• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

ಮೊಬೈಲ್‌ ಬಳಕೆಯಿಂದ ಮೆದುಳಿಗೆ ಹಾನಿ..! ಸಂಶೋಧನಾ ವರದಿ ಬಿಚ್ಚಿಟ್ಟ ಆಘಾತಕಾರಿ ಸತ್ಯ..!

December 4, 2023
in GSS Maadhyama, Health and Wellness
Reading Time: 1 min read
A A
0
121
VIEWS

ಮೊಬೈಲ್‌ ಪೋನ್ ಬಿಟ್ಟು ಬದುಕೋಕೆ ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಜನ ಮೊಬೈಲ್‌ ಪೋನ್ಗೆ  ಅಡಿಕ್ಟ್ ಆಗಿದ್ದಾರೆ. ರಾತ್ರಿ ಮಲಗೋ ಮುನ್ನ, ಬೆಳಗ್ಗೆ ಎದ್ದ ತಕ್ಷಣ ಮೊದಲು ನೋಡೋದೇ ಮೊಬೈಲ್‌ ಪೋನ್. ಇನ್ನೂ ಕೆಲವರು ಮೊಬೈಲ್‌ ಪೋನ್ ಅನ್ನ ತಲೆದಿಂಬಿನ ಕೆಳಗೆ ಇಟ್ಟುಕೊಂಡೇ ಮಲಗುತ್ತಾರೆ. ಆತಂಕಕಾರಿ ಸಂಗತಿಯೆಂದರೆ ಅನೇಕ ಮಂದಿ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲಾ.

ಮೊಬೈಲ್‌ ಪೋನ್ ಅನ್ನು ಪಕ್ಕದಲ್ಲಿಟ್ಟುಕೊಂಡು ಮಲಗೋದು ಹಾನಿಕಾರಕ ಅಭ್ಯಾಸವಾಗಿದ್ದು ಇದು ನಿದ್ರಾಹೀನತೆ ಅಂದ್ರೆ Insomnia  ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು ಅಂತಾ ವೈದ್ಯರು ಹೇಳ್ತಾರೆ.  ಸಂಶೋಧನಾ ಅಧ್ಯಯನವೊಂದರ ಪ್ರಕಾರ, ನಾಲ್ಕು ವಾರಗಳವರೆಗೆ ಮಲಗೋ ಮುನ್ನ ಮೊಬೈಲ್‌ ಪೋನ್ ಬಳಕೆಯನ್ನ ಕಡಿಮೆ ಮಾಡೋದ್ರಿಂದ ನಿದ್ರೆಯ ಗುಣಮಟ್ಟ ಮತ್ತು ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ಮೊಬೈಲ್‌ ಪೋನ್ ಅನ್ನು ಹಾಸಿಗೆಯಿಂದ ದೂರವಿಡೋದು ಬಹಳ ಮುಖ್ಯ. ಇನ್ನು ಹತ್ತಿರದಲ್ಲೇ ಮೊಬೈಲ್‌ ಪೋನ್ ಇಟ್ಟುಕೊಂಡು ಮಲಗೋ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಾರೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.  ಇನ್ನು ವಿಶ್ವದ ಪ್ರತಿಷ್ಠಿತ ವೈದ್ಯಕೀಯ ಸಂಶೋಧನಾ ಸಂಸ್ಥೆ ಪ್ಯೂನ ವರದಿಯ ಪ್ರಕಾರ,  ಶೇ.90ರಷ್ಟು ಹದಿಹರೆಯದವರು ಮತ್ತು ಶೇ.68ರಷ್ಟು ಯುವಜನತೆ ತಮ್ಮ ದಿಂಬಿನ ಪಕ್ಕದಲ್ಲೇ  ಮೊಬೈಲ್‌ ಪೋನ್ ಇಟ್ಟುಕೊಂಡು ಮಲಗುತ್ತಾರೆ. ಇದ್ರಿಂದ ಅವರ ನಿದ್ರೆಯ ಗುಣಮಟ್ಟ ಮತ್ತು ಅವಧಿ  ಸಾಕಷ್ಟು ಕಡಿಮೆ ಆಗ್ತಿದೆ. 

ಇದನ್ನೂ ಓದಿ : ಮಕ್ಕಳ ಮೆದುಳಿನ ಸಾಮರ್ಥ್ಯವನ್ನ ವೃದ್ದಿಸುತ್ತೇ ಓದಿನ ಹವ್ಯಾಸ..!

ಮೊಬೈಲ್‌ ಪೋನ್‌ನಿಂದ ಹೊರಬರೋ ವಿಕಿರಣಗಳನ್ನು ತಪ್ಪಿಸಲು ಮಲಗೋ ಸಮಯದಲ್ಲಿ ಮೊಬೈಲ್‌ ಪೋನ್‌ ಅನ್ನು ದೂರವಿಡೋದು ಉತ್ತಮ. ಸಾಧ್ಯವಾದರೆ, ಮಲಗುವಾಗ ಮೊಬೈಲ್ ಫೋನ್ಗಳನ್ನ ಕನಿಷ್ಠ 3 ಅಡಿ ದೂರದಲ್ಲಿಡಬೇಕು. ಹೀಗೆ ಮಾಡುವುದರಿಂದ ಮೊಬೈಲ್‌ ಪೋನ್ನಿಂದ ಹೊರಸೂಸುವ ರೇಡಿಯೋ ಫ್ರೀಕ್ವೆನ್ಸಿ ಎಲೆಕ್ಟ್ರೋಮ್ಯಾಗ್ನೆಟಿಕ್ಗಳ ಶಕ್ತಿ ಕಡಿಮೆಯಾಗುತ್ತೇ.   ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮೊಬೈಲ್ ಫೋನ್ನಿಂದ ಹೊರಬರುವ ವಿಕಿರಣಗಳು ಸ್ನಾಯುನೋವು ಮತ್ತು ತಲೆನೋವಿಗೆ ಕಾರಣವಾಗುತ್ವೇ. ಅದೇ ರೀತಿ ಮೊಬೈಲ್ ಫೋನ್ಗಳಿಂದ ಬರೋ ನೀಲಿ ಬೆಳಕು ನಿದ್ರೆಯನ್ನ ಪ್ರಚೋದಿಸುವ ಹಾರ್ಮೋನುಗಳ ಸಮತೋಲನವನ್ನ ಹಾಳು ಮಾಡುತ್ತೇ..  ಅತಿಯಾದ ಮೊಬೈಲ್ ಬಳಕೆ ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತೇ ಅನ್ನೋದನ್ನ ‘Journal of Sleep Research’ ನಲ್ಲಿ ಪ್ರಕಟಿಸಲಾಗಿದೆ.  ಈ ಸಂಶೋಧನೆಯ ಪ್ರಕಾರ, ಲೈಟ್ ಆಫ್ ಮಾಡಿ ನಿದ್ರೆಗೆ ಹೋಗುವ ಸಮಯ ಬಂದಾಗ, ನಮ್ಮ ಮೆದುಳಿಗೆ ವಿಶ್ರಾಂತಿ ಬೇಕಾಗುತ್ತದೆ. ಆದರೆ ಮಲಗುವ ಸಮಯದಲ್ಲೂ ಮೊಬೈಲ್‌ ಪೋನ್ ಬಳಸೋದ್ರಿಂದ ಮೆದುಳಿಗೆ ವಿಶ್ರಾಂತಿ ಸಿಗುವುದಿಲ್ಲ.  ಇದು ಮನಸ್ಸಿನ ಮೇಲೆ ಒತ್ತಡ  ಬೀಳಲು ಕಾರಣವಾಗುತ್ತೇ. ಮಲಗೋ ಟೈಮ್ನಲ್ಲಿ ಫೋನ್ ಬಳಕೆ ಮಾಡೋದು ನಮ್ಮ ಭಾವನೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

ಇನ್ನು ಮೊಬೈಲ್‌ ಪೋನ್ ಹೊರಸೂಸುವ ನೀಲಿ ಬೆಳಕು ಕೇವಲ ದೃಷ್ಟಿಗೆ ಮಾತ್ರವಲ್ಲ, ಮೆದುಳಿಗೂ ಕೂಡಾ ಕೆಟ್ಟದು. ನೀಲಿ ಬೆಳಕಿನಿಂದ ದೇಹದಲ್ಲಿ ಮೆಲಟೋನಿನ್ ಪ್ರಮಾಣ ಕಡಿಮೆಯಾಗುತ್ತೇ.. ಮೆಲಟೋನಿನ್ ಎಂಬುದು ನಿದ್ರೆ ಮತ್ತು ಎಚ್ಚರವಾಗಿರುವ ಪರಿಸ್ಥಿತಿಯನ್ನ ನಿಯಂತ್ರಿಸೋ ಜವಾಬ್ದಾರಿಯುತ ಹಾರ್ಮೋನ್ ಆಗಿದ್ದು, ದೇಹದಲ್ಲಿ ಇದರ ಪ್ರಮಾಣ ಕಡಿಮೆಯಾದಾಗ ದಿನಪೂರ್ತಿ ಆಯಾಸ ಮತ್ತು ಕಿರಿಕಿರಿಯನ್ನ ಅನುಭವಿಸಬೇಕಾಗುತ್ತೇ.   ಇನ್ನ ಮಲಗೋ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುವ ಕೆಲವೊಂದು ಘಟನೆಗಳು ಮನಸ್ಸಿನ ಮೇಲೆ ಒತ್ತಡವನ್ನುಂಟು ಮಾಡಬಹುದು.  ಮಲಗುವ ಮುನ್ನ ಪೋನ್‌ನಲ್ಲಿ ನೋಡೋದು ವಿಚಲಿತ ಭಾವನೆಗಳು, ಮತ್ತು ಆತಂಕಗಳಿಗೆ ಕಾರಣವಾಗಬಹುದು. ಈ ಭಾವನೆಗಳು ನಿದ್ರೆ ಬರದೆ ಗಂಟೆಗಟ್ಟಲೆ ಎಚ್ಚರವಾಗಿರುವಂತೆ ಮಾಡುತ್ತವೆ ಎನ್ನುತ್ತದೆ  ಸಂಶೋಧನಾ ವರದಿ.

ಒಟ್ಟಾರೆಯಾಗಿ ಮಲಗುವುದಕ್ಕಿಂತ 1-2 ಗಂಟೆಗಳಿಗೂ ಮೊದಲೇ ಮೊಬೈಲ್‌ ಪೋನ್ ಬಳಕೆ ಮಾಡೋದನ್ನ ನಿಲ್ಲಿಸಬೇಕು. ಆರೋಗ್ಯಯುತ ಜೀವನಕ್ಕೆ ನಿದ್ರೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಮೊಬೈಲ್‌ ಪೋನ್ ಬಳಕೆಗೆ ಕಡಿವಾಣ ಹಾಕಿ, ನಮ್ಮ ಆರೋಗ್ಯವನ್ನ ಉತ್ತಮವಾಗಿಸಿಕೊಳ್ಳೋದು ಉತ್ತಮ ಅಲ್ವಾ..?!

ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.