• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama Health and Wellness

Hairfall; ತಲೆ ಕೂದಲು ಉದುರೋದಕ್ಕೆ ನೀವು ಮಾಡೋ ಈ 6 ತಪ್ಪುಗಳೇ ಕಾರಣ!

March 18, 2025
in Health and Wellness, GSS Maadhyama
Reading Time: 2 mins read
A A
0
132
VIEWS

ನಿಮ್ಮ ತಲೆ ಕೂದಲು ತುಂಬಾ ಉದುರುತ್ತಿದ್ದರೆ(Hairfall) ಹೇರ್ ಕೇರ್ ಹೆಸರಲ್ಲಿ ನೀವು ಕೆಲವೊಂದು ತಪ್ಪುಗಳನ್ನ ಮಾಡುತ್ತಿರಬಹುದು. ಕೂದಲು ಉದುರುವುದು ನಿಲ್ಲಬೇಕು ಎಂದರೆ, ಈ ತಪ್ಪುಗಳನ್ನ ಮಾಡುವುದನ್ನು ನಿಲ್ಲಿಸಬೇಕು. ಈ ಲೇಖನದಲ್ಲಿ ಸಾಮಾನ್ಯವಾಗಿ ಜನರು ಮಾಡುವ ತಪ್ಪುಗಳೇನು? ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಯೋಣ.

1. ಎಣ್ಣೆ ಹಚ್ಚದೇ ಇರುವುದು

ಕೂದಲಿಗೆ ಎಣ್ಣೆ ಹಚ್ಚುವುದು ತುಂಬಾ ಮುಖ್ಯ. ಸಮಯ ಇಲ್ಲ ಅನ್ನೋ ಕಾರಣಕ್ಕೆ ತುಂಬಾ ಜನ ತಲೆಗೆ ಎಣ್ಣೆ ಹಚ್ಚೋದನ್ನ ರೂಢಿಸಿಕೊಳ್ಳಲ್ಲ. ಇದರಿಂದ ಕೂದಲು ಡ್ಯಾಮೇಜ್ ಆಗಿ ಉದುರಲು ಶುರುವಾಗುತ್ತದೆ. ಆದ್ದರಿಂದ ವಾರದಲ್ಲಿ ಕನಿಷ್ಠ 2 ಬಾರಿ ತಲೆಗೆ ಎಣ್ಣೆ ಹಚ್ಚಿ, ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ನೆತ್ತಿಯಲ್ಲಿ ರಕ್ತ ಸಂಚಲನ ಉತ್ತಮವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ ಮತ್ತು ಕೂದಲಿನ ಬೇರು ಗಟ್ಟಿಯಾಗುತ್ತೆ. ಜೊತೆಗೆ, ಡ್ಯಾಂಡ್ರಫ್ ಕಮ್ಮಿಯಾಗಿ, ಕೂದಲಿಗೆ ಬೇಕಾದ ತೇವಾಂಶ ದೊರೆಯುತ್ತದೆ.

2. ತಲೆಗೆ ಸರಿಯಾಗಿ ಸ್ನಾನ ಮಾಡದೇ ಇರುವುದು

ತಲೆ ಸ್ನಾನ ಮಾಡುವ ವಿಧಾನ ಕೂಡ ಕೂದಲಿನ ಆರೋಗ್ಯಕ್ಕೆ ಮುಖ್ಯ. ಕೆಲವರು ಎಣ್ಣೆ ಹಚ್ಚದೇ ಸ್ನಾನ ಮಾಡುತ್ತಾರೆ. ಇದರಿಂದ ಕೂದಲು ಒಣಗಿ, ಫ್ರಿಜ್ಜಿಯಾಗುತ್ತದೆ. ಸ್ನಾನದ ಮುಂಚೆ ಎಣ್ಣೆ ಹೆಚ್ಚಿದ್ದರೆ, ಕೂದಲಿನ ತೇವಾಂಶ ಚೆನ್ನಾಗಿರುತ್ತದೆ. ಹಾಗೆ ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡುವುದೂ ತಪ್ಪು. ಬಿಸಿ ನೀರು ಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ, ಉದುರುವಿಕೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಬೆಚ್ಚಗಿನ ನೀರಿನಲ್ಲಿ ತಲೆಯನ್ನು ತೊಳೆಯುವುದು ಉತ್ತಮ.

3. ಸರಿಯಾದ ಶಾಂಪೂ ಬಳಸದೇ ಇರುವುದು

ಶಾಂಪೂ ಮತ್ತು ಹೇರ್ ಕೇರ್ ಪ್ರಾಡಕ್ಟ್‌ಗಳ ಆಯ್ಕೆ ಕೂಡ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ಕೆಮಿಕಲ್ ಇರುವ ಶಾಂಪೂ ಬಳಸುತ್ತಾರೆ ಅಥವಾ ಪದೇಪದೇ ಶಾಂಪೂ ಬದಲಾಯಿಸುತ್ತಾರೆ, ಆ ರೀತಿ ಮಾಡಬಾರದು. ನಿಮ್ಮ ಕೂದಲಿಗೆ ಹೊಂದಿಕೊಳ್ಳುವ ಶಾಂಪೂ ಬಳಸಿ, ಶಾಂಪೂ ಹಾಕುವಾಗ ತಲೆಯನ್ನು ಜೋರಾಗಿ ಉಜ್ಜಬೇಡಿ. ಕೂದಲು ತೊಳೆದ ನಂತರ  ಕಂಡಿಷನರ್ ಹಾಕುವುದನ್ನು ಮರೆಯಬೇಡಿ.

4. ತಲೆ ಒಣಗಿಸುವ ವಿಧಾ‌ನ

ಸ್ನಾನದ ನಂತರ ಟವೆಲ್ ಬಳಸಿ ತಲೆಯನ್ನು ಜೋರಾಗಿ ಉಜ್ಜುವುದು ಕೂಡ ತಪ್ಪು. ಕೂದಲು ಒದ್ದೆಯಿರುವಾಗ ನಾಜೂಕಾಗಿರುತ್ತದೆ. ಆಗ ಜೋರಾಗಿ ಉಜ್ಜಿದರೆ ಅದರ  ಔಟರ್ ಲೇಯರ್ -ಅದನ್ನ ಕ್ಯುಟಿಕಲ್ ಅಂತಾರೆ. ಅದು ಡ್ಯಾಮೇಜ್ ಆಗುತ್ತದೆ, ಆಗ ಕೂದಲು ಕೂಡ ಹಾನಿಯಾಗುತ್ತದೆ.  ಉದಾಹರಣೆಗೆ ಒಂದು ವೈರ್ ಇದ್ದರೆ ಅದರ ಸುತ್ತ ಒಂದು ಕೋಟಿಂಗ್ ಇರುತ್ತೆ, ಒಂದು ವೇಳೆ ಅದು ಡ್ಯಾಮೇಜ್ ಆದರೆ ಒಳಗಿರುವ ವೈರ್ ಹೇಗೆ ಹಾಳಾಗುತ್ತದೆಯೋ ಅದೇ ರೀತಿ ನಮ್ಮ ಕೂದಲು ಕೂಡ. ಜೊತೆಗೆ ಕೂದಲನ್ನು ಬಿಗಿಯಾಗಿ ಟವೆಲ್‌ನಿಂದ ಕಟ್ಟಿಕೊಳ್ಳುವುದು, ಒದ್ದೆ ಕೂದಲಿಗೆ ಪೋನಿ ಹಾಕುವುದನ್ನು ಮಾಡಬಾರದು.

 5. ಕೂದಲು ಬಾಚುವುದು

ಕೂದಲನ್ನು ಸರಿಯಾಗಿ ಬಾಚುವುದು ಕೂಡ ತುಂಬಾ ಮುಖ್ಯ. ಒದ್ದೆ ಕೂದಲನ್ನು ತಕ್ಷಣವೇ ಬಾಚುವುದೂ ತಪ್ಪು. ಕೂದಲು ಸ್ವಲ್ಪ ಒಣಗಿದ ಮೇಲೆ ಬಾಚಬೇಕು. ಶುಚಿಯಾದ ಒಳ್ಳೆಯ ಬಾಚಣಿಗೆ ಬಳಸಬೇಕು. ದೊಡ್ಡ ಹಲ್ಲುಗಳಿರುವ ಬಾಚಣಿಗೆ ಬಳಸುವುದರಿಂದ ಕೂದಲಿನ ಸಿಕ್ಕನ್ನು ಬೇಗ ಬಿಡಿಸಬಹುದು.

Read this also : Dandruff; ಮನೆಯಲ್ಲೇ ಸುಲಭ ಪರಿಹಾರ!

6. ಹೀಟ್ ಸ್ಟೈಲಿಂಗ್ ಮಾಡುವುದು

ನಿತ್ಯವೂ ಬ್ಲೋ ಡ್ರೈಯರ್, ಸ್ಟ್ರೈಟ್ನರ್ ಅಥವಾ ಕರ್ಲಿಂಗ್ ಟೂಲ್ಸ್ ಬಳಸುವುದರಿಂದ ಕೂದಲು ಹಾನಿಯಾಗುತ್ತದೆ. ಈ ಟೂಲ್ಸ್‌ನಿಂದ ಬರುವ ತಾಪಮಾನದಿಂದ ಕೂದಲು ನೈಸರ್ಗಿಕ ತೇವಾಂಶ ಕಳೆದುಕೊಂಡು ಉದುರಲು ಶುರುವಾಗುತ್ತದೆ.

ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಈ ಸರಳ ತಪ್ಪುಗಳನ್ನು ತಿದ್ದುಕೊಂಡರೆ ಕೂದಲು ಉದುರುವುದು ಕಮ್ಮಿಯಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ.

Tags: haircarehairfallhairloss
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.