ಜಾಗತಿಕವಾಗಿ ಇತ್ತೀಚೆಗೆ ಪ್ರಕಟವಾದ ಮಹತ್ವದ ಅಧ್ಯಯನವೊಂದು 2008 ರಿಂದ 2017ರ ಅವಧಿಯಲ್ಲಿ ಜನಿಸಿದವರು ಅವರ ಜೀವಿತಾವಧಿಯಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಗೆ (Gastric cancer) ತುತ್ತಾಗುವ ಅಪಾಯ ಹೆಚ್ಚಿದೆ ಎಂಬ ಎಚ್ಚರಿಕೆ ನೀಡುತ್ತಿದೆ.
ಗ್ಯಾಸ್ಟ್ರಿಕ್ ಕ್ಯಾನ್ಸರ್ ಎನ್ನುವುದು ಹೊಟ್ಟೆಯ ಒಳಪದರ ಅಂದರೆ ಜಠರದ ಒಳಭಾಗದಲ್ಲಿ ಬೆಳೆಯುವ ಗಂಭೀರವಾದ ಖಾಯಿಲೆಯಾಗಿದೆ. ಇದನ್ನು ಸೈಲೆಂಟ್ ಕಿಲ್ಲರ್ ಎನ್ನಬಹುದು. ಏಕೆಂದರೆ ಇದು ಹಲವು ವರ್ಷಗಳ ಕಾಲ ಲಕ್ಷಣವಿಲ್ಲದೇ ಬೆಳೆಯುತ್ತದೆ ಮತ್ತು ಕೊನೆಯ ಹಂತದಲ್ಲಿ ಪತ್ತೆಯಾಗುತ್ತದೆ. ಆಗ ಚಿಕಿತ್ಸೆ ನೀಡುವ ಅವಕಾಶಗಳೂ ಕಮ್ಮಿ.
ಈ ಅಧ್ಯಯನವು ವಿಶೇಷವಾಗಿ 2008 ರಿಂದ 2017ರ ಅವಧಿಯಲ್ಲಿ ಹುಟ್ಟಿದ ಜನಸಂಖ್ಯೆಯ ಮೇಲೆ ಗಮನಹರಿಸಿದೆ. ಈ ಮೂಲಕ ವಿಜ್ಞಾನಿಗಳಿಗೆ ಹಾಲಿ ಅಂಕಿಅಂಶಗಳು ಹಾಗೂ ಜನಸಂಖ್ಯೆಯ ಹಣೆಬರಹಗಳನ್ನು ಆಧರಿಸಿ ಭವಿಷ್ಯದಲ್ಲಿ ಕ್ಯಾನ್ಸರ್ ರಿಸ್ಕ್ ಎಷ್ಟಿರಬಹುದು ಎಂದು ಅಂದಾಜಿಸಲು ಸಹಾಯವಾಗುತ್ತದೆ.
ಗ್ಯಾಸ್ಟ್ರಿಕ್ ಕ್ಯಾನ್ಸರ್ ಗೆ ಕಾರಣವಾಗುವ ಪ್ರಮುಖ ಅಂಶವೆಂದರೆ ಹೆಲಿಕೋಬ್ಯಾಕ್ಟರ್ ಪೈಲೋರಿ (Helicobacter pylori / H. pylori) ಎಂಬ ಬ್ಯಾಕ್ಟೀರಿಯಾ ಸೋಂಕು. ಈ ಬ್ಯಾಕ್ಟೀರಿಯಾವು ಸಾಮಾನ್ಯವಾಗಿ ಬಾಲ್ಯದಲ್ಲಿ ಕಲುಷಿತ ಆಹಾರ, ನೀರು ಅಥವಾ ಬಳಸುವ ಕ್ವಾಲಿಟಿ ಇಲ್ಲದ ಪಾತ್ರೆಗಳನ್ನು ಬಳಸುವ ಮೂಲಕ ಸೇರಬಹುದು. ಹೆಚ್ಚಿನವರು ಯಾವುದೇ ಲಕ್ಷಣವಿಲ್ಲದೇ ಈ ಸೋಂಕನ್ನು ಹೊತ್ತಿರುತ್ತಾರೆ. ಆದರೆ, ಇದರಿಂದ ಜಠರದಲ್ಲಿ ದೀರ್ಘಕಾಲದ ಉರಿಯೂತ ಉಂಟಾಗಿ, ಒಂದು ಹಂತದಲ್ಲಿ ಕ್ಯಾನ್ಸರ್ ಗೆ ದಾರಿ ಮಾಡಿಕೊಡಬಹುದು.

ಅಧ್ಯಯನದ ಪ್ರಮುಖ ಅಂಶಗಳು:
- 2008–2017ರ ನಡುವೆ ಜನಿಸಿದ ಪ್ರಪಂಚದಾದ್ಯಂತ ಸುಮಾರು 15 ಮಿಲಿಯನ್ ಜನರು ಗ್ಯಾಸ್ಟ್ರಿಕ್ ಕ್ಯಾನ್ಸರ್ ಗೆ ಒಳಗಾಗಬಹುದು.
- ಏಷ್ಯಾ, ವಿಶೇಷವಾಗಿ ಭಾರತ ಮತ್ತು ಚೀನಾದಲ್ಲಿ ಈ ಕಾಯಿಲೆಯ ಅಪಾಯ ಹೆಚ್ಚು
- ಏಷ್ಯಾ ಒಂದರಲ್ಲೇ ಈ ಅವಧಿಯ ಜನರಲ್ಲಿ ಒಟ್ಟು 10.6 ಮಿಲಿಯನ್ ಪ್ರಕರಣಗಳ ನಿರೀಕ್ಷೆ
- ಭಾರತ ಮತ್ತು ಚೀನಾ ಸೇರಿ ಸುಮಾರು 6.5 ಮಿಲಿಯನ್ ಪ್ರಕರಣಗಳ ನಿರೀಕ್ಷೆ
- H. pylori ಸೋಂಕು ಜಗತ್ತಿನಾದ್ಯಂತ ಶೇ.89% ನಾನ್-ಕಾರ್ಡಿಯಾ ಗ್ಯಾಸ್ಟ್ರಿಕ್ ಕ್ಯಾನ್ಸರ್ (Non-cardia gastric cancer) ಗೆ ಕಾರಣವಾಗುತ್ತಿದೆ.
- H. pylori ಸೋಂಕು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಭವಿಷ್ಯದಲ್ಲಿ ಶೇ.75% ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ಸಾಧ್ಯ.
Read this also : PCOS; ಯಾವುದ್ರಲ್ಲೂ ಆಸಕ್ತಿ ಇಲ್ಲ, ಗಮನ ಇಲ್ಲ! ವಿಜ್ಞಾನಿಗಳು ಪತ್ತೆ ಮಾಡಿದ್ದೇನು?
ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣಗಳು :
- ಹಸಿವಿಲ್ಲದೇ ಇರುವುದು
- ಆಹಾರ ನುಂಗಲು ಕಷ್ಟವಾಗುವುದು
- ಸುಸ್ತು, ದುರ್ಬಲತೆ
- ವಾಂತಿ, ತಲೆಸುತ್ತು
- ಹೊಟ್ಟೆ ನೋವು
- ಅನಿಯಮಿತ ತೂಕ ಇಳಿಕೆ
- ರಕ್ತ ವಾಂತಿ
- ಮಲ ಕಪ್ಪಾಗುವುದು
ಈ ಕಾಯಿಲೆಯನ್ನು ಹೇಗೆ ತಡೆಗಟ್ಟಬಹುದು?
ಈ ಅಧ್ಯಯನವು ಸಾರ್ವಜನಿಕರ ಆರೋಗ್ಯದ ಅಗತ್ಯತೆಗಳನ್ನು ಒತ್ತಿಹೇಳುತ್ತದೆ.
- H. pylori ಪತ್ತೆಗಾಗಿ ಹೆಚ್ಚು ಅಪಾಯ ಎನಿಸುವ ಜನರನ್ನು ತಪಾಸಣೆ ಮಾಡುವುದು
- ಆಂಟಿಬಯೋಟಿಕ್ ಚಿಕಿತ್ಸೆ ನೀಡಿ ಸೋಂಕನ್ನು ಶೀಘ್ರದಲ್ಲೇ ನಿರ್ಮೂಲಿಸುವುದು
- ಜನರಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯ ಮತ್ತು ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು
This content is based on research and other reports. GSS Media is not responsible for the accuracy or truth of the information.










