ನಮ್ಮ ಭಾರತವನ್ನು Diabetes Capital of the World ಅಂತಾ ಕರೆಯಲಾಗ್ತಿದೆ. ಅಷ್ಟರ ಮಟ್ಟಿಗೆ ಮಧುಮೇಹ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ ಈ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸುವುದು ಅತ್ಯಂತ ಅವಶ್ಯಕವಾಗಿದೆ. ಇದನ್ನು ನಿರ್ವಹಿಸಲು ನುಗ್ಗೆ ಸೊಪ್ಪು(Moringa) ಹಲವಾರು ರೀತಿಯಲ್ಲಿ ಸಹಕಾರಿಯಾಗಿದೆ. ಮಧುಮೇಹ ಇರುವವರು ಈ ಸೊಪ್ಪನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

1. ರಕ್ತದಲ್ಲಿನ ಸಕ್ಕರೆ ನಿಯಂತ್ರಣ (Blood Sugar Regulation)
ನುಗ್ಗೆ ಸೊಪ್ಪಿನಲ್ಲಿರುವ Chlorogenic acid ಮತ್ತು Isothiocyanates, ಆಹಾರದಿಂದ ಶರೀರಕ್ಕೆ ಸಕ್ಕರೆ ಹೀರಿಕೊಳ್ಳುವಿಕೆ (sugar absorption) ವೇಗವನ್ನು ತಗ್ಗಿಸುತ್ತವೆ. ಇದರಿಂದ ಶರೀರದಲ್ಲಿ Glucose ನಿಧಾನವಾಗಿ bloodstreamಗೆ ಪ್ರವೇಶಿಸುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿ ಸಕ್ಕರೆ ಮಟ್ಟ (blood sugar level) ಸ್ಥಿರವಾಗಿರುತ್ತದೆ.
2. ಇನ್ಸುಲಿನ್ ಸೂಕ್ಷ್ಮತೆಯನ್ನು ನಿಯಂತ್ರಿಸುತ್ತದೆ (Insulin Sensitivity)
Type 2 diabetes ಉಳ್ಳವರಲ್ಲಿ Insulin Resistance ಸಾಮಾನ್ಯವಾಗಿರುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ Quercetin ಮತ್ತು Kaempferol ಎಂಬ Flavonoids, ಇನ್ಸುಲಿನ್ ಪ್ರತಿಕ್ರಿಯಾಶೀಲತೆಯನ್ನು (sensitivity) ಹೆಚ್ಚಿಸುತ್ತವೆ. ಇದರಿಂದ ಶರೀರದ ಕಣಗಳು ಇನ್ಸುಲಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತವೆ. ಪರಿಣಾಮವಾಗಿ, glucose ನಿಖರವಾಗಿ cells ಗೆ ಪ್ರವೇಶಿಸುತ್ತದೆ ಮತ್ತು blood sugar spike ಆಗುವುದು ಕಡಿಮೆಯಾಗುತ್ತದೆ.

3. ರಕ್ತದಲ್ಲಿ ಸಕ್ಕರೆ ನಿಯಂತ್ರಣ
ನುಗ್ಗೆ ಸೊಪ್ಪಿನಲ್ಲಿ dietary fiber ಹೆಚ್ಚಾಗಿದೆ. Fiber ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುವುದರಿಂದ ಸಕ್ಕರೆ ಹೀರಿಕೊಳ್ಳುವಿಕೆ ಕೂಡ ನಿಧಾನವಾಗುತ್ತದೆ. ಹೀಗಾಗಿ ಊಟದ ನಂತರ blood sugar sudden spike ಆಗುವುದು ತಪ್ಪಿಸುತ್ತದೆ. ಜೊತೆಗೆ, ಜೀರ್ಣಕ್ರಿಯೆ ಸುಧಾರಿತವಾಗುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯೂ ಚೆನ್ನಾಗಿ ಆಗುತ್ತದೆ.

4. ಮೇದೋಜೀರಕ ಗ್ರಂಥಿಗೆ ರಕ್ಷಣೆ
ನುಗ್ಗೆ ಸೊಪ್ಪಿನಲ್ಲಿ ಇರುವ ಶಕ್ತಿಶಾಲಿ antioxidants,ದೇಹದಲ್ಲಿ insulin ಉತ್ಪಾದನೆ ಮಾಡುವ ಮೇದೋಜೀರಕ ಗ್ರಂಥಿ (Pancreas)ಅನ್ನು ರಕ್ಷಿಸುತ್ತವೆ. ಮೇದೋಜೀರಕ ಗ್ರಂಥಿ ಮೇಲೆ ಒತ್ತಡ ಕಡಿಮೆಯಾದಷ್ಟು ಇನ್ಸುಲಿನ್ ಉತ್ಪಾದನೆ ಸರಿಯಾಗಿ ಆಗುತ್ತದೆ.
Read this also : Chocolate: ಡಯಾಬಿಟಿಸ್ ಕಂಟ್ರೋಲ್ ಮಾಡುತ್ತೆ ಈ ಚಾಕಲೇಟ್!?
5. ಒತ್ತಡ ನಿಯಂತ್ರಣ
ಮಧುಮೇಹ ಇರುವವರು ಮಾನಸಿಕ ಒತ್ತಡ ನಿಯಂತ್ರಣ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, Oxidative stress ನಿಂದ ಅಂಗಾಂಗಗಳು ಹಾನಿಗೊಳಗಾಗಬಹುದು. ನುಗ್ಗೆ ಸೊಪ್ಪಿನಲ್ಲಿರುವ Vitamins A, C, E – ಇವು Free radicals ವಿರುದ್ಧ ಹೋರಾಡಿ oxidative stress ಅನ್ನು ತಗ್ಗಿಸುತ್ತವೆ.

6. ಉರಿಯೂತ ನಿಯಂತ್ರಣ
ದೇಹದಲ್ಲಿ ಉರಿಯೂತ (inflammation) ಇದ್ದರೆ ಇನ್ಸುಲಿನ್ ಸರಿಯಾಗಿ ಕೆಲಸ ಮಾಡಲ್ಲ. ನುಗ್ಗೆ ಸೊಪ್ಪಿನಲ್ಲಿರುವ Kaempferol ಮತ್ತು Isothiocyanates ಎಂಬ Anti-inflammatory ಘಟಕಗಳು systemic inflammationಅನ್ನು ಕಡಿಮೆ ಮಾಡಿ ಇನ್ಸುಲಿನ್ ನ ಕಾರ್ಯವನ್ನು ಸುಧಾರಿಸುತ್ತವೆ.
7. ಶಕ್ತಿ ಮಟ್ಟ ಹೆಚ್ಚಿಸುವುದು
ಮಧುಮೇಹ ಇರುವವರು ಬೇಗ ಸುಸ್ತಾಗುತ್ತಾರೆ. ನುಗ್ಗೆ ಸೊಪ್ಪಿನಲ್ಲಿರುವ Iron, Calcium, Magnesium, B-vitamins ಇವು ದೇಹದ ಶಕ್ತಿ ಮಟ್ಟವನ್ನು ಸುಧಾರಿಸುತ್ತವೆ.
8. ಹೃದಯ ಆರೋಗ್ಯ
ಮಧುಮೇಹ ಇರುವವರಿಗೆ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚು. ನುಗ್ಗೆ ಸೊಪ್ಪು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಬೆಂಬಲಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಮತ್ತು ರಕ್ತದೊತ್ತಡ ಸಹ ನಿಯಂತ್ರಣದಲ್ಲಿರುತ್ತದೆ.
ಮಧುಮೇಹ ನಿಯಂತ್ರಣಕ್ಕೆ ನುಗ್ಗೆ ಸೊಪ್ಪು ಸಹಾಯ ಮಾಡುತ್ತದೆ. ಮಧುಮೇಹ ಜೀವನಶೈಲಿಯಿಂದ ನಿಯಂತ್ರಿಸಬೇಕಾದ ಸಮಸ್ಯೆ. ಊಟ, ತಿಂಡಿ, ನಿದ್ದೆ ಪ್ರತಿಯೊಂದರಲ್ಲೂ ಗಮನಹರಿಸಿದರೆ ಅದರ ನಿಯಂತ್ರಣ ಸುಲಭ.










