• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Body Detox; ನಮ್ಮ ದೇಹವನ್ನು ಶುದ್ಧಿ ಮಾಡುವ 4 ವಿಶೇಷ ಜ್ಯೂಸ್ ಗಳು!

March 4, 2025
in GSS Maadhyama, Health and Wellness
Reading Time: 2 mins read
A A
0
201
VIEWS

ನಾವು ತಿನ್ನುವ ಆಹಾರದಿಂದ ಅಗತ್ಯ ಪೋಷಕಾಂಶಗಳನ್ನು ದೇಹ ಹೀರಿಕೊಂಡ ಬಳಿಕ ಉಳಿದದ್ದನ್ನು ಹೊರಗೆ ಹಾಕಲೇಬೇಕು. ಆಗಲೇ ಆರೋಗ್ಯವಾಗಿರಲು ಸಾಧ್ಯ. ಆದರೆ ಕೆಲವೊಮ್ಮೆ ಆಹಾರ ಸರಿಯಾಗಿ ಜೀರ್ಣವಾಗದೇ ನಮ್ಮ ಗಟ್ ವಾಲ್ ಗಳಲ್ಲಿ ಆಹಾರದ ಕಣಗಳು ಸಂಗ್ರಹವಾಗುತ್ತವೆ. ಇದರಿಂದ ಜೀರ್ಣಕ್ರಿಯೆ (Digestion)ಹಾಳಾಗಿ, ದೇಹಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳಲಾಗುವುದಿಲ್ಲ. ಮುಂದುವರೆದು ಲಿವರ್ ಮತ್ತು ಕಿಡ್ನಿಯ ಸಮಸ್ಯೆಗಳೂ ಆರಂಭವಾಗಬಹುದು. ಆದ್ದರಿಂದ ನಮ್ಮ ದೇಹವನ್ನು ಆಗಾಗ್ಗೆ ಶುದ್ಧೀಕರಿಸುವುದು (Body Detox) ತುಂಬಾ ಮುಖ್ಯ. ಇದಕ್ಕಾಗಿ ಅತ್ಯಂತ ಪರಿಣಾಮಕಾರಿಯಾಗಿರುವ 4 ವಿಶೇಷ ಜ್ಯೂಸ್ ಗಳ ಬಗ್ಗೆ ಈಗ ತಿಳಿಯೋಣ.

ಬೂದಗುಂಬಳ ಜ್ಯೂಸ್ (Ash Gourd Juice)


ಬೂದಗುಂಬಳ ಅತ್ಯುತ್ತಮ ಡಿಟಾಕ್ಸ್ ಜ್ಯೂಸ್. ಇದರಲ್ಲಿ 90-96% ನೀರಿನ ಅಂಶ ಇರುತ್ತದೆ. ಇದು ದೇಹದ ಹೈಡ್ರೇಶನ್ (Hydration)ಅನ್ನು ಸುಧಾರಿಸಿ, ವಿಷಕಾರಿ ಅಂಶ (Toxin) ತೆರವುಗೊಳಿಸುತ್ತದೆ. ಇದರಲ್ಲಿರುವ ಮೂತ್ರವರ್ಧಕ ಗುಣಲಕ್ಷಣಗಳು (Diuretic Properties) ಕಿಡ್ನಿಯ ಕೆಲಸವನ್ನು ಬೆಂಬಲಿಸಿ, ಮೂತ್ರದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ವಿಷಕಾರಿ ಅಂಶಗಳು ದೇಹದಿಂದ ಹೊರಗೆ ಹೋಗುತ್ತದೆ. ಇದು ಇಲೆಕ್ಟ್ರೋಲೈಟ್ ಬ್ಯಾಲೆನ್ಸ್ (Electrolyte Balance)ಅನ್ನು ಕಾಪಾಡುವುದರಿಂದ ಯೂರಿನರಿ ವ್ಯವಸ್ಥೆ (Urinary System) ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಹೆಚ್ಚಿನ ನಾರಿನಾಂಶ (Fiber) ಇರುವುದರಿಂದ ಗಟ್ ಹೆಲ್ತ್ (Gut Health) ಉತ್ತಮಗೊಳ್ಳುತ್ತದೆ. ಜೊತೆಗೆ ಲಿವರ್ ಆರೋಗ್ಯವನ್ನೂ ಹೆಚ್ಚಿಸುತ್ತದೆ.

ಅನಾನಾಸ್ ಜ್ಯೂಸ್ (Pineapple Juice)


ಅನಾನಾಸ್ ಜ್ಯೂಸ್ ಕೂಡ ಅತ್ಯುತ್ತಮ ಡಿಟಾಕ್ಸ್ ಜ್ಯೂಸ್. ಇದರಲ್ಲಿ 85-92% ನೀರಿನ ಅಂಶ ಇರುತ್ತದೆ. ಪ್ರಮುಖವಾಗಿ, ಇದರಲ್ಲಿ ಬ್ರೋಮೆಲೈನ್ (Bromelain) ಎನ್ನುವ ಕಿಣ್ವ ಇದೆ, ಇದು ಜೀರ್ಣಕ್ರಿಯೆ ಸುಧಾರಿಸಿ, ಕರುಳಿನ ಚಲನೆ (Bowel Movement)ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶ (Fiber) ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Read this also : Anemia; ರಕ್ತಹೀನತೆ ತಡೆಯಲು ಈ ಆಹಾರ ಪದಾರ್ಥಗಳನ್ನು ತಿನ್ನಿ!

ಸೋರೆಕಾಯಿ ಜ್ಯೂಸ್ (Bottle Gourd Juice)


ಸೋರೆಕಾಯಿ ಕೂಡ ಅತ್ಯುತ್ತಮ ಡಿಟಾಕ್ಸ್ ಜ್ಯೂಸ್ (Gentle Cleanser). ಇದರಲ್ಲಿ ಸುಮಾರು 96% ನೀರಿನ ಅಂಶ ಇರುತ್ತದೆ, ಇದು ದೇಹಕ್ಕೆ ಹೈಡ್ರೇಶನ್ (Hydration) ನೀಡುತ್ತದೆ. ಇದರ ಪ್ರಾಕೃತಿಕ ಗುಣಗಳು ಕಿಡ್ನಿಯ ಕಾರ್ಯಕ್ಷಮತೆ (Kidney Function)ಹೆಚ್ಚಿಸಿ, ದೇಹದಿಂದ ಅನಗತ್ಯ ತ್ಯಾಜ್ಯಗಳು (Waste) ಹೊರಹೋಗಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಲಿವರ್ ಆರೋಗ್ಯವನ್ನು ಬೆಂಬಲಿಸುತ್ತವೆ. ಇದರಲ್ಲಿರುವ ನಾರಿನಾಂಶ (Soluble & Insoluble Fiber) ಜೀರ್ಣಕ್ರಿಯೆ ಸುಧಾರಿಸಿ, ಮಲಬದ್ಧತೆಯನ್ನು (Constipation) ತಡೆಯುತ್ತದೆ. ಜೊತೆಗೆ ಗಟ್ ಆರೋಗ್ಯ (Gut Health) ಬೆಂಬಲಿಸಿ ಅಸಿಡಿಟಿ ಕಡಿಮೆ ಮಾಡುತ್ತದೆ.

ಸೌತೆಕಾಯಿ ಜ್ಯೂಸ್ (Cucumber Juice)


ದೇಹದ ಡಿಟಾಕ್ಸ್ ಗೆ ಮತ್ತೊಂದು ಬೆಸ್ಟ್ ಜ್ಯೂಸ್ ಎಂದರೇ ಸೌತೆಕಾಯಿ ಜ್ಯೂಸ್. ಇದರಲ್ಲಿ ಸುಮಾರು 96% ನೀರಿನ ಅಂಶ ಇರುತ್ತದೆ, ಇದು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ ಹಾಗೂ ಟಾಕ್ಸಿನ್ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶ (Fiber) ಜೀರ್ಣಕ್ರಿಯೆ ಸುಧಾರಿಸಿ ಗಟ್ ಆರೋಗ್ಯ (Gut Health) ಹೆಚ್ಚಿಸುತ್ತದೆ. ಇದರಲ್ಲಿರುವ ಸ್ವಲ್ಪ ಪ್ರಮಾಣದ ಮೂತ್ರವರ್ಧಕ ಗುಣಲಕ್ಷಣಗಳು (Mild Diuretic Properties) ಕಿಡ್ನಿಯ ಕಾರ್ಯಕ್ಷಮತೆಯನ್ನು (Kidney Function) ಬೆಂಬಲಿಸಿ, ಅನಗತ್ಯ ದ್ರವಗಳನ್ನು ಹೊರಹಾಕುತ್ತದೆ.

ಈ ಜ್ಯೂಸ್ಗಳ ಸೇವನೆ ಹೇಗೆ ಮಾಡಬೇಕು?
ಈ 4 ಜ್ಯೂಸ್ಗಳನ್ನು 7 ದಿನಗಳ ಕಾಲ ಪ್ರತಿದಿನವೂ ಒಂದೊಂದರಂತೆ ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಉತ್ತಮ. ಡಿಟಾಕ್ಸ್ ಪ್ರಕ್ರಿಯೆಯಲ್ಲಿದ್ದಾಗ ಜಂಕ್ ಫುಡ್, ಡೀಪ್ ಫ್ರೈಡ್ ಪ್ಯಾಕ್ಡ್ ಮತ್ತು ಪ್ರೊಸೆಸ್ಡ್ ಫುಡ್ಗಳನ್ನು ತಿನ್ನದಿರಿ. ಒಂದು ವಾರ ಹೀಗೆ ಮಾಡಿದ ನಂತರ ಮೂರು ತಿಂಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ, ದೇಹವನ್ನು ಶುದ್ಧೀಕರಿಸಿ.

Tags: 4 juicesbody detoxHealthhome remedy
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.