ನಮ್ಮ ಭಾರತೀಯ ಹಳೆ ಪದ್ಧತಿಯಲ್ಲಿ ಬೇಸಿಗೆಯ ತಾಪದಿಂದ ರಕ್ಷಣೆ ಪಡೆಯೋದಕ್ಕೆ ಜನರು ಬಾದಾಮಿ ಗೋಂದು ಉಪಯೋಗಿಸುತ್ತಿದ್ದರು. ಇದು ನಮ್ಮ ದೇಹದ ಉಷ್ಣತೆ ತಗ್ಗಿಸಿ, ತಂಪಾಗಿಡಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ ಬಾದಾಮಿ ಗೋಂದು(Badam gondh) ಆರೋಗ್ಯಕ್ಕೆ ಹಲವಾರು ಪ್ರಯೋಜನ ನೀಡುತ್ತದೆ. ಇದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ
ಬಾದಾಮಿ ಗೋಂದು(Badam gondh) Hydrophilic ಸ್ವಭಾವ ಹೊಂದಿರುತ್ತದೆ. ಇದನ್ನು ನೀರಿನಲ್ಲಿ ನೆನೆಸಿದಾಗ Mucilaginous ಅಂದರೆ ಜೆಲ್ಲಿಯ ರೂಪ ಪಡೆಯುತ್ತದೆ. ಈ ಜೆಲ್ಲಿಯಂಥ ರೂಪವೇ ದೇಹದ ತಾಪ ತಗ್ಗಿಸಲು ಸಹಾಯ ಮಾಡುವುದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಬರುವ ಉಷ್ಣ ಜಾಸ್ತಿಯಾಗಿ ಉರಿಮೂತ್ರ, ಕಣ್ಣುರಿ, ಸುಸ್ತು ಆಗುವುದು ಸಾಮಾನ್ಯ. ಇದಕ್ಕೆ ಬಾದಾಮಿ ಗೋಂದು ಒಳ್ಳೆ ಪರಿಹಾರ.

ಬಾದಾಮಿ ಗೋಂದಿನಲ್ಲಿರುವ Anti-inflammatory ಗುಣಗಳಿಂದ ಬೇಸಿಗೆ ಕಾಲದಲ್ಲಾಗುವ inflammation ಕೂಡ ಕಡಿಮೆ ಮಾಡುತ್ತದೆ. ಆಯುರ್ವೇದದ ಪ್ರಕಾರ ಬಾದಾಮಿ ಗೋಂದು ಪಿತ್ತ ದೋಶವನ್ನು ಸಮತೋಲನವಾಗಿರಿಸುತ್ತದೆ.
ಬಾದಾಮಿ ಗೋಂದು(Badam gondh) ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಸಿಡಿಟಿ, ಮಲಬದ್ಧತೆ ತಡೆಯೋದಕ್ಕೂ ಸಹಾಯ ಮಾಡುತ್ತದೆ. ಇದರ ಜೆಲ್ಲಿ ರೂಪ ಹೊಟ್ಟೆಯಲ್ಲಿ Protective layer ರೀತಿ ಕೆಲಸ ಮಾಡತ್ತದೆ.
ಬಾದಾಮಿ ಗೋಂದಿನಲ್ಲಿರುವ Calcium, Phosphorus, Potassium, Iron ಮುಂತಾದ ಅಂಶಗಳು ಮೂಳೆಗಳಿಗೆ ಬಲ ನೀಡುತ್ತದೆ. ಸ್ನಾಯು ನೋವನ್ನು ತಗ್ಗಿಸುತ್ತದೆ. ಆಸ್ಟೊಯೋಪೊರೊಸಿಸ್ ತಡೆಯಲು ಸಹಾಯ ಮಾಡುತ್ತದೆ.

Read this also : Moringa; ಮಧುಮೇಹ ನಿಯಂತ್ರಣಕ್ಕೆ 8 ರೀತಿ ಸಹಾಯ ಮಾಡುವ ನುಗ್ಗೆ ಸೊಪ್ಪು!
ಬಾದಾಮಿ ಗೋಂದಿನಲ್ಲಿರುವ Antioxidants ಚರ್ಮಕ್ಕೆ ಒಳ್ಳೆಯದು. ಇದು Wrinkles, Fine lines, Sunburn, Redness, Irritation ಸಮಸ್ಯೆಗಳನ್ನು ನಿಯಂತ್ರಿಸಲು ಸಹಕಾರಿ.
ಬಾದಾಮಿ ಗೋಂದು Insulin sensitivity ಹೆಚ್ಚಿಸಿ ರಕ್ತದಲ್ಲಿ ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಸಮತೋಲನ ಕಾಪಾಡಿ ಹೃದಯ ಆರೋಗ್ಯ ರಕ್ಷಿಸುತ್ತದೆ. Fiber ಹೆಚ್ಚಿಸುವುದರಿಂದ ತೂಕ ಇಳಿಕೆಗೂ ಸಹಕಾರಿ.
ಬಾದಾಮಿ ಗೋಂದನ್ನ ಹೇಗೆ ಸೇವಿಸಬೇಕು?

ಒಂದೆರಡು ಬಾದಾಮಿ ಗೋಂದುಗಳನ್ನು ರಾತ್ರಿಪೂರ ನೀರಿನಲ್ಲಿ ನೆನೆಸಿಡಬೇಕು. ಮರುದಿನ ಬೆಳಗ್ಗೆ ಅದು ಜೆಲ್ಲಿ ರೂಪಕ್ಕೆ ಬದಲಾಗಿರುತ್ತದೆ. ಆ ಜೆಲ್ಲಿಯನ್ನು ನೀವು ಕುಡಿಯುವ ಹಣ್ಣಿನ ಪಾನೀಯಗಳಿಗೆ ಒಂದು ಚಮಚ ಹಾಕಿ ಕುಡಿಯುವುದು










