ವಯಸ್ಸು ಹೆಚ್ಚಾದಂತೆ ಕೂದಲು ಬಿಳಿಯಾಗೋದು ಸಾಮಾನ್ಯ. ಸಾಮಾನ್ಯವಾಗಿ ಇದು 30’s ಅಥವಾ 40’sನಿಂದ ಶುರು ಆಗುತ್ತದೆ. ಆದರೆ ಇತ್ತೀಚೆಗೆ, ಶಾಲೆ ಅಥವಾ ಕಾಲೇಜು ದಿನಗಳಲ್ಲೇ ಕೆಲವರಿಗೆ ಕೂದಲು ಬಿಳಿಯಾಗೋದು(Premature grey hair) ಕಂಡುಬರುತ್ತಿದೆ. ಇದಕ್ಕೆ ಕಾರಣವೇನು? ಇದನ್ನು ಹೇಗೆ ತಡೆಯೋದು? ಆಯುರ್ವೇದ ತಜ್ಞರು ಸಲಹೆ ಮಾಡಿರುವ ಮನೆ ಮದ್ದೇನು ಎಂದು ತಿಳಿಯಲು ಸಂಪೂರ್ಣ ಬರಹ ಓದಿ
ನಮ್ಮ ಕೂದಲಿಗೆ ಬಣ್ಣ ಕೊಡುವುದು “ಮೆಲನಿನ್ ಪಿಗ್ಮೆಂಟ್” (melanin pigment). ವಯಸ್ಸು ಹೆಚ್ಚಾದಂತೆ ಮೆಲನಿನ್ ಮಟ್ಟ ಕಡಿಮೆಯಾಗುವುದು ಸಹಜ. ಆದರೆ ಕೆಲವರಲ್ಲಿ ಈ ಪ್ರಕ್ರಿಯೆ ಬೇಗನೇ ಶುರು ಆಗಿ, ಕೂದಲು ಬಿಳಿಯಾಗುತ್ತದೆ – ಇದನ್ನೇ “ಪ್ರಿಮೆಚ್ಯೂರ್ ಗ್ರೇಯಿಂಗ್” (premature graying) ಅನ್ನತ್ತಾರೆ.
ಕಾರಣಗಳು :
1. ಅನುವಂಶಿಕ (Genetics): ಪೋಷಕರಿಗೆ, ಬೇಗ ಕೂದಲು ಬಿಳಿಯಾಗಿದ್ದರೆ, ಮಕ್ಕಳಿಗೂ ಆಗುವ ಸಾಧ್ಯತೆ ಇರುತ್ತದೆ
2. ಜೀವನಶೈಲಿ (Lifestyle): ಜಂಕ್ ಫುಡ್ , ಸರಿಯಾಗಿ ನಿದ್ದೆ ಮಾಡದೇ ಇರುವುದು, ಸರಿಯಾದ ಆಹಾರ ಸೇವನೆ ಮಾಡದಿರುವುದು, ವಿಟಮಿನ್ B12, ಕಬ್ಬಿಣ (Iron) ಅಂಶ ಕೊರತೆ ಉಂಟಾಗಿ, ಕೂದಲು ಹುಟ್ಟಿ ಬರುವ ಭಾಗ (hair follicles) ದುರ್ಬಲವಾಗುತ್ತವೆ. ಮೆಲನಿನ್ ಉತ್ಪಾದನೆಯು ಕಡಿಮೆಯಾಗುತ್ತದೆ.
3. ಧೂಮಪಾನ (Smoking): ಇದರಿಂದ “ಆಕ್ಸಿಡೇಟಿವ್ ಸ್ಟ್ರೆಸ್” (oxidative stress) ಆಗಿ ಮೆಲನಿನ್ ನಾಶವಾಗುತ್ತದೆ
4. ಕೆಮಿಕಲ್ ಬಳಕೆ (Chemical products): ಕಮಿಕಲ್ ಹಾಕಿರುವ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡಿದರೆ ಕೂದಲಿಗೆ ಹಾನಿ ಆಗುತ್ತದೆ
5. ಮನಸ್ಸಿನ ಒತ್ತಡ (Stress): ತುಂಬಾ ಯೋಚನೆ, ಕೋಪ, ಟೆನ್ಷನ್ ಇವೆಲ್ಲಾ ಕೂಡ ಕೂದಲು ಬೇಗ ಬಿಳಿಯಾಗೋದಕ್ಕೆ ಕಾರಣವಾಗುತ್ತವೆ.
6. ಆಯುರ್ವೇದದ ಪ್ರಕಾರ – ಪಿತ್ತದ ಅಸಮತೋಲನ (Pitta Dosha imbalance): ಇದು ಕೂಡ ಕೂದಲು ಬಿಳಿಯಾಗುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
7. ಅನಾರೋಗ್ಯ (Medical issues):- ಕೆಲವು ಆರೋಗ್ಯ ಸಮಸ್ಯೆಗಳಿಂದ ಅಥವಾ ದೀರ್ಘಕಾಲದ ಮೆಡಿಸಿನ್ ಸೇವನೆಯಿಂದ ಕೂಡ ಈ ಸಮಸ್ಯೆ ಉಂಟಾಗಬಹುದು.
ಪರಿಹಾರ :
ಜೀವನಶೈಲಿಯಲ್ಲಿ ಬದಲಾವಣೆ ತುಂಬಾ ಮುಖ್ಯ. ಆಹಾರ ಶೈಲಿ ಸರಿಪಡಿಸಿಕೊಳ್ಳಬೇಕು. ವಿಟಮಿನ್ B12 ಇರುವ ಆಹಾರ, ಹಾಲು, ಮೊಸರು, ಮೊಟ್ಟೆ, ಮೀನು ಸೇವಿಸಬೇಕು. ಕಬ್ಬಿಣಾಂಶ ಇರುವ ಹಸಿರು ಸೊಪ್ಪು, ಬೇಳೆಗಳನ್ನು ತಿನ್ನುವುದು, ಎಳ್ಳು, ಕೊಬ್ಬರಿ, ಬೀನ್ಸ್, ಮಶ್ರೂಮ್ ಸೇವಿಸುವುದು, ಪಿತ್ತ ಶಮನ ಮಾಡುವ ದ್ರಾಕ್ಷಿ, ದಾಳಿಂಬೆ ಹಣ್ಣುಗಳ ಸೇವನೆ ತುಂಬಾ ಮುಖ್ಯ.

ಆಯುರ್ವೇದ ಸಲಹೆ ಮಾಡುವ ಆಹಾರಗಳಾದ ಬೆಟ್ಟದ ನೆಲ್ಲಿಕಾಯಿ (Amla) ಸೇವನೆ ತುಂಬಾ ಉಪಯುಕ್ತ. ಇದರಲ್ಲಿ ವಿಟಮಿನ್ C ಮತ್ತು ಆಂಟಿಆಕ್ಸಿಡೆಂಟ್ಸ್ ಇರುವುದರಿಂದ ಮೆಲನಿನ್ ಉತ್ಪಾದನೆಗೆ ಸಹಕಾರಿ. ಕರಿಬೇವಿನ ಸೊಪ್ಪು ಕೂಡ ತುಂಬಾ ಒಳ್ಳೆಯದು.
ವ್ಯಾಯಾಮ ಮಾಡುವುದರಿಂದ ಕೂಡ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಸರ್ವಾಂಗಾಸನ (Sarvangasana), ವಿಪರೀತಕರಣಿ (Viparita Karani) ಅಂತಹ ಆಸನಗಳಿಂದ ರಕ್ತ ಸಂಚಾರ ಸುಧಾರಣೆಯಾಗಿ ಹಾರ್ಮೋನ್ ಬ್ಯಾಲೆನ್ಸ್ ಆಗುತ್ತದೆ. ಪ್ರಾಣಾಯಾಮ ಮಾಡುವುದರಿಂದ ಒತ್ತಡ ಕಮ್ಮಿಯಾಗುತ್ತದೆ.

Read this also : Dark spot; ಮುಖ, ಕಂಕುಳಲ್ಲಿ ಕಪ್ಪು ಕಲೆ? ಈ ಮನೆಮದ್ದು ಟ್ರೈ ಮಾಡಿ!
ಆಯುರ್ವೇದದ ಮನೆ ಮದ್ದು
1. ತ್ರಿಫಲ ಚೂರ್ಣ (Triphala Churna):

ಅರ್ಧ ಚಮಚ ತ್ರಿಫಲ ಚೂರ್ಣ, ಅರ್ಧ ಚಮಚ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದು. ಇದರಲ್ಲಿರುವ ಟ್ಯಾನಿನ್ (tannin) ಮತ್ತು ಕಾಪರ್ ಕೂದಲು ಕಪ್ಪಾಗಿಸಲು ಸಹಾಯ ಮಾಡುತ್ತವೆ. ಇದನ್ನು ಅಲೋವೆರಾ ಜೆಲ್ ಜೊತೆಗೆ ಬೆರೆಸಿ ಹೇರ್ ಪ್ಯಾಕ್‌ನಂತೆ ತಲೆಗೆ ಹಚ್ಚಬಹುದು.
2. ಅಶ್ವಗಂಧ (Ashwagandha):

ಇದನ್ನು ಟೀ ರೂಪದಲ್ಲಿ ಸೇವಿಸಬಹುದು. ಇದು ದೇಹದಲ್ಲಿನ ಕಾರ್ಟಿಸೋಲ್ ಹಾರ್ಮೋನ್ (cortisol hormone/stress hormone) ಕಡಿಮೆ ಮಾಡಿ, ಕೂದಲು ವೇಗವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.
ನೋಟ್: ಈ ಮನೆ ಮದ್ದು ಎಲ್ಲರ ದೇಹಕ್ಕೂ ಒಂದೇ ರೀತಿಯಲ್ಲಿ ಕೆಲಸ ಮಾಡಲ್ಲ. ನಿಮ್ಮ ದೇಹ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಅನ್ನೋದನ್ನು ಗಮನಿಸಿ. ಯಾವುದನ್ನೇ ಆಗಲೀ ಮಿತಿಮೀರಿ ತೊಗೊಬೇಡಿ.
Disclaimer – This is a simple home remedy and not a replacement for any medicine










