ದೇಹದಲ್ಲಿ ತುಂಬಿರುವ ಬೊಜ್ಜನ್ನು(Body fat) ಕರಗಿಸುವುದು ಅಷ್ಟು ಸುಲಭವಲ್ಲ. ಶರೀರದಲ್ಲಿ ಬೊಜ್ಜು ಹೆಚ್ಚಾಗಿ, ತೂಕ ಹೆಚ್ಚಾದರೆ ಅದು ದೀರ್ಘ ಕಾಲದವರೆಗೆ ಮನುಷ್ಯನನ್ನು ಕಾಡುತ್ತದೆ. ಬೊಜ್ಜು ಕರಗಿಸಲು ಸಾಕಷ್ಟು ಸರ್ಕಸ್ ಕೂಡ ಮಾಡಬೇಕಾಗುತ್ತೆ. ವ್ಯಾಯಾಮ, ಜಿಮ್, ವಾಕಿಂಗ್, ರನ್ನಿಂಗ್ ಅಂತೆಲ್ಲಾ ದೇಹವನ್ನು ದಂಡಿಸಬೇಕಾಗುತ್ತದೆ. ಇದಕ್ಕಾಗಿ ಕಟ್ಟುನಿಟ್ಟಿನ ಆಹಾರ ಪಥ್ಯವನ್ನೂ ಮಾಡಬೇಕುತ್ತದೆ. ಇಷ್ಟೆಲ್ಲಾ ಮಾಡುವ ಮಧ್ಯೆ ಕೆಲವೊಂದು ಸಿಂಪಲ್ ವಿಷಯಗಳನ್ನ ಮರೆತಿರುತ್ತೀವಿ. ಈ ವರದಿಯಲ್ಲಿ ಬೊಜ್ಜು ಕರಗಿಸಲು ಸಹಾಯ ಮಾಡುವ 3 ಸಿಂಪಲ್ ವಿಧಾವನ್ನು ತಿಳಿಯೋಣ. ಕೇಳೋಕೇ, ಮಾಡೋಕೆ ಸಿಂಪಲ್ ಅನಿಸಿದ್ರೂ ಫಲಿತಾಂಶ ಎಫೆಕ್ಟೀವ್ ಆಗಿರುತ್ತೆ. ಅದಕ್ಕೆ ಇದನ್ನು 3 ಪವರ್ಫುಲ್ ಜ್ಯೂಸ್ಗಳು ಎಂದು ಹೇಳಿರುವುದು. ಹಾಗಾದ್ರೆ ಸಿಂಪಲ್ ಅನಿಸುವ ಆದ್ರೂ ಪವರ್ಫುಲ್ ಆಗಿರುವ ಆ 3 ಜ್ಯೂಸ್ಗಳು ಯಾವುವು? ಬೊಜ್ಜು ಕರಗಲು ಅವು ಹೇಗೆ ಸಹಾಯ ಮಾಡುತ್ತವೆ? ಈ ವರದಿಯಲ್ಲಿ ನೋಡೋಣ
1 ಬಿಸಿ ನೀರು
ಅತ್ಯಂತ ಸುಲಭಕ್ಕೆ ಸಿಗುವ ಪದಾರ್ಥ. ನೀವೇನಾದ್ರೂ ದೇಹದ ಬೊಜ್ಜು ಕರಗಿಸು ಮಾರ್ಗದಲ್ಲಿದ್ದರೆ ಬಿಸಿ ನೀರು ಕುಡಿಯವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಿಸಿನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತೆ. ಈ ತಾಪಮಾನ ಸಾಮಾನ್ಯ ಸ್ಥಿತಿಗೆ ತರಲು ದೇಹವು ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡಬೇಕಾಗುತ್ತೆ. ಇದನ್ನು ಥರ್ಮೋಜೆನೆಸಿಸ್ ಅಂತಾರೆ. ಇದು ನಿಮ್ಮ ಮೆಟಬಾಲಿಸಮ್ ಹೆಚ್ಚಿಸಿ, ದೇಹದ ಆರೋಗ್ಯಕರ ತೂಕ ಕಾಪಾಡಲು ಸಹಾಯ ಮಾಡುತ್ತೆ. ಬಿಸಿನೀರು ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹವನ್ನು ಡಿಟಾಕ್ಸಿಫಿಕೇಶನ್ ಮಾಡಲು ಸಹಾಯ ಮಾಡುತ್ತದೆ. ಬಿಸಿನೀರು ಕುಡಿಯುವುದರಿಂದ ಮೂತ್ರಪಿಂಡದ ಕಾರ್ಯಕ್ಕೆ ಸಹಕಾರಿಯಾಗಿ, ದೇಹವು ಮೂತ್ರ ವಿಸರ್ಜನೆಯ ಮೂಲಕ ತ್ಯಾಜ್ಯವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಟೀಯಷ್ಟು ನೀರನ್ನು ಬಿಸಿ ಮಾಡಿಕೊಂಡು ಸ್ವಲ್ಪ ಸ್ವಲ್ಪನೇ ಕುಡಿಯುವುದರಿಂದ ಬೊಜ್ಜು ಕರಗಿಸುವ ಮಾರ್ಗದಲ್ಲಿ ಪರಿಣಾಮಕಾರಿಯಾಗುತ್ತದೆ. ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದಿಂದ ಸಹಾಯವಾಗುತ್ತದೆ.
2 ಆಮ್ಲ, ಆಲೋವೆರಾ, ಶುಂಠಿ ಜ್ಯೂಸ್
ಆಮ್ಲಾವನ್ನು ಬೆಟ್ಟದ ನೆಲ್ಲಿಕಾಯಿ ಅಥವಾ ಭಾರತೀಯ ನೆಲ್ಲಿಕಾಯಿ ಎಂದು ಕರೆಯುತ್ತಾರೆ. ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳು ಮತ್ತು ಫೈಬರ್ನಿಂದ ಸಮೃದ್ಧವಾಗಿರುವ ಆಮ್ಲಾ, ಫೂಡ್ ಕ್ರೇವಿಂಗ್ಸ್ ತಗ್ಗಿಸಲು ಸಹಾಯ ಮಾಡುತ್ತೆ. ಇದರಿಂದ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ದೇಹದ ಡಿಟಾಕ್ಸಿಫಿಕೇಶನ್ಗೂ ಸಹ ಬೆಂಬಲಿಸುತ್ತದೆ. ಇದರಿಂದಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತೊಲಗಿ ದೇಹವು ಆರೋಗ್ಯಕರ ತೂಕವನ್ನು ಹೊಂದಲು ಸಹಕಾರಿಯಾಗುತ್ತೆ.
ಅಲೋವೆರಾ ರಸವು ವೇಗವಾದ ಮೆಟಬಾಲಿಸಮ್ ಉತ್ತೇಜಿಸಲು ಸಹಾಯ ಮಾಡಿ, ಕ್ಯಾಲೋರಿ ಬರ್ನ್ ಮಾಡಲು ಸಹಕಾರಿಯಾಗುತ್ತೆ. ಜೀರ್ಣಕ್ರಿಯೆಯನ್ನು ಸಹಕರಿಸಿ, ಮಲಬದ್ಧತೆ ಕಡಿಮೆ ಮಾಡುತ್ತದೆ. ಸಕ್ಕರೆ ಅಥವಾ ಸಿಹಿ ಪದಾರ್ಥಗಳು ಹೆಚ್ಚಿನ ಫ್ಯಾಟ್ಗೆ ಕಾರಣವಾಗುತ್ತೆ. ಆದ್ರೆ ಅಲೋವೆರಾ ಜ್ಯೂಸ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಿಹಿ ಆಹಾರ ತಿನ್ನಬೇಕು ಎಂಬ ಬಯಕೆಗಳನ್ನು ಸಮರ್ಥವಾಗಿ ನಿಗ್ರಹಿಸುತ್ತದೆ.
ಶುಂಠಿಯ ರಸವು ಥರ್ಮೋಜೆನೆಸಿಸ್ಅನ್ನು ಹೆಚ್ಚಿಸುವ ಮೂಲಕ ಮೆಟಬಾಲಿಸಮ್ ಹೆಚ್ಚಿಸುತ್ತದೆ. ಇದು ದೇಹವು ಕ್ಯಾಲೊರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಶುಂಠಿಯು ಹಸಿವನ್ನು ನಿಗ್ರಹಿಸುವ ಶಕ್ತಿ ಹೊಂದಿದೆ. ಇದು ರಕ್ತದಲ್ಲಿನ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಸ್ವೀಟ್ ತಿನ್ನಬೇಕು ಅನಿಸುವ ಕ್ರೇವಿಂಗ್ಸ್ ತಡೆಯುತ್ತದೆ.
ಇಷ್ಟೆಲ್ಲಾ ಪ್ರಯೋಜನ ಹೊಂದಿರುವ ಈ ಮೂರು ಪದಾರ್ಥಗಳನ್ನು ಮಿಶ್ರಣ ಮಾಡಿ ಕುಡಿದಾಗ ಮತ್ತಷ್ಟು ಪ್ರಯೋಜವಾಗುತ್ತದೆ. ಬೆಳಗ್ಗೆ ತಿಂಡಿಗೆ 1 ಗಂಟೆ ಮುನ್ನ ಒಂದು ಲೋಟಕ್ಕೆ 4 ಸ್ಪೂನ್ ಆಮ್ಲ ಜ್ಯೂಸ್, 4 ಸ್ಪೂನ್ ಅಲೋವೆಲಾ ರಸ ಮತ್ತು 1 ಸ್ಪೂನ್ ಶುಂಠಿ ರಸವನ್ನು ಸೇರಿಸಿ, ಪುನಃ ಅಷ್ಟೇ ಪ್ರಮಾಣದ ನೀರನ್ನೂ ಹಾಕಿ ಡೈಲ್ಯೂಟ್ ಮಾಡಿ. 1 ತಿಂಗಳ ಕಾಲ ಹೀಗೆ ಮಾಡಿ ನೋಡಿ.
3 ಬಾರ್ಲಿ ನೀರು
ಕಡಿಮೆ ಕ್ಯಾಲೋರಿ, ಹೆಚ್ಚು ಫೈಬರ್ ಹೊಂದಿರುವ ಸಿಂಪಲ್ ಪಾನೀಯ ಬಾರ್ಲಿ ನೀರು ಅಂತಾ ಹೇಳಬಹುದು. ಬಾರ್ಲಿ ನೀರು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬಾರ್ಲಿಯಲ್ಲಿರುವ ಫೈಬರ್ ಬೀಟಾ-ಗ್ಲುಕಾನ್ಸ್ ದೇಹವು ಆಹಾರದಿಂದ ಕೊಲೆಸ್ಟ್ರಾಲ್ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತೆ. ಹಸಿವನ್ನು ನಿಗ್ರಹಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ. ಬಾರ್ಲಿ ನೀರು ಮೂತ್ರವಿಸರ್ಜನೆ ಮತ್ತು ದೇಹದ ಡಿಟಾಕ್ಸಿಫಿಕೇಶನ್ ಅನ್ನು ಉತ್ತೇಜಿಸುತ್ತೆ. ಬಾರ್ಲಿ ನೀರು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಮೆಗ್ನೀಸಿಯಮ್ ಮತ್ತು ಬಿ-ವಿಟಮಿನ್ ಅಂಶವು ಆರೋಗ್ಯಕರ ಮೆಟಬಾಲಿಸಮ್ ನೀಡುತ್ತದೆ. ಹೆಚ್ಚಿನ ಕ್ಯಾಲೋರಿ ಹೊಂದಿರುವ ಜ್ಯೂಸ್ಗಳ ಬದಲು ಬಾರ್ಲಿ ನೀರನ್ನು ಕುಡಿಯುವ ಮೂಲಕ, ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ.
ದೇಹದ ಬೊಜ್ಜು ಕರಗಿಸಬೇಕೆಂದಿರುವವರು ಈ ಪಾನೀಯಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರೊಂದಿಗೆ ಫೈಬರ್ ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಿ. ಎಲೆಕೋಸು, ಬ್ರಾಕೋಲಿ, ಕ್ಯಾರೆಟ್ ಸೇವನೆ ಬೊಜ್ಜು ಕರಗಿಸಲು ಸಹಾಯ ಮಾಡುತ್ತವೆ. ಜಂಕ್ ಫುಡ್ ಪದಾರ್ಥಗಳಿಂದ, ಡೀಪ್ ಫ್ರೈ ಆಹಾರಗಳಿಂದ ದೂರ ಉಳಿಯುವುದೂ ಅತ್ಯಗತ್ಯ. ದೇಹವನ್ನು ಆಕ್ಟೀವ್ ಆಗಿ ಇಟ್ಟುಕೊಳ್ಳುವುದರಿಂದಲೂ ದೇಹದ ಬೊಜ್ಜು ಕರಗಿ, ತೂಕ ಇಳಿಯುತ್ತದೆ.
For more articles visit GSS Media










