ನಾವು ನಿತ್ಯ ಜೀವನದಲ್ಲಿ ಮಾಡುತ್ತಿರುವ ಕೆಲ ತಪ್ಪು ಅಭ್ಯಾಸಗಳು ನಮ್ಮ ದೇಹದ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು ಉಂಟು ಮಾಡುತ್ತವೆ. ಇಂತಹ ಸಮಸ್ಯೆಗಳಲ್ಲಿ ಒಂದು – ಕಪ್ಪು ತುಟಿಗಳು (Dark Lips)
ಡಾರ್ಕ್ ಲಿಪ್ಸ್ ಆಗುವುದಕ್ಕೆ ಕಾರಣವೇನು? ಯಾರಲ್ಲಿ ಹೆಚ್ಚು ಕಂಡುಬರುತ್ತದೆ? ಮನೆಯಲ್ಲಿಯೇ ಇದನ್ನು ಹೇಗೆ ಸರಿ ಮಾಡಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಕಪ್ಪು ತುಟಿಗಳು ಎಂದರೇನು?
ತುಟಿಗಳು ತಮ್ಮ ನೈಸರ್ಗಿಕ ಬಣ್ಣವನ್ನು ಕಳೆದುಕೊಂಡು ಕಪ್ಪಾಗಿ ಕಾಣುವುದನ್ನು ಡಾರ್ಕ್ ಲಿಪ್ಸ್ ಅಥವಾ ಲಿಪ್ ಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ.
ಈ ಸ್ಥಿತಿಯಲ್ಲಿ “Melanin” (ಚರ್ಮ ಹಾಗೂ ಕೂದಲಿಗೆ ಬಣ್ಣ ನೀಡುವ ಅಂಶ) ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದರ ಪರಿಣಾಮವಾಗಿ ತುಟಿಗಳು ಕಪ್ಪುಬಣ್ಣ ಪಡೆದು, ಉಜ್ವಲತೆ ಕಳೆದುಕೊಳ್ಳುತ್ತವೆ.
ಕಪ್ಪು ತುಟಿಗಳಿಗೆ ಕಾರಣಗಳು:-
ಧೂಮಪಾನ ಮಾಡುವುದು, ಹೆಚ್ಚು ಪ್ರಮಾಣದಲ್ಲಿ ಕಾಫಿ ಅಥವಾ ಟೀ ಸೇವನೆ, ತುಟಿಗಳಿಗೆ ಸೂಕ್ತವಲ್ಲದ ಲಿಪ್ಸ್ಟಿಕ್ ಬಳಕೆ, ರಾತ್ರಿ ಲಿಪ್ಸ್ಟಿಕ್ ಒರೆಸದೆ ಮಲಗುವುದು, ಸರಿಯಾಗಿ ನೀರನ್ನು ಕುಡಿಯದಿರುವುದರಿಂದ ತುಟಿಗಳು ಕಪ್ಪಾಗುತ್ತವೆ. ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳಿಂದಲೂ ತುಟಿಗಳು ಕಪ್ಪಾಗುತ್ತವೆ. Vitamin B12 deficiency, ಹಾರ್ಮೋನಲ್ ಬದಲಾವಣೆಗಳೂ ತುಟಿಗಳನ್ನ ಕಪ್ಪಾಗಿಸುತ್ತವೆ. ಜೊತೆಗೆ ನೈಸರ್ಗಿಕವಾಗಿ ಅಧಿಕ ಡಾರ್ಕ್ ಚರ್ಮ ಹೊಂದಿರುವವರಲ್ಲಿ ಸಹಜವಾಗಿಯೇ ತುಟಿಗಳು ಡಾರ್ಕ್ ಇರುತ್ತವೆ.
ಕಪ್ಪು ತುಟಿಗಳಿಗೆ ಮನೆಮದ್ದು:-
Step 1: Exfoliation
ತುಟಿಗಳ ಮೇಲಿರುವ ಡೆಡ್ ಸ್ಕಿನ್ ತೆಗೆಯುವುದರಿಂದ ರಕ್ತಸಂಚಾರ ಸುಧಾರಣೆಯಾಗಿ, ತುಟಿಗಳು ಪುನಃ ಉಜ್ವಲಗೊಂಡು, ಮೃದುಗೊಳ್ಳುತ್ತವೆ.
ಹೇಗೆ ಮಾಡುವುದು?
- ಸಕ್ಕರೆ + ಜೇನುತುಪ್ಪದ ಸ್ಕ್ರಬ್
ಒಂದು ಟೀ ಚಮಚ ಸಕ್ಕರೆ ಮತ್ತು ಒಂದು ಟೀ ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ, 2 ನಿಮಿಷಗಳವರೆಗೆ ತುಟಿಗಳ ಮೇಲೆ ರಬ್ ಮಾಡಿ, ನಂತರ 2-3 ನಿಮಿಷ ಬಿಟ್ಟು ತೊಳೆಯಿರಿ.
ಸಕ್ಕರೆ: ನೈಸರ್ಗಿಕ ಎಕ್ಸ್ಫೋಲಿಯೇಟರ್
ಜೇನುತುಪ್ಪ: ಮಾಯಿಶ್ಚರೈಸರ್ ಗುಣ ಹೊಂದಿರುತ್ತದೆ.
- ಕಾಫಿ ಪೌಡರ್ + ತೆಂಗಿನ ಎಣ್ಣೆ
ಒಂದು ಟೀ ಚಮಚ ಕಾಫಿ ಪೌಡರ್ ಮತ್ತು ಒಂದು ಟೀ ಚಮಚ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ, 1–2 ನಿಮಿಷಗಳವರೆಗೆ ಮಸಾಜ್ ಮಾಡಿ, ತೊಳೆಯಿರಿ.
ಕಾಫಿ: ಪಿಗ್ಮೆಂಟೇಶನ್ ಕಡಿಮೆ ಮಾಡುತ್ತದೆ
ತೆಂಗಿನ ಎಣ್ಣೆ: ತುಟಿಗಳನ್ನು ಮೃದುಗೊಳಿಸುತ್ತದೆ
ವಾರದಲ್ಲಿ 2-3 ಬಾರಿ ಈ ಸ್ಕ್ರಬ್ಗಳನ್ನು ಬಳಸಬಹುದು.
Step 2: Moisturizing & Hydration
ತುಟಿಗಳು ಒಣಗಿದಾಗಲೂ ಬಣ್ಣ ಕಳೆದುಕೊಳ್ಳುತ್ತವೆ. ಹೀಗಾಗಿ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯುವುದು ಹಾಗೂ ಮೊಯಿಸ್ಚರೈಸ್ ಮಾಡುವುದು ಅನಿವಾರ್ಯ.
ಹೇಗೆ ಮಾಡುವುದು?
- ತುಪ್ಪ / ತೆಂಗಿನ ಎಣ್ಣೆ / ಬದಾಮಿ ಎಣ್ಣೆ: ಈ ಮೂರರಲ್ಲಿಯೂ ಯಾವುದಾದರೂ ಒಂದನ್ನು ಒಂದು ಡ್ರಾಪ್ ನಷ್ಟು ತೆಗೆದುಕೊಂಡು ರಾತ್ರಿ ಮಲಗುವಾಗ ತುಟಿಗಳಿಗೆ ಹಚ್ಚಿಕೊಳ್ಳುವುದು.
ಬದಾಮಿ ಎಣ್ಣೆ: Vitamin-E ಹೊಂದಿದ್ದು, ತುಟಿಗಳ ಆರೋಗ್ಯಕ್ಕೆ ಒಳ್ಳೆಯದು.
ತುಪ್ಪ / ತೆಂಗಿನ ಎಣ್ಣೆ: ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತವೆ
Read this also – Premature grey hair – ಕೂದಲು ಬೇಗ ಬಿಳಿಯಾಗ್ತಿದ್ಯಾ? – ಈ ಮನೆಮದ್ದು ಟ್ರೈ ಮಾಡಿ!
- ಅಲೋವೆರಾ ಜೆಲ್:-
ನೈಸರ್ಗಿಕ ಅಲೋವೆರಾ ಜೆಲ್ ಅನ್ನು ತುಟಿಗಳಿಗೆ ಹಚ್ಚಿ, 10 ನಿಮಿಷ ಬಿಟ್ಟು ತೊಳೆಯುವುದು. ಇದರಲ್ಲಿ ಆಂಟಿ ಇನ್ಲ್ಫಮೆಟರಿ ಗುಣವಿದೆ.
Step 3: Natural Lip Color
- ಬೀಟ್ರೂಟ್ ರಸ – ಬೀಟ್ರೂಟ್ ರಸವನ್ನು ತುಟಿಗಳ ಮೇಲೆ ಹಚ್ಚಿ, 15 ನಿಮಿಷ ನಂತರ ತೊಳೆಯುವುದು. ಇದರಲ್ಲಿರುವ ಬೆಲಟೈನ್ ತುಟಿಗಳಿಗೆ ನೈಸರ್ಗಿಕ ಪಿಂಕ್ ಬಣ್ಣ ನೀಡುತ್ತದೆ. ದಾಳಿಂಬೆ ರಸ ಕೂಡ ಹಚ್ಚಬಹುದು.
- ಗುಲಾಬಿ ದಳಗಳು + ಹಾಲು – ಒಂದು ಸ್ವಲ್ಪ ಗುಲಾಬಿ ಹೂವಿನ ದಳಗಳನ್ನು ಅರೆದು, ಅದಕ್ಕೆ ಹಾಲು ಸೇರಿಸಿ ಪೇಸ್ಟ್ ಮಾಡಿ, ಇದನ್ನು ತುಟಿಗಳ ಮೇಲೆ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯುವುದು.
ಈ ಮನೆಮದ್ದುಗಳು ನೈಸರ್ಗಿಕವಾಗಿದ್ದರೂ ಬಳಸುವ ಪ್ರಮಾಣದ ಮೇಲೆ ನಿಗಾ ವಹಿಸುವುದು ಮುಖ್ಯ.










