• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Asthma; ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ! ಹೀಗೆ ಕೇರ್ ಮಾಡಿಕೊಳ್ಳಿ!

November 6, 2024
in GSS Maadhyama, Health and Wellness
Reading Time: 1 min read
A A
0
189
VIEWS

ಚಳಿಗಾಲ ಶುರುವಾದ್ರೆ ಕೆಲವೊಂದು ಸಾಮಾನ್ಯ ರೋಗ ಲಕ್ಷಣಗಳು ಕಾಡುತ್ತವೆ. ಈ ಋತುವಿನಲ್ಲಿ ವಾತಾವರಣ ತಂಪಾಗಿದ್ದು, ಶೀತ ಗಾಳಿಯಿಂದ ಕೂಡಿರುತ್ತೆ. ಹೀಗಾಗಿ ನೆಗಡಿ, ಕೆಮ್ಮು, ಜ್ವರ ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ ಚಳಿಗಾಲ ಯಾಕಾದ್ರೂ ಬರುತ್ತೆ ಅನ್ಕೋಳೋದು ಮಾತ್ರ ಅಸ್ತಮಾ ಇರುವವರು. ಯಾಕಂದ್ರೆ ಈ ಸಮಯದಲ್ಲಿ ಅಸ್ತಮಾ(Asthma) ಉಲ್ಬಣಗೊಳ್ಳುತ್ತದೆ. ರಾತ್ರಿ ಸಮಯದಲ್ಲಂತೂ ತುಂಬಾ ತೊಂದರೆಯಾಗುತ್ತದೆ.

ಅಸ್ತಮಾ(Asthma) ಅನ್ನೋದು ದೀರ್ಘಕಾಲ ಕಾಡುವ ಆರೋಗ್ಯ ಸಮಸ್ಯೆ. ಅಸ್ತಮಾವು ಶ್ವಾಶನಾಳದ ಮೇಲೆ ಪರಿಣಾಮ ಬೀರುತ್ತೆ.ಇದರಿಂದಾಗಿ ಮುಕ್ತವಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಉಸಿರಾಡುವಾಗ ಸಿಳ್ಳೆ ಹಾಕಿದಂತಹ ಶಬ್ದ ಬರುತ್ತದೆ. ಇದನ್ನ ವೀಜಿಂಗ್ ಅಂತಾ ಕರಿತಾರೆ. ಇದರ ಜೊತೆಗೆ ಎದೆಯ ಭಾಗದಲ್ಲಿ ಬಿಗಿದಂತಾಗುವುದು, ಸತತವಾದ ಕೆಮ್ಮು ಬರುವುದು ಅಸ್ತಮಾದ ಪ್ರಮುಖ ಲಕ್ಷಣಗಳಾಗಿರುತ್ತವೆ.

ಅಸ್ತಮಾ ಸಮಸ್ಯೆಗೆ ಕಾರಣಗಳೇನಿರಬಹುದು?

ಅಸ್ತಮಾ ಬರಲು ಸಾಕಷ್ಟು ಕಾರಣಗಳಿರುವೆ. ಪರಿಸರ ಮಾಲಿನ್ಯ, ವಾಯು ಮಾಲಿನ್ಯಗಳಿಂದ ಅಸ್ತಮಾ ಕಾಡಬಹುದು. ಹೆಚ್ಚಿನ ಸಮಯ ಕಾರ್ಖಾನೆಗಳಿಂದ ಬರುವ ಹೊಗೆ ಕುಡಿಯುತ್ತಿದ್ದರೆ, ಕೆಲವು ಅಲರ್ಜಿಗಳಿದ್ದರೆ, ಊಸಿರಾಟದ ಸೋಂಕುಗಳಿದ್ದರೆ ಅಸ್ತಮಾ ಬರಬಹುದು. ಕೆಲ ವೇಳೆ ಇದು ಜೆನೆಟಿಕ್ಸ್ ರೋಗವೂ ಆಗಬಹುದು. ಸಾಕು ಪ್ರಾಣಿಗಳಿಂದಾಗುವ ಅಲರ್ಜಿಗಳು, ಧೂಮಪಾನದ ಹೊಗೆಗಳಿಂದಲೂ ಅಸ್ತಮಾ ಬರುವ ಸಾಧ್ಯತೆ ಇರುತ್ತೆ.

ಚಳಿಗಾಲದಲ್ಲಿ ಅಸ್ತಮಾ ರೋಗದ ಲಕ್ಷಣಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ. ಅದರಲ್ಲೂ ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಕಾಡುತ್ತವೆ. ಕೆಲ ರಾತ್ರಿಗಳು ನಿದ್ದೆ ಇಲ್ಲದ ರಾತ್ರಿಗಳಾಗಿ ಮಾರ್ಪಡುತ್ತವೆ. ಇದಕ್ಕೆ ಮಲಗುವ ಭಂಗಿ, ಏರ್ ಕಂಡೀಷನ್ ಬಳಸಿ ನಿದ್ರಿಸುವುದು, ಹಾಸಿಗೆ, ದಿಂಬು ಮತ್ತು ಕಂಬಳಿಯಲ್ಲಿ ಧೂಳು ಇರುವುದು ಕಾರಣವಾಗಬಹುದು.

ಯಾವೆಲ್ಲಾ ವಿಷಯಗಳ ಬಗ್ಗೆ ನಿಗಾ ವಹಿಸಬೇಕು?

ಅಸ್ತಮಾದಿಂದ ಬಳಲುತ್ತಿದ್ದರೆ ನೀವು ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ನಿಮ್ಮ ಸುತ್ತಲಿನ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಮತ್ತು ತಣ್ಣಗಿನ ಕೋಣೆಯಲ್ಲಿ ಮಲಗಬೇಡಿ. ಮಲಗುವ ಮೊದಲು ನೀವು ಹಾಸಿಗೆ ಅಡಿಯಲ್ಲಿ ಇನ್ಹೇಲರ್‌ನ್ನು ಇಟ್ಟುಕೊಳ್ಳಿ. ಸ್ಟೀಮ್ ತೆಗೆದುಕೊಳ್ಳಿ, ಇದು ಅಸ್ತಮಾ ಮಾತ್ರವಲ್ಲದೇ ಶೀತ ಹಾಗೂ ತಲೆನೋವಿಗೂ ಸಹ ಪರಿಹಾರ ನೀಡುತ್ತದೆ. ಚಳಿಗಾಲದಲ್ಲಿ ಹೆಚ್ಚು ಬೆಚ್ಚಗಿರಬೇಕು. ಜಾಸ್ತಿ ಚಳಿ ಇರುವ ಕಡೆ ಹೋಗಬೇಡಿ.

ಅಸ್ತಮಾ- ಯಾವ ಆಹಾರ ತಿಂದ್ರೆ ಒಳ್ಳೆಯದು? ಯಾವುದನ್ನು ತಿನ್ಲೇ ಬಾರದು?

ಚಳಿಗಾಲದಲ್ಲಿ ಅಸ್ತಮಾ ಇರುವವರು ತಮ್ಮ ಆಹಾರಗಳ ಬಗ್ಗೆಯೂ ಎಚ್ಚರ ವಹಿಸಿ. ರೋಗ ನಿರೋಧಕ ಶಕ್ತಿ ಹೆಚ್ಚಿರುವಂತಹ ಆಹಾರಗಳನ್ನು ಸೇವನೆ ಮಾಡಿ. ಕಿತ್ತಳೆ ಹಣ್ಣು, ಕೋಳಿ ಮೊಟ್ಟೆ ಇವು ಆರೋಗ್ಯಕರವಾಗಿರುತ್ತವೆ. ಸಿಹಿಗೆಣಸು, ಕ್ಯಾರೆಟ್, ಹಸಿರು ಎಲೆ-ತರಕಾರಿ ಇತ್ಯಾದಿಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ. ಸೇಬು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಸ್ತಮ ಸಮಸ್ಯೆ ಇರುವವರು ಡೈರಿ ಉತ್ಪನ್ನಗಳ ಬದಲಾಗಿ ಬಾದಾಮಿ ಹಾಲು, ಸೋಯಾ ಹಾಲು ಬಳಸಿದರೆ ಉತ್ತಮ. ಸಾಧ್ಯವಾದಷ್ಟು ನಿಮ್ಮ ಆಹಾರ ಪದ್ಧತಿಯಲ್ಲಿ ಮೆಗ್ನೀಷಿಯಂ ಅಂಶ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಿ. ಡಾರ್ಕ್ ಚಾಕಲೇಟ್, ಕುಂಬಳಕಾಯಿ ಬೀಜಗಳು, ಪಾಲಕ್ ಸೊಪ್ಪು ಇತ್ಯಾದಿಗಳು ನಿಮ್ಮ ಆಹಾರ ಪದ್ಧತಿಯಲ್ಲಿ ಇರುವುದು ಒಳ್ಳೆಯದು.

ಅಸ್ತಮಾ ಸಮಸ್ಯೆ ಇರುವವರು ಆದಷ್ಟು ಬಿಸಿ ನೀರನ್ನೇ ಕುಡಿಯಿರಿ. ತುಳಸಿಯನ್ನು ಕುಡಿಯುವ ನೀರಿನಲ್ಲಿ ಹಾಕಿ ನೆನಸಿಡಿ, ಅದನ್ನು ಆಗಾಗ ಸೇವನೆ ಮಾಡುತ್ತಿರಿ. ಟೀ ಕುಡಿಯುವ ಅಭ್ಯಾಸವಿದ್ದರೆ, ನಾರ್ಮಲ್ ಟೀ ಬದಲು ಶುಂಠಿ ಟೀ ಕುಡಿಯಿರಿ. ನೀರಿಗೆ ಶುಂಠಿ, ಸ್ವಲ್ಪ ಉಪ್ಪು ಹಾಕಿ ಕುದಿಸಿ ಕುಡಿಯುವುದರಿಂದಲೂ ಪ್ರಯೋಜವಾಗುತ್ತದೆ. ಅದೇ ರೀತಿ ನೀರಿಗೆ ಚಿಟಿಕೆಯಷ್ಟು ಅರಿಶಿನ ಹಾಕಿಕೊಂಡು ಕುಡಿದರೂ ಒಳ್ಳೆಯದು. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವ ಜನರು ದೀರ್ಘ ಕಾಲ ಶೇಖರಣೆ ಮಾಡಿಟ್ಟಿರುವಂತಹ ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ದೂರವುಳಿಯುವುದು ಒಳ್ಳೆಯದು. ಕರಿದ ಆಹಾರಗಳು, ಫಾಸ್ಟ್ ಫುಡ್ ಆಹಾರಗಳಿಂದಲೂ ದೂರವಿರಿ. ಎಷ್ಟೇ ಕೇರ್ ಮಾಡುತ್ತಿದ್ದರೂ ಸಮಸ್ಯೆ ತೀವ್ರ ಸ್ವರೂಪದಲ್ಲೇ ಇದ್ದರೆ ವೈದ್ಯರ ಬಳಿ ಹೋಗುವುದನ್ನು ನಿರ್ಲಕ್ಷಿಸದಿರಿ.

For more articles visit GSS Media

Tags: AsthamacareHealth
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.