ಹೈಪರ್ಟೆನ್ಶನ್ (Hypertension) ಅಥವಾ ಹೈ ಬ್ಲಡ್ ಪ್ರೆಶರ್ (High Blood Pressure) ಇರುವವರಲ್ಲಿ ಕೆಲವೊಮ್ಮೆ ರಕ್ತದೊತ್ತಡ ಅಚಾನಕ್ಕಾಗಿ ಹೆಚ್ಚಾಗುತ್ತದೆ. ಅಂಥ ಸಂದರ್ಭಗಳಲ್ಲಿ ತಕ್ಷಣದ ಶಮನ ಅನಿವಾರ್ಯವಾಗಿರುತ್ತದೆ. ಆಗ ಒಂದು ಐಸ್ ಕ್ಯೂಬ್ ಇದ್ದರೆ ಸಾಕು ಇದನ್ನ ನಿಭಾಯಿಸಬಹುದು. ಅದೆ ಹೇಗೆ ಎಂದು ತಿಳಿಯಲು ಸ್ಕ್ರೋಲ್ ಡೌನ್ ಮಾಡಿ ಪೂರ್ತಿ ಬರಹ ಓದಿ
ಮಾನಸಿಕ ಒತ್ತಡ (stress), ಅತಿಯಾದ ಚಿಂತನೆ (overthinking) ಇವುಗಳಿಂದ ಕೆಲವೊಮ್ಮೆ ಅಚಾನಕ್ಕಾಗಿ ಬಿಪಿ ಹೆಚ್ಚಾಗಬಹುದು. ಇದರಿಂದ ಹೃದಯದ ಬಡಿತ ಹೆಚ್ಚಾಗುವುದು, ತಲೆನೋವು, ಅಸ್ವಸ್ಥತೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಂಥ ಸಮಯದಲ್ಲಿ ತಲೆ, ಕುತ್ತಿಗೆ ಹಾಗೂ ಬೆನ್ನು ಹುರಿಗೆ ಐಸ್ನ ಇಟ್ಟುಕೊಳ್ಳುವುದರಿಂದ (ice aplication) ತಕ್ಷಣಕ್ಕೆ ಶಮನ ಸಿಗುತ್ತದೆ.

ಬಿಪಿ ಏರಿದಾಗ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಐಸ್ ಮಸಾಜ್ ಮಾಡಿದಾಗ ನರವ್ಯವಸ್ಥೆಗಳನ್ನ ನಿಯಂತ್ರಿಸಲು (nerve systems stimulation) ಸಹಾಯವಾಗುತ್ತದೆ. ವಿಶೇಷವಾಗಿ, ವೇಗಸ್ ನರ (Vagus Nerve) ಎನ್ನುವುದು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನರವು ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಬಿಪಿ ಏರಿದಾಗ ಈ ವೇಗಸ್ ನರದ ಚಟುವಟಿಕೆ ಕಮ್ಮಿಯಾಗಬಹುದು. ಆದರೆ ಐಸ್ ಮಸಾಜ್ ಮೂಲಕ ಅದನ್ನು ಪುನಃ ಉತ್ತೇಜಿಸಬಹುದು. ಇದರಿಂದ ಹೃದಯದ ಏರು ಬಡಿತ ಶಾಂತಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗಲು ನೆರವಾಗುತ್ತದೆ.
ವೇಗಸ್ ನರ ಉತ್ತೇಜನದಿಂದ ಪ್ಯಾರಾಸಿಂಪಥೆಟಿಕ್ ನರ ವ್ಯವಸ್ಥೆ ಕೂಡ (Parasympathetic Nervous System) ಚುರುಕುಗೊಳ್ಳುತ್ತದೆ. ಇದು ಸಿಂಪಥೆಟಿಕ್ ನರ ವ್ಯವಸ್ಥೆ (Sympathetic Nervous System) ನಿಯಂತ್ರಿಸುವ ಮೂಲಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹೃದಯದ ಬಡಿತ ಸಮತೋಲನದಲ್ಲಿಡಲು ಮತ್ತು ದೇಹವನ್ನು ಶಾಂತ ಸ್ಥಿತಿಗೆ ತರಲು ಕೂಡ ಸಹಾಯವಾಗುತ್ತದೆ.
ದಿಢೀರ್ ಬಿಪಿ ಏರಿದಾಗ, ಮುಖ್ಯವಾಗಿ ಕುತ್ತಿಗೆ, ಭುಜ ಹಾಗೂ ಬೆನ್ನು ಭಾಗದ ಸ್ನಾಯುಗಳು (muscles stiffness) ಗಟ್ಟಿಯಾಗುತ್ತವೆ. ಐಸ್ ಮಸಾಜ್ ಈ ಸ್ನಾಯುಗಳನ್ನ ರಿಲ್ಯಾಕ್ಸ್ ಮಾಡಲು ಸಹಾಯ ಮಾಡುತ್ತದೆ. ಇದರಿಂದ ರಕ್ತನಾಳಗಳ ಮೇಲೆ ಇರುವ ಬಾಹ್ಯ ಒತ್ತಡ ಕಡಿಮೆಯಾಗುತ್ತದೆ. ತಲೆಯ ಭಾಗಕ್ಕೆ, ವಿಶೇಷವಾಗಿ ಹಣೆಗೆ ಐಸ್ ಮಸಾಜ್ ಮಾಡುವುದರಿಂದ ತಲೆನೋವು ನಿವಾರಣೆಯಾಗಿ, ಮಾನಸಿಕ ಒತ್ತಡ ಕಮ್ಮಿಯಾಗುತ್ತದೆ.

Read this also : Oil Pulling; ಸೆಲೆಬ್ರಿಟಿಗಳ Health+Beauty ಸಿಕ್ರೇಟ್ ಬಯಲು; ನೀವೂ ಟ್ರೈ ಮಾಡಬಹುದು!
ಈ ಐಸ್ ಥೆರಪಿ ಚಿಕಿತ್ಸಾ ವಿಧಾನವು ನ್ಯಾಚುರೋಪಥಿಯಲ್ಲಿ (Naturopathy) ಹೈಪರ್ಟೆನ್ಶನ್ನ ಶಮನಕ್ಕೆ ಇರುವ ಹೈಡ್ರೋಥೆರಪಿಯ (Hydrotherapy) ಒಂದು ಭಾಗವಾಗಿದೆ.
ಪ್ರಾಚೀನ ಚೈನೀಸ್ ಔಷಧಿಯಲ್ಲೂ ಈ ವಿಧಾನವನ್ನು ಕಾಣಬಹುದು. ಕುತ್ತಿಗೆ ಭಾಗದಲ್ಲಿ ಕೆಲ ನಿಮಿಷಗಳ ಕಾಲ ಐಸ್ ಇಡುವುದನ್ನು ಅಲ್ಲಿ ಫೆಂಗ್ ಫು ಥೆರಪಿ (Feng Fu Therapy) ಎಂದು ಕರೆಯುತ್ತಾರೆ. ಇದರಿಂದ ಅನೇಕ ಆರೋಗ್ಯ ಲಾಭಗಳಿವೆ ಎಂದು ನಂಬುತ್ತಾರೆ. ಇದರ ಮೇಲೆ ವೈದ್ಯಕೀಯ ಅಧ್ಯಯನಗಳೂ ನಡೆದಿವೆ. ಹೈಪರ್ಟೆನ್ಶನ್ ರೋಗಿಗಳಿಗೆ ಐಸ್ ಮಸಾಜ್ ಮಾಡಿದ ನಂತರ ಹೃದಯದ ಬಡಿತ ಸುಗಮವಾಗಿರುವುದು ಕಂಡು ಬಂದಿದೆ.
ಬಿಪಿ ಅಚನಕ್ಕಾಗಿ ಏರಿದಾಗಿ ಒಂದು ಕಾಟನ್ ಬಟ್ಟೆಗೆ ಐಸ್ ಕ್ಯೂಬ್ ಇಟ್ಟುಕೊಂಡು ಕುತ್ತಿಗೆ ಭಾಗ, ತಲೆ, ಹಣೆ, ಬೆನ್ನು ಹುರಿಗೆ ನಿಧಾನಕ್ಕೆ ಮಸಾಜ್ ಮಾಡುವುದನ್ನು ಟ್ರೈ ಮಾಡಬಹುದು.
Disclaimer – This is a simple home remedy and not a replacement for any medicine










