ಮಕ್ಕಳು ದಿನದಿನಕ್ಕೂ ಹೊಸ ವಿಷಯಗಳನ್ನು ಕಲಿಯುತ್ತಾರೆ, ನಾನಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ, ಹೊಸ ಹೊಸ ವಿಚಾರಗಳನ್ನು ಯೋಚಿಸುತ್ತಾರೆ. ಅವರ ಕಲಿಕೆ, ಸೃಜನಶೀಲ ಯೋಚನೆಗಳು ಸರಿಯಾಗಿ ಬೆಳೆಯಬೇಕಾದರೆ ಅವರ ಮೆದುಳಿನ ಆರೋಗ್ಯ ಉತ್ತಮವಾಗಿರಬೇಕು. ಮೆದುಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಸರಿಯಾದ ಆಹಾರದ ಮೂಲಕ ನೀಡಬೇಕು. ಹೀಗೆ ಮಾಡಿದಾಗ ಮಕ್ಕಳಲ್ಲಿನ ನೆನಪಿನ ಶಕ್ತಿ(Memory Power) ಕೂಡ ಚುರುಕುಗೊಳ್ಳುತ್ತದೆ.
ಮಕ್ಕಳ ಮೆದುಳಿನ ಬೆಳವಣಿಗೆ, ನೆನಪಿನ ಶಕ್ತಿ ಮತ್ತು ಅವರ ಕಲಿಕೆಯ ಸಾಮರ್ಥ್ಯಕ್ಕೆ ಸಹಾಯ ಮಾಡುವ 4 ನೈಸರ್ಗಿಕ ಬೀಜಗಳ ಬಗ್ಗೆ ಈ ಬರಹದಲ್ಲಿ ತಿಳಿಯೋಣ.
1. ಅಗಸೆ ಬೀಜ (Flaxseeds)

ಅಗಸೆ ಬೀಜಗಳಲ್ಲಿ ಒಮೆಗಾ -3 ಫ್ಯಾಟಿ ಆಸಿಡ್ (Omega-3 fatty acids) ಹಾಗೂ ಫೈಬರ್ (Fiber) ಅಧಿಕವಾಗಿದ್ದು, ಮೆದುಳಿನ ರಚನೆ ಹಾಗೂ ಕಾರ್ಯವಿಧಾನವನ್ನು ಉತ್ತಮಗೊಳಿಸುತ್ತದೆ. Omega-3 ಮಕ್ಕಳು ಯೋಚಿಸುವ ಶಕ್ತಿಯನ್ನು, ಕಲಿಕೆಯ ಸಾಮರ್ಥ್ಯವನ್ನು ಜೊತೆಗೆ ಒಟ್ಟಾರೆ ಬೆಳವಣಿಗೆ (Cognitive development) ಅನ್ನು ಬಲಪಡಿಸುತ್ತದೆ.
ಹೇಗೆ ಬಳಸುವುದು? – ಅಗಸೆ ಬೀಜವನ್ನು ಪುಡಿಮಾಡಿ ಸ್ಮೂಥೀಸ್, ಒಮ್ಲೆಟ್, ಚಪಾತಿ ಹಿಟ್ಟಿಗೆ ಸೇರಿಸಿ ಮಕ್ಕಳಿಗೆ ನೀಡಬಹುದು. ಚಟ್ನಿ ಪುಡಿಯೊಂದಿಗೂ ಬೆರಸಿ ಬಳಸಬಹುದು. ಅಗಸೆ ಬೀಜ ಹಾಗೆಯೇ ತಿಂದರೆ ಸರಿಯಾಗಿ ಜೀರ್ಣವಾಗಲ್ಲ, ಆದ್ದರಿಂದ ಸದಾ ಪುಡಿ ಮಾಡಿ ಕೊಡುವುದು ಉತ್ತಮ.
2. ಕುಂಬಳಕಾಯಿ ಬೀಜ (Pumpkin Seeds)

ಈ ಬೀಜಗಳನ್ನು “Brain Boosting Seeds” ಎಂದೇ ಕರೆಯುತ್ತಾರೆ! ಇದರಲ್ಲಿ ಮೆಗ್ನೀಸಿಯಮ್, ಸತು, ಕಬ್ಬಿಣಾಂಶಗಳಿವೆ (Magnesium, Zinc, Iron). ಸತು ಮೆದುಳಿನಲ್ಲಿ ನೆನಪಿನ ಶಕ್ತಿಯನ್ನು ಮತ್ತು ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೇ, ಮೆದುಳಿನ ನರ ವ್ಯವಸ್ಥೆಗೂ ಸಹಾಯ ಮಾಡುತ್ತದೆ.
ಹೇಗೆ ಬಳಸುವುದು? – ಇದನ್ನು ಸಾಲಡ್, ಸ್ಮೂಥೀಸ್‌ನಲ್ಲಿ ಸೇರಿಸಿ ಸೇವಿಸಬಹುದು. ಮುದ್ದೆ, ಚಪಾತಿ ಹಿಟ್ಟಿಗೂ ಸೇರಿಸಬಹುದು. Roasted seeds ಅನ್ನು ಸ್ನ್ಯಾಕ್ ರೂಪದಲ್ಲಿ ತಿನ್ನಬಹುದು.
Read this – Calcium ; ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳು
3. ಚಿಯಾ ಬೀಜ (Chia Seeds)

ಚಿಯಾ ಬೀಜಗಳಲ್ಲಿ ಫೈಬರ್, ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು (Fiber, Protein, Omega-3 fatty acids, Antioxidants) ಇರುತ್ತದೆ. ಇದು ಜೀರ್ಣಕ್ರಿಯೆ ಸುಧಾರಿಸಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಕ್ಕಳ ಮಾನಸಿಕ ಬೆಳವಣಿಗೆಗೂ ಬೆಂಬಲಿಸುವ ಹಲವಾರು ಮೈಕ್ರೋನ್ಯೂಟ್ರಿಯೆಂಟ್ಸ್ ಚಿಯಾ ಬೀಜದಲ್ಲಿ ಅಡಗಿವೆ.
ಹೇಗೆ ಬಳಸುವುದು? – ಚಿಯಾ ಬೀಜವನ್ನು ಯಾವಾಗಲೂ ನೀರಿನಲ್ಲಿ ನೆನೆಸಿಟ್ಟು ಸೇವಿಸಬೇಕು. ನೆನೆಸಿದ ಚಿಯಾ ಬೀಜವನ್ನು ಸ್ಮೂಥೀಸ್ ಗೆ ಸೇರಿಸಿ ಕುಡಿಯಬಹುದು.
4. ಸೂರ್ಯಕಾಂತಿ ಬೀಜ (Sunflower Seeds)

ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ, ಮೆಗ್ನೀಸಿಯಮ್, ರಂಜಕ, ಸತು, ಫೋಲೇಟ್ (Vitamin E, Magnesium, Phosphorus, Zinc, Folate) ಇರುತ್ತವೆ. ಇದು ಮೆದುಳಿನ ಒತ್ತಡವನ್ನು ಕಡಿಮೆ ಮಾಡುವುದು, ನೆನಪಿನ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ಮೆದುಳಿನ ಚುರುಕುತನಕ್ಕೆ ಸಹಾಯ ಮಾಡುತ್ತದೆ.
ಹೇಗೆ ಬಳಸುವುದು? – ಚಿಕ್ಕ ಮಕ್ಕಳಿಗೆ ಪುಡಿ ರೂಪದಲ್ಲಿ ನೀಡಿ. ಸಾಲಡ್, ಚಟ್ನಿ ಪುಡಿಗೆ ಇದರ ಪುಡಿ ಸೇರಿಸಬಹುದು. Roasted seeds ಇದ್ದರೆ ಉತ್ತಮ. ಆದರೆ ಹೆಚ್ಚು ಸಕ್ಕರೆ/ಉಪ್ಪು ಮಿಶ್ರಿತ ಇದ್ದರೆ ಅಂಥಹ ಬೀಜಗಳನ್ನು ಸೇವಿಸದಿರಿ
ಮಕ್ಕಳ ಮೆದುಳಿನ ಆರೋಗ್ಯಕ್ಕಾಗಿ ಈ ನೈಸರ್ಗಿಕ ಬೀಜಗಳನ್ನು ಅವರ ಆಹಾರದಲ್ಲಿ ಸೇರಿಸಿ. ಇದು ನೆನಪಿನ ಶಕ್ತಿ, ಚುರುಕುತನ ಹಾಗೂ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.










