ಭಾರತದಲ್ಲಿ ಮದ್ಯದ ಅಂಗಡಿಗಳ ಸಂಖ್ಯೆ ಹೆಚ್ಚಾದಂತೆ, ಕಳೆದ ಮೂರು ದಶಕಗಳಲ್ಲಿ ಆಲ್ಕೋಹಾಲ್ ಸೇವನೆ ಮಾಡೋರ ಸಂಖ್ಯೆಯೂ ನಮ್ಮ ದೇಶದಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಆಘಾತಕಾರಿಯಾದ ಅಂಶವೆಂದರೆ, ದೇಶದ ಶಕ್ತಿಯಾಗಿರೋ 18 ರಿಂದ 50 ವರ್ಷದೊಳಗಿನವರಲ್ಲಿಯೇ ಆಲ್ಕೋಹಾಲ್ ಸೇವನೆಯ ಪ್ರಮಾಣ ಹೆಚ್ಚುತ್ತಿದೆ. ಆಲ್ಕೋಹಾಲ್ ಸೇವನೆಗೆ ಅಡಿಕ್ಟ್ ಆಗ್ತಿರೋ ಜನರು ಆರ್ಥಿಕವಾಗಿ ಹೊರೆಯಾದರೂ ಅದರ ಸೇವನೆಯನ್ನ ಮಾತ್ರ ನಿಲ್ಲಿಸುತ್ತಿಲ್ಲ. ಆಲ್ಕೋಹಾಲ್ ಸೇವಿಸೋರನ್ನ ಡಿಅಡಿಕ್ಡ್ ಮಾಡೋದು ಕೂಡಾ ಅತ್ಯಂತ ಕಷ್ಟಕರವಾಗಿದೆ.

ಇನ್ನೊಂದೆಡೆ ಪುರುಷರ ಆಲ್ಕೋಹಾಲ್ ಸೇವನೆ ಪ್ರಮಾಣ ಹೆಚ್ಚಾದಂತೆ ಇದರೊಂದಿಗೆ ಮಹಿಳೆಯರ ಆಲ್ಕೋಹಾಲ್ ಸೇವನೆಯ ಪ್ರಮಾಣವು ಕೂಡಾ ಹೆಚ್ಚಾಗುತ್ತಿದೆ ಎಂಬ ಅಂಶವನ್ನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಆಲ್ಕೋಹಾಲ್ ಸೇವನೆ ಮಾಡೋ ಮಹಿಳೆಯರ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಅದರಿಂದ ಮಹಿಳೆಯರ ಆರೋಗ್ಯ ಮತ್ತು ಹುಟ್ಟೋ ಮಕ್ಕಳ ಮೇಲೂ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ಇನ್ನು ಆಲ್ಕೋಹಾಲ್ ಸೇವನೆಯಿಂದಲೇ ಕಾರು ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಕೇಂದ್ರ ಹೆದ್ದಾರಿ ಸಚಿವಾಲಯದ ವರದಿ ಹೇಳಿದೆ. ಆಲ್ಕೋಹಾಲ್ನಿಂದ ಉಂಟಾಗೋ ಕಾರು ಅಪಘಾತಗಳಲ್ಲಿ ಸ್ವಯಂ-ಹಾನಿಗಳಿಂದಾಗಿಯೇ ಪ್ರತಿ ಮೂವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಈ ವರದಿ ಹೇಳಿದೆ.
ಇದನ್ನೂ ಓದಿ : ರಸ್ತೆ ಅಪಘಾತಗಳ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ..!
ಅದೇ ರೀತಿ ಆಲ್ಕೋಹಾಲ್ ಸೇವನೆಯಿಂದ ಲಿವರ್ ಸಮಸ್ಯೆಗಳ ಹೆಚ್ಚಳವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಪ್ರತಿ 1 ಲಕ್ಷ ಜನಸಂಖ್ಯೆಗೆ 51 ಪುರುಷರು ಮತ್ತು 27 ಮಹಿಳೆಯರು ಲಿವರ್ ಸಿರೋಸಿಸ್ ಎಂಬ ಭಯಾನಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಲಿವರ್ ಡಿಸೀಸ್ ಪತಿಯೆಂಟ್ಸ್ ಆಲ್ಕೊಹಾಲಿಕ್ ಲಿವರ್ ಡಿಸೀಸ್ನಲ್ಲಿ ದಾಖಲಾಗಿರುವ ಶೇಕಡಾ 70ರಷ್ಟು ಲಿವರ್ ಸಮಸ್ಯೆ ಇರುವ ರೋಗಿಗಳಲ್ಲಿ ಸಾಕಷ್ಟು ಜನ ಆಲ್ಕೋಹಾಲ್ ಲಿವರ್ ಸಮಸ್ಯೆಗಳಿಂದಲೇ ಬಳಲುದ್ದಾರೆ. ಆಲ್ಕೋಹಾಲ್ ನಿಂದಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರತಿ 1 ಲಕ್ಷ ಜನಸಂಖ್ಯೆಗೆ 181 ಪುರುಷರು ಮತ್ತು 126 ಮಹಿಳೆಯರು ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ.

ಇನ್ನ ನಮ್ಮ ದೇಶಲದಲ್ಲಿ ಪ್ರತಿದಿನ 15ಕ್ಕೂ ಹೆಚ್ಚು ಜನರು ಆಲ್ಕೋಹಾಲ್ ಸೇವನೆಯಿಂದಾಗಿಯೇ ಸಾವನ್ನಪ್ಪುತ್ತಿದ್ದರೆ, ಇನ್ನೊಂದೆಡೆ ಅದರ 100 ಪಟ್ಟು ಜನರು ಆಲ್ಕೋಹಾಲ್ ಸಂಬಂಧಿತ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಭಾರತದ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಆಲ್ಕೋಹಾಲ್ ಸಂಬಂಧಿತ ರೋಗಗಳಿಂದ ಬಳುಲುತ್ತಿರೋರ ಸಂಖ್ಯೆ ಮಾತ್ರ ಪ್ರತಿವರ್ಷ ಹೆಚ್ಚಾಗುತ್ತಿದ್ದು, ಆಲ್ಕೋಹಾಲ್ ಸೇವನೆ ನಮ್ಮ ದೇಶದ ಯುವಶಕ್ತಿಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ. ಸ್ವಸ್ಥ ಸಮಾಜಕ್ಕಾಗಿ, ಸುಂದರ ಬದುಕಿಗಾಗಿ ಆಲ್ಕೋಹಾಲ್ ಸೇವನೆಯಿಂದ ದೂರವಿರೋದು ಉತ್ತಮ. ಆಲ್ಕೋಹಾಲ್ ನಿಂದ ದೂರವಿದ್ದಷ್ಟು ಆರೋಗ್ಯಯುತ ಜೀವನವನ್ನು ಕಳೆಯಬಹುದು ಅಲ್ಲವೇ..?










