• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama Health and Wellness

Oil Pulling; ಸೆಲೆಬ್ರಿಟಿಗಳ Health+Beauty ಸಿಕ್ರೇಟ್ ಬಯಲು; ನೀವೂ ಟ್ರೈ ಮಾಡಬಹುದು!

December 10, 2024
in Health and Wellness
Reading Time: 1 min read
A A
0
164
VIEWS

Oil Pulling; ನಮ್ಮ ದೇಶದಲ್ಲಿ ಜನ ಯಾರನ್ನಾದರೂ ತುಂಬಾ ಅಡ್ಮೈರ್ ಮಾಡ್ತಾರೆ ಅಂದ್ರೆ ಅದು ಸೆಲೆಬ್ರಿಟಿಗಳನ್ನ. ಅವ್ರು ಸಿನಿಮಾದವರೇ ಆಗಿರಲಿ, ಕ್ರೀಡಾಪಟುಗಳೇ ಆಗಿರಲಿ ಅಥ್ವಾ ರಾಜಕೀಯ, ಉದ್ಯಮಿಗಳೇ ಆಗಿರಲಿ. ಈಗಂತೂ Social Media Influencers ಕೂಡ ಇದೇ ಸಾಲಿಗೆ ಬರ್ತಾರೆ. ಒಟ್ಟು ಪಬ್ಲಿಕ್ ಫಿಗರ್ ಅಂತಾ ಯಾರೆಲ್ಲಾ ಇದ್ದಾರೋ ಅವರನ್ನ ಜನರು ಹೆಚ್ಚಾಗಿ ಫಾಲೋ ಮಾಡ್ತಾರೆ. ನಮ್ಮ ಜನ ಎಷ್ಟರಮಟ್ಟಿಗೆ ಅವರನ್ನ ಹೀಗೆ ಫಾಲೋ ಮಾಡ್ತಾರೆ ಅಂದ್ರೆ, ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಯಾವುದಾದರು ಪ್ರಾಡೆಕ್ಟ್ನ ಜಾಹೀರಾತುವಿನಲ್ಲಿ ಕಾಣಿಸಿಕೊಂಡರೆ ಸಾಕು ಅದನ್ನ ಖರೀದಿ ಮಾಡ್ಬಿಡ್ತಾರೆ. ಸಿನಿಮಾ ತಾರೆಯರು ಅಂದ್ರೆ ಹೆಚ್ಚಾಗಿ ಕಾಣಿಸೋದು ಸ್ಕಿನ್ ಕೇರ್ ಪ್ರಾಡೆಕ್ಟ್ ಅಥ್ವಾ ಚೆನ್ನಾಗಿ ಕಾಣಿಸಲು ಇರುವಂತಹ ಪ್ರಾಡೆಕ್ಟ್ಗಳ ಜಾಹೀರಾತುವಿನಲ್ಲಿ. ಸಾಮಾನ್ಯ ಜನ ಅನ್ಕೊಬೇಕು, ಅವರು ಕೂಡ ಅದನ್ನೇ ಬಳಸುತ್ತಾರೇನೋ ಅಂತಾ. ಆದ್ರೆ ಅಂಥ ಸೆಲೆಬ್ರಿಟಿಗಳು ಅದ್ನೆಲ್ಲಾ ಬಿಟ್ಟು ಸಿಂಪಲ್ ಪದ್ಧತಿಯನ್ನು ಫಾಲೋ ಮಾಡ್ತಾರೆ. ಆ ವಿಧಾನಗಳು ಅವರು ಜಾಹೀರಾತುವಿನಲ್ಲಿ ತೋರಿಸುವ ಪ್ರಡೆಕ್ಟ್ಗಳಷ್ಟು ದುಬಾರಿ ಕೂಡ ಅಲ್ಲ, ಅದ್ನ ನಾವೂ ಮಾಡಬಹುದು ಅಂತಾ ಗೊತ್ತಾದ್ರೆ ನೀವು ಅಚ್ಚರಿ ಪಡ್ತೀರಿ. ಹಾಗಾದ್ರೆ ಈ ವರದಿಯಲ್ಲಿ ಸೆಲೆಬ್ರಿಟಿಗಳ Health+Beauty ಸಿಕ್ರೇಟ್ ಆಗಿರುವ ಅಂಥದ್ದೇ ಒಂದು ವಿಧಾನದ ಬಗ್ಗೆ ತಿಳಿಯೋಣ. ಅದೇ ಆಯಿಲ್ ಪುಲ್ಲಿಂಗ್ (Oil Pulling)

ಶಿಲ್ಪಾ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ, ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಪ್ರೀತ್ಸೋದ್ ತಪ್ಪಾ?, ಒಂದಾಗೋಣ ಬಾ, ಆಟೋ ಶಂಕರದಲ್ಲಿಯೂ ನಟಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಆದ್ರೆ ಈಗ ವಿಷಯ ಅದಲ್ಲ. 50ರ ಆಸುಪಾಸಿನಲ್ಲಿರುವ ಶಿಲ್ಪಾಶೆಟ್ಟಿ ಈಗ್ಲೂ ತುಂಬಾ ಯಂಗ್ ಆಗಿ ಕಾಣುತ್ತಾರೆ. ಅವರು ತಮ್ಮ ಹೆಲ್ತ್ಗೆ ಸಾಕಷ್ಟು ಪ್ರಾಮುಖ್ಯತೆ ನೀಡ್ತಾರೆ. ಶಿಲ್ಪಾ ಶೆಟ್ಟಿ ಯೋಗ ಉತ್ಸಾಹಿ ಅನ್ನೋದು ಸಾಕಷ್ಟು ಜನರಿಗೆ ಗೊತ್ತಿದೆ. ಆದ್ರೆ ಅವರು ತಮ್ಮ ಆರೋಗ್ಯ ವಿಚಾರದಲ್ಲಿ ಪ್ರತಿದಿನ ಆಯಿಲ್ ಪುಲ್ಲಿಂಗ್(Oil Pulling)ಮಾಡ್ತಾರೆ ಅನ್ನೋದ್ರ ಬಗ್ಗೆ ನಿಮಗೆ ಗೊತ್ತಿತ್ತಾ? ಹೌದು ಶಿಲ್ಪಾ ಶೆಟ್ಟಿ ಅವರು ಪ್ರತಿದಿನ ಬೆಳಗ್ಗೆ ತಮ್ಮ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳಲು ಆಯಿಲ್ ಪುಲ್ಲಿಂಗ್ ಮಾಡ್ತಾರೆ. ಇದರಿಂದ ಅವರಿಗೆ ಸಾಕಷ್ಟು ಪ್ರಯೋಜನ ಕೂಡ ಆಗಿದೆ.

ಹಾಗಾದ್ರೆ ಆಯಿಲ್ ಪುಲ್ಲಿಂಗ್ (Oil Pulling)ಅಂದ್ರೇನು? ಬನ್ನಿ ನೋಡೋಣ. ಆಯಿಲ್ ಪುಲಿಂಗ್ ಎಂಬುದು ಪ್ರಾಚೀನ ಆಯುರ್ವೇದ ಪದ್ಧತಿಯಾಗಿದೆ. ಇದು ‘ಕವಲಾ’ ಅಥವಾ ‘ಗಂಡುಷಾ’ ಪದ್ಧತಿ ಎಂದು ಕರೆಯಲ್ಪಡುವ ಪುರಾತನ ಆಯುರ್ವೇದ ಅಭ್ಯಾಸವಾಗಿದೆ. ಆಯಿಲ್ ಪುಲ್ಲಿಂಗ್ ಒಂದು ಸರಳವಾದ ಪ್ರಕ್ರಿಯೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಾಮಚ ಎಣ್ಣೆಯನ್ನು  (ಇವುಗಳಲ್ಲಿ ಯಾವುದಾದರೂ ಒಂದು – ರಿಫೈನ್ ಮಾಡಿರದ ಕೊಬ್ಬರಿ ಎಣ್ಣೆ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಸೂರ್ಯಕಾಂತಿ ಎಣ್ಣೆ) ತೆಗೆದುಕೊಂಡು, ಅದನ್ನು ಬಾಯಿಯಲ್ಲಿ 15-20 ನಿಮಿಷಗಳವರೆಗೆ ಮುಕ್ಕಳಿಸುವುದು. ಈ ಪ್ರಕ್ರಿಯೆಯು ಬಾಯಿಯಿಂದ ವಿಷಕಾರಿ ಅಂಶ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ. ಇದನ್ನು ಮಾಡಿದ ನಂತರ ಎಣ್ಣೆಯನ್ನು ಬಾಯಿಂದ ಹೊರಹಾಕಿ, ಎಂದಿನಂತೆ ಬಾಯಿಯನ್ನು ಶುಚಿಗೊಳಿಸುವುದು.

ಬಾಲಿವುಡ್ ಬೆಡಗಿ, ಕ್ರಿಕೆಟರ್ ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಕೂಡ ಆಯಿಲ್ ಪುಲ್ಲಿಂಗ್ ವಿಧಾನವನ್ನ ತಮ್ಮ ದೈನಂದಿನ ಆರೋಗ್ಯ ರೋಟಿನಿನ ಭಾಗವಾಗಿ ಮಾಡ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಆಯಿಲ್ ಪುಲ್ಲಿಂಗ್ ಅಂದ್ರೇನು? ಹೇಗೆ ಮಾಡೋದು, ಅದ್ರಿಂದ ಏನೆಲ್ಲಾ ಪ್ರಯೋಜನವಿದೆ ಅನ್ನೋದನ್ನು ಹೇಳಿದ್ದಾರೆ. ನಮ್ಮ ಆರೋಗ್ಯದ ಉತ್ತಮ ಕಾಳಜಿಗೆ ಮತ್ತು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಆಯಿಲ್ ಪುಲ್ಲಿಂಗ್ ಸಹಕಾರಿಯಾಗಿದ್ದು, ಇದು ನಿಮಗೂ ಸಹ ಪ್ರಯೋಜನಕಾರಿ ಎಂದು ಬರೆದುಕೊಂಡಿದ್ದಾರೆ.

ಆಯಿಲ್ ಪುಲ್ಲಿಂಗ್ನಿಂದ ಸಾಕಷ್ಟು ಪ್ರಯೋಜನವಿದೆ. ಆಯಿಲ್ ಪುಲಿಂಗ್ ನಮ್ಮ ಹಲ್ಲಿನ ಮೇಲೆ ಸಂಗ್ರಹವಾಗಿರುವ ಕೆಟ್ಟ ಬ್ಯಾಕ್ಟಿರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ವಸಡನ್ನು ಕ್ಲೀನ್ ಮಾಡುತ್ತದೆ. ಇದರಿಂದ ತಾಜಾ ಉಸಿರಾಟ ನಮಗೆ ಸಿಗುತ್ತದೆ. ನಾಲಿಗೆಯು ನಮ್ಮ ಎಷ್ಟೋ ಅಂಗಗಳಿಗೆ ಸಂಪರ್ಕ ಹೊಂದಿರುತ್ತದೆ. ನಾವು ಜ್ವರ ಎಂದು ಆಸ್ಪತ್ರೆಗೆ ಹೋದಾಗ ಡಾಕ್ಟರ್ ನಮ್ಮ ನಾಲಿಗೆ ನೋಡಿ ನಮ್ಮ ದೇಹದಲ್ಲಾಗಿರುವ ಏರುಪೇರನ್ನು ತಿಳಿದು ಔಷಧ ನೀಡುತ್ತಾರೆ. ಹೀಗಾಗಿ ನಮ್ಮ ದೇಹದೊಳಗೆ ಟಾಕ್ಸಿನ್ಗಳನ್ನು ದೂರ ಮಾಡಲು ಆಯಿಲ್ ಪುಲ್ಲಿಂಗ್ ಪ್ರಯೋಜನಕಾರಿಯಾಗಿದೆ. ಇದು ದೇಹವನ್ನು ಡಿಟಾಕ್ಸ್ ಮಾಡುತ್ತದೆ. ನಮ್ಮ ದೇಹ ಟಾಕ್ಸಿಕ್ನಿಂದ ಮುಕ್ತಿ ಹೊಂದಿದಾಗ ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಸಾಕಷ್ಟು ಆರೋಗ್ಯ ಸುಧಾರಣೆಯಾಗುತ್ತದೆ.

ತೆಲುಗು ನಟ ಸಿದ್ಧಾರ್ಥ್ ಪತ್ನಿ ಸ್ವತಃ ನಟಿಯಾಗಿರುವ ಅದಿತಿ ರಾವ್ ಹೈದರಿ ಕೂಡ ಆಯಿಲ್ ಪುಲ್ಲಿಂಗ್ ಮಾಡುತ್ತಾರೆ. ಅವರು ಎಳ್ಳೆಣ್ಣೆಯಲ್ಲಿ ಆಯಿಲ್ ಪುಲ್ಲಿಂಗ್ ಮಾಡುವುದಾಗಿಯೂ ಅದನ್ನು ಮಾಡಿದ ಬಳಿಕ ಅವರ ಡೆಂಟಿಸ್ಟ್ ಅದಕ್ಕೆ ನೀಡಿದ ಪಾಸಿಟಿವ್ ಪ್ರತಿಕ್ರಿಯೆ ಬಗ್ಗೆ ಅವರೇ ತಿಳಿಸಿದ್ದಾರೆ.

Read this also : Oral Health;ಚಳಿಗಾಲದಲ್ಲಿ ಕಾಡುವ ಹಲ್ಲು ನೋವಿಗೆ (Toothache) 5 ಮನೆಮದ್ದುಗಳು!

ಆಯಿಲ್ ಪುಲ್ಲಿಂಗ್ ನಮ್ಮ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ. ಎಣ್ಣೆಯನ್ನು ಬಾಯಿಲ್ಲಿ ಮುಕ್ಕಳಿಸುವಾಗ Face exercise ಮಾಡಿದಂತೆ ಆಗುತ್ತದೆ. ಆಗ ರಕ್ತ ಸಂಚಾರವೂ ಚೆನ್ನಾಗಿ ಆಗಿ ಮುಖದ ಕಾಂತಿ ಹೆಚ್ಚುತ್ತದೆ. ಈ ಸಿಂಪಲ್ ವಿಧಾನದ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆಯಿಲ್ ಪುಲ್ಲಿಂಗ್ಅನ್ನು ವಿದೇಶಿಗರೂ ಅಳವಡಿಸಿಕೊಂಡಿದ್ದಾರೆ.

ಏನೆಲ್ಲಾ ಗಮನದಲ್ಲಿಟ್ಟುಕೊಳ್ಳುವುದು ಉತ್ತಮ? ಆಯಿಲ್ ಪುಲ್ಲಿಂಗ್ ಮಾಡಲು ತಾಜಾ ಎಣ್ಣೆಯನ್ನು ಬಳಕೆ ಮಾಡಿ, ಅದರಲ್ಲೂ ಕೋಲ್ಡ್ ಪ್ರೆಸ್ಡ್ ಎಣ್ಣೆ ಉತ್ತಮ. ಈ ಆಯಿಲ್ ಪುಲ್ಲಿಂಗ್ ಮಾಡೋದೇ ದೇಹದಲ್ಲಿರೋ ವಿಷಕಾರಿ ಅಂಶಗಳನ್ನು ಹೋರಹಾಕಿ, ಡಿಟಾಕ್ಸ್ ಮಾಡಲು. ಹೀಗಾಗಿ ಅದನ್ನು ಮಾಡುವಾಗ ಎಣ್ಣೆಯನ್ನು ನುಂಗದಂತೆ ಗಮನವಹಿಸಿ. ಎಣ್ಣೆಯನ್ನು ಬಾಯಿಯಲ್ಲಿ ಮುಕ್ಕಳಿಸಿದ ನಂತರ ಅದನ್ನು ಸಿಂಕ್ನಲ್ಲಿ ಉಗುಳದಿರಿ, ಯಾಕಂದ್ರೆ ಎಣ್ಣೆಯಾಗಿರೋದ್ರಿಂದ ನೀರು ಹೋಗುವ ಪೈಪ್ ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಣ್ಣೆಯನ್ನು ಕಸದ ಬುಟ್ಟಿಗೆ ಅಥ್ವಾ ಮುಕ್ತವಾದ ಜಾಗದಲ್ಲಿ ಹೊರಹಾಕಿ. 

ಈಗಾಗಲೇ ಅಭ್ಯಾಸ ಇರುವವರು ಆಯಿಲ್ ಪುಲ್ಲಿಂಗ್ ಅನ್ನು ಪ್ರತಿದಿನ ಮಾಡುತ್ತಾರೆ. ನೀವು ಈಗ ಶುರು ಮಾಡುವವರಿದ್ದರೆ, ಒಂದು ವಾರ ಮಾಡಿ ಆಮೇಲೆ ಒಂದೆರಡು ದಿನ ಬಿಡುವು ಕೊಡಿ, ನಂತರ ಇದನ್ನು ಹೆಚ್ಚಿಸಿಕೊಂಡು ಹೋಗಿ. ಆದರೆ ಒಂದು ದಿನದಲ್ಲೇ ಹಲವಾರು ಬಾರಿಯೂ ಪ್ರಯೋಗ ಮಾಡಬೇಡಿ. ತಿಂಡಿ, ಊಟಕ್ಕೆ ಕೆಲವು ನಿಮಿಷಗಳಿದೆ ಎನ್ನುವಾಗ ಇದನ್ನು ಮಾಡದಿರಿ.

ತುಂಬಾ ದಿನದಿಂದ ಮಾಡ್ತಿರೋರು 15-20 ನಿಮಿಷ ಮಾಡ್ತಾರೆ. ಆದ್ರೆ ಶುರುವಿನಲ್ಲಿ 5-10 ನಿಮಿಷ ಮಾಡಿದರೆ ಸಾಕು. ಆರಂಭದಲ್ಲಿ ಬಾಯಿ ಸುತ್ತ ನೋವು ಬರಬಹುದು, ಕೆಲ ದಿನಗಳ ನಂತರ ಅದು ಅಭ್ಯಾಸವಾಗುತ್ತದೆ. ಈಗಾಗಲೇ ಹಲ್ಲು ನೋವಿನಿಂದ ಬಳಲುತ್ತಿದ್ದು, ಔಷಧ ತೆಗೆದುಕೊಳ್ಳುತ್ತಿದ್ದರೆ ಇದರ ಪ್ರಯೋಗ ಬೇಡ ಅಥ್ವಾ ಮಾಡಬೇಕಿದ್ದರೆ ಒಮ್ಮೆ ನಿಮ್ಮ ಡಾಕ್ಟರ್ ಬಳಿ ಕೇಳಿ. ಬಾಯಿಯಲ್ಲಿ ಕೆಲ ಅಲರ್ಜಿ ಇರುವವರು, ಬಾಯಿ ಹುಣ್ಣು ಆಗಿದ್ದಲ್ಲಿಯೂ ಇದನ್ನು ಅವೈಡ್ ಮಾಡಿ. ಒಂದು ವಿಷಯ ಗಮನದಲ್ಲಿರಲಿ, ಯಾವುದನ್ನೂ ಅತಿಯಾಗಿ ಮಾಡುವುದು ಬೇಡ.

ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.