Winter; ಚಳಿಗಾಲದಲ್ಲಿ ತಣ್ಣನೆಯ ವಾತಾವರಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಈ ಸಮಯದಲ್ಲಿ ನೆಗಡಿ, ಕೆಮ್ಮು, ಜ್ವರದಂತಹ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಇವುಗಳು ಬಾರದಂತೆ ನೋಡಿಕೊಳ್ಳಲು ಅಥವಾ ಇವುಗಳು ಕಾಡಿದಾಗ ಬೇಗ ಗುಣಮುಖರಾಗಲು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಸರಿಯಾಗಿರಬೇಕು. ಹೀಗಾಗಿ ಆರೋಗ್ಯವಾಗಿರಲು ಸಹಾಯ ಮಾಡುವ ಆಹಾರವನ್ನು ಚಳಿಗಾಲದಲ್ಲಿ ಸೇವಸಬೇಕು.
Winter; ಚಳಿಗಾಲದಲ್ಲಿ ಹಸಿವು ಕೂಡ ಸಾಮಾನ್ಯವಾಗಿ ಹೆಚ್ಚಾಗಿರುತ್ತೆ. ಚಳಿ ಚಳಿ ವಾತವರಣಕ್ಕೆ ಬಿಸಿ ಬಿಸಿಯಾಗಿ ಏನಾದ್ರೂ ತಿನ್ನಬೇಕು ಅನಿಸುತ್ತೆ. ಬಜ್ಜಿ, ಬೊಂಡ ಅಂತಾ ತಿಂದು ಸಾಕಷ್ಟು ಜನ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಆದ್ರಿಂದ ಚಳಿಗಾಲದಲ್ಲಿ ಬಿಸಿಬಿಸಿ ಬಜ್ಜಿ ತಿಂತಿರೋ ಬಿಡ್ತಿರೋ ಇವುಗಳನ್ನು ಮಾತ್ರ ತಿನ್ನೋದನ್ನ ಮರಿಬೇಡಿ.
ಹಣ್ಣುಗಳು :-

ಹಣ್ಣುಗಳು ವರ್ಷದ ಯಾವುದೇ ಸಮಯದಲ್ಲಿ ತಿಂದರೂ ಒಳ್ಳೆಯದು. ಆದರೆ ಆಯಾ ಕಾಲಕ್ಕೆ ತಕ್ಕಂತೆ ಕೆಲ ಹಣ್ಣುಗಳನ್ನು ತಿನ್ನಲೇಬೇಕಾಗುತ್ತೆ. ಪ್ರಕೃತಿ ಸಹ ಯಾವ ಸಮಯಕ್ಕೆ ಮನುಷ್ಯನ ದೇಹಕ್ಕೆ ಏನು ಅವಶ್ಯಕವಿರುತ್ತೋ ಅದನ್ನೇ ಕೊಡುತ್ತದೆ.
ಸಿತಾಫಲ
ಸಿತಾಫಲ ಹಣ್ಣು ಚಳಿಗಾಲದಲ್ಲಿ ದೊರೆಯುವ ಸೀಸನ್ ಹಣ್ಣಾಗಿದೆ. ಸೀತಾಫಲವು ಪೌಷ್ಟಿಕಾಂಶಯುತ ಹಣ್ಣಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆಂಟಿಆಕ್ಸಿಡೆಂಟ್‌ಗಳು, ಫೈಬರ್ ಮತ್ತು ಕಬ್ಬಿಣಾಂಶ, ಮೆಗ್ನೀಸಿಯಮ್ ಜೊತೆಗೆ ಎ, ಸಿ ಮತ್ತು ಬಿ6 ನಂತಹ ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆಯಾಸ ಮತ್ತು ಒತ್ತಡವನ್ನು ಎದುರಿಸುವಲ್ಲಿ ಪರಿಣಾಮಕಾರಿಯಾಗುತ್ತದೆ. ಇನ್ನು ಚಳಿಗಾಲದಲ್ಲಿ ತ್ವಚೆಯ ಸಮಸ್ಯೆ ಹೆಚ್ಚಾಗಿ ಕಾಡುವುದರಿಂದ, ಇದನ್ನು ತಡೆಗಟ್ಟುವಲ್ಲಿ ಸೀತಾಫಲ ಸಹಕಾರಿಯಾಗಿದೆ.
ಸಿಟ್ರಸ್ ಹಣ್ಣುಗಳು
ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮತ್ತು ಚಳಿಗಾಲದಲ್ಲಿ ಕಾಡುವ ಒಣ ಚರ್ಮ ಸಮಸ್ಯೆ ತಡೆಗಟ್ಟಲು ಈ ಸಮಯದಲ್ಲಿ ಕಿತ್ತಳೆ, ನಿಂಬೆಹಣ್ಣು, ದ್ರಾಕ್ಷಿ, ಮೂಸಂಬಿ, ಕಿವಿಯಂತಹ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಕು. ಈ ಹಣ್ಣುಗಳು ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ, ಇದ್ರಿಂದ ತ್ವಚೆಯ ಕಾಂತಿ ಹೆಚ್ಚಾಗುತ್ತೆ.
ದಾಳಿಂಬೆ
ದಾಳಿಂಬೆ ಹಣ್ಣಿನಲ್ಲಿ ಆಂಟಿಅಕ್ಸಿಡೆಂಟ್ ಹಾಗೂ ಉರಿಯೂತ ಕಡಿಮೆ ಮಾಡುವ ಗುಣವಿದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದಾಳಿಂಬೆಯನ್ನು ತಿನ್ನುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಇದು ಕೊಲೆಸ್ಟ್ರಾಲ್ ಕೂಡ ನಿಯಂತ್ರಿಸುತ್ತೆ. ಚಳಿಗಾಲದಲ್ಲಿ ಕಾಡುವ ಶೀತ ತಡೆಗಟ್ಟುಲು ದಾಳಿಂಬೆ ಸಹಕಾರಿ.
ಸೀಬೆ ಹಣ್ಣು
ಚಳಿಗಾಲದಲ್ಲಿ ತಿನ್ನಲೇಬೇಕಾದ ಮತ್ತೊಂದು ಹಣ್ಣು ಅಂದ್ರೆ ಸೀಬೆ ಹಣ್ಣು. ಯಾಕಂದ್ರೆ ಇದ್ರಲ್ಲಿ ವಿಟಮಿನ್ ಎ, ಸಿ, ಬಿ6 ಇದೆ. ಮ್ಯಾಂಗನೀಸ್, ಪೊಟಾಷ್ಯಿಯಂ ಸೇರಿದಂತೆ ಹಲವಾರು ಖನಿಜಾಂಶಗಳು ಇದ್ರಲ್ಲಿದ್ದು, ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶವನ್ನು ನೀಡುತ್ತದೆ. ಶೀತ ಮತ್ತು ಕೆಮ್ಮಿನ ರೋಗಲಕ್ಷಣಗಳಿಂದ ಪರಿಹಾರ ನೀಡುತ್ತದೆ.
ಇದರ ಜೊತೆಗೆ ಬೆರ‍್ರಿ ಫ್ರೂಟ್ಸ್ ತಿನ್ನೊದ್ರಿಂದಲು ಆರೋಗ್ಯ ಸುಧಾರಿಸುತ್ತೆ. ಸ್ಟ್ರಾಬೇರಿ, ಬ್ಲೂಬೇರಿ, ನೇರಳೆ ಹಣ್ಣುಗಳು ಕೂಡ ರೋಗನಿರೊಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
Read this also – ಚಳಿಗಾಲದ ಆರೋಗ್ಯ(illness) ಸಮಸ್ಯೆಗೆ ಪರಿಹಾರ- ವಿಟಮಿನ್ ಗಳು(Vitamins); ಪಡೆಯೋದು ಹೇಗೆ?
ತರಕಾರಿಗಳು :-

ಚಳಿಗಾಲದಲ್ಲಿ ಕೆಲವೊಂದು ತರಕಾರಿಗಳನ್ನು ತಿನ್ನೊದ್ರಿಂದ ಸಾಕಷ್ಟು ಪ್ರಯೋಜನವಿದೆ. ಇವುಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.
ಕ್ಯಾರೆಟ್
ಚಳಿಗಾಲದ ಆರೋಗ್ಯ ಸಮಸ್ಯೆಯಿಂದ ದೂರವಿರಲು ಸಹಾಯ ಮಾಡುವ ತರಕಾರಿ ಎಂದರೇ ಅದು ಕ್ಯಾರೇಟ್. ಕ್ಯಾರೆಟ್ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ವಿಟಮಿನ್ ಸಿ, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ನಮ್ಮ ಆರೋಗ್ಯ ಉತ್ತೇಜಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ನಂತಹ ಪ್ರಮುಖ ಪೋಷಕಾಂಶಗಳನ್ನು ಒದಗಿಸುವ ಮೂಲಕ ಕ್ಯಾರೆಟ್ ಮೂಳೆಯ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಎ ಇದ್ದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು.
ಮೂಲಂಗಿ
ಮೂಲಂಗಿಯು ನಮ್ಮ ರಕ್ತ ಶುದ್ಧೀಕರಿಸುವ ಅತ್ಯುತ್ತಮವಾದ ಆಹಾರ ಮೂಲವಾಗಿದೆ. ಇದರಲ್ಲಿ ನಾರಿನಾಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಮೂಲವ್ಯಾಧಿ ಸಮಸ್ಯೆಗೂ ಪರಿಣಾಮಕಾರಿಯಾಗಿದೆ. ಇದ್ರಲ್ಲಿ ವಿಟಮಿನ್ ಸಿ, ಬಿ6 ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಖನಿಜಗಳಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಇದರಲ್ಲಿರೋ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಇದು ಚಳಿಗಾಲದ ಶೀತ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ.
ಹೂಕೋಸು
ಹೂಕೋಸು ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ, ಇದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಕೆಲವರು ಜೀರ್ಣಕ್ರಿಯೆ ಸರಿಯಾಗಿ ಆಗದೇ ಬಳಲುತ್ತಾರೆ. ಹೂಕೋಸಿನಲ್ಲಿರುವ ಫೈಬರ್ ಅಂಶವು ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸುತ್ತದೆ.
ಹಸಿರೆಲೆ ತರಕಾರಿಗಳು : –

ಪಾಲಕ್
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ವಿಟಮಿನ್ ಎ, ಸಿ, ಅಂಶಗಳಿದ್ದು, ಇದು ನಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಮೂಳೆಗಳು ಗಟ್ಟಿಯಾಗಿಸುವಲ್ಲಿ ಮತ್ತು ರೋಗನಿರೋಧಕ ಶಕ್ತಿ ಸುಧಾರಿಸುವಲ್ಲಿ ಪಾಲಕ್ ಸಹಕಾರಿಯಾಗಿದೆ.
ಮೆಂತ್ಯ
ಮೆಂತ್ಯ ಸೊಪ್ಪಿನಲ್ಲಿ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಚಳಿಗಾಲದಲ್ಲಿ ಉಷ್ಣತೆಯನ್ನು ನೀಡುತ್ತದೆ.
ಕೊತ್ತಂಬರಿ
ಕೊತ್ತಂಬರಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಸೊಪ್ಪನ್ನು ತಿನ್ನುವುದರಿಂದಲೂ ಹಲವು ಪ್ರಯೋಜನಗಳಿವೆ. ಇದು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಚಳಿಗಾಲದಲ್ಲಿ ದೇಹ ಶೀತಮಯವಾಗೋದು ಸಹಜ. ಹೆಚ್ಚು ಶೀತವಾದಾಗಲೇ ಈ ಸಮಯದಲ್ಲಿ ಅನಾರೋಗ್ಯ ಸಮಸ್ಯೆ ಕಾಡುವುದು. ಇದರಿಂದಾಗ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಉಡುಗೆ ತೊಡುವುದೂ ಸಹಜವೇ. ಆದರೆ ಕೆಲ ಆಹಾರ ಪದಾರ್ಥಗಳು ನಮ್ಮ ದೇಹದ ಶಾಖವನ್ನು ಹೆಚ್ಚಿಸಿ, ತಾಪಮಾನವನ್ನು ಸಮತೋಲನವಾಗಿರಿಸಲು ಸಹಾಯ ಮಾಡುತ್ತದೆ.










