ಶುಗರ್ ಶುರು ಆಗಿದೆ, ಯಾಕೋ ದಪ್ಪ ಆಗ್ತಿದ್ದೀನಿ, ಪಿಸಿಓಡಿ ಕಾಡ್ತಿದೆ…. ಮೊದಲು ಅನ್ನ ತಿನ್ನೋದನ್ನ ಬಿಟ್ಬಿಡ್ತೀನಿ ಅಂತಾ ಯೋಚನೆ ಮಾಡಿದ್ದೀರಾ…? ಹಾಗಾದ್ರೆ ನೀವು ಮಾಡಿರುವ ಯೋಚನೆ ಸ್ವಲ್ಪ ಓಕೆ, ಸ್ವಲ್ಪ ಯಾಕೆ ಅನ್ನೋ ರೀತಿ ಇದೆ.
ಅಕ್ಕಿ ಅನಾರೋಗ್ಯಕ್ಕೆ ಕಾರಣ ಆಗುತ್ತಾ? ಆರೋಗ್ಯ ಸಮಸ್ಯೆ ಶುರುವಾದ್ರೆ ಅನ್ನ ತಿನ್ನೋದನ್ನೇ ಬಿಡ್ಬೇಕಾ? ಸಾಕಷ್ಟು ಜನರಿಗೆ ಇಂಥ ಡೌಟ್ ಇರುತ್ತೆ. ಹಾಗಾಗಿ ಇದರ ಬಗ್ಗೆ ಚೆನ್ನಾಗಿ ತಿಳ್ಕೊಂಡಿರುವ ಪಾಂಡವಪುರದ ಶಿವಳ್ಳಿಯಲ್ಲಿರುವ ಸಾವಯವ ಕೃಷಿಕ ಬೋರೇಗೌಡರಿಂದ ಮಾಹಿತಿ ಪಡೆದೆವು. ಅವ್ರು ಭತ್ತದ ಬೋರೇಗೌಡ್ರು ಅಂತಾನೇ ಫೇಮಸ್ಸು.
ಆರೋಗ್ಯ ಸಮಸ್ಯೆಯಾದ್ರೆ ಅನ್ನ ತಿನ್ನೋದು ಒಳ್ಳೆಯದಲ್ವಂತೆ ಅಂದ್ರೆ ಬೋರೇಗೌಡ ಅವ್ರಿಗೆ ಬೇಜಾರಾಗುತ್ತೆ. ಅಕ್ಕಿಯಿಂದ ತೊಂದರೆ ಆಗ್ತಿಲ್ಲ, ಆದರೆ ಈ ಆಧುನಿಕ ಯುಗದಲ್ಲಿ ಅಕ್ಕಿಯನ್ನು ತೊಂದರೆ ಆಗುವ ರೀತಿ ಮಾರ್ಪಾಡು ಮಾಡ್ತಿದ್ದಾರೆ ಅಂತಾ ಅವ್ರು ಹೇಳ್ತಾರೆ.
ಅಕ್ಕಿಯಲ್ಲಿ ಮೂರು ರೀತಿ ಇರುತ್ತೆ. ದೇಸಿ ತಳಿ ಅಂದರೆ ನಾಟಿ ತಳಿ, ಸುಧಾರಿತ ತಳಿ ಇದು ದೇಸಿ ತಳಿಗಿಂತ ಸ್ವಲ್ಪ ಸುಧಾರಿಸಿರೋದು, ಇನ್ನೊಂದು ಹೈಬ್ರೀಡ್ ತಳಿ ಇದು ಸಾಕಷ್ಟು ಪಾಲಿಶ್ ಮಾಡಿರೋ ತಳಿಯಾಗಿರುತ್ತೆ. ಕೆಲ ಕಾರಣಗಳಿಂದ ಅಕ್ಕಿಯನ್ನು ಸಾಕಷ್ಟು ಬಾರಿ ಪಾಲಿಶ್ ಮಾಡ್ತಾರೆ. ಸಮಸ್ಯೆ ಶುರು ಆಗೋದು ಇಲ್ಲಿಂದನೇ. ಅಕ್ಕಿಯನ್ನು ತುಂಬಾ ಸಲ ಪಾಲಿಶ್ ಮಾಡಿ ಅದ್ರಲ್ಲಿರೋ ಎಲ್ಲಾ ಪೌಷ್ಟಿಕಾಂಶವನ್ನ ತೆಗೆದರೆ ಸಮಸ್ಯೆಯಾಗುತ್ತೆ.
ಇದನ್ನು ಓದಿ : ಕ್ಯಾಬೇಜ್ ನಿಂದ ಮೂರ್ಛೆ ರೋಗ : ಸತ್ಯ ಅಥವಾ ಮಿಥ್ಯ..?
ಸಾಕಷ್ಟು ಬಾರಿ ಪಾಲಿಶ್ ಮಾಡಿದ ಅಕ್ಕಿಯಲ್ಲಿ ಶುಗರ್ ಮತ್ತೆ ಕಾಬ್ರೋಹೈಡ್ರೇಟ್ ಅಷ್ಟೇ ಉಳಿದಿರುತ್ತದೆ. ಇಂಥ ಅಕ್ಕಿಯನ್ನ ಬಳಸುವುದರಿಂದ ಆರೋಗ್ಯಕ್ಕೆ ಸಮಸ್ಯೆ ಆಗುತ್ತೆ. ನೋಡೋಕೆ ಬೆಳ್ಳಗ್ಗೆ ಚೆನ್ನಾಗಿ ಕಾಣ್ಸುತ್ತೆ ಅಂದ್ರೆ ಅದು ನಿಧಾನ ವಿಷ ಅಂತಾ ಅರ್ಥ. ಯಾಕಂದ್ರೆ ಅಂಥ ಅಕ್ಕಿಯಲ್ಲಿ ಆರೋಗ್ಯಕರ ಅಂಶ ಇರಲ್ಲ.
ಎಲ್ಲಾ ತಳಿಯ ಅಕ್ಕಿ ಆರೋಗ್ಯಕ್ಕೆ ಸಮಸ್ಯೆ ಅಲ್ಲ. ದಿನಾ ಅನ್ನ ತಿಂದು ಅಭ್ಯಾಸ ಇರೋರಿಗೆ ಅನ್ನ ತಿನ್ನೋದನ್ನೇ ಬಿಡ್ಬೇಕು ಅಂದ್ರೆ ಕಷ್ಟವಾಗುತ್ತದೆ. ಆದರೆ ನಾವು ಯಾವ ಅಕ್ಕಿ ಬಳಸ್ಬೇಕು ಅಂತಾ ತಿಳ್ಕೋಬೇಕು. ಪಾಲಿಶ್ ಅಕ್ಕಿ ತಂದು ಅನ್ನ ಮಾಡ್ಕೊಂಡ್ ತಿಂದ್ರೆ ಸಮಸ್ಯೆ, ನಾಟಿ ಅಕ್ಕಿ ತಂದು ಅನ್ನ ಮಾಡ್ಕೊಂಡ್ ತಿಂದ್ರೆ ಸಮಸ್ಯೆ ಬರಲ್ಲ. ಅನ್ನ ತಿನ್ಬೇಕು ಅನ್ಸುತ್ತೆ, ಆದ್ರೂ ಆರೋಗ್ಯ ಕಾರಣಕ್ಕೆ ಇನ್ಮೇಲೇ ತಿನ್ನೋದ್ ಬಿಟ್ಬಿಡ್ತೀನಿ ಅಂತಾ ಯೋಚ್ನೆ ಮಾಡ್ತಿರೋರು ಇನ್ನೊಂದ್ ಸಲ ಯೋಚ್ನೇ ಮಾಡಿ!!!
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಜಿಎಸ್ಎಸ್ ಮಾಧ್ಯಮ ಯೂಟ್ಯೂಬ್ ಚಾನಲ್ ನಲ್ಲಿ ಭತ್ತದ ಬೋರೇಗೌಡರು ಮಾತಾಡಿರೋ ಎಪಿಸೋಡ್ ಗಳನ್ನ ನೋಡಿ










