ಎಲೆಕೋಸು ತಿನ್ನುವುದರಿಂದ ಮೂರ್ಛೆ ಬರುತ್ತದೆ ಎಂಬ ವದಂತಿಗಳ ಬಗ್ಗೆ ನಮಗೆ ತಿಳಿದಿದೆ. ಎಲೆಕೋಸಿನಲ್ಲಿರುವ ಹುಳುಗಳು ಮೆದುಳಿಗೆ ಹಾನಿ ಮಾಡುತ್ತದೆ ಮತ್ತು ಅಪಸ್ಮಾರಕ್ಕೆ ಕಾರಣವಾಗಬಹುದು ಎಂಬ ವದಂತಿಗಳನ್ನ ನಾವು ಕೇಳಿದ್ದೇವೆ. ಇದರ ಕುರಿತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮಿಶ್ರಾ ,ಈ ಸುದ್ದಿಯ ಹಿಂದಿನ ಸತ್ಯಾ ಸತ್ಯದ ಬಗ್ಗೆ ವಿವರಿಸಿದ್ದಾರೆ .

ಎಲೆಕೋಸು ಫ್ಲವರ್ ರೀತಿಯಲ್ಲಿ ಅರಳೋದ್ರಿಂದ ಅದರಲ್ಲಿ ‘’ಪ್ರೋಬೋಸ್ಕಿಸ್ ‘’ ಎಂಬ ಕೀಟವು ಎಲೆಗಳಲ್ಲಿ ಬಂದು ಮೊಟ್ಟೆಗಳನ್ನು ಇಡುತ್ತದೆ. ಆ ಮೊಟ್ಟೆಯು ನಮ್ಮ ದೇಹದ ಭಾಗವನ್ನು ಸೇರಿ ,ಅದರಲ್ಲಿ ಮುಖ್ಯವಾಗಿ ಮೆದುಳಿಗೆ ತಲುಪಿದರೆ ಮೂರ್ಛೆ ರೋಗ ಬರುವ ಸಾಧ್ಯತೆ ತುಂಬಾನೇ ಹೆಚ್ಚಿರುತ್ತದೆ. ಎಲೆಕೋಸುನಲ್ಲಿ ಬಂದು ಸೇರುವ ಹುಳುಗಳು ತುಂಬಾ ಅಪಾಯಕಾರಿ ಆಗಿರುವುದರ ಕಾರಣ ಎಲೆಕೋಸು ಬಳಸುವಾಗ ತುಂಬಾ ಸುರಕ್ಷಿತಯಿಂದ ಬಳಸಿದರೆ ಅದರಿಂದ ಬರುವ ರೋಗಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅದಕ್ಕೆ ಪಾಲಿಸಬೇಕಾದ ಕ್ರಮವೆಂದರೆ ,ಬಿಸಿನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಅದರಲ್ಲಿ ಎಲೆಕೋಸು ಹಾಕಿ, ಅರ್ಧ ಘಂಟೆಯವರೆಗೆ ಬಿಟ್ಟು ನಂತರ ಬಳಕೆ ಮಾಡುವುದು ಉತ್ತಮ. ಇದರಿಂದ ಹುಳಗಳು ಅಥವಾ ಹುಳಗಳ ಮೊಟ್ಟೆಗಳು ದೇಹಕ್ಕೆ ಪ್ರವೇಶಿಸದಂತೆ ತಡೆಗಟ್ಟಬಹುದು. ನಾವು ದಿನನಿತ್ಯ ಬಳಸುವ ಎಲ್ಲ ತರಕಾರಿ ಪದಾರ್ಥಗಳನ್ನು ಹೀಗೆ ತೊಳೆದು ಬಳಸುದರಿಂದ ಅದರಲ್ಲಿರುವ ಕೀಟ , ಕ್ರಿಮಿನಾಶಕಗಳಿಂದ ಅರೋಗ್ಯ ಕೆಡುವುದನ್ನು ತಪ್ಪಿಸಿಕೊಳ್ಳಬಹುದು.
ಇದನ್ನೂ ಓದಿ : ಲಿಪ್ಸ್ಟಿಕ್ ನ ಕರಾಳ ಸತ್ಯಗಳು..!
ಇದೆಲ್ಲ ತಿಳಿದ ಮೇಲೆ ನಮಗೆಲ್ಲರಿಗೂ ಕಾಡುವ ಪ್ರಶ್ನೆ ಎಂದರೆ ಎಲೆಕೋಸು ತಿನ್ನೋದ ಅಥವಾ ಬೇಡ ಎಂದು. ನಿಜಕ್ಕೂ ಅದು ತಪ್ಪು ಕಲ್ಪನೆ. ಎಲೆಕೋಸು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಲೆ ಕೋಸಿನಲ್ಲಿ ಕಂಡು ಬರುವ ಪೌಷ್ಟಿಕ ಅಂಶಗಳನ್ನು ನಾವು ಒಮ್ಮೆ ಗಮನಿಸಿ ನೋಡುವು ದಾದರೆ ಪ್ರತಿಯೊಂದು ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳೇ ಆಗಿವೆ. ಎಲೆ ಕೋಸಿನಲ್ಲಿ ವಿಟಮಿನ್ ‘ ಕೆ ‘, ವಿಟಮಿನ್ ‘ B6 ‘, ವಿಟಮಿನ್ ‘ C ‘ ಜೊತೆಗೆ ವಿಟಮಿನ್ B ವಿಟಮಿನ್ ಬಿ1 , ಮ್ಯಾಂಗನೀಸ್, ಪೊಟ್ಯಾಶಿಯಂ, ನಾರಿನ ಅಂಶ, ಕಂಡು ಬರುತ್ತವೆ. ಇದರ ಜೊತೆಗೆ ಮೆಗ್ನೀಷಿಯಂ, ಕ್ಯಾಲ್ಸಿಯಂ, ನಯಾಸಿನ್, ಪಾಸ್ಪರಸ್, ಸೆಲೆನಿಯಂ, ಪ್ಯಾಂಟೋಥೆನಿಕ್ ಆಸಿಡ್, ಪ್ರೋಟೀನ್ ಅಂಶ ಇರುವ ಕಾರಣ ಎಲೆ ಕೋಸು ನಮ್ಮ ಆರೋಗ್ಯಕ್ಕೆ ದಿನದ ಅಗತ್ಯತೆಗೆ ತಕ್ಕಂತೆ ಯಾವುದೇ ಪೌಷ್ಟಿಕಾಂಶಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಎಲೆಕೋಸು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಎಲೆ ಕೋಸಿನಲ್ಲಿ ಆಂಟಿ – ಆಕ್ಸಿಡೆಂಟ್ ಅಂಶಗಳು ಸಾಕಷ್ಟು ಒಳ್ಳೆಯ ಗುಣಮಟ್ಟದಿಂದ ಕೂಡಿದ್ದು, ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುವಂತಹ ಶಕ್ತಿ ಪಡೆದಿವೆ. ಇದು ನಮ್ಮ ದೇಹದಲ್ಲಿನ ಹಾನಿಕಾರಕ ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಯಶಸ್ವಿಯಾಗುತ್ತದೆ.
ಎಲೆ ಕೋಸಿನಲ್ಲಿ ಕಂಡು ಬರುವ ವಿಟಮಿನ್ ಅಂಶ. ಚರ್ಮದ ಮೇಲಿನ ಅಲರ್ಜಿ, ಕೀಲು ನೋವು, ಉರಿಯೂತ, ಚರ್ಮದ ಕಿರಿಕಿರಿ, ಜ್ವರ ಮತ್ತು ಇನ್ನಿತರ ಚರ್ಮದ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುವಂತಹ ಅತ್ಯದ್ಭುತ ಗುಣ ಲಕ್ಷಣಗಳು ಎಲೆ ಕೋಸಿನಲ್ಲಿ ಕಂಡು ಬರುತ್ತವೆ. ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ಮನೆ ಮದ್ದು ಎಂದು ಹೇಳಬಹುದು. ವಯಸ್ಸಾಗುತ್ತಿದ್ದಂತೆ ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಇದು ಸುಲಭವಾಗಿ ನಿವಾರಣೆ ಮಾಡುತ್ತದೆ. ನಮಗೆ ಮೆದುಳು ನಾವು ಚಿಕ್ಕ ವಯಸ್ಸಿನವರಾಗಿದ್ದಾಗ ಕೆಲಸ ಮಾಡಿದ ಚುರುಕುತನದಷ್ಟು ವಯಸ್ಸಾದ ಮೇಲೆ ಕೆಲಸ ಮಾಡುವುದಿಲ್ಲ. ಇದಕ್ಕೆ ಕಾರಣ ಆಕ್ಸಿಡೇಟಿವ್ ಒತ್ತಡ ಎಂದು ಹೇಳಬಹುದು. ಆದರೆ ಎಲೆ ಕೋಸು ಆಕ್ಸಿಡೇಟಿವ್ ಪ್ರಕ್ರಿಯೆಯನ್ನು ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ಮಾಡುತ್ತದೆ. ನಮ್ಮ ದೇಹದಲ್ಲಿರುವ ಕೊಬ್ಬಿನಂಶವನ್ನು ಹೊರ ಹಾಕುವಲ್ಲಿ ಸಹಾಯಕವಾಗಿದೆ. ಅದೇ ರೀತಿ ಮೂತ್ರ ಪಿಂಡಗಳ ಸಮಸ್ಯೆಯನ್ನು ಹೊಂದಿದವರಿಗೆ ಎಲೆ ಕೋಸು ತನ್ನಲ್ಲಿನ ವಿಟಮಿನ್ ‘ ಸಿ ‘ ಎಂಬ ಆಂಟಿ – ಆಕ್ಸಿಡೆಂಟ್ ಅಂಶದಿಂದ ಕಿಡ್ನಿಗಳ ಕಾರ್ಯವನ್ನು ಮರುಸ್ಥಾಪಿಸಿ ಮೂತ್ರ ಪಿಂಡಗಳ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ.

ಕೊನೆಯದಾಗಿ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಅಂಶಗಳು ಎಲೆ ಕೋಸಿನಲ್ಲಿ ಕಂಡು ಬರುವುದರಿಂದ ನಮ್ಮ ಮೂಳೆಗಳಿಗೆ ತುಂಬಾ ಸಹಕಾರಿಯಾಗಿ ಕೆಲಸ ಮಾಡುತ್ತವೆ. ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಎದುರಾಗುವ ಮೂಳೆಗಳ ಸವೆತ ಎಲೆ ಕೋಸು ನಿವಾರಣೆ ಮಾಡುತ್ತದೆ. ಕ್ಯಾಬೇಜ್ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಆದರೆ ಒಂದಿಷ್ಟು ಮುಂಜಾಗರೂಕರಾಗಿ ಬಳಸಿದರೆ ತುಂಬಾ ಉತ್ತಮ.
ಇದನ್ನೂ ಓದಿ :ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಯಾಕೆ ಹೆಚ್ಚುತ್ತಿವೆ..? ಮನೋವೈದ್ಯರು ಹೇಳೋದೇನು..?










