• About
  • Advertise
  • Contact
Friday, November 13, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Hair fall; ಕೂದಲು ಉದುರುತ್ತಿದ್ಯಾ? ಈ 5 ಆಹಾರಗಳನ್ನು ಸೇವಿಸಿ…

August 12, 2025
in GSS Maadhyama, Health and Wellness
Reading Time: 2 mins read
A A
0
122
VIEWS

ಕೂದಲು ಉದುರುವಿಕೆ (Hair fall) ಮತ್ತು ಕೂದಲು ತೆಳ್ಳಗಾಗುವುದು (Thinning) ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡದಿಂದ ಕೂಡಿದ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ರಾಸಾಯನಿಕಯುಕ್ತ ಶಾಂಪೂ, ಎಣ್ಣೆಗಳ ಬಳಕೆಯಿಂದ ನಮ್ಮ ಕೂದಲಿಗೆ ಹಾನಿಯಾಗುತ್ತಿದೆ.

ನಾವು ಸೇವಿಸುವ ಆಹಾರವನ್ನು ಸುಧಾರಿಸುವುದರಿಂದ ಕೂದಲನ್ನು  ಪೋಷಿಸಬಹುದು ಎಂದು ಆಯುರ್ವೇದ ಮತ್ತು ಆಧುನಿಕ ವಿಜ್ಞಾನ ಎರಡೂ ಒಪ್ಪಿಕೊಳ್ಳುತ್ತದೆ. ಹಾಗಾದರೆ ಈ ಲೇಖನದಲ್ಲಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವ 5 ಶಕ್ತಿಶಾಲಿ ಆಹಾರಗಳ ಬಗ್ಗೆ ತಿಳಿಯೋಣ.

#1. ಬಾದಾಮಿ (Almonds)

ಬಾದಾಮಿನಲ್ಲಿ ಬಯೋಟಿನ್ (Biotin) ಸಮೃದ್ಧವಾಗಿದ್ದು, ಇದು ಕೂದಲಿನ ಬೆಳವಣಿಗೆಗೆ ಉತ್ತಮ. ಇದರಲ್ಲಿರುವ ವಿಟಮಿನ್ E, ಮ್ಯಾಗ್ನೀಶಿಯಂ (Magnesium), ಆರೋಗ್ಯಕರ ಕೊಬ್ಬು (Healthy fat) ಒಲೆಯಿಕ್ ಆಸಿಡ್ (Oleic acid), ಲಿನೋಲೆಯಿಕ್ ಆಸಿಡ್ (Linoleic acid) ಗುಣಗಳು ಕೂದಲು ಬಲಪಡಿಸಲು ಸಹಾಯ ಮಾಡುತ್ತವೆ. ಕೂದಲು ಉದುರುವ ಸಮಸ್ಯೆಯಿದ್ದರೆ 3-4 ಬಾದಾಮಿಯನ್ನು ರಾತ್ರಿಯಿಡೀ ನೆನೆಸಿ ಬೆಳ್ಳಗ್ಗೆ ಸಿಪ್ಪೆ ತೆಗೆದು ತಿನ್ನುವ ಅಭ್ಯಾಸ ಮಾಡಿಕೊಳ್ಳಿ

#2. ಆಮ್ಲ (Amla / Indian Gooseberry)

ಬೆಟ್ಟದ ನೆಲ್ಲಿಕಾಯಿ ಎಂದು ಕರೆಯಲ್ಪಡುವ ಆಮ್ಲಾ, ಶತಮಾನಗಳಿಂದಲೂ ಆಯುರ್ವೇದದಲ್ಲಿ ಕೂದಲಿನ ಕಾಳಜಿಯಲ್ಲಿ ಪರಿಣಾಮಕಾರಿ ಔಷಧಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ C, ಪಾಲಿಫೀನಾಲ್ಸ್ (Polyphenols), ಆಂಟಿಆಕ್ಸಿಡೆಂಟ್ಸ್ ಇದ್ದು, ಕೊಲಾಜಿನ್ (Collagen) ಉತ್ಪಾದನೆ ಹೆಚ್ಚಿಸಲು, ಕೂದಲಿನ ಬೇರು ಪೋಷಿಸಲು, ಕೂದಲು ಬೇಗ ಬೆಳ್ಳಗಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ತಿಂಡಿಗೆ ಅರ್ಧ ಗಂಟೆ ಮುಂಚೆ ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡಬಹುದು ಅಥವಾ ಬೆಟ್ಟದ ನೆಲ್ಲಿ ರಸವನ್ನು ಕುಡಿಯಬಹುದು.

#3. ಮಜ್ಜಿಗೆ (Buttermilk)

ಇದು ಅಚ್ಚರಿಯ ವಿಷಯ ಎನಿಸಬಹುದು. ಆದರೆ ಆಯುರ್ವೇದದ ಪ್ರಕಾರ ಕೂದಲು ಸಮಸ್ಯೆಯ ಮೂಲ ಕಾರಣ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿದೆ. ಜೀರ್ಣಕ್ರಿಯೆ ದುರ್ಬಲವಾಗಿದ್ದರೆ, ದೇಹಕ್ಕೆ ಪೋಷಕಾಂಶ ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ನಮ್ಮ ಕೂದಲಿಗೂ ಪೋಷಕಾಂಶಗಳು ತಲುಪದೇ ಇರಬಹುದು.

ಮಜ್ಜಿಗೆಯಲ್ಲಿ ಪ್ರೊಬಯೋಟಿಕ್ಸ್ (Probiotics) ಮತ್ತು ಲ್ಯಾಕ್ಟಿಕ್ ಆಸಿಡ್ (Lactic acid) ಇದ್ದು, ಉತ್ತಮ ಜೀರ್ಣಕ್ರಿಯೆಗಾಗಿ ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹವನ್ನು ತಂಪಾಗಿಡುತ್ತದೆ. ಆಯುರ್ವೇದದ ಪ್ರಕಾರ, “ಉಷ್ಣದಿಂದ ಉಂಟಾಗುವ ಕೂದಲು ಉದುರುವಿಕೆ ಸಮಸ್ಯೆ” ತಡೆಯಲು ಇದರಿಂದ ಸಾಧ್ಯವಾಗುತ್ತದೆ. ಊಟಕ್ಕೆ ಮಜ್ಜಿಗೆ ಬಳಸಬಹುದು ಅಥವಾ ಊಟದ ನಂತರ ಮಜ್ಜಿಗೆ ಕುಡಿಬಹುದು. ಇದು ಪರೋಕ್ಷವಾಗಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Read this also – Premature grey hair – ಕೂದಲು ಬೇಗ ಬಿಳಿಯಾಗ್ತಿದ್ಯಾ? – ಈ ಮನೆಮದ್ದು ಟ್ರೈ ಮಾಡಿ!

#4. ಕರಿಬೇವು (Curry Leaves)

ದಕ್ಷಿಣ ಭಾರತದ ಆಹಾರದಲ್ಲಿ ಕರಿಬೇವು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದರಲ್ಲಿರುವ B-ವಿಟಮಿನ್ಗಳು (B Vitamins), ಐರನ್ (Iron), ಕ್ಯಾಲ್ಸಿಯಂ (Calcium) ಮತ್ತು ಶಕ್ತಿಶಾಲಿ ಆಂಟಿಆಕ್ಸಿಡೆಂಟ್ಸ್ ಗುಣಗಳು ಕೂದಲಿನ ಆರೋಗ್ಯಕ್ಕೆ ಹಿತಕರ. ಕೂದಲಿನ ಬೇರು ಬಲಪಡಿಸಲು, ನೆತ್ತಿಯ ಆರೋಗ್ಯ ಕಾಪಾಡಲು, ಕೂದಲು ಬೇಗ ಬೆಳ್ಳಗಾಗುವುದನ್ನು ತಡೆಯಲು ಕರಿಬೇವು ಕೆಲಸ ಮಾಡುತ್ತದೆ. ನಿತ್ಯ ಮಾಡುವ ತಿಂಡಿ, ಊಟದಲ್ಲಿ ಕರಿಬೇವು ಬಳಸಬಹುದು, ಅಭ್ಯಾಸವಿದ್ದರೆ ಹಾಗೆಯೇ ಅಗಿದು ತಿನ್ನಬಹುದು.

#5. ಕ್ಯಾರೆಟ್ (Carrot)

ಕ್ಯಾರೆಟ್ಗಳಲ್ಲಿ ಬೀಟಾ-ಕರೋಟಿನ್ (Beta-carotene) ಸಮೃದ್ಧವಾಗಿದೆ. ನಮ್ಮ ದೇಹ ಇದನ್ನು ವಿಟಮಿನ್ A ಆಗಿ ಪರಿವರ್ತಿಸುತ್ತದೆ, ಇದು ನೆತ್ತಿಯನ್ನು ಆರೋಗ್ಯವಾಗಿಡಲು ಮತ್ತು ಕೂದಲಿನ ಬೇರು ಬಲಪಡಿಸಲು ಅಗತ್ಯ. ಇದಲ್ಲದೆ, ಕ್ಯಾರೆಟ್ಗಳಲ್ಲಿ ಸ್ವಲ್ಪ ಪ್ರಮಾಣದ ಬಯೋಟಿನ್ (Biotin) ಇದೆ, ಇದು ದೇಹದಲ್ಲಿ ಕೂದಲಿನ ಮುಖ್ಯ ಪ್ರೋಟೀನ್ ಕೆರಾಟಿನ್ (Keratin) ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಸಿ ಕ್ಯಾರೆಟ್ಅನ್ನು ಸ್ನ್ಯಾಕ್ ರೀತಿ ಬಳಸಬಹುದು, ತಿಂಡಿ ಊಟಕ್ಕೆ ಇದನ್ನು ಸೇರಿಸಿ ಸೇವಿಸಬಹುದು.

ನಾವು ಎಷ್ಟೋ ಬಾರಿ ಕೂದಲು ಯಾಕೆ ಉದುರುತ್ತೆ ಎಂದೇ ಯೋಚಿಸುತ್ತೇವೆ ಹೊರತು ನಮ್ಮ ಕೂದಲಿಗೆ ಸರಿಯಾದ ಪೋಷಕಾಂಶಗಳನ್ನು ನೀಡುತ್ತಿದ್ದೇವಾ ಎಂದು ಯೋಚಿಸಲ್ಲ. ಕೂದಲಿನ ಕಾಳಜಿ ಮಾಡಲು ಇಂಥ ಆಹಾರಗಳು ನಿಮ್ಮ ಆಹಾರ ಪದ್ಧತಿಯಲ್ಲಿರುವುದು ಮುಖ್ಯವಾಗುತ್ತದೆ.

ಸೂಚನೆ: ಇವು ಸಾಮಾನ್ಯ ಕೂದಲು ಉದುರುವಿಕೆ ಮತ್ತು ಕೂದಲಿನ ಆರೋಗ್ಯಕ್ಕೆ ಮನೆಯಲ್ಲೇ ಅನುಸರಿಸಬಹುದಾದ ಸಲಹೆಗಳು. ಕೂದಲು ಉದುರುವಿಕೆ ತೀವ್ರವಾಗಿದ್ದರೆ ಅಥವಾ ನಿರಂತರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ.

Tags: 5 best foods for hairfallhair carehairfall
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.