• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama Health and Wellness

Congenital Heart Disease- ರಾಜ್ಯದಲ್ಲಿ 40 ಸಾವಿರ ಮಕ್ಕಳಿಗೆ ಹೃದಯ ಸಮಸ್ಯೆ! ಪೋಷಕರೇ ನಿರ್ಲಕ್ಷಿಸಬೇಡಿ – ಏನಿದು ಶಾಕಿಂಗ್ ವರದಿ?

September 29, 2025
in Health and Wellness, Karnataka News, News
Reading Time: 3 mins read
A A
0
144
VIEWS

ಕರ್ನಾಟಕದ ಹಾಸನ ಜಿಲ್ಲೆಯ ಸರಣಿ‌ ಹೃದಯಾಘಾತದ ಶಾಕ್‌ನಿಂದ ಹೊರಬರುವ ಮೊದಲೇ ಇದೇ ವಿಚಾರದಲ್ಲಿ ಮತ್ತೊಮ್ಮೆ ಎಚ್ಚರಿಕೆಯ ಘಂಟೆಯೊಂದು ಶಬ್ಧ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ, ಕರ್ನಾಟಕದಲ್ಲಿ ನಡೆದ ಆರೋಗ್ಯ ತಪಾಸಣೆಯ ಮೂಲಕ ಸುಮಾರು 41,000 ಶಾಲಾ ಮಕ್ಕಳಲ್ಲಿ ಜನ್ಮಜಾತ ಹೃದಯ ಸಮಸ್ಯೆ (Congenital Heart Disease – CHD) ಪತ್ತೆಯಾಗಿರುವುದು ತಿಳಿದುಬಂದಿದೆ. ಆದರೆ 41,000 ಮಕ್ಕಳ ಪೈಕಿ ಸುಮಾರು 20,000 ಮಕ್ಕಳಿಗೆ ಇನ್ನೂ ಚಿಕಿತ್ಸೆ ದೊರಕಿಲ್ಲ ಎಂಬುದು ಆತಂಕಕಾರಿ ಸಂಗತಿ ಎಂದು ವರದಿ ಬಗ್ಗೆ ಮುಖ್ಯ ವಾಹಿನಿಗಳಲ್ಲಿ ಸುದ್ಧಿ‌ ಬಿತ್ತರಿಸಲಾಗಿದೆ.

ಈ ಅಂಕಿಅಂಶವು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (Rashtriya Bal Swasthya Karyakram – RBSK) ಮೂಲಕ ದೊರೆತಿದ್ದು, ಇದು ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ (National Health Mission – NHM) ಅಡಿಯಲ್ಲಿ ನಡೆಯುವ ಅಧಿಕೃತ ಯೋಜನೆಯಾಗಿದೆ.

ಜನ್ಮಜಾತ ಹೃದಯ ಸಮಸ್ಯೆ (CHD) ಅಂದರೆ ಏನು?

ಹುಟ್ಟುವಾಗಲೇ ಹೃದಯದಲ್ಲಿ ಉಂಟಾಗಿರುವ ರಚನಾ ತೊಂದರೆಗಳನ್ನು Congenital Heart Disease (CHD) ಎನ್ನುತ್ತಾರೆ.

ಲಕ್ಷಣಗಳು:

  • ಶಿಶುಗಳು ಸರಿಯಾಗಿ ಹಾಲು ಕುಡಿಯದಿರುವುದು
  • ತೂಕ ಹೆಚ್ಚಿಸಿಕೊಳ್ಳದಿರುವುದು
  • ತುಟಿಗಳು/ಚರ್ಮ ನೀಲಿಯಾಗುವುದು (Cyanosis)
  • ಉಸಿರಾಟ ವೇಗವಾಗಿ ನಡೆಯುವುದು
  • ಆಡುವಾಗ ತಕ್ಷಣ ಸುಸ್ತಾಗುವುದು
  • ಪದೇಪದೇ ಎದೆ ಸಮಸ್ಯೆಗಳು (chest infection) ಕಂಡು ಬರುವುದು

RBSK ಸರ್ವೇಯು, 0 ರಿಂದ 18 ವರ್ಷ ವಯಸ್ಸಿನ ಮಕ್ಕಳನ್ನು ತಪಾಸಣೆ ಮಾಡಿದೆ. ನವಜಾತಶಿಶು, ಅಂಗನವಾಡಿ ಮಕ್ಕಳು, ಹಾಗೂ ಶಾಲಾ ಮಕ್ಕಳನ್ನು ಪರೀಕ್ಷಿಸಲಾಗಿದೆ.  ಸಮಸ್ಯೆ ಕಂಡುಬಂದಿರುವ 41,000 ಪ್ರಕರಣಗಳು ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ಪತ್ತೆಯಾಗಿರುವುದು ತಿಳಿದುಬಂದಿದೆ.

Read this also – Heart Attack; ಹೃದಯಾಘಾತ ಯಾಕಾಗುತ್ತೆ?; ಹೃದ್ರೋಗ ತಜ್ಞರ ಈ ಮಾತುಗಳನ್ನು ಕೇಳಿ!

ಸರ್ಕಾರದ ನಿಲುವೇನು?

  • ತಪಾಸಣೆಯಲ್ಲಿ ಪತ್ತೆಯಾದ ಮಕ್ಕಳನ್ನು District Early Intervention Centres (DEIC) ಹಾಗೂ ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸುವುದು.
  • ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಉಚಿತವಾಗಿ ಚಿಕಿತ್ಸೆ ದೊರೆಯುವ ವ್ಯವಸ್ಥೆ.
  • ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರ ಎಂದರೇ ಹಲವಾರು ಕುಟುಂಬಗಳು ಮೊದಲ ಬಾರಿ ಬಂದು ಚಿಕಿತ್ಸೆ ಮಾಡಿಸಿಕೊಂಡು ನಂತರ ಅದರ ಫಾಲೋ-ಅಪ್‌ಗೆ ಹಾಜರಾಗುವುದಿಲ್ಲ. ಇದನ್ನು ಸರಿಪಡಿಸಲು ಸರ್ಕಾರ ಗರ್ಭಿಣಿಯ Anomaly scan ದಾಖಲೆಗಳನ್ನು newborn checkup ಗೆ ಲಿಂಕ್ ಮಾಡುವ ವ್ಯವಸ್ಥೆ ಮಾಡುತ್ತಿದೆ. ಹೀಗೆ ಮಾಡಿದರೆ ಮಗು ಹುಟ್ಟಿದ ನಂತರ ತಪಾಸಣೆಯಿಂದ ಹೊರಗುಳಿಯಲು ಆಗುವುದಿಲ್ಲ.

ಬೇಗ ಪತ್ತೆಯ ಅಗತ್ಯ ಯಾಕೆ?

ಮಕ್ಕಳ ಸಾವಿನ ಮತ್ತು ಕಾಯಿಲೆಯ ಪ್ರಮುಖ ಕಾರಣಗಳಲ್ಲಿ CHD ಒಂದಾಗಿದೆ. ವೈದ್ಯರ ಪ್ರಕಾರ, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ CHD ಗಳಲ್ಲಿ 90% ಸಮಸ್ಯೆಗಳನ್ನು ಸಂಪೂರ್ಣ ಗುಣಪಡಿಸಬಹುದು. ವಿಳಂಬ ಮಾಡಿದರೆ ಹೃದಯ ವೈಫಲ್ಯ (heart failure), ಶ್ವಾಸಕೋಶ ತೊಂದರೆಗಳು, ಬೆಳವಣಿಗೆ ಕುಂಠಿತವಾಗಬಹುದು. (developmental delay)

ಗರ್ಭಿಣಿ ಮಹಿಳೆಯರಿಗೆ ಸಂದೇಶ :

  • 18–22 ವಾರದಲ್ಲಿ anomaly scan ಮಾಡಿಸಿಕೊಳ್ಳಿ.
  • ಧೂಮಪಾನ, ಮದ್ಯಪಾನ ಸಂಪೂರ್ಣ ತ್ಯಜಿಸಿ
  • ಡಯಾಬಿಟಿಸ್ ನಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಿ.
  • ವೈದ್ಯರು ಹೇಳುವ vaccination ತೆಗೆದುಕೊಳ್ಳಿ.
  • Scan ನಲ್ಲಿ ಸಮಸ್ಯೆ ಇದೆ‌ ಎಂದಾದರೆ, ಹುಟ್ಟಿದ ನಂತರ pediatric cardiologist ಹತ್ತಿರ ತಪ್ಪದೆ checkup ಮಾಡಿಸಿ.

ಹೊಸ ಪೋಷಕರಿಗೆ ಸಂದೇಶ ;

  • ಮಗು ಹುಟ್ಟಿದ ಕೂಡಲೇ ನವಜಾತ ತಪಾಸಣೆ ಮಾಡಿಸಬೇಕು.
  • ಮಗು ಹಾಲು ಸರಿಯಾಗಿ ಕುಡಿಯದಿದ್ದರೆ, ಉಸಿರಾಟ ತೀವ್ರವಾಗಿದ್ದರೆ, ತುಟಿಗಳು ನೀಲಿಯಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
  • ಶಾಲೆಯಲ್ಲಿ ತಪಾಸಣೆ ಮಾಡಿ ಉಲ್ಲೇಖ ಕೊಟ್ಟರೆ, ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ.
Tags: Congenital Heart DiseaseHeart Disease
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.