ದಿನನಿತ್ಯ ಟೀ ಮತ್ತು ಕಾಫಿಯನ್ನು ಪ್ಲಾಸ್ಟಿಕ್ ಕಪ್ ಅಥವಾ ಲೋಟದಲ್ಲಿ ಸೇವಿಸುತ್ತಿದ್ದರೆ, ನೀವು ಈಗಲೇ ಈ ಅಭ್ಯಾಸವನ್ನು ಬದಲಾಯಿಸಬೇಕು ಏಕೆಂದರೆ ನಕಾರಾತ್ಮಕ ಆರೋಗ್ಯ ಪರಿಣಾಮಗಳು ಇನ್ನೂ ಹೆಚ್ಚಾಗಬಹುದು.
ನಾವೆಲ್ಲರೂ ಬಹುಶಃ ಒಮ್ಮೆಯಾದರೂ ಪ್ಲಾಸ್ಟಿಕ್ ಅಥವಾ ಪೇಪರ್ ಕಪ್‌ಗಳಿಂದ ನೀರು, ಚಹಾ ಅಥವಾ ಕಾಫಿಯನ್ನು ಸೇವಿಸೆ ಇರುತ್ತೇವೆ. ಮದುವೆ ಅಥವಾ ರಸ್ತೆ ಬದಿಯ ಟೀ ಅಂಗಡಿಗಳಿರಲಿ ಎಲ್ಲೆಂದರಲ್ಲಿ ಡಿಸ್ಪೋಸೇಬಲ್ ಕಪ್ ಗಳು ಅಥವಾ ಲೋಟಗಳನ್ನು ನಮ್ಮ ವಿವೇಚನೆಯಿಲ್ಲದೆ ಬಳಸಲಾಗುತ್ತದೆ.

ಪ್ಲಾಸ್ಟಿಕ್ ಕಪ್ ಗಳು ಬಳಸಲು ತುಂಬಾ ಸುಲಭ ಆದ್ದರಿಂದ ಅನೇಕ ಜನರು ಬಳಸುತ್ತಾರೆ. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಆದರೆ ನಮ್ಮ ಜೀವನವನ್ನು ಸುಲಭಗೊಳಿಸುವ ಆ ಕಪ್ ಗಳು ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಎಂದು ತಿಳಿದಿದೆಯೇ?
ಇದನ್ನೂ ಓದಿ :ಮೊಬೈಲ್ ಬಳಕೆಯಿಂದ ಮೆದುಳಿಗೆ ಹಾನಿ..! ಸಂಶೋಧನಾ ವರದಿ ಬಿಚ್ಚಿಟ್ಟ ಆಘಾತಕಾರಿ ಸತ್ಯ..!
ಪ್ಲಾಸ್ಟಿಕ್ ಕಪ್‌ಗಳಿಂದ ಟೀ ಕುಡಿಯುವುದರಿಂದ ಆಗುವ ಅನಾನುಕೂಲಗಳೆಂದರೆ ;ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದ್ದು ಇದರ ಬಳಕೆಗೆ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಇದಕ್ಕೆ ಬಳಸಲಾದ ಪ್ಲಾಸ್ಟಿಕ್ ಮೆಟ್ರೋಸಮೈನ್ ಮತ್ತು ಬಿಸ್ಫೆನಾಲ್ ಆಗಿದೆ.ಇದು ಮಾರಣಾಂತಿಕ ರಾಸಾಯನಿಕಗಳನ್ನು ಹೊಂದಿದ್ದು ಅದು ನಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ.
ನೀವು ಬಿಸಿ ಚಹಾ ಅಥವಾ ಕಾಫಿಯನ್ನು ಸೇವಿಸಿದಾಗ, ಚಹಾದಲ್ಲಿನ ಮೈಕ್ರೋಪ್ಲಾಸ್ಟಿಕ್ ಕಣಗಳು ಕರಗಲು ಪ್ರಾರಂಭಿಸುತ್ತವೆ ಮತ್ತು ಚಹಾದೊಂದಿಗೆ ನಮ್ಮ ದೇಹವನ್ನು ಸೇರುತ್ತವೆ, ಅಂದರೆ ನಾವು ತಿಳಿಯದೆ ಪ್ಲಾಸ್ಟಿಕ್ ಅನ್ನು ತಿನ್ನುತ್ತಿದ್ದೀವಿ ಎಂದರ್ಥ. ಈ ಪ್ಲಾಸ್ಟಿಕ್ ಕಣಗಳು ಕರುಳಿನಲ್ಲಿ ಸಂಗ್ರಹಗೊಂಡು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಇದು ಅತಿಸಾರದಂತಹ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಮೂತ್ರಪಿಂಡದ (kidney problem) ಸಮಸ್ಯೆಗಳಿಗೂ ಕಾರಣವಾಗಬಹುದು.

ಇದನ್ನೂ ಓದಿ :ಕ್ಯಾಬೇಜ್ ನಿಂದ ಮೂರ್ಛೆ ರೋಗ : ಸತ್ಯ ಅಥವಾ ಮಿಥ್ಯ..?
ಗರ್ಭಾವಸ್ಥೆ (pregnancy) ಸಮಯದಲ್ಲಿ ಅಪ್ಪಿ ತಪ್ಪಿನೂ ಕೂಡ ಪ್ಲಾಸ್ಟಿಕ್ ಕಪ್ ನ ಬಳಸಬಾರದು, ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಪ್ಲಾಸ್ಟಿಕ್ ಕಪ್‌ಗಳನ್ನು ಬಳಸುವ ಜನರು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಾರೆ ಮತ್ತು ಅವರು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಹೆಚ್ಚು.
ಅದೇ ಸಮಯದಲ್ಲಿ, ಪ್ಲಾಸ್ಟಿಕ್ ಕಪ್‌ಗಳ ಅಪಾಯವನ್ನು ತಪ್ಪಿಸಲು ಪೇಪರ್ ಕಪ್‌ಗಳನ್ನು ಪರಿಚಯಿಸಲಾಯಿತು. ಈ ಸಮಸ್ಯೆಯನ್ನು ತಪ್ಪಿಸಲು, ಜನರು ಈಗ ಪ್ಲಾಸ್ಟಿಕ್ ಕಪ್‌ಗಳ ಬದಲಿಗೆ ಪೇಪರ್ ಕಪ್‌ಗಳನ್ನು ಬಳಸುತ್ತಾರೆ. ಪೇಪರ್ ಕಪ್‌ಗಳಲ್ಲಿಯೂ ಪ್ಲಾಸ್ಟಿಕ್ ಇರುತ್ತದೆ ಎಂದು ತಿಳಿದರೆ ನಮಗೆ ಆಶ್ಚರ್ಯವಾಗುತ್ತದೆ.
ಹೌದು, ಸಾಮಾನ್ಯವಾಗಿ ಪ್ಲಾಸ್ಟಿಕ್‌ನಿಂದ ಮಾಡಿದ ಹೈಡ್ರೋಫೋಬಿಕ್ ಫಿಲ್ಮ್‌ನ ಪದರವನ್ನು ಬಳಸಿ ಪೇಪರ್ ಕಪ್‌ಗಳನ್ನು ತಯಾರಿಸುತ್ತಾರೆ. ಪೇಪರ್ ಕಪ್‌ಗಳಲ್ಲಿರುವ ರಾಸಾಯನಿಕಗಳು ನಮ್ಮ ದೇಹದಲ್ಲಿ ಟಾಕ್ಸಿನ್‌ಗಳನ್ನು ನಿರ್ಮಿಸಲು ಕಾರಣವಾಗಬಹುದು. ಇದು ನಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ದುಷ್ಪರಿಣಾಮ ಬೀರುತ್ತದೆ.
ಒಟ್ಟಾರೆಯಾಗಿ ,ನಾವು ಜೀವನದಲ್ಲಿ ಎಷ್ಟು ಸುಲಭವಾಗಿ ಎಲ್ಲ ಆರಾಮವಾಗಿ ಆಗಬೇಕು ಅಂತ ಬಯಸುತ್ತೀವೋ ,ಅಷ್ಟೇ ಹೆಚ್ಚಾಗಿ ಆರೋಗ್ಯದಲ್ಲಿ ಪರಿಣಾಮ ಬೀರುತ್ತಾ ಹೋಗುತ್ತದೆ. ಇನ್ನು ಮುಂದಾದ್ರೂ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನ ಹರಿಸೋಣವೇ ?










