journal of the American College of Cardiology ನಡೆದ 12 ವರ್ಷಗಳ ಅಧ್ಯಯನದ ಪ್ರಕಾರ, ಜಾಗಿಂಗ್ ಮಾಡದ ಜನರು ಶ್ರಮದಾಯಕವಾಗಿ ಸಾಯುವ ಸಾಧ್ಯತೆ ಹೆಚ್ಚು. ಇನ್ನೊಂದೆಡೆ Copenhagen City Heart Study ಪ್ರಕಾರ, ವಾರಕ್ಕೆ ಒಂದರಿಂದ 2.4 ಗಂಟೆಗಳ ನಡುವೆ ನಿಯಮಿತ ವ್ಯಾಯಾಮ ಮಾಡೋರು ಹಠಾತ್ತನೆ ಸಾಯುವ ಸಾಧ್ಯತೆ ಕಡಿಮೆಯಂತೆ.
ಇದನ್ನೂ ಓದಿ : ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಯಾಕೆ ಹೆಚ್ಚುತ್ತಿವೆ..? ಮನೋವೈದ್ಯರು ಹೇಳೋದೇನು..?
ಒಟ್ಟಾರೆಯಾಗಿ ಇತ್ತೀಚಿನ ಸಂಶೋಧನೆಗಳ ಪ್ರಕಾರ, ದೀರ್ಘಾಯುಷ್ಯರಾಗಿ ಬಾಳಬೇಕಂದ್ರೆ ಹೆಚ್ಚು ಹಣ್ಣು-ತರಕಾರಿಗಳನ್ನ ಸೇವಿಸಬೇಕು, ಜೊತೆಗೆ ನಿಯಮಿತ ವ್ಯಾಯಾಮ ಮಾಡಬೇಕು. ಹೆಚ್ಚು ವ್ಯಾಯಾಮ ಮಾಡುತ್ತಾ, ದೇಹವನ್ನು ದಂಡಿಸುವುದು ಕೂಡಾ ಒಳ್ಳೆಯದಲ್ಲ ಎನ್ನುತ್ತವೇ ಸಂಶೋಧನೆಗಳು. ಹೀಗಾಗಿ ಹೆಚ್ಚು ಹಣ್ಣು-ತರಕಾರಿ ತಿನ್ನಿ ; ಕಡಿಮೆ ವ್ಯಾಯಾಮ ಮಾಡಿ, ದೀರ್ಘಾಯುಷ್ಯರಾಗಿ ಬಾಳಿ.










